For Quick Alerts
ALLOW NOTIFICATIONS  
For Daily Alerts

ಹೌದು ಸ್ವಾಮಿ, ಮೆದುಳಿಗೇ ಚಾಲೆಂಜ್ ಹಾಕುವ ಚಿತ್ರಗಳಿವು!

By Hemanth
|

ಹಠಾತ್ ಆಗಿ ನಮ್ಮೆದುರಿಗೆ ಒಂದು ಚಿತ್ರವನ್ನು ತಂದಿಟ್ಟರೆ ಆಗ ನಮಗೆ ಈ ಚಿತ್ರದಲ್ಲಿ ಏನೋ ವಿಚಿತ್ರವಿದೆ ಎಂದೆನಿಸುತ್ತದೆ. ಈ ಬಗ್ಗೆ ನಮ್ಮ ಮೆದುಳು ಕೂಡ ಗೊಂದಲಕ್ಕೆ ಒಳಗಾಗುತ್ತದೆ. ಇಂತಹ ಚಿತ್ರಗಳು ಆಗಾಗ ನಮ್ಮ ಮುಂದೆ ತಂದಾಗ ಮೆದುಳು ಎರಡೆರಡು ಸಲ ಯೋಚಿಸಿ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುತ್ತದೆ. ಇದು ಕೆಲವೊಮ್ಮೆ ಗೊಂದಲವನ್ನು ಉಂಟುಮಾಡಿದರೆ, ಮತ್ತೆ ಕೆಲವು ಸಲ ಅಚ್ಚರಿ ಮೂಡಿಸುತ್ತದೆ. ಈ ಲೇಖನದಲ್ಲಿ ನಾವು ಕೆಲವೊಂದು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಈ ದೃಷ್ಟಾಂತಗಳು ನಿಜವಾಗಿಯೂ ನಿಮ್ಮನ್ನು ಗೊಂದಲಕ್ಕೀಡು ಮಾಡುವುದು ಖಚಿತ. ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

ನಿಮ್ಮ ಮಿದುಳನ್ನು ಗೊಂದಲಕ್ಕೀಡು ಮಾಡುವಂತಹ ಕೆಲವೊಂದು ದೃಷ್ಟಾಂತಗಳ ಬಗ್ಗೆ ನಾವಿಲ್ಲಿ ಚರ್ಚಿಸುವ. ಇಂತಹ ಕೆಲವೊಂದು ದೃಷ್ಟಾಂತಗಳನ್ನು ಮ್ಯಾಜಿಕ್ ಶೋಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯಲು ಬಳಸಲಾಗುತ್ತದೆ. ನಿಮ್ಮ ಮೆದುಳು ಈ ಚಿತ್ರಗಳನ್ನು ವಿಶ್ಲೇಷಣೆ ಮಾಡುವಾಗ ನಿಮಗಿದು ಹೆಚ್ಚಿನ ಖುಷಿ ನೀಡಲಿದೆ. ಬನ್ನಿ ಇಂತಹ ಕೆಲವೊಂದು ಚಿತ್ರಗಳ ಬಗ್ಗೆ ನಾವಿಲ್ಲಿ ಚರ್ಚಿಸುವ... ನೀವು ಎಡ ಮೆದುಳಿನವರೇ ಅಥವಾ ಬಲ ಮೆದುಳಿನವರೇ?

ಈ ಚಕ್ರಗಳು ತಿರುಗುತ್ತಿದೆಯಾ?

ಈ ಚಕ್ರಗಳು ತಿರುಗುತ್ತಿದೆಯಾ?

ಚಕ್ರದ ಮಧ್ಯಭಾಗವನ್ನೇ ದುರುಗುಟ್ಟಿ ನೋಡುತ್ತಲಿರಿ. ನಿಮ್ಮ ತಲೆಯನ್ನು ಹಾಗೆಯೇ ಹಿಂದೆ ಕೊಂಡುಹೋಗಿ. ಈಗ ಚಕ್ರ ತಿರುಗುತ್ತಿದೆ ನೋಡಿ...!

ಯಾವ ಹುಡುಗ ಎತ್ತರ?

ಯಾವ ಹುಡುಗ ಎತ್ತರ?

ಚಿತ್ರವನ್ನು ತುಂಬಾ ಏಕಾಗ್ರತೆಯಿಂದ ನೋಡಿ. ಮೂವರು ಕೂಡ ಸಮಾನ ಎತ್ತರದವರೆಂದು ನಿಮಗನಿಸುವುದಿಲ್ಲವೇ?

ಯಾವ ರೇಖೆ ಉದ್ದದ್ದಾಗಿದೆ?

ಯಾವ ರೇಖೆ ಉದ್ದದ್ದಾಗಿದೆ?

ಈ ಗೆರೆಗಳನ್ನು ನೋಡಿದಾಗ ಎಲ್ಲವೂ ಸಮಾನವಾಗಿದೆಯೆಂದು ನಿಮಗನಿಸುತ್ತಿದೆಯಾ?

ಎಷ್ಟು ಕಪ್ಪು ಚುಕ್ಕೆಗಳನ್ನು ಎಣೆಸುತ್ತೀರಿ?

ಎಷ್ಟು ಕಪ್ಪು ಚುಕ್ಕೆಗಳನ್ನು ಎಣೆಸುತ್ತೀರಿ?

ಇಲ್ಲಿ ಕಪ್ಪು ಚುಕ್ಕೆಗಳೇ ಇಲ್ಲವೆನ್ನುವ ವಾದವನ್ನು ನೀವು ಖಂಡಿತವಾಗಿಯೂ ಒಪ್ಪಿಕೊಳ್ಳಲಾರಿರಿ.

ಎರಡು ಮುಖ ಅಥವಾ ಹೂದಾನಿ ಕಾಣಿಸುತ್ತಿದೆಯಾ?

ಎರಡು ಮುಖ ಅಥವಾ ಹೂದಾನಿ ಕಾಣಿಸುತ್ತಿದೆಯಾ?

ಖಂಡಿತವಾಗಿಯೂ ನಿಮಗೆ ಎರಡೂ ಕಾಣಿಸಲಿದೆ.

ಈ ಗೆರೆಗಳು ನೇರವಾಗಿದೆಯಾ ಅಥವಾ ಓರೆಯಾಗಿದೆಯಾ?

ಈ ಗೆರೆಗಳು ನೇರವಾಗಿದೆಯಾ ಅಥವಾ ಓರೆಯಾಗಿದೆಯಾ?

ನೀವು ಏಕಾಗ್ರತೆಯಿಂದ ಇದನ್ನು ನೋಡದಿದ್ದರೆ ಇದು ತುಂಬಾ ಗೊಂದಲ ಮೂಡಿಸುವುದು. ತುಂಬಾ ಹತ್ತಿರದಿಂದ ನೋಡಿದರೆ ಗೆರೆಗಳು ನೇರವಾಗಿರುವುದು ಕಾಣಿಸುತ್ತದೆ.

ನಿಮಗೆ ಕೆಂಪು, ಬಿಳಿ ಅಥವಾ ನೀಲಿ ಬಣ್ಣ ಕಾಣಿಸುತ್ತಿದೆಯಾ?

ನಿಮಗೆ ಕೆಂಪು, ಬಿಳಿ ಅಥವಾ ನೀಲಿ ಬಣ್ಣ ಕಾಣಿಸುತ್ತಿದೆಯಾ?

ಒಂದು ನಿಮಿಷ ಧ್ವಜವನ್ನು ದುರುಗುಟ್ಟಿ ನೋಡಿ. ಬಿಳಿ ಹಾಳೆಯನ್ನು ನೋಡಿ. ಧ್ವಜದಲ್ಲಿ ನಿಮಗೆ ಕೆಂಪು, ಬಿಳಿ ಹಾಗೂ ನೀಲಿ ಬಣ್ಣ ಕಾಣಿಸುವುದು.

ಈ ಮಬ್ಬು ಕ್ಷೀಣಿಸುತ್ತಿದೆಯಾ?

ಈ ಮಬ್ಬು ಕ್ಷೀಣಿಸುತ್ತಿದೆಯಾ?

ಬಣ್ಣದ ಕಡೆ ಗಮನಹರಿಸಿ. ಹೌದು, ನಿಮಗೆ ಇದು ನಿಧಾನವಾಗಿ ಕ್ಷೀಣಿಸುತ್ತಿರುವಂತೆ ಕಾಣಿಸುತ್ತಿದೆಯಾ? ಹಾಗಾದರೆ ಇದು ನಿಜವಾಗಿಯೂ ಅದ್ಭುತ ಚಿತ್ರವಲ್ಲವೇ?

English summary

Optical Illusions To Confuse Your Brain

Sometimes, our mind gets confused with the things that happen around us. We get distracted and go bonkers with the illusions that we come across. It is all a mind game. In this article, we are here to share information on the list of things that will surely confuse your mind if you have a look at it. We bet, you would check out these illustrations twice and see how amazingly the image changes itself when we try and analyse it.
X
Desktop Bottom Promotion