For Quick Alerts
ALLOW NOTIFICATIONS  
For Daily Alerts

ಅಘೋರಿ ಸಾಧುಗಳು ನಿಗೂಢವಾಗಿ ಪ್ರಾರ್ಥಿಸುವ ದೇವಾಲಯಗಳು!

By Manu
|

ಭಾರತವನ್ನು ನಾಗಾಲೋಟದಿಂದ ಆಧುನೀಕರಣದತ್ತ ಧಾವಿಸುತ್ತಿರುವ ದೇಶ ಎಂದು ಒಂದು ಕಡೆಯಿಂದ ನೋಡಬಹುದಾದರೆ ಇನ್ನೊಂದು ಕಡೆಯಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬರುತ್ತಿರುವ ಪುರಾತನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಭೂತ ಮತ್ತು ದುಷ್ಟ ಶಕ್ತಿಗಳನ್ನು ಆರಾಧಿಸುವ ನಾಗಾ ಮತ್ತು ಅಘೋರಿಗಳ ಬಗ್ಗೆ ಹೆಚ್ಚಿನ ಕುತೂಹಲ ಮೂಡುತ್ತದೆ. ಅಘೋರಿಗಳ ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು

ಶವಸಂಸ್ಕಾರ ಹಾಗೂ ಶವದಹನದ ಸ್ಥಳಗಳಲ್ಲಿ ಅಘೋರಿಗಳು ನಡೆಸುವ ಸಾಧನೆ ತಂತ್ರಗಳ ಮೂಲಕ ಇವರಿಗೆ ಕೆಲವು ಶಕ್ತಿಗಳು ಸಿದ್ಧಿಸಿರುತ್ತವೆ ಎಂದು ಹೇಳಲಾಗುತ್ತದೆ. ಇವರು ತಮ್ಮ ಮೈಮೇಲೆಲ್ಲಾ ಸ್ಮಶಾನದ ಬೂದಿ ಬಳಿದುಕೊಂಡು ಶಿವನನ್ನು ಆರಾಧಿಸುತ್ತಾರೆ. ಹೆಚ್ಚಿನ ಸಮಯವನ್ನು ತಪಸ್ಸಿನಲ್ಲಿ ಕಳೆಯುತ್ತಾ ಅನ್ನಾಹಾರಗಳನ್ನೂ ಅತಿ ಮಿತಿಯಾಗಿ ಸೇವಿಸುತ್ತಾ ಜೀವನದಲ್ಲಿ ಏನೋ ಸಾಧಿಸುವ ಗುರಿಯನ್ನು ಹೊಂದಿರುತ್ತಾರೆ. ಬನ್ನಿ ಈ ಬಗ್ಗೆ ಕೆಲವು ರೋಚಕ ವಿಷಯಗಳನ್ನು ನೋಡೋಣ....

ಈ ಸಾಧುಗಳು ಯಾರನ್ನು ಆರಾಧಿಸುತ್ತಾರೆ?

ಈ ಸಾಧುಗಳು ಯಾರನ್ನು ಆರಾಧಿಸುತ್ತಾರೆ?

ತಮ್ಮನ್ನು ತಾವು ಕಾಳಿಯ ಸೇವಕರು ಎಂದು ಕರೆದುಕೊಳ್ಳುವ ಈ ಸಾಧುಗಳು ಶಿವನ ಭೈರವಾತಾರವನ್ನು ಪೂಜಿಸುತ್ತಾರೆ. ಶವಸಂಸ್ಕಾರದ ಬಳಿಕ ಉಳಿದ ಮಾನವ ಅಸ್ಥಿಪಂಜರದ ಮೂಳೆಗಳು ಮತ್ತು ಕಪಾಲವನ್ನು ಇವರು ಸಂಗ್ರಹಿಸಿ ತಮ್ಮ ಪೂಜೆಗೆ ಬಳಸುತ್ತಾರೆ. ಹೆಚ್ಚು ಹೆಚ್ಚು ಪೂಜೆಗಳನ್ನು ಮಾಡಿದಂತೆಯೇ ಹೆಚ್ಚು ಹೆಚ್ಚು ಕಪಾಲಗಳನ್ನು ಸಂಗ್ರಹಿಸುತ್ತಾ ಹೋಗುತ್ತಾರೆ. ಕೆಲವರು ಈ ಕಪಾಲಗಳನ್ನು ಹಾರದಂತೆ ಪೋಣಿಸಿ ಧರಿಸುತ್ತಾರೆ.

ಇವರು ಯಾರನ್ನು ನಂಬುತ್ತಾರೆ?

ಇವರು ಯಾರನ್ನು ನಂಬುತ್ತಾರೆ?

ಸಾಮಾನ್ಯವಾಗಿ ಇವರು ಒಂಟಿಜೀವಿಗಳಾಗಿದ್ದು ಜೀವನದಲ್ಲಿ ಮೋಕ್ಷ ಪಡೆಯುವುದು ಇವರ ಗುರಿಯಾಗಿರುತ್ತದೆ. ಸಾಮಾನ್ಯವಾಗಿ ಇವರು ಹಗಲಿನಲ್ಲಿ ಹೊರಬರುವುದೇ ಇಲ್ಲ. ಬರಲೇಬೇಕಾದ ವಿಶೇಷ ಸಂದರ್ಭದಲ್ಲಿ ಅಂದರೆ ಮಹಾಶಿವರಾತ್ರಿ ಮತ್ತು ಕುಂಭದ ಮೇಳದಲ್ಲಿ ಮಾತ್ರ ಇವರು ಸಾರ್ವಜನಿಕರಾಗಿ ಕಾಣಿಸಿಕೊಳ್ಳುತ್ತಾರೆ.

ಇವರ ನಂಬಿಕಗಳೇನು

ಇವರ ನಂಬಿಕಗಳೇನು

ಇವರು ಕಾಳಿ ಮತ್ತು ಶಿವನ ಹೊರತಾಗಿ ಬೇರಾವ ದೇವರನ್ನೂ ನಂಬುವುದಿಲ್ಲ. ಇವರ ಪ್ರಕಾರ ಶಿವನೇ ಈ ಲೋಕದ ಅಪ್ರತಿಮ ವಿನಾಶಕನಾಗಿದ್ದು ಶಿವನ ಮೂಲಕ ಮಾತ್ರ ಮೋಕ್ಷ ಪಡೆಯಲು ಸಾಧ್ಯವಾಗುತ್ತದೆ. ಭಯಾನಕ ರಹಸ್ಯ..! ನಾಗಾ ಸಾಧುಗಳು ವಸ್ತ್ರಗಳನ್ನೇಕೆ ಧರಿಸುವುದಿಲ್ಲ?

ಶೈವ ನಂಬಿಕೆಗಳು

ಶೈವ ನಂಬಿಕೆಗಳು

ಅಘೋರಿಗಳು ಮೂರು ಪ್ರಾಥಮಿಕ ಶೈವ ನಂಬಿಕೆಗಳನ್ನು ನಂಬುತ್ತಾ ಅದನ್ನು ಪಡೆಯಲು ಜೀವಮಾನವಿಡೀ ಶ್ರಮಿಸುತ್ತಾರೆ. ಸರ್ವಜ್ಞತೆ, ಸರ್ವವ್ಯಾಪಿತ್ವ ಮತ್ತು ಸರ್ವಶಕ್ತ ಎಂಬ ಮೂರು ನಂಬಿಕೆಗಳನ್ನು ಶಿವನು ಹೊಂದಿದ್ದಾನೆ ಎಂದು ನಂಬುತ್ತಾರೆ. ಶಿವನಲ್ಲಿ ಐಕ್ಯವಾಗುವ ಮೂಲಕ ಪರಲೋಕದಲ್ಲಿ ಮೋಕ್ಷ ಪಡೆಯುವುದು ಇವರ ಗುರಿಯಾಗಿರುತ್ತದೆ. ಅಸಹ್ಯ ಹುಟ್ಟಿಸುವ 'ಅಘೋರಿ ಸಾಧುಗಳ' ಕೌತುಕಮಯ ರಹಸ್ಯ

ಇವರು ಹೆಚ್ಚಿನ ವೇಳೆ ಎಲ್ಲಿ ತಪಸ್ಸು ಮಾಡುತ್ತಾರೆ?

ಇವರು ಹೆಚ್ಚಿನ ವೇಳೆ ಎಲ್ಲಿ ತಪಸ್ಸು ಮಾಡುತ್ತಾರೆ?

ಸಾಧುಗಳಾಗಲೀ, ಅಘೋರಿಗಳಾಗಲೀ ಸಾವಿಗೆ ಹೆದರುವುದಿಲ್ಲ. ಇವರು ಸ್ಮಶಾನದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇವರು ಶವಗಳೊಂದಿಗೆ ಕುಳಿತು ಊಟ ಮಾಡುತ್ತಾರೆ, ಶವಗಳ ಪಕ್ಕದಲ್ಲಿಯೇ ಮಲಗುತ್ತಾರೆ. ಅಪರೂಪಕ್ಕೆ ಕೆಲವರು ಶವದೊಂದಿಗೆ ಕೂಡುವುದೂ ಇದೆ. ಭಾರತದಲ್ಲಿ ಪ್ರಥಮ ಅಘೋರಿ ಕಾಶಿಯಿಂದ ಬಂದ ಎಂದು ಹೇಳಲಾಗುತ್ತದೆ. ನಗರದಲ್ಲಿ ಜನರ ಓಡಾಟ ಇಲ್ಲದೇ ಇರುವ ಯಾವುದೇ ಕತ್ತಲ ಸ್ಥಳದಲ್ಲಿ ಇವರು ಆಶ್ರಯ ಪಡೆದು ಹಗಲಿಡೀ ತಪಸ್ಸು ಮಾಡುತ್ತಿರುತ್ತಾರೆ.

ನೇಪಾಳದ ಅಘೋರ್ ಕುಟಿ

ನೇಪಾಳದ ಅಘೋರ್ ಕುಟಿ

ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿರುವ ಕುಟೀರ ಅಥವಾ ಕುಟಿ ಅತ್ಯಂತ ಪ್ರಾಚೀನವಾಗಿದ್ದು ಬಾಬಾ ಸಿಂಗ್ ಶವಕ್ ಎಂಬುವರು ಕಟ್ಟಿಸಿದ್ದಾರೆ ಎಂದು ತಿಳಿದುಬರುತ್ತದೆ. ಇವರು ರಾಮನ ಆರಾಧಕರಾಗಿದ್ದು ಜನಸೇವೆಗಾಗಿ ಈ ಮಂದಿರವನ್ನು ಕಟ್ಟಿಸಿದ್ದರು. ಈಗ ಈ ಕುಟೀರದಲ್ಲಿ ಅಘೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಘೋರಿಗಳು ಸೇರುತ್ತಾರೆ ಮತ್ತು ತಪಸ್ಸು ನಡೆಸುತ್ತಾರೆ.

ಕೇದಾರನಾಥದ ಕಾಳಿ ಮಠ

ಕೇದಾರನಾಥದ ಕಾಳಿ ಮಠ

ಉತ್ತರಖಂಡದ ಕೇದಾರನಾಥ ಬೆಟ್ಟಗಳ ನಡುವೆ ಇರುವ ಗುಪ್ತಾಕ್ಷಿ ಎಂಬ ಸ್ಥಳದಲ್ಲಿರುವ ಕಾಳಿ ಮಠ ಒಂದು ಶಕ್ತಿಸ್ಥಳವಾಗಿದೆ. ಶಕ್ತಿ ಸ್ಥಳ ಎಂದರೆ ಸತಿದೇವಿಯ ಪಿಂಡ ಬಿದ್ದ ಸ್ಥಳ ಎಂಬ ಪ್ರತೀತಿ ಇದೆ. ಈ ಸ್ಥಳಕ್ಕೆ ಅಘೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದೇ ಆಗಮಿಸಿತ್ತಾರೆ ಹಾಗೂ ಉಳಿದ ಜೀವಮಾನವಿಡೀ ಇಲ್ಲಿ ಕಳೆದು ಪ್ರಾಣತ್ಯಾಗ ಮಾಡುತ್ತಾರೆ.

ಪಶ್ಚಿಮ ಬಂಗಾಲದ ರಾಮ್ ಪುರ್ಹತ್

ಪಶ್ಚಿಮ ಬಂಗಾಲದ ರಾಮ್ ಪುರ್ಹತ್

ಪಶ್ಚಿಮ ಬಂಗಾಲದ ರಾಮ್ ಪುರ್ಹತ್ ಎಂಬ ಪುಟ್ಟ ಗ್ರಾಮದ ಸ್ಮಶಾನದ ಒಂದು ಭಾಗವನ್ನು ಗೋಡೆ ಕಟ್ಟಿ ಆ ಭಾಗವನ್ನು ಜನರು ಅಘೋರಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಈ ಸ್ಥಳದಲ್ಲಿರುವ ಪುಟ್ಟ ಮಂದಿರದ ಗರ್ಭಗುಡಿಯಲ್ಲಿ ಸತಿದೇವಿಯ ವಿಗ್ರಹವಿದ್ದು ಆಕೆಯನ್ನು ತಾರಾದೇವಿ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಪಕ್ಕದ ಸ್ಮಶಾನದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಂತ್ರ, ತಪಸ್ಸು, ಹೋಮ ಹವನ ಮೊದಲಾದ ಚಟುವಟಿಕೆಗಳು ನಡೆಯುತ್ತವೆ.

ಕೊಲ್ಕಾತಾದ ಕಾಳಿ ಮಂದಿರ

ಕೊಲ್ಕಾತಾದ ಕಾಳಿ ಮಂದಿರ

ಕೊಲ್ಕಾತಾದ ದಕ್ಷಿಣೇಶ್ವರ ಪಟ್ಟಣದಲ್ಲಿರುವ ಕಾಳಿಘಾಟ್ ಬಳಿ ಇರುವ ಅತಿ ಪ್ರಸಿದ್ಧ ದಕ್ಷಿಣೇಶ್ವರ ಕಾಳಿ ಮಂದಿರದಲ್ಲಿ ಭವತಾರಿಣಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಭವತಾರಿಣಿಯನ್ನು ಕಾಳಿಯ ಅವತಾರ ಎಂದು ನಂಬಲಾಗುತ್ತದೆ. ಈಕೆ ತನ್ನ ಭಕ್ತರನ್ನು ಸಂಸಾರದ ಗೋಳಿನಿಂದ ಮುಕ್ತಿ ದೊರಕಿಸುತ್ತಾಳೆ ಎಂದು ನಂಬಲಾಗಿದೆ. ಸತಿದೇವಿಯ ಸಾವಿಯ ನಂತರ ಆಕೆಯ ಎಡಗಾಲಿನ ನಾಲ್ಕು ಬೆರಳುಗಳು ಈ ಸ್ಥಳದಲ್ಲಿ ಬಿದ್ದವು ಎಂದು ಹೇಳಲಾಗುತ್ತದೆ. ಈ ಸ್ಥಳಕ್ಕೆ ಬಂದು ಮೋಕ್ಷ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅಘೋರಿಗಳು ಆಗಮಿಸಿ ತಂತ್ರವಿದ್ಯೆ ಮತ್ತು ತಪಸ್ಸನ್ನು ಆಚರಿಸುತ್ತಾರೆ.

ಅಫ್ಘಾನಿಸ್ತಾನದ ಲಾಲ್ಜಿ ಪೀರ್

ಅಫ್ಘಾನಿಸ್ತಾನದ ಲಾಲ್ಜಿ ಪೀರ್

ಕಾಬೂಲ್ ನಗರದಲ್ಲಿದ್ದ ಸಂತರಿಗೆಂದು ಶಾ ಜಹೀರ್ ಶಾ ರವರ ಪೂರ್ವಜರು ಕೊಂಚ ಭೂಮಿಯನ್ನು ದಾನರೂಪದಲ್ಲಿ ನೀಡಿದ್ದರು. ಈ ಸ್ಥಳದಲ್ಲಿ ಔಘಾದ್ ರತನ್ ಲಾಲ್ಜಿ ಎಂಬ ಅಘೋರಿ ಪ್ರಥಮವಾಗಿ ನೆಲೆಸಿ ತಮ್ಮ ತಪಸ್ಸನ್ನು ಆಚರಿಸಿದ ಕಾರಣ ಇದಕ್ಕೆ ಲಾಲ್ಜಿ ಪೀರ್ ಎಂಬ ಹೆಸರು ಬಂದಿದೆ. ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಘೋರಿಗಳು ಇಲ್ಲಿ ಆಗಮಿಸುತ್ತಾರೆ. ಇದೇ ಸ್ಥಳದಲ್ಲಿ ರತನ್ ಲಾಲ್ಜಿಯವರ ಸಮಾಧಿಯೂ ಇದೆ.

English summary

Secret temples where Aghori Baba pray!

Among rural Hindu population, Aghoris are revered as the possessors of special healing powers, which they are believed to have gathered after suspicious post-mortem rituals and tantras. They smear cremation ashes all over their body, symbolizing a practice followed by Lord Shiva himself. They practice eremitic tápasya and spend most of their time meditating
X
Desktop Bottom Promotion