For Quick Alerts
ALLOW NOTIFICATIONS  
For Daily Alerts

ಬಕ್ರೀದ್: ತ್ಯಾಗ ಮತ್ತು ಬಲಿದಾನದ ಸಂಕೇತ

|

ಇಂದು ಎಲ್ಲೆಡೆ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ಮುಸ್ಲಿಮರಿಗೆ ಮುಖ್ಯವಾಗಿರುವ ಹಬ್ಬಗಳೆಂದರೆ ರಂಜಾನ್ ಮತ್ತು ಬಕ್ರೀದ್ ಎರಡೇ. ಅದರಲ್ಲೂ ಬಕ್ರೀದ್ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಹಬ್ಬಕ್ಕೆ ಈದ್ ಉಲ್ ಅಧಾ ಎಂಬ ಹೆಸರೂ ಇದೆ. ಮುಸ್ಲಿಮರಿಗೆ ಒಟ್ಟು ಐದು ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯಗಳಿವೆ.

ಶಹಾದ (ಏಕದೇವನಲ್ಲಿ ನಂಬಿಕೆ) 2) ನಮಾಜ್ (ನಿತ್ಯವೂ ಐದು ಹೊತ್ತಿನ ಪ್ರಾರ್ಥನೆ) 3) ರೋಜಾ (ರಂಜಾನ್ ಮಾಸದ ಮೂವತ್ತು ದಿನ ಉಪವಾಸ) 4) ಜಕಾತ್ (ಕಡ್ಡಾಯ ದಾನ) 5) ಹಜ್ (ಉಳ್ಳವರು ಜೀವನದಲ್ಲಿ ಕನಿಷ್ಠ ಒಂದು ಬಾರಿ ನಿರ್ವಹಿಸಬೇಕಾದ ಹಜ್ ಯಾತ್ರೆ).

ಇವುಗಳಲ್ಲಿ ಪ್ರಥಮ ಮೂರು ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ನಾಲ್ಕನೆಯದು ಆಯಾ ವ್ಯಕ್ತಿಯ ಆರ್ಥಿಕ ಸಾಮರ್ಥ್ಯವನ್ನು ಅನುಸರಿಸಿದೆ. ಐದನೆಯದು ಹಜ್ ಯಾತ್ರೆ. ಈ ಯಾತ್ರೆಗೆ ಹೊರಡುವವರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು. ಬಕ್ರೀದ್ ಹಬ್ಬದ ಆಚರಣೆ ಏಕೆ ಅಷ್ಟೊಂದು ಮಹತ್ವಪೂರ್ಣ?

ತನ್ನ ಸ್ವಂತ ಗಳಿಕೆಯ ಹಣದಲ್ಲಿ ಹಜ್ ಯಾತ್ರೆ ನಿರ್ವಹಿಸುವಂತಿರಬೇಕು, ತಮ್ಮ ಕರ್ತವ್ಯಗಳನ್ನು ಪಾಲಿಸಿರಬೇಕು ಹಾಗೂ ಮುಖ್ಯವಾಗಿ ಯಾವುದೇ ದ್ವೇಶ ವೈಶಮ್ಯಗಳು ಇರಬಾರದು. ಹಜ್ ಯಾತ್ರೆ ಎಂದರೆ ಈ ಜನ್ಮದಲ್ಲಿಯೇ ಎರಡನೆಯ ಹುಟ್ಟು ಪಡೆದಂತೆ ಈ ಜೀವ ತಳೆಯುತ್ತದೆ.

ಹಜ್ ಯಾತ್ರೆಯ ಈ ಸಂದರ್ಭದ ಎರಡನೆಯ ದಿನವೇ ಬಕ್ರೀದ್. (ಮೊದಲ ದಿನ ಅರಫಾತ್‌ನ ದಿನ ಎಂದು ಆಚರಿಸಲಾಗುತ್ತಿದ್ದು ಅಂದು ಹಜ್ ಯಾತ್ರಿಗಳ ಹೊರತಾಗಿ ಇತರರು ಉಪವಾಸ ಇರಿಸುವುದು ಸಿಂಧುವಾಗಿದೆ. ಆದರೆ ಕಡ್ಡಾಯಲ್ಲ) ಹಜ್ ಯಾತ್ರೆಗೂ, ತ್ಯಾಗ ಮತ್ತು ಬಲಿದಾನ ಎಂದು ಹೇಳುವ ಈ ಹಬ್ಬಕ್ಕೂ ಏನು ಸಂಬಂಧ? ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ....

ಬಾಕ್ರೀದ್ ಹಬ್ಬದ ಮಹತ್ವ

ಬಾಕ್ರೀದ್ ಹಬ್ಬದ ಮಹತ್ವ

ನಿಮಗೆ ಅಮೂಲ್ಯ ಎನಿಸಿದ್ದನ್ನು ತ್ಯಾಗ ಮಾಡುವಂತಿರಬೇಕು ಎಂಬುದೇ ಇದರ ಮುಖ್ಯ ಸಾರಈ ಹಬ್ಬದ ಮುಖ್ಯವಾದ ಅಂಶವೆಂದರೆ ಸುಮಾರು ಸಾವಿರದ ನಾನೂರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ತಮಗೆ ಅತ್ಯಂತ ಪ್ರೀತಿ ಪಾತ್ರರಾದ ಮಗ, ಇಸ್ಮಾಯೀಲ್ ರನ್ನೂ ದೇವರಿಗಾಗಿ ತ್ಯಾಗ ಮಾಡಲು ಸಿದ್ಧರಿದ್ದರು ಎಂಬುದೇ ಆಗಿದೆ.

ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದು

ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದು

ಪ್ರವಾದಿಯವರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಕುರಿಯೊಂದನ್ನು ಬಲಿಪಡೆದುಕೊಳ್ಳುತ್ತಾರೆ. ಅರಬಿ ಭಾಷೆಯಲ್ಲಿ ಬಕ್ರ್ ಎಂದರೆ ಕುರಿ, ಈದ್ ಅಂದರೆ ಹಬ್ಬ. ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದೇ ಬಕ್ರೀದ್ ಆಗಿದೆ.

ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದು

ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದು

ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದೇ ಈ ಹಬ್ಬದ ಸೂಚನೆಯಾಗಿದೆ. ಇದನ್ನೇ ತ್ಯಾಗ ಅಥವಾ ಕುರ್ಬಾನಿ ಎಂದು ಕರೆಯಲಾಗುತ್ತದೆ.

ಹಲಾಲ್ ರೂಪದಲ್ಲಿ ಕುರಿಯ ಬಲಿ

ಹಲಾಲ್ ರೂಪದಲ್ಲಿ ಕುರಿಯ ಬಲಿ

ಬಲಿದಾನವನ್ನು ಪಡೆಯುವಾಗ ಮುಸ್ಲಿಮರು ಹಲಾಲ್ ರೂಪದಲ್ಲಿ ಪ್ರಾಣಿಯ ಕುತ್ತಿಗೆಯನ್ನು ಕತ್ತರಿಸುವುದು ಅಗತ್ಯ. ಎಂದರೆ ಕೇವಲ ಅರ್ಧಭಾಗ ಮಾತ್ರ ಕತ್ತರಿಸಿ ಪ್ರಾಣಿಯ ಶ್ವಾಸನಾಳ ಮತ್ತು ಮುಖ್ಯ ರಕ್ತನಾಳವನ್ನು ಮಾತ್ರ ಕತ್ತರಿಸಬೇಕು. ಎಂದಿಗೂ ಒಂದೇ ಏಟಿಗೆ ರುಂಡವನ್ನು ಬೇರ್ಪಡಿಸಬಾರದು.

ಹಲಾಲ್ ರೂಪದಲ್ಲಿ ಕುರಿಯ ಬಲಿ

ಹಲಾಲ್ ರೂಪದಲ್ಲಿ ಕುರಿಯ ಬಲಿ

ಇದರಿಂದ ಪ್ರಾಣಿ ಹೃದಯಾಘಾತದಿಂದ ಸಾವನ್ನಪ್ಪಿ ಶರೀರದೊಳಗೇ ರಕ್ತ ಹೆಪ್ಪುಗಟ್ಟುತ್ತದೆ. ಈ ಹೆಪ್ಪುಗಟ್ಟಿದ ರಕ್ತ ಸ್ನಾಯುಗಳ ಒಳಗಣ ರಕ್ತ ಹೊರಬರಲು ಅಡ್ಡಿಯಾಗಿ ಮಾಂಸ ಮಲಿನವಾಗುತ್ತದೆ. ಆದರೆ ಹಲಾಲ್ ರೂಪದಲ್ಲಿ ಪ್ರಾಣಿಯ ರಕ್ತವನ್ನು ಹೊರ ಹರಿಯುವಂತೆ ಮಾಡಲಾಗುತ್ತದೆ. ಈ ಪರಿಯಲ್ಲಿ ಸ್ನಾಯುಗಳ ರಕ್ತವೂ ಹೊರಹರಿದು ಮಾಂಸ ಸೇವನೆಗೆ ಆರೋಗ್ಯಕರವಾಗಿರುತ್ತದೆ.

ಬಕ್ರೀದ್ ಎಲ್ಲರಿಗೂ ಹಬ್ಬ

ಬಕ್ರೀದ್ ಎಲ್ಲರಿಗೂ ಹಬ್ಬ

ಸಾಮಾನ್ಯವಾಗಿ ಮಾಂಸ ಎಂದರೆ ಕೊಂಚ ದುಬಾರಿಯಾಗಿದ್ದು ಮಧ್ಯಮ, ಕೆಳವರ್ಗದ ಜನತೆ ಈ ಪೌಷ್ಟಿಕ ಆಹಾರವನ್ನು ಸೇವಿಸುವಲ್ಲಿ ವಂಚಿತರಾಗಿರುತ್ತಾರೆ. ಆದರೆ ಬಕ್ರೀದ್ ಸಮಯದಲ್ಲಿ ಉಳ್ಳವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕುರಿಗಳನ್ನು ಕುರ್ಬಾನಿ ನೀಡುತ್ತಾರೆ.

ಬಕ್ರೀದ್ ಎಲ್ಲರಿಗೂ ಹಬ್ಬ

ಬಕ್ರೀದ್ ಎಲ್ಲರಿಗೂ ಹಬ್ಬ

ಇದರಲ್ಲಿ ಪಡೆದ ಮಾಂಸವನ್ನು ಮೂರು ಪಾಲುಗಳನ್ನಾಗಿಸಿ ಒಂದು ಸ್ವಂತ ಬಳಕೆಗೂ, ಒಂದು ಪಾಲು ನೆಂಟರಿಷ್ಟರಲ್ಲಿ ಹಾಗೂ ಮೂರನೆಯ ಪಾಲನ್ನು ಬಡವರಿಗೆ ಹಂಚಲೂ ಬಳಕೆಯಾಗುತ್ತದೆ. ಈ ಮೂಲಕ ಸಮಾಜದಲ್ಲಿರುವ ಅತ್ಯಂತ ಬಡವರೂ ಹಬ್ಬವನ್ನು ಸಂತಸ ಸಂಭ್ರಮಗಳಿಂದ ಆಚರಿಸಲು ಸಾಧ್ಯವಾಗುತ್ತದೆ.

ಬಕ್ರೀದ್ ಎಂದರೆ ಹಂಚಿಕೊಳ್ಳುವುದು

ಬಕ್ರೀದ್ ಎಂದರೆ ಹಂಚಿಕೊಳ್ಳುವುದು

ಈ ಹಬ್ಬದ ಸಂಭ್ರಮ ಹಂಚಿಕೊಳ್ಳುವುದರಲ್ಲಿ ಅಡಗಿದೆ. ವಿಶ್ವದಾದ್ಯಂತ ಮುಸ್ಲಿಮರು ತಮ್ಮ ಪಾಲಿಗೆ ಬಂದ ಮಾಂಸದ ಅಡುಗೆ ಮಾಡಿ ತಮ್ಮ ಬಂಧು ಬಳಗ, ಸ್ನೇಹಿತರೊಂದಿಗೆ ಹಂಚಿಕೊಂಡು ಊಟ ಮಾಡುವುದರಲ್ಲಿ ಸಾರ್ಥಕತೆ ಅನುಭವಿಸುತ್ತಾರೆ.

ಬಕ್ರೀದ್ ಎಂದರೆ ಹಂಚಿಕೊಳ್ಳುವುದು

ಬಕ್ರೀದ್ ಎಂದರೆ ಹಂಚಿಕೊಳ್ಳುವುದು

ವಿಶೇಷವಾಗಿ ಬಡಬಗ್ಗರಿಗೆ ಊಟ ಮತ್ತು ಮಾಂಸ ಹಂಚುವುದರಲ್ಲಿ ಮನೆಯ ಸದಸ್ಯರು ಸಮಾನವಾಗಿ ಭಾಗಿಯಾಗಿ ಕರುಣೆ, ಅನುಕಂಪ, ಬಡವರ ಬಗ್ಗೆ ವಾತ್ಸಲ್ಯ, ನೆರವು ನೀಡುವ ಮನಸ್ಸನ್ನು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಮೂಡುವಂತೆ ಮಾಡಲಾಗುತ್ತದೆ.

ಹಬ್ಬದ ದಿನಗಳಂದು ಈಡೇರುವ ಬಯಕೆಗಳು

ಹಬ್ಬದ ದಿನಗಳಂದು ಈಡೇರುವ ಬಯಕೆಗಳು

ಬಕ್ರೀದ್ ಹಬ್ಬ ಒಟ್ಟು ಮೂರು ದಿನಗಳಾಗಿ ಆಚರಿಸಲಾಗುತ್ತದೆ. ಮೊದಲ ದಿನ ಅರಫಾತ್ (ಉಪವಾಸ) ಎರಡನೆಯ ದಿನ ಈದ್ (ಹಬ್ಬದ ದಿನ) ಮತ್ತು ಮೂರನೆಯ ದಿನ (ಜಮಾರತ್) ಅಥವಾ ಸೈತಾನನಿಗೆ ಕಲ್ಲು ಹೊಡೆಯುವ ದಿನ. ಮಕ್ಕಾದಲ್ಲಿ ಹಜ್ ಯಾತ್ರಿಕರಿಗೆ ಮುಂದಿನ ಮೂರು ದಿನಗಳು ಪವಿತ್ರವಾಗಿವೆ.

ಹಬ್ಬದ ದಿನಗಳಂದು ಈಡೇರುವ ಬಯಕೆಗಳು

ಹಬ್ಬದ ದಿನಗಳಂದು ಈಡೇರುವ ಬಯಕೆಗಳು

ಆದರೆ ಉಳಿದವರಿಗೆ ಮೂರು ದಿನಗಳಿಗೆ ಹಬ್ಬ ಸೀಮಿತವಾಗಿದೆ. ಸೈತಾನನಿಗೆ ಕಲ್ಲು ಹೊಡೆಯುವುದು ಕೇವಲ ಸಾಂಕೇತಿಕವಾಗಿದ್ದು ನಮ್ಮ ಮನದೊಳಗಣ ಸೈತಾನನನ್ನು ಕೊಲ್ಲುವುದೇ ನಿಜವಾದ ಅರ್ಥವಾಗಿದೆ. ಈ ಮೂರೂ ದಿನಗಳಲ್ಲಿ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ದೇವರಲ್ಲಿ ಬೇಡಿಕೊಂಡ ಯಾವುದೇ ಪ್ರಾರ್ಥನೆ ಈಡೇರುತ್ತದೆ ಎಂಬ ನಂಬಿಕೆ ಇದೆ.

English summary

What Is Bakrid All About?

It's Bakrid time, and it is the time for celebrations! This festival is considered to be the most sacred festival in Islam. This festival is also called Id-ul-Azha. Bakrid is celebrated with great enthusiasm and vigour among Muslims all over the world. So, here, in this article, we are about to share some the things that you need to know about Bakrid as a festival.
X
Desktop Bottom Promotion