For Quick Alerts
ALLOW NOTIFICATIONS  
For Daily Alerts

ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ

By Manohar Shetty
|

ಜೀವನದಲ್ಲಿ ಎಲ್ಲರೂ ಬಯಸುವ ಐಶ್ವರ್ಯವೆಂದರೆ ಧನ. ಪುರಾಣಕಾಲದಲ್ಲಿ ಧನಕ್ಕಿಂತಲೂ ಮನಸ್ಸಿನ ಗುಣಕ್ಕೇ ಹೆಚ್ಚಿನ ಪ್ರಾಧಾನ್ಯತ ನೀಡಲಾಗುತ್ತಿತ್ತು. ಪುರಾಣಗಳಲ್ಲಿ ಕುಬೇರನಿಗೆ ಯಾವ ಅರ್ಹತೆಯೂ ಇಲ್ಲದ ಕಾರಣ ಧನವಾದರೂ ಇರಲಿ ಎಂದೇ ಅಪಾರ ಧನವನ್ನು ಭಗವಂತ ನೀಡಿದ ಎಂದೇ ತಿಳಿಸಲಾಗಿದೆ.

ಆದರೆ ಇಂದು ಹೆಚ್ಚಿನವರು ಯಾವುದೇ ಅರ್ಹತೆಯನ್ನು ಬಯಸದೇ ಕೇವಲ ಕುಬೇರರಾಗಲು ಹವಣಿಸುತ್ತಿರುವುದನ್ನು ಸ್ಪಷ್ಟವಾಗಿಯೇ ಗಮನಿಸಬಹುದು. ಏಕೆಂದರೆ ಅರ್ಥವ್ಯವಸ್ಥೆಯೇ ಪ್ರಧಾನವಾದ ಇಂದಿನ ದಿನಗಳಲ್ಲಿ ಪ್ರತಿಯೊಂದೂ ಹಣದ ಮೂಲಕವೇ ಪಡೆಯಲಾಗುತ್ತದೆ. ಆರೋಗ್ಯ, ನೆಮ್ಮದಿ ಸಹಾ! ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು

ಆದರೆ ಈ ಧನ ಎಲ್ಲರ ಬಳಿ ಅಷ್ಟು ಸುಲಭವಾಗಿ ನಿಲ್ಲುವುದಿಲ್ಲ. ಕೆಲವರು ಮುಟ್ಟಿದ್ದೆಲ್ಲಾ ಚಿನ್ನವಾದರೆ ಉಳಿದವರು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರೂ ಯಾವುದೋ ಕಾರಣಕ್ಕೆ ಕರಗಿಯೇ ಹೋಗುತ್ತದೆ.

ಒಂದು ವೇಳೆ ನಿಮ್ಮ ಮನೆಯಲ್ಲಿಯೂ ಇದೇ ಪ್ರಕ್ರಿಯೆ ಕಂಡುಬರುತ್ತಿದ್ದರೆ ಇದಕ್ಕೆ ನಿಮ್ಮ ಮನೆಯ ವಾಸ್ತುದೋಶ ಕಾರಣವಾಗಿರಬಹುದು. ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಮನೆಯಲ್ಲಿಯೂ ಧನದೇವತೆ ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ವಾಸ್ತುದೋಷವನ್ನು ಸರಿಪಡಿಸಲು ವಾಸ್ತು ಪರಿಣಿತರು ಹಲವಾರು ಸಲಹೆಗಳನ್ನು ನೀಡುತ್ತಾರೆ. ಇವರ ನೀಡಿದ ಸಲಹೆಗಳಲ್ಲಿ ಪ್ರಮುಖವಾದ ಕೆಲವು ಸಲಹೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ....

ಹಣದ ಮಹತ್ವ

ಹಣದ ಮಹತ್ವ

ಹಣ ಇಂದು ಎಲ್ಲರಿಗೂ ಬೇಕು. ಬರೆ ಹಣ ಎಂದರೆ ಸಾಕಾಗದು, ಹೆಚ್ಚು ಹಣ ಬೇಕು. ಮುಷ್ಕರಕ್ಕೆ ಕುಳಿತ ಸಾರಿಗೆ ಸಿಬ್ಬಂದಿ ಸಹಾ ತಮಗೆ ದೊರಕುವುದಿಲ್ಲ ಎಂದು ಗೊತ್ತಿದ್ದೂ 35ಶೇ ವೇತನ ಏರಿಕೆಯ ಬೇಡಿಕೆ ಇಟ್ಟಿದ್ದು ನೆನಪಿರಬಹುದು.

ಹಣದ ಮಹತ್ವ

ಹಣದ ಮಹತ್ವ

ಏಕೆಂದರೆ ಇಂದಿನ ದಿನಗಳಲ್ಲಿ ನೀರು, ಆಹಾರ, ಆರೋಗ್ಯ, ಮಕ್ಕಳ ಶಿಕ್ಷಣ, ಪ್ರಯಾಣ, ಯಾವುದೇ ಇರಲಿ ಹಣದ ಹೊರತಾಗಿ ಸಾಧಯ್ವೇ ಇಲ್ಲ. ಆದರೆ ಕೇವಲ ಕತ್ತೆಯಂತೆ ಕಠಿಣ ಶ್ರಮ ಪಟ್ಟರೆ ಹೆಚ್ಚು ಹಣ ಸಿಗುತ್ತದೆಯೇ?

ಧನ ಆಗಮಿಸಿದರೂ ಉಳಿಯದು

ಧನ ಆಗಮಿಸಿದರೂ ಉಳಿಯದು

ಕೆಲವೊಮ್ಮ ಉತ್ತಮ ಧನಾಗಮನದ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ ಮನೆಯಲ್ಲಿ ಹಣ ಉಳಿಯಲಾರದು. ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚೂ ಕಡಿಮೆ ಅಷ್ಟೇ ಖರ್ಚೂ ಆಗಿ ಹೋಗುತ್ತದೆ. ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವುದೇ ವ್ಯತ್ಯಾಸ ತೋರದಂತಾಗುತ್ತದೆ. ಇದಕ್ಕೆ ಮನೆಯ ವಾಸ್ತುಗಳು ಪ್ರಮುಖ ಕಾರಣವಾಗಿರಬಹುದು. ಇದನ್ನು ಸರಿಪಡಿಸುವ ಬಗೆ ಹೀಗಿದೆ:

ಈ ವಸ್ತುಗಳು ಮನೆಯಲ್ಲಿ ಇರಲಿ

ಈ ವಸ್ತುಗಳು ಮನೆಯಲ್ಲಿ ಇರಲಿ

ಮನೆಗೆ ಆಗಮಿಸುವ ಧನ ಪೂರ್ಣ ಖರ್ಚಾಗದೇ ಉಳಿಯುವಂತಾಗಲು ಮನೆಯಲ್ಲಿ ಕೆಲವು ವಸ್ತುಗಳಿರಬೇಕು. ಇದು ಹಣವನ್ನು ಮತ್ತು ಸಮೃದ್ಧಿಯನ್ನು ಆಕರ್ಷಿಸಿ ಮನೆಯಲ್ಲಿ ಸ್ಥಿತಗೊಳಿಸಲು ನೆರವಾಗುತ್ತದೆ....

ಹನುಮಂತನ ವಿಗ್ರಹ

ಹನುಮಂತನ ವಿಗ್ರಹ

ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಹನುಮಂತನ ಪಂಚರೂಪದ ವಿಗ್ರಹವೊಂದನ್ನು ಸ್ಥಾಪಿಸಿ ಪ್ರತಿದಿನ ಪೂಜಿಸಿ ಪ್ರಾರ್ಥಿಸಿ. ಇದರಿಂದ ಮನೆಯ ಅಭಿವೃದ್ದಿಗೆ ಮತ್ತು ಹಣ ಸಂಗ್ರಹಕ್ಕೆ ಅಡ್ಡಿಯಾಗುತ್ತಿದ್ದ ತಡೆಗಳು ನಿವಾರಣೆಯಾಗುತ್ತವೆ.

ಲಕ್ಷ್ಮಿ ಕುಬೇರರ ಪಟ

ಲಕ್ಷ್ಮಿ ಕುಬೇರರ ಪಟ

ಮನೆಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಿ...

ಲಕ್ಷ್ಮಿ ಕುಬೇರರ ಪಟ

ಲಕ್ಷ್ಮಿ ಕುಬೇರರ ಪಟ

ಇದರೊಂದಿಗೆ ಸ್ವಸ್ತಿಕ್ ಚಿಹ್ನೆಯ ಇನ್ನೊಂದು ಪಟವನ್ನಿರಿಸಿದರೆ ಇನ್ನೂ ಉತ್ತಮ. ಇದರಿಂದ ಮನೆಗೆ ಧನಾಗಮನ ಹೆಚ್ಚುತ್ತದೆ ಹಾಗೂ ಉಳಿಯಲು ಸಾಧ್ಯವಾಗುತ್ತದೆ.

ವಾಸ್ತುದೇವರ ಪಟ ಅಥವಾ ವಿಗ್ರಹ

ವಾಸ್ತುದೇವರ ಪಟ ಅಥವಾ ವಿಗ್ರಹ

ಮನೆಯ ಯಾವುದೇ ಭಾಗದಲ್ಲಿ ವಾಸ್ತುದೇವರ ವಿಗ್ರಹ ಅಥವಾ ಚಿತ್ರವೊಂದನ್ನು ಇರಿಸಿದರೆ ವಾಸ್ತುದೋಷವನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ಒಳಾಂಗಣದ ಪಾವಿತ್ರ್ಯತೆ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಉತ್ತಮ ಬಾಂಧವ್ಯ ಏರ್ಪಡಲು ನೆರವಾಗುತ್ತದೆ.

ಮಣ್ಣಿನ ಮಡಕೆ

ಮಣ್ಣಿನ ಮಡಕೆ

ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಕೆ ಅಥವಾ ಸುರಾಹಿಯನ್ನು ಇರಿಸಿ. ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು. ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ.

ಅಂಗಡಿ, ವಾಣಿಜ್ಯ ಮಳಿಗೆಗಳಿಗೆ

ಅಂಗಡಿ, ವಾಣಿಜ್ಯ ಮಳಿಗೆಗಳಿಗೆ

ನಿಮ್ಮ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಇಟ್ಟಿರುವ ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸುವುದು ಅಗತ್ಯ. ಇದರಿಂದ ವಹಿವಾಟಿನ ಲಾಭ ಹೆಚ್ಚು ಹೆಚ್ಚಾಗಿ ತಿಜೋರಿಯಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ.

ಪೊರಕೆ ಮತ್ತು ಇತರ ಸ್ವಚ್ಛತಾ ಸಾಮಾಗ್ರಿಗಳು

ಪೊರಕೆ ಮತ್ತು ಇತರ ಸ್ವಚ್ಛತಾ ಸಾಮಾಗ್ರಿಗಳು

ಮನೆ, ಅಂಗಡಿಗಳಲ್ಲಿ ಸ್ವಚ್ಛಗೊಳಿಸುವ ಪೊರಕೆ, ನೆಲ ಒರೆಸುವ ಬಟ್ಟೆ ಇತ್ಯಾದಿಗಳು, ಪಾದರಕ್ಷೆ ಮೊದಲಾದವುಗಳನ್ನು ಮೆಟ್ಟಿಲ ಕೆಳಗೆ ಇರಿಸಬೇಡಿ. ಇದರಿಂದ ಮನೆಗೆ ಮತ್ತು ಅಂಗಡಿಗೆ ಧನದ ಆಗಮನಕ್ಕೆ ಅಡ್ಡಿಯಾಗುತ್ತದೆ.

ಗ್ಯಾಸ್ ಒಲೆ

ಗ್ಯಾಸ್ ಒಲೆ

ಗ್ಯಾಸ್ ಒಲೆಯನ್ನು ಉತ್ತರ ದಿಕ್ಕಿನಲ್ಲಿ ಇಟ್ಟಿಲ್ಲ ಎಂದು ಖಚಿತಪಡಿಸಿ. ಒಂದು ವೇಳೆ ಉತ್ತರ ದಿಕ್ಕಿನಲ್ಲಿದ್ದರೆ ತಕ್ಷಣ ಬೇರೆ ದಿಕ್ಕಿಗೆ ಬದಲಾಯಿಸಿ. ಉತ್ತರ ದಿಕ್ಕಿನತ್ತ ಇರುವ ಒಲೆ ಮನೆಯ ಸಮೃದ್ಧಿಯನ್ನೂ ಸುಟ್ಟುಹಾಕುತ್ತದೆ ಎಂದು ವಾಸ್ತುಶಾಸ್ತ್ಗ್ರಜ್ಞರು ಅಭಿಪ್ರಾಯ ಪಡುತ್ತಾರೆ.

ಎಲ್ಲಾ ಶಕ್ತಿಗಳ ಸೆಲೆ ಆಗಮಿಸುವಂತೆ ನೋಡಿಕೊಳ್ಳಿ

ಎಲ್ಲಾ ಶಕ್ತಿಗಳ ಸೆಲೆ ಆಗಮಿಸುವಂತೆ ನೋಡಿಕೊಳ್ಳಿ

ನಮ್ಮ ಮನೆ ಮತ್ತು ಅಂಗಡಿಗಳಿಗೆ ಧನದ ಹೊರತಾಗಿ ಹಲವು ರೀತಿಯ ಶಕ್ತಿಗಳು ಸಿಗುತ್ತಿರಬೇಕು. ಇವೆಲ್ಲಾ ಶಕ್ತಿಗಳ ಜೋಡಣೆಯಿಂದ ಮಾತ್ರ ಉತ್ತಮವಾದ ವಾಸ್ತು ಪಡೆಯಲು ಸಾಧ್ಯ.

ಎಲ್ಲಾ ಶಕ್ತಿಗಳ ಸೆಲೆ ಆಗಮಿಸುವಂತೆ ನೋಡಿಕೊಳ್ಳಿ

ಎಲ್ಲಾ ಶಕ್ತಿಗಳ ಸೆಲೆ ಆಗಮಿಸುವಂತೆ ನೋಡಿಕೊಳ್ಳಿ

ಸೂರ್ಯನಿಂದ ಸೌರಶಕ್ತಿ, ಚಂದ್ರನಿಂದ ಬೆಳದಿಂಗಳು, ಭೂಮಿಯಿಂದ ಭೂಶಕ್ತಿ, ಆಯಸ್ಕಾತ ಶಕ್ತಿ, ವಿದ್ಯುತ್ ಶಕ್ತಿ, ಬೆಳಕು ಮತ್ತು ಗಾಳಿ, ಇವೆಲ್ಲವೂ ಪಡೆಯುವಂತಿರಬೇಕು.

ಲಕ್ಷ್ಮಿದೇವಿಯ ವಿಗ್ರಹ

ಲಕ್ಷ್ಮಿದೇವಿಯ ವಿಗ್ರಹ

ಮನೆಗೆ ಬಂದ ಧನ ಉಳಿಸಿಕೊಳ್ಳುವುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಧನ ಆಗಮಿಸುವಂತೆ ನೋಡಿಕೊಳ್ಳಲು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಪಟ ನಿಮ್ಮ ಪೂಜಾಗೃಹದಲ್ಲಿದ್ದು ನಿತ್ಯವೂ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಬೇಕು. ಇದರಿಂದ ಮನೆಗೆ ಧನ ಹೆಚ್ಚು ಆಗಮಿಸುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸದಾ ಇರುವಂತಾಗುತ್ತದೆ.

English summary

Keep These Things in Your House and Never Run Out of Money!

Wealth is what everyone desires for, but only a few lucky ones get. If you are one of those who have been working hard to earn money, but nothing seems to be going right, then all you need to do is, make a few changes in your home.Find out about other five things in the upcoming slides…
X
Desktop Bottom Promotion