For Quick Alerts
ALLOW NOTIFICATIONS  
For Daily Alerts

ಏನೇ ಹೇಳಿ, ವ್ಯಾಲೆಂಟೈನ್ಸ್ ಡೇ ಎಂಬ ಕಲ್ಪನೆಯೇ ವಿಚಿತ್ರ!

By Arshad
|

ಫೆಬ್ರವರಿ ಹತ್ತಿರ ಬರುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್ ಡೇ)ಪರ ಮತ್ತು ವಿರೋಧವಾದ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಯುವಜನತೆ ಇದನ್ನು ಬೇಕು ಎಂದೂ ಸಂಪ್ರದಾಯವಾದಿಗಳು ನಮ್ಮದಲ್ಲದ ಇದು ಬೇಡ ಎಂದೂ ವಾದ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಹತ್ತು ಹದಿನೈದು ವರ್ಷಗಳಿಗೂ ಹಿಂದೆ ಇಂತಹದ್ದೊಂದು ದಿನ ಇದೇ ಎಂದೇ ಗೊತ್ತಿಲ್ಲದ ಭಾರತೀಯರಿಗೆ ಇದು ಪರಿಚಿತವಾದದ್ದು ಇದರ ಇತಿಹಾಸಕ್ಕಿಂತಲೂ ಹೆಚ್ಚಾಗಿ ಈ ದಿನಾಚರಣೆಯ ಗೊಂದಲದಿಂದ.

ಇತಿಹಾಸವನ್ನು ಕೆದಕಿದರೆ ಹದಿನೆಂಟನೆಯ ಶತಮಾನದಲ್ಲಿ, ಅಂದರೆ ಅಂಗ್ಲ ಸಾಹಿತ್ಯದ ಪಿತಾಮಹ ಜೆಫ್ರಿ ಛಾವ್ಸರ್ (Geoffrey Chaucer) ರ ಕಾಲದಲ್ಲಿ ಪ್ರೇಮಿಗಳು ಒಬ್ಬರಿಗೊಬ್ಬರು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಉಡುಗೊರೆ ಮತ್ತು ಹೂವುಗಳನ್ನು ಬಳಸುತ್ತಿದ್ದರು. ಇದರೊಂದಿಗೆ ಶುಭಾಶಯ ಪತ್ರವೊಂದಿದ್ದು ಜೀವನಸಂಗಾತಿಯಾಗಲು ನೀಡುವ ಆಹ್ವಾನವೂ ಆಗಿತ್ತು.

ಈ ಶುಭಾಶಯ ಪತ್ರಗಳನ್ನು ಅಂದು ಚಿಕ್ಕದಾಗಿ ವ್ಯಾಲೆಂಟೈನ್ಸ್ ಎಂದೂ ಕರೆಯುತ್ತಿದ್ದರು. ಪ್ರೇಮದ ದೇವತೆಯಾದ ಸಂತ ವ್ಯಾಲೆಂಟೈನ್ ನನ್ನೇ ಉಲ್ಲೇಖಿಸಿ ನೀಡುವ ಉಡುಗೊರೆ ಪತ್ರಕ್ಕೆ ಚಿಕ್ಕದಾಗಿ ಈ ಹೆಸರು ಬಂದಿತು. ಹೆಸರು ಸಹಾ ಭಾವನಾಪೂರ್ವಕವಾದುದರಿಂದ ಈ ಹೆಸರು ಹೆಚ್ಚು ವ್ಯಾಪ್ತಿಯಾಯಿತು. ಅಷ್ಟಕ್ಕೂ ಫೆ. ಹದಿನಾಲ್ಕೇ ಏಕೆ? ಸಂತ ವ್ಯಾಲೆಂಟೈನ್ ರೋಮನ್ ಚಕ್ರವರ್ತಿ ಕ್ಲಾಡಿಯಸ್ -2 ರವರ ಆಜ್ಞೆ ಮೀರಿ ಪ್ರೇಮಿಗಳನ್ನು ಮದುವೆ ಮಾಡಿಸುತ್ತಿದ್ದ ಪಾದ್ರಿಯಾಗಿದ್ದ. ಇದು ಚಕ್ರವರ್ತಿಯ ದೃಷ್ಟಿಯಲ್ಲಿ ಮಹಾಪರಾಧವಾದುದರಿಂದ ಫೆ. ಹದಿನಾಲ್ಕರನ್ನು ಶಿರಚ್ಛೇದಗೊಳಿಸಲಾಯಿತು. ಈ ಕಾರಣಕ್ಕೆ ಫೆ. ಹದಿನಾಲ್ಕನ್ನು ವ್ಯಾಲೆಂಟೈನ್ಸ್ ಡೇ ಎಂದೇ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ವಾಸ್ತವವಾಗಿ ಪ್ರೇಮಿಗಳ ದಿನಾಚರಣೆ ಎಂಬ ಕಲ್ಪನೆಯೇ ವಿಚಿತ್ರ, ಏಕೆಂದರೆ ಪ್ರೀತಿ ಎನ್ನುವುದು ಯಾವುದೊಂದು ದಿನಕ್ಕೆ ಸೀಮಿತವಾಗಿಲ್ಲ. ಇದು ಜಗತ್ತಿನಲ್ಲಿ ಜೀವ ಎನ್ನುವುದು ಇರುವವರೆಗೂ ಪ್ರತಿ ಕ್ಷಣ ಇರುವ ಭಾವನೆ. ಇದನ್ನು ವ್ಯಕ್ತಪಡಿಸಲು ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಾಗಿಲ್ಲ. ನಿಜವಾಗಿ ಹೇಳಬೇಕೆಂದರೆ ಭಾರತದಲ್ಲಿ ಈ ದಿನಾಚರಣೆ ಅಪ್ಪಟ ವ್ಯಾಪಾರಿ ಮನೋಭಾವವಾಗಿದ್ದು ಸರಕುಗಳನ್ನು ಬಲವಂತವಾಗಿ ಮಾರಲು ವಾಣಿಜ್ಯ ಸಂಸ್ಥೆಗಳು ಸುಂದರ ಜಾಹೀರಾತುಗಳ ಮೂಲಕ ಬಿತ್ತಿರುವ ಅನಗತ್ಯ ಆಚರಣೆ.

ದುಬಾರಿ ಉಡುಗೊರೆ, ಪ್ರವಾಸ, ಚಾಕಲೇಟು ಎಲ್ಲವೂ ಪ್ರೇಮಿಗಳ ನಡುವಣ ಪ್ರೇಮವನ್ನು ಹೆಚ್ಚಿಸುತ್ತದೆ ಎಂದಾದರೆ ಚಾಕಲೇಟು ಪ್ಯಾಕ್ಟರಿಯಲ್ಲಿರುವ ಕಾರ್ಮಿಕರಷ್ಟೂ ಸಾವಿರಾರು ಪ್ರೇಮಿಗಳನ್ನು ಒಬ್ಬೊಬ್ಬರೂ ಹೊಂದಿರಬೇಕಿತ್ತು. ಜಾಹೀರಾತುಗಳು ಪ್ರಕಟಿಸುವ ಪ್ರಕಾರ ಅನುಸರಿಸದಿದ್ದರೆ ಪ್ರೇಮ ಅಂಕುರಿಸುವುದಿಲ್ಲವೇ? ಇವೆಲ್ಲವೂ ನಾವು, ವಿಶೇಷವಾಗಿ ಯುವಜನತೆ ಈ ಕ್ಷಣ ತಮ್ಮಲ್ಲೇ ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಒಬ್ಬಂಟಿಯಾಗಿರುವುದೇ ತಪ್ಪು ಎನ್ನುವ ಭಾವನೆ ಮೂಡಿಸುತ್ತದೆ

ಒಬ್ಬಂಟಿಯಾಗಿರುವುದೇ ತಪ್ಪು ಎನ್ನುವ ಭಾವನೆ ಮೂಡಿಸುತ್ತದೆ

ಈ ದಿನಾಚರಣೆಯ ಪ್ರಚಾರ ಇಷ್ಟೊಂದು ಹೆಚ್ಚುತ್ತದೆ ಎಂದರೆ ಪ್ರೇಮಿಯೊಬ್ಬ/ಯೊಬ್ಬಳು ಇಲ್ಲದಿದ್ದರೆ ಈ ಜೀವನವೇ ನಶ್ವರ ಎಂಬ ಭಾವನೆ ಮೂಡಿಸುತ್ತದೆ. "ಬನ್ನಿ, ಪ್ರೇಮದಲ್ಲಿ ಜಾರಿ....." ಎಂಬಂತಹ ಅರ್ಥದ ಜಾಹೀರಾತುಗಳು ಎಲ್ಲೆಡೆ ರಾರಾಜಿಸುವುದು ವ್ಯಾಪಾರಿಗಳ ಸರಕು ಮಾರಾಟ ಮಾಡುವ ತಂತ್ರವೇ ಹೊರತು ಮತ್ತೇನೂ ಇಲ್ಲ. ಆದರೆ ಇದರ ಪರಿಣಾಮ ಮಾತ್ರ ಭೀಕರ, ಇದರಿಂದ ಒಂಟಿಯಾಗಿರುವ, ಆದರೆ ಯಾವುದೇ ಚಿಂತೆಯಿಲ್ಲದೇ ಸುಖವಾಗಿರುವವರಿಗೂ ಯಾವುದೋ ಕೊರತೆ ಇದೆ ಎಂಬ ಚಿಂತೆ ಹಚ್ಚಿ ಮನೋರೋಗಿಗಳನ್ನು ಸೃಷ್ಟಿಸುತ್ತದೆ.

ಎಲ್ಲಾ ಪ್ರಚಾರದ ಉಪ ಉತ್ಪನ್ನ - ಒತ್ತಡ, ಮನೋವೇದನೆ

ಎಲ್ಲಾ ಪ್ರಚಾರದ ಉಪ ಉತ್ಪನ್ನ - ಒತ್ತಡ, ಮನೋವೇದನೆ

ಪ್ರೀತಿ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವಣ ಅತ್ಯಂತ ಆತ್ಮೀಯ ಮತ್ತು ಖಾಸಗಿ ಭಾವವೇ ಹೊರತು ಸುತಾರಾಂ ವ್ಯಾಪಾರಿ ಮನೋಭಾವವಲ್ಲ. ಆದರೆ ವ್ಯಾಲೈಂಟೈನ್ಸ್ ಡೇ ಎಂದರೆ ಇದರಲ್ಲಿ ನೀವು ಕಡ್ಡಾಯವಾಗಿ ನಿಮ್ಮ ಪ್ರೇಮಿಗೆ ಉಡುಗೊರೆ ನೀಡಲೇಬೇಕು, ಇಲ್ಲದಿದ್ದರೆ ನಿಮ್ಮ ಪ್ರೀತಿ ಬೆಳೆಯದು ಎಂಬಂತಹ ಅರ್ಥ ಬರುವಂತೆ ಪ್ರಚಾರ ಮಾಡಲಾಗುತ್ತದೆ. ಅನಿವಾರ್ಯವಾಗಿ ಯುವಜನತೆ ದುಬಾರಿ ಉಡುಗೊರೆ, ಖ್ಯಾತ ಹೋಟೆಲಿನಲ್ಲಿ ಊಟ, ದುಬಾರಿ ಮದ್ಯ ಮೊದಲಾದವುಗಳ ಮೊರೆ ಹೋಗುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಲ್ಲಾ ಪ್ರಚಾರದ ಉಪ ಉತ್ಪನ್ನ - ಒತ್ತಡ, ಮನೋವೇದನೆ

ಎಲ್ಲಾ ಪ್ರಚಾರದ ಉಪ ಉತ್ಪನ್ನ - ಒತ್ತಡ, ಮನೋವೇದನೆ

ಇವರ ದೃಷ್ಟಿಯಲ್ಲಿ ಈ ವಿಶೇಷ ದಿನದಂದು ಮಾಡಿದ ನಿವೇದನೆ ಖಂಡಿತಾ ತಮ್ಮ ಪ್ರೇಮಿಯ ಹೃದಯ ತಟ್ಟುತ್ತದೆ ಎಂದು ಭಾವಿಸುತ್ತಾರೆ. ಆದರೆ ಇವರ ಖರ್ಚಿನಿಂದ ಆ ವ್ಯಾಪಾರಿಗಳ ಜೇಬು ತುಂಬುತ್ತದೆಯೇ ಹೊರತು ಮನದನ್ನೆಯ ಹೃದಯ ಗೆದ್ದ ಯಾವುದೇ ಖಚಿತ ಮಾಹಿತಿ ಇಲ್ಲ. ಆದರೆ ಒಂದು ವೇಳೆ ಇದೇ ಹಣವನ್ನು ನಿಮ್ಮ ಮನದನ್ನ/ಮನದನ್ನೆ ಬಯಸುವ ಕೆಲಸ ಅಥವಾ ಆತ/ಆಕೆ ಸಹಾಯ ಮಾಡಬಯಸುವ ಕಾರ್ಯಗಳಿಗೆ ಬಳಸಿದರೆ ಹೃದಯ ಗೆಲ್ಲುವ ಸಂಭವ ಶೇಖಡಾ 99 ರಷ್ಟಿದೆ.

ಅಬ್ಬರದ ಪ್ರಚಾರವೇ ಇದರ ಗುಟ್ಟು

ಅಬ್ಬರದ ಪ್ರಚಾರವೇ ಇದರ ಗುಟ್ಟು

ಈ ದಿನ ಪ್ರೇಮಿಗಳ ದಿನ, ಇದನ್ನು ವಿಶೇಷವಾಗಿಸಲು ನಮ್ಮಲ್ಲಿ ಇಂತಿಂತಹಾ ಸರಕುಗಳಿವೆ ಎಂಬ ಅಬ್ಬರ ಪ್ರಚಾರವನ್ನು ದೇಶದಲ್ಲಿ ಮಾಡಲಾಗುತ್ತದೆ. ಇದಕ್ಕೆ ಮಾಡುವ ಖರ್ಚು ನೋಡಿದರೆ ಯಾರಿಗಾದರೂ ದಿಗ್ಭ್ರಮೆ ಹುಟ್ಟಿಸುತ್ತದೆ. ಏಕೆಂದರೆ ಪ್ರೇಮದ ಅಮಲಿನಲ್ಲಿರುವವರು ಈ ಜಾಹೀರಾತುಗಳಿಗೆ ಮರುಳಾಗಿ ಈ ದಿನ ಖರ್ಚು ಮಾಡದಿದ್ದರೆ ತನಗೆ ತನ್ನ ಆಯ್ಕೆಯ ಮನದನ್ನೆ/ಮನದನ್ನ ದಕ್ಕದೇ ಹೋದರೆ ಎಂಬ ಆತಂಕದಿಂದ ಖರ್ಚು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಇದೇ ಈ ಬಹುಖರ್ಚಿನ ಜಾಹೀರಾತಿನ ಗುಟ್ಟು. ಸಂಸ್ಥೆಗಳು ಎಷ್ಟು ಹಣವನ್ನು ಈ ದಿನಕ್ಕಾಗಿ ಪ್ರಚಾರ ಮಾಡಿದ್ದವೋ ಅದಕ್ಕೂ ನೂರು ಪಟ್ಟು ಹಣವನ್ನು ಈ ದಿನ ದೋಚುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಬ್ಬರದ ಪ್ರಚಾರವೇ ಇದರ ಗುಟ್ಟು

ಅಬ್ಬರದ ಪ್ರಚಾರವೇ ಇದರ ಗುಟ್ಟು

ಹಣ ಖರ್ಚು ಮಾಡಿದ ಯುವಜನತೆ ಆ ದಿನ ಸಂಭ್ರಮ ಆಚರಿಸಿ ಜೇಬು ಖಾಲಿ ಮಾಡಿಕೊಂಡು ಮರುದಿನ ಮತ್ತೊಮ್ಮೆ ಹ್ಯಾಪಿ ಮೋರೆಯಿಂದಲೇ ಕಛೇರಿಗೆ ಆಗಮಿಸುತ್ತಾರೆ. ಒಂದು ವೇಳೆ ಅವರ ಅರಿಕೆ ಯಶಸ್ವಿಯಾಗಿ ಜೀವನಸಂಗಾತಿಯಿಂದ ಉತ್ತರ ದೊರೆತರೂ ಆ ಉತ್ತರ ಈ ದುಬಾರಿ ಖರ್ಚಿನಿಂದಲ್ಲ, ಅವರ ವ್ಯಕ್ತಿತ್ವದಿಂದಲೇ ಬಂದಿದ್ದು ಈ ದಿನ ಪ್ರಕಟಗೊಂಡಿರುತ್ತದೆ ಅಷ್ಟೇ. ಆದರೆ ವ್ಯಾಪಾರಿಗಳು ಈ ವಿಷಯವನ್ನು ಉಲ್ಲೇಖಿಸದೇ ಖರ್ಚು ಮಾಡಿದುದರಿಂದಲೇ ನಿಮಗೆ ಆಕೆ ಸಿಕ್ಕಿದ್ದಾಳೆ ಎಂಬ ಭ್ರಮೆ ಮೂಡಿಸುತ್ತಾರೆ.

ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲೊಂದು ಅವಕಾಶ

ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲೊಂದು ಅವಕಾಶ

ಫೆ ಹದಿನಾಲ್ಕರಂದು ನಗರದ ಎಲ್ಲಾ ಕೆಫೆ, ಪಬ್, ಬಾರ್, ಹೋಟೆಲುಗಳೆಲ್ಲವೂ ಪ್ರೇಮಿಗಳಿಂದ ತುಂಬಿಹೋಗಿರುತ್ತದೆ. ಎಲ್ಲೆಡೆ ಚುಂಬನ ಅಪ್ಪುಗೆ ಯಾವುದೇ ಎಗ್ಗು ಲಂಗುಲಗಾಮಿಲ್ಲದೇ ನಡೆಯುತ್ತಿರುತ್ತದೆ. ಇದೊಂದು ಮಾನಸಿಕ ಸ್ಥಿತಿ. ಅಪ್ಪಟ ಪಾಶ್ಚಾತ್ಯ ಸಂಸ್ಕೃತಿ. ಪಾಶ್ಚಾತ್ಯರಲ್ಲಿ ತಮ್ಮ ಪ್ರೇಮಿಯನ್ನು ಬಹಿರಂಗವಾಗಿ ಚುಂಬಿಸಿ ಈಕೆ/ಈತ ನನ್ನ ಆಸ್ತಿ, ಯಾರೂ ತಂಟೆಗೆ ಬರಬೇಡಿ ಎಂದು ಪ್ರಚುರಪಡಿಸುವ ವಿಧಾನ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಹಿರಂಗ ಪ್ರಕಟಣೆಗೆ ಪ್ರೋತ್ಸಾಹವಿಲ್ಲ.

ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲೊಂದು ಅವಕಾಶ

ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲೊಂದು ಅವಕಾಶ

ಇದು ಅಗತ್ಯವೂ ಇಲ್ಲ. ಯಾವುದೇ ವ್ಯಕ್ತಿಯನ್ನು ಅವರ ಒಪ್ಪಿಗೆ ಇಲ್ಲದೇ ಚುಂಬಿಸಲು, ಚುಂಬನ ಪಡೆಯಲು ಸಾಧ್ಯವೂ ಇಲ್ಲ. ಆದರೆ ಪಾಶ್ಚಾತ್ಯ ಸಂಸ್ಕೃತಿಗೆ ಮನಸೋತಿರುವ ಯುವಜನಾಂಗ ಈ ದಿನವನ್ನು ತಮ್ಮ ಪ್ರೇಮದ ಬಹಿರಂಗ ಪ್ರಕಟಣೆಗೆ ಬಳಸುವುದು ಹಾಗೂ ಧಾವಿಸುತ್ತಿರುವ ನೆರೆಗೆ ಸಮನಾಗಿ ಈಜುತ್ತಿದ್ದೇವೆ ಎಂದೇ ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದರೆ ವ್ಯತಿರಿಕ್ತವಾಗಿ ಒಂಟಿ ಜೀವಿಗಳು ಇನ್ನಷ್ಟು ಹತಾಶರಾಗಲು ಪರೋಕ್ಷವಾಗಿ ಕಾರಣರಾಗುತ್ತಾರೆ.

ಖಾಲಿಯಾದ ಜೇಬು, ವ್ಯಗ್ರಗೊಂಡ ಮನಸ್ಸು

ಖಾಲಿಯಾದ ಜೇಬು, ವ್ಯಗ್ರಗೊಂಡ ಮನಸ್ಸು

ವರ್ಷದ ಕೆಲವು ದಿನಗಳಲ್ಲಿ ಎಲ್ಲರಿಗೂ ಕೆಲವು ಖರ್ಚುಗಳು ಬರುತ್ತವೆ. ಕೆಲವು ಇಷ್ಟವಿಲ್ಲದ್ದಾದರೆ ಕೆಲವು ಇಷ್ಟಪಟ್ಟು ಮಾಡುವಂತಹವು. ಹುಟ್ಟುಹಬ್ಬ ಮೊದಲಾದವು ಇಷ್ಟಪಟ್ಟು ಮಾಡುವ ಖರ್ಚಾದರೆ ರಜಾದಿನದ ಸಮಯದಲ್ಲಿ ಏರಿದ ಬಸ್, ವಿಮಾನದ ಟಿಕೇಟಿಗೆ ಮಾಡುವ ಖರ್ಚು ಇಷ್ಟವಿಲ್ಲದ್ದು. ಆದರೆ ವ್ಯಾಲೆಂಟೈನ್ಸ್ ದಿನದ ಖರ್ಚನ್ನು ಎಲ್ಲಿ ಹಾಕುವುದು ಎಂದು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಜಾಹೀರಾತಿಗೆ ಮರುಳಾಗಿ ಖರ್ಚು ಮಾಡಿ ಸಂಭ್ರಮಿಸಿದ ಬಳಿಕ ಪ್ರೀತಿಯ ಕಥೆ ಏನಾಯಿತು ಎಂದು ಕೇಳಲು ಯಾರೂ ಬರುವುದಿಲ್ಲ. ಆದರೆ ವ್ಯಾಪಾರಿಗಳು ತಮ್ಮ ವ್ಯಾಪಾರ ಹೆಚ್ಚಿಸಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈಗ ವ್ಯಾಲೆಂಟೈನ್ಸ್ ಡೇ ಅಲ್ಲವಂತೆ, ವ್ಯಾಲೆಂಟೈನ್ಸ್ ವಾರವಂತೆ. ಅಂದರೆ ಒಂದು ವಾರಕ್ಕೂ ಹೆಚ್ಚು ಕಾಲ ಸುಲಿಗೆ ಮುಂದುವರೆಯುತ್ತದೆ.

English summary

Reasons Why Valentine's Day Is Overrated

February 14th has become synonymous with Valentine's Day the world over. It is said that the holiday started during the times of Geoffrey Chaucer, the father of English literature. In 18th century England it grew into an occasion on which lovers expressed their love for each other with gifts and flowers. Greeting cards were sent out by each couple to signify love. The greetings were called 'Valentines'. Though it seems quite romantic and all, we will tell you why Valentine's Day is overrated.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more