ನಂಬಲೇಬೇಕು, ಸ್ವೀಡನ್‪ನಲ್ಲಿ ಕಸಕ್ಕೆ ಸಿಕ್ಕಾಪಟ್ಟೆ ಬೇಡಿಕೆಯಂತೆ!

By: manu
Subscribe to Boldsky

ಹಿಂದೊಮ್ಮೆ ಬೆಂಗಳೂರಿನ ತುಂಬಾ ಕಸ ತುಂಬಿಕೊಂಡು ಅದು ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು. ಕಸದಿಂದ ರಸ ತೆಗೆಯಬಹುದು ಎಂದು ತಿಳಿದಿದ್ದರೂ ಅದನ್ನು ಸಮರ್ಪಕವಾಗಿ ಬಳಸುವಂತಹ ಮೂಲಭೂತ ಸೌಕರ್ಯಗಳನ್ನು ಸರಕಾರ ಇದುವರೆಗೆ ನೀಡಿಲ್ಲ. ಇದರಿಂದ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಆದರೆ ಕಸವೇ ಇಲ್ಲದ ಯಾವುದಾದರೂ ರಾಷ್ಟ್ರದ ಬಗ್ಗೆ ಕೇಳಿದ್ದೀರಾ?

ಇಂತಹ ರಾಷ್ಟ್ರಗಳು ಇರುತ್ತದೆಯಾ ಎಂದು ಮರುಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಆದರೆ ಸ್ವೀಡನ್ ನಲ್ಲಿ ಕಸವೇ ಇಲ್ಲವಂತೆ. ಕಸವೇ ಇಲ್ಲದ ರಾಷ್ಟ್ರವಾಗಿರುವ ಸ್ವೀಡನ್ ಈಗ ವಿದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ಳುತ್ತಾ ಇದೆಯೆಂತೆ. ಇದನ್ನು ಕೇಳಿ ಬೆಂಗಳೂರು ನಗರ ಪಾಲಿಕೆ ಸ್ವೀಡನ್ ಸರಕಾರವನ್ನು ಸಂಪರ್ಕಿಸಿದರೂ ಅಚ್ಚರಿಯಿಲ್ಲ! ಆದರೆ ಇದು ನಿಜ.  ಬದಲಾಗದ ದೇಶ; ನೋಡಿ ಸ್ವಾಮಿ ನಾವ್ ಇರೋದೇ ಹೀಗೆ!

ಯಾಕೆಂದರೆ ಸ್ವೀಡನ್‌ನಲ್ಲಿ ಕಸವನ್ನು ರಸವಾಗಿರುವಂತಹ ಮರುಬಳಕೆಯ ಕಾರ್ಖಾನೆಗಳು ಈಗ ಖಾಲಿ ಬಿದ್ದಿವೆ. ಇದನ್ನು ನಡೆಸಬೇಕಿದ್ದರೆ ಅಗತ್ಯವಾಗಿ ಕಸ ಬೇಕೇಬೇಕು. ಈ ಕಾರಣಕ್ಕಾಗಿ ಸ್ವೀಡನ್ ಕಸವನ್ನು ಆಮದು ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ಹೆಚ್ಚಿಗೆ ತಿಳಿಯಲು ಮುಂದೆ ಓದಿಕೊಳ್ಳಿ.....    

ಮರುಬಳಕೆಯಿಂದಲೇ ದೇಶದ ವಿದ್ಯುತ್ ಉತ್ಪಾದನೆ

ಮರುಬಳಕೆಯಿಂದಲೇ ದೇಶದ ವಿದ್ಯುತ್ ಉತ್ಪಾದನೆ

1991ರಲ್ಲಿ ಸ್ವೀಡನ್ ಪಳೆಯುಳಿಕೆ(ಕಲ್ಲಿದ್ದಲು ಇತ್ಯಾದಿ) ಇಂಧನ ಬಳಕೆಯ ಮೇಲೆ ಅತಿಯಾದ ತೆರಿಗೆ ಹಾಕಿತ್ತು. ಇದರಿಂದ ವಿದ್ಯುತ್ ಉತ್ಪಾದನೆ ಬಗ್ಗೆ ಬೇರೆ ಮಾರ್ಗ ಕಂಡುಕೊಳ್ಳಬೇಕಿತ್ತು. ಹೀಗಾಗಿ ಮರುಬಳಕೆಯಿಂದಲೇ ವಿದ್ಯುತ್ ನಿರ್ಮಾಣ ಮಾಡಲು ನಿರ್ಧರಿಸಿತ್ತು.

ಮರುಬಳಕೆ ವ್ಯವಸ್ಥೆ ಅದ್ಭುತ!

ಮರುಬಳಕೆ ವ್ಯವಸ್ಥೆ ಅದ್ಭುತ!

ಮನೆಯಲ್ಲಿ ನಿರ್ಮಾಣವಾಗುವಂತಹ ಕಸವು ಭೂಮಿಗೆ ಹೋಗಿರುವುದು ಶೇ.1ಕ್ಕಿಂತಲೂ ಕಡಿಮೆ. ಇದು ದೊಡ್ಡ ಅದ್ಭುತವಲ್ಲವೇ?

ರಾಷ್ಟ್ರದಲ್ಲಿ ಸಂಘಟಿತ ಮರುಬಳಕೆ ನಿಯಮ

ರಾಷ್ಟ್ರದಲ್ಲಿ ಸಂಘಟಿತ ಮರುಬಳಕೆ ನಿಯಮ

ದೇಶದಲ್ಲಿ ಈಗ ಸಂಘಟಿತ ಮರುಬಳಕೆ ನಿಯಮವು ಜಾರಿಯಲ್ಲಿದೆ. ಇದರಿಂದ ಖಾಸಗಿ ಕಂಪೆನಿಗಳು ಕೂಡ ವಿದೇಶದಿಂದ ಕಸವನ್ನು ಆಮದು ಮಾಡಿಕೊಂಡು ಅದನ್ನು ಸರಕಾರಿ ಕಂಪೆನಿಗಳಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದಾಗಿದೆ. ಚಳಿಗಾಲದಲ್ಲಿ ತಾಪಮಾನವು ತುಂಬಾ ಕೆಳಮಟ್ಟಕ್ಕೆ ಇಳಿಯುವ ಕಾರಣದಿಂದ ಮನೆಗಳನ್ನು ಕೂಡ ಬಿಸಿಯಾಗಿಡಲಾಗುತ್ತದೆ.

ದಕ್ಷಿಣ ಯುರೋಪ್‌ನ ದೇಶಗಳು ಇದನ್ನು ಪಾಲಿಸುವುದಿಲ್ಲ

ದಕ್ಷಿಣ ಯುರೋಪ್‌ನ ದೇಶಗಳು ಇದನ್ನು ಪಾಲಿಸುವುದಿಲ್ಲ

ಇಂಧನವನ್ನು ತಯಾರಿಸಲು ದಕ್ಷಿಣ ಯುರೋಪ್‌ನ ರಾಷ್ಟ್ರಗಳು ಕಸವನ್ನು ಬಳಸುವುದಿಲ್ಲ.

ಯುರೋಪ್ ಒಕ್ಕೂಟದ ರಾಷ್ಟ್ರಗಳು ಸ್ವೀಡನ್ ಗೆ ಕಸ ಕಳುಹಿಸುತ್ತಿರುವುದು ಯಾಕೆ?

ಯುರೋಪ್ ಒಕ್ಕೂಟದ ರಾಷ್ಟ್ರಗಳು ಸ್ವೀಡನ್ ಗೆ ಕಸ ಕಳುಹಿಸುತ್ತಿರುವುದು ಯಾಕೆ?

ಯುರೋಪ್ ಒಕ್ಕೂಟದ ಕೆಲವೊಂದು ರಾಷ್ಟ್ರಗಳಲ್ಲಿ ಕಸವನ್ನು ಭೂಮಿಯ ಸಮತಟ್ಟಿಗೆ ಬಳಸಿಕೊಳ್ಳುವುದು ನಿಷೇಧಿಸಲಾಗಿದೆ ಮತ್ತು ಇದಕ್ಕೆ ಹೆಚ್ಚಿನ ದಂಡ ಕೂಡ ವಿಧಿಸಲಾಗುತ್ತದೆ. ಕಸವನ್ನು ಸ್ವೀಡನ್‍ಗೆ ನೀಡುತ್ತಿರುವ ರಾಷ್ಟ್ರಗಳಲ್ಲಿ ಕಸವನ್ನು ಮರುಬಳಕೆ ಮಾಡುವ ಕಾರ್ಖಾನೆಗಳು ಕೂಡ ಇಲ್ಲ. ಇದಕ್ಕಾಗಿ ಸೇವೆಯ ರೂಪದಲ್ಲಿ ಸ್ವೀಡನ್‌ಗೆ ಕಸ ಕಳುಹಿಸುತ್ತಿವೆ. ನಿಮ್ಮ ಸಲಹೆ ಹಾಗೂ ಪ್ರತಿಕ್ರಿಯೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.

 
English summary

Sweden Is Importing Garbage From Other Nations For This Reason!

Imagine a world without garbage, unthinkable right? Well, there is a country in this world which has run short of garbage and its none other than Sweden! Currently, Sweden has run out of garbage and this Scandinavian country has been importing rubbish from other countries. The reason will surely shock you as why this nation has been importing garbage from other nations!
Please Wait while comments are loading...
Subscribe Newsletter