For Quick Alerts
ALLOW NOTIFICATIONS  
For Daily Alerts

ಕಿಕ್ ನೀಡುವ ಬಿಯರ್‌ನ ಹಿಂದಿದೆ, ಇಂಟರೆಸ್ಟಿಂಗ್ ಸ್ಟೋರಿ!

By Manu
|

ವಾರಾಂತ್ಯ ಬಂತೆಂದರೆ ಇಂದಿನ ಯುವಜನರು ಎಲ್ಲಾದರೂ ಒಂದು ಕಡೆ ಪಾರ್ಟಿ ಮಾಡುವುದನ್ನು ನಾವು ಕಾಣುತ್ತೇವೆ. ಅದರಲ್ಲೂ ಮಳೆಗಾಲದಲಂತೂ ಯಾವುದಾದರೂ ಜಲಪಾತ ನೋಡಲು ಹೋಗಿ ಸುಂದರ ತಾಣಗಳ ಮಧ್ಯೆ ಪಾರ್ಟಿ ಮಾಡುತ್ತಾರೆ. ಇಂತಹ ಪಾರ್ಟಿಗಳಲ್ಲಿ ತಿನ್ನುವುದರೊಂದಿಗೆ ಕುಡಿಯಲು ಕೂಡ ಏನಾದರೂ ಬೇಕು ತಾನೇ?

ಅದರಲ್ಲೂ ಯುವ ಜನಾಂಗದಲ್ಲಿ ಕ್ರೇಜ್ ಹುಟ್ಟಿಸಿರುವ ಆಲ್ಕೋಹಾಲ್ ಎಂದರೆ ಅದು ಬಿಯರ್. ವಿಶ್ವದೆಲ್ಲೆಡೆ ಅತೀ ಹೆಚ್ಚಿನ ಯುವಕರು ಕುಡಿಯುವುದು ಬಿಯರ್ ಅನ್ನು. ಅತೀ ಜನಪ್ರಿಯ ಪಾನೀಯಗಳಲ್ಲಿ ಬಿಯರ್ ಮೂರನೇ ಸ್ಥಾನದಲ್ಲಿದೆ ಎಂದರೆ ನಂಬಲೇಬೇಕು. ಸೈಲೆಂಟ್ ಕಿಲ್ಲರ್‌ 'ಬಿಯರ್‌'ನ ಹಿಂದಿರುವ ಕರಾಳ ಸತ್ಯ

ಮೊದಲ ಎರಡು ಸ್ಥಾನಗಳಲ್ಲಿ ನೀರು ಮತ್ತು ಚಹಾವಿದೆ. ಅದರಲ್ಲೂ ಅಮೆರಿಕಾದಲ್ಲಿ ವ್ಯಕ್ತಿಯೊಬ್ಬ ವರ್ಷಕ್ಕೆ ಸರಾಸರಿ 23 ಗ್ಯಾಲನ್ ಬಿಯರ್ ಕುಡಿಯುತ್ತಾನೆ ಎಂದರೆ ಏನು ಹೇಳಬೇಕು? ಬಿಯರ್ ಯಾಕೆ ಇಷ್ಟು ಜನಪ್ರಿಯವಾಗಿದೆ ಎಂದು ತಿಳಿಯಲು ಈ ಲೇಖನ ಓದಿ. ವಿಶ್ವದಲ್ಲಿ ಹೆಚ್ಚಿನ ಜನರು ಕುಡಿಯುವ ಬಿಯರ್ ಬಗ್ಗೆ ನಿಮಗೆ ತಿಳಿಯದೆ ಇರುವ ಕೆಲವೊಂದು ಸತ್ಯಗಳು ಇಲ್ಲಿವೆ. ಇದನ್ನು ಸರಿಯಾಗಿ ತಿಳಿದುಕೊಂಡು ಬಿಯರ್ ಕುಡಿದು ಎಂಜಾಯ್ ಮಾಡಿ.

ವಾಸ್ತವಾಂಶ #1

ವಾಸ್ತವಾಂಶ #1

ಬಿಯರ್ ಬಗ್ಗೆ ನಡೆಸುವ ಅಧ್ಯಯನವನ್ನು ಬಿಯರ್ ತಯಾರಿ ಎನ್ನಲಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಝೈಥಾಲಜಿ ಎನ್ನಲಾಗುತ್ತಾರೆ.`ಝೈಥೋ' ಎಂದರೆ ಬಿಯರ್, `ಲೊಗೊಸ್' ಎಂದರೆ ಅಧ್ಯಯನ ಎಂದರ್ಥ.

ವಾಸ್ತವಾಂಶ #2

ವಾಸ್ತವಾಂಶ #2

ಬಿಯರ್ ಅನ್ನು ಅತೀ ಹೆಚ್ಚು ಕುಡಿಯುವ ರಾಷ್ಟ್ರವೆಂದರೆ ಝೆಕ್ ಗಣರಾಜ್ಯ. ಝೆಕ್ ಗಣರಾಜ್ಯದಲ್ಲಿ ವ್ಯಕ್ತಿಯೊಬ್ಬ ವರ್ಷಕ್ಕೆ 40 ಗ್ಯಾಲನ್ ಸರಾಸರಿಯಲ್ಲಿ ಬಿಯರ್ ಕುಡಿಯುತ್ತಾನಂತೆ.

ವಾಸ್ತವಾಂಶ #3

ವಾಸ್ತವಾಂಶ #3

ವಿಶ್ವದಲ್ಲಿ ಸುಮಾರು 400 ಬಗೆಯ ಬಿಯರ್‌ಗಳಿವೆ. ಬೆಲ್ಜಿಯಂ ವಿಶ್ವದಲ್ಲೇ ಅತೀ ಹೆಚ್ಚಿನ ಬಿಯರ್ ಕಂಪನಿಗಳನ್ನು ಹೊಂದಿದೆ.

ವಾಸ್ತವಾಂಶ #4

ವಾಸ್ತವಾಂಶ #4

2010ರಲ್ಲಿ ಫಿನ್ ಲ್ಯಾಂಡ್‌ನಲ್ಲಿ 19ನೇ ಶತಮಾನದ ಬಿಯರ್ ಪತ್ತೆಯಾಗಿದೆ. ತಂಪಾದ ವಾತಾವರಣದಲ್ಲಿ ಬಿಯರನ್ನು ಇಡಲಾಗಿತ್ತು. ಆದರೆ ಇದೇ ಬಿಯರ್ ಅನ್ನು ಕುಡಿದ ಬಳಿಕ ಆ್ಯಸಿಡ್ ನಂತಿತ್ತು.

ವಾಸ್ತವಾಂಶ #5

ವಾಸ್ತವಾಂಶ #5

ವಿಶ್ವದ ಅತೀ ದೊಡ್ಡ ಬಿಯರ್ ಹಬ್ಬವನ್ನು ಒಕ್ಟೋಬೀರ್ ಫೆಸ್ಟ್ ಎನ್ನಲಾಗುತ್ತದೆ. ಜರ್ಮನಿಯ ಮ್ಯೂನಿಚ್ ನಲ್ಲಿ ಇದು ನಡೆಯುತ್ತದೆ. 16 ದಿನಗಳ ಸುದೀರ್ಘ ಹಬ್ಬವನ್ನು ವಿಶ್ವದ ವಿವಿಧೆಡೆಗಳಲ್ಲಿ ಆಚರಿಸಲಾಗುತ್ತದೆ. ಸಪ್ಟೆಂಬರ್ ಮಧ್ಯಭಾಗದಲ್ಲಿ ಆರಂಭವಾಗಿ ಅಕ್ಟೋಬರ್ ಮೊದಲ ವಾರದ ತನಕ ಮುಂದುವರಿಯುತ್ತದೆ.

ವಾಸ್ತವಾಂಶ #5

ವಾಸ್ತವಾಂಶ #5

ಬಿಯರ್ ಕುಡಿಯುವಾಗ ಅದರ ನೊರೆ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಈ ನೊರೆಯನ್ನು ಕಾರ್ಬನ್ ಡೈಯಾಕ್ಸೈಡ್‌ನಿಂದ ತಯಾರಿಸಲಾಗುತ್ತದೆ. ನೊರೆಯಿಂದಲೇ ಬಿಯರ್‌ನ ಗುಣಮಟ್ಟವನ್ನು ಹೇಳಬಹುದಾಗಿದೆ. ನೊರೆ ಇಲ್ಲವೆಂದಾದಲ್ಲಿ ಬಿಯರ್ ಗುಣಮಟ್ಟ ಚೆನ್ನಾಗಿಲ್ಲವೆಂದರ್ಥ.

ವಾಸ್ತವಾಂಶ #7

ವಾಸ್ತವಾಂಶ #7

ವಿಶ್ವದಲ್ಲಿ ಅತೀ ಹೆಚ್ಚು ಕಿಕ್ ನೀಡುವ ಬಿಯರ್‌ನಲ್ಲಿ ಸುಮಾರು 67.5% ಆಲ್ಕೋಹಾಲ್ ಇದೆ. ಇದು ಅತಿಯಾಯಿತು ಅಲ್ಲವೇ? ಇದನ್ನು ಸ್ನೇಕ್ ವೆನಮ್ ಎಂದು ಕರೆಯಲಾಗುತ್ತದೆ. ಸ್ಕಾಟ್ ಲೆಂಡ್ ನ ತಯಾರಕರು ಅತೀ ಹೆಚ್ಚಿನ ಆಲ್ಕೋಹಾಲ್‌ನ್ನು ಬಿಯರ್‌ಗೆ ಹಾಕುತ್ತಾರೆ. ಸಾಮಾನ್ಯವಾಗಿ ಬಿಯರ್‌ನಲ್ಲಿ ಶೇ.10ರಷ್ಟು ಮಾತ್ರ ಆಲ್ಕೋಹಾಲ್ ಇರುತ್ತದೆ.

English summary

Some of the interesting facts about beer, you probably dont know!

Partying without booze is no fun at all and what better way than getting your favourite mug of beer, ain't it? Beer is one of the world's widely consumed alcoholic beverages. It is the third most-popular drink overall in the world. The first two are of course water and tea! Find out more about the most popular beer and the world's strongest beer that you can relish on. Read on to know more about the interesting facts of beer that you should know.
X
Desktop Bottom Promotion