ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!

By: manu
Subscribe to Boldsky

ಮಾನವರಿಗೆ ಸಹಜವಾಗಿ ಬಂದಿರುವ ಒಂದು ಗುಣವೆಂದರೆ ಕುತೂಹಲ. ಅದರಲ್ಲೂ ನಮಗೆಲ್ಲಾ ನಮಗಿಂತ ಇತರರು ಏನು ಮಾಡುತ್ತಿದ್ದಾರೆ ಅಥವಾ ಯೋಚಿಸುತ್ತಿದ್ದಾರೆ ಎಂಬುದೇ ಕುತೂಹಲಕರ ವಿಷಯವಾಗಿದೆ.  ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಜ್ಯೋತಿಷಿಗಳ ಪ್ರಕಾರ ಓರ್ವ ವ್ಯಕ್ತಿಯ ವ್ಯಕ್ತಿತ್ವ ಆತನ ದೈಹಿಕ ಆಕಾರದಿಂದ ಬಹುವಾಗಿ ಪ್ರಭಾವಿತವಾಗಿರುತ್ತದೆ. ಅದರಲ್ಲೂ ನಮ್ಮ ಹಸ್ತ ಮತ್ತು ಬೆರಳುಗಳು ಬಹಳಷ್ಟನ್ನು ತಿಳಿಸುತ್ತವೆ. ಹಸ್ತರೇಖಾಶಾಸ್ತ್ರ ಎಂದೇ ಪ್ರಸಿದ್ಧಿ ಪಡೆದಿರುವ ಈ ಜ್ಞಾನದಲ್ಲಿ ಬೆರಳುಗಳ ಉದ್ದವನ್ನೂ ಪರಿಗಣಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಕೆಳಗಿನ ಸ್ಲೈಡ್ ಶೋ ಮೂಲಕ ಜ್ಯೋತಿಷಿಗಳು ಬೆರಳುಗಳ ಮೂಲಕ ಏನನ್ನು ನೋಡುತ್ತಾರೆ ಎಂಬುದನ್ನು ನೋಡೋಣ...         ಅಚ್ಚರಿಗೆ ತಳ್ಳುವ ಕೈ ಬೆರಳಿನ ಮೂಲಕ ಮಾಡುವ ಚಿಕಿತ್ಸೆ!

ತೋರು ಬೆರಳು

ತೋರು ಬೆರಳು

ಹಸ್ತಸಾಮುದ್ರಿಕೆಯಲ್ಲಿ ತೋರು ಬೆರಳಿಗೆ ಹೆಚ್ಚಿನ ಮಹತ್ವವಿದೆ. ಈ ವಿದ್ಯೆಯಲ್ಲಿ ಪಾರಾಂಗತರಾದವರು ಹಸ್ತಗಳ ರೇಖೆಗಳ ಜೊತೆಗೇ ಬೆರಳುಗಳ ಉದ್ದ ಮತ್ತು ಆಕಾರವನ್ನು ನೋಡಿಯೇ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ತಿಳಿಸುತ್ತಾರೆ.

ತೋರುಬೆರಳು ಮಧ್ಯಬೆರಳಿನಷ್ಟೇ ಉದ್ದವಿದ್ದರೆ...

ತೋರುಬೆರಳು ಮಧ್ಯಬೆರಳಿನಷ್ಟೇ ಉದ್ದವಿದ್ದರೆ...

ವ್ಯಕ್ತಿಯ ತೋರುಬೆರಳು ಮಧ್ಯಬೆರಳಿನಷ್ಟೇ ಉದ್ದವಿದ್ದರೆ ಈ ವ್ಯಕ್ತಿ ಅತಿ ಪ್ರಭಾವಿಯಾಗಿದ್ದು ಇತರರ ಮೇಲೆ ತಮ್ಮ ಅನಿಸಿಕೆಗಳನ್ನು ಹೇರುವ ವ್ಯಕ್ತಿತ್ವದವರಾಗಿರುತ್ತಾರೆ. ಈ ವ್ಯಕ್ತಿಗಳು ಬಡಾಯಿಕೋರರೂ ಸ್ವಾರ್ಥಿಗಳೂ ಆಗಿರುತ್ತಾರೆ.

ತೋರುಬೆರಳು ಮಧ್ಯಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ......

ತೋರುಬೆರಳು ಮಧ್ಯಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ......

ವ್ಯಕ್ತಿಯ ತೋರುಬೆರಳು ಮಧ್ಯಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ ಈ ವ್ಯಕ್ತಿಗಳು ಅತ್ಯಂತ ಸ್ವಾರ್ಥಿಗಳಾಗಿದ್ದು ತಮ್ಮ ಬಗ್ಗೆಯೇ ಕೇಂದ್ರೀಕೃತರಾಗಿರುತ್ತಾರೆ. ಇವರಿಗೆ ಮೇಲರಿಮೆಯ ಭಾವನೆ ಇದ್ದು ತಮ್ಮ ಸುತ್ತ ಮುತ್ತಲಿರುವವರನ್ನೆಲ್ಲಾ ತಮಗಿಂತ ಕೆಳಗಿನವರು ಎಂದು ಭಾವಿಸುತ್ತಾರೆ.

ತೋರುಬೆರಳು ಸಾಮಾನ್ಯಕ್ಕಿಂತಲೂ ಚಿಕ್ಕದಾಗಿದ್ದರೆ....

ತೋರುಬೆರಳು ಸಾಮಾನ್ಯಕ್ಕಿಂತಲೂ ಚಿಕ್ಕದಾಗಿದ್ದರೆ....

ಇನ್ನು ವ್ಯಕ್ತಿಯ ತೋರುಬೆರಳು ಸಾಮಾನ್ಯಕ್ಕಿಂತಲೂ ಚಿಕ್ಕದಾಗಿದ್ದರೆ ಈ ವ್ಯಕ್ತಿಗಳು ನಿರಾಶಾವಾದಿಗಳಾಗಿದ್ದು ಪಲಾಯನ ಹೂಡುವ ಪ್ರವೃತ್ತಿಯವರಾಗಿರುತ್ತಾರೆ. ಇವರಿಗೆ ಹೊಸದು ಎಂದರೆ ಆಗದು, ಇವರು ಸೋಮಾರಿಗಳೂ, ಹೊಸ ವಿಚಾರವನ್ನು ಶೀಘ್ರವಾಗಿ ಸ್ವೀಕರಿಸದವರೂ ಆಗಿರುತ್ತಾರೆ.

ತೋರುಬೆರಳು ಮಧ್ಯಬೆರಳಿಗಿಂತ ಗಿಡ್ಡವಾಗಿದ್ದರೆ....

ತೋರುಬೆರಳು ಮಧ್ಯಬೆರಳಿಗಿಂತ ಗಿಡ್ಡವಾಗಿದ್ದರೆ....

ಒಂದು ವೇಳೆ ವ್ಯಕ್ತಿಯ ತೋರುಬೆರಳು ಮಧ್ಯಬೆರಳಿಗಿಂತ ಗಿಡ್ಡ ಆದರೆ ಉಂಗುರಬೆರಳಿಗಿಂತ ಉದ್ದವಿದ್ದರೆ ಇವರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಯಾವುದೇ ಕೆಲಸದ ಬಗ್ಗೆ ಅಗತ್ಯಕ್ಕೂ ಹೆಚ್ಚಿನ ಮೂಗು ತೂರಿಸಿವುದು ಇವರ ಜಾಯಮಾನವಾಗಿದ್ದು ಇದೇ ಕಾರಣಕ್ಕೆ ಸದಾ ತಮ್ಮ ಕೆಲಸವನ್ನು ಕೆಡಿಸಿಕೊಳ್ಳುತ್ತಿರುತ್ತಾರೆ.

ತೋರುಬೆರಳು ಉಂಗುರ ಬೆರಳಿನಷ್ಟೇ ಉದ್ದವಿದ್ದರೆ....

ತೋರುಬೆರಳು ಉಂಗುರ ಬೆರಳಿನಷ್ಟೇ ಉದ್ದವಿದ್ದರೆ....

ಇನ್ನು ತೋರುಬೆರಳು ಉಂಗುರ ಬೆರಳಿನಷ್ಟೇ ಉದ್ದವಿದ್ದರೆ ಈ ವ್ಯಕ್ತಿಗಳು ಸಮಾಜದಲ್ಲಿ ಮನ್ನಣೆ, ಗೌರವ ಸಂಪಾದಿಸುವುದರೊಂದಿಗೇ ಹಣವನ್ನೂ ಸಾಕಷ್ಟು ಸಂಪಾದಿಸುತ್ತಾರೆ.

ತೋರುಬೆರಳು ಉಂಗುರ ಬೆರಳಿಗಿಂತಲೂ ಗಿಡ್ಡವಾಗಿದ್ದರೆ...

ತೋರುಬೆರಳು ಉಂಗುರ ಬೆರಳಿಗಿಂತಲೂ ಗಿಡ್ಡವಾಗಿದ್ದರೆ...

ಅದೇ ರೀತಿ ತೋರುಬೆರಳು ಉಂಗುರ ಬೆರಳಿಗಿಂತಲೂ ಕೊಂಚ ಗಿಡ್ಡವಾಗಿದ್ದರೆ ಇವರು ಸದಾ ಸಮಸ್ಥಿತಿಯ ಮನಸ್ಥಿತಿಯನ್ನು ಹೊಂದಿದ್ದು ಯಾವುದೇ ಪ್ರಸಂಗದಲ್ಲಿ ಉದ್ವೇಗಕ್ಕೊಳಗಾಗದವರಾಗಿರುತ್ತಾರೆ. ಇವರು ಯಾವಾಗಲೂ ಹಸನ್ಮುಖಿಗಳಾಗಿದ್ದು ಸಂತಸವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕಿರುಬೆರಳಿನ ತುದಿ ಉಂಗುರಬೆರಳಿನ ಉಗುರಿನ ಬುಡದ ಮಟ್ಟದಲ್ಲಿದ್ದರೆ...

ಕಿರುಬೆರಳಿನ ತುದಿ ಉಂಗುರಬೆರಳಿನ ಉಗುರಿನ ಬುಡದ ಮಟ್ಟದಲ್ಲಿದ್ದರೆ...

ಒಂದು ವೇಳೆ ಕಿರುಬೆರಳಿನ ತುದಿ ಉಂಗುರಬೆರಳಿನ ಉಗುರಿನ ಬುಡದ ಮಟ್ಟದಲ್ಲಿದ್ದರೆ ಈ ವ್ಯಕ್ತಿಗಳು ಅತ್ಯುತ್ತಮ ಲೇಖಕರು ಮತ್ತು ನಟರಾಗಬಲ್ಲರು.

ತೋರುಬೆರಳು ಮತ್ತು ಕಿರುಬೆರಳು ಒಂದೇ ಸಮನಾಗಿದ್ದರೆ...

ತೋರುಬೆರಳು ಮತ್ತು ಕಿರುಬೆರಳು ಒಂದೇ ಸಮನಾಗಿದ್ದರೆ...

ಒಂದು ವೇಳೆ ತೋರುಬೆರಳು ಮತ್ತು ಕಿರುಬೆರಳು ಒಂದೇ ಸಮನಾಗಿದ್ದರೆ ಈ ವ್ಯಕ್ತಿಗಳು ಕಲಿಕೆಯಲ್ಲಿ ತೀಕ್ಷ್ಣರಾಗಿದ್ದು ಯೋಜನೆಗಳನ್ನು ಹಮ್ಮಿಕೊಳ್ಳುವುದರಲ್ಲಿ ಹಾಗೂ ಅನುಷ್ಠಾನಗೊಳಿಸುವಲ್ಲಿ ಉತ್ತಮರಾಗಿರುತ್ತಾರೆ. ಇವರು ರಾಜಕೀಯದಲ್ಲಿಯೂ ಉತ್ತಮ ಸಾಧನೆ ತೋರುತ್ತಾರೆ.

ತೋರುಬೆರಳು ಎಲ್ಲಾ ಬೆರಳುಗಳಿಗಿಂತ ಉದ್ದವಾಗಿದ್ದರೆ....

ತೋರುಬೆರಳು ಎಲ್ಲಾ ಬೆರಳುಗಳಿಗಿಂತ ಉದ್ದವಾಗಿದ್ದರೆ....

ಇನ್ನು ತೋರುಬೆರಳು ಇತರ ಎಲ್ಲಾ ಬೆರಳುಗಳಿಗಿಂತ ಉದ್ದವಾಗಿದ್ದು ವಕ್ರವೂ ಆಗಿದ್ದರೆ ಈ ವ್ಯಕ್ತಿಗಳು ಅದೃಷ್ಟಶಾಲಿಗಳು ಎಂದು ತಿಳಿಯಬಹುದು.

ತೋರುಬೆರಳು ಕಿರುಬೆರಳಿಗಿಂತಲೂ ಗಿಡ್ಡವಾಗಿದ್ದರೆ...

ತೋರುಬೆರಳು ಕಿರುಬೆರಳಿಗಿಂತಲೂ ಗಿಡ್ಡವಾಗಿದ್ದರೆ...

ಒಂದು ವೇಳೆ ತೋರುಬೆರಳು ಕಿರುಬೆರಳಿಗಿಂತಲೂ ಗಿಡ್ಡವಾಗಿದ್ದರೆ ಇದು ದುರಾದೃಷ್ಟವನ್ನು ಬಿಂಬಿಸುತ್ತದೆ.

 

English summary

The length of your fingers reveal a lot about your future!

Human beings are a curious species. We all are interested in knowing what the other is thinking or is up to. As per astrologers, the nature of a person depends upon his physical appearance. The fingers of our hand also tell a lot about our nature. Click on this slide show to know how a person's fingers reveal about his nature…
Please Wait while comments are loading...
Subscribe Newsletter