For Quick Alerts
ALLOW NOTIFICATIONS  
For Daily Alerts

ಪ್ರಾಣಾಂತಿಕ ಕಾಯಿಲೆ ಇದ್ದರೂ, ಉತ್ತಮ ಸಾಧನೆ ಗೈದ ಧೀರರು

By Super
|

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುದೊಂದು ಗಾದೆ. ದೂರದಿಂದ ಚೆನ್ನಾಗಿಯೇ ಕಾಣುವ ಪರಿಸ್ಥಿತಿಯ ನಿಜಸ್ಥಿತಿ ಹತ್ತಿರದಿಂದ ನೋಡಿದಾಗಲೇ ಅರ್ಥವಾಗುತ್ತದೆ. ಇದು ಆರೋಗ್ಯಕ್ಕೂ ಅನ್ವಯವಾಗುತ್ತದೆ. ಗುಂಡಗುಂಡಗೆ ಇರುವವರು ಉತ್ತಮ ಆರೋಗ್ಯ ಹೊಂದಿರುತ್ತಾರೆ ಎಂದು ದೂರದಿಂದ ಕಂಡರೂ ವಾಸ್ತವವಾಗಿ ತೋರ್ಪಡಿಸಿಕೊಳ್ಳಲಾಗದ ತೊಂದರೆ ಇವರಿಗೆ ಇರಬಹುದು.

ಅದರಲ್ಲೂ ಶ್ರೀಮಂತರಿಗೆ ಕಾಯಿಲೆ ಬಂದರೂ ಇದನ್ನು ಗುಣಪಡಿಸಿಕೊಳ್ಳಲು ಅವರು ಆರ್ಥಿಕವಾಗಿ ಸಮರ್ಥರಿರುತ್ತಾರೆ, ಆದ್ದರಿಂದ ಇವರ ಕಾಯಿಲೆ ಕೂಡಲೇ ಗುಣವಾಗುತ್ತದೆ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ಹೊಂದಿರುತ್ತಾರೆ. ಆದರೆ ಕಾಯಿಲೆ ಮತ್ತು ಸಾವು ಸ್ಥಾನಮಾನ, ಆರ್ಥಿಕ ಸ್ಥಿತಿ ಮೊದಲಾದವುಗಳನ್ನು ನೋಡದೇ ಎಲ್ಲರನ್ನೂ ಆವರಿಸುತ್ತದೆ. ಅರಳುವ ಕಮಲದಂತೆ ಮತ್ತೆ ಯಶಸ್ಸಿನ ಮೆಟ್ಟಿಲೇರಿದ ಧೀರರು...

ಆದರೆ ಕಾಯಿಲೆ ಬಿದ್ದಕ್ಷಣ ಹೆಚ್ಚಿನವರು ಜಗತ್ತೇ ತಲೆಯ ಮೇಲೆ ಬಿದ್ದವರಂತೆ ಆಡುತ್ತಾರೆ. ಜೀವನದ ಗುರಿಗಳೆಲ್ಲಾ ಮೂಲೆಗುಂಪಾಗಿ ನೋವನ್ನು ಎದುರಿಸುವುದೇ ಜೀವನದ ಮುಖ್ಯ ಗುರಿಯಾಗಿಬಿಡುತ್ತದೆ. ಆದರೆ ಈ ಜಗತ್ತಿನಲ್ಲಿ ಭಯಾನಕ ಕಾಯಿಲೆಗಳಿದ್ದೂ ತಮ್ಮ ಜೀವನದ ಗುರಿಯನ್ನು ಸಾಧಿಸಿದ ಕೆಲವು ವ್ಯಕ್ತಿಗಳಿದ್ದಾರೆ.

ತಮಗಿರುವ ಕಾಯಿಲೆ ತಮ್ಮನ್ನು ಇನ್ನು ಕೆಲವೇ ದಿನಗಳಲ್ಲಿ ಬಲಿ ತೆಗೆದುಕೊಳ್ಳಲಿದೆ ಎಂಬ ಅರಿವಿದ್ದೂ ವಿದಾಯ ಹೇಳುವ ಮುನ್ನ ಉನ್ನತ ಸಾಧನೆಯನ್ನು ಸಾಧಿಸಿ ತೃಪ್ತಿಯಿಂದ ಸಾವನ್ನು ಎದುರುಗೊಂಡಿದ್ದಾರೆ. ಇವರಲ್ಲಿ ಕೆಲವರಿಗೆ ಮಾರಣಾಂತಿಕ ಕಾಯಿಲೆ ಹುಟ್ಟಿನಿಂದಲೇ ಬಂದಿದ್ದರೆ ಉಳಿದವರಿಗೆ ನಿಧಾನವಾಗಿ ಜೀವನದ ಪ್ರಮುಖ ಘಟ್ಟದಲ್ಲಿ ಆವರಿಸಿದೆ. ಬನ್ನಿ, ಇಂತಹ ಸಾಧನೆ ಸಾಧಿಸಿದ ಕೆಲವು ಗಣ್ಯರ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ...

ಬೀಥೋವೆನ್

ಬೀಥೋವೆನ್

ಸಂಗೀತ ಜಗತ್ತಿನಲ್ಲಿ ಬೀಥೋವೆನ್ ಎಂಬುದು ಒಂದು ಪ್ರಮುಖ ಹೆಸರಾಗಿದೆ. ಇವರು ಸಂಯೋಜಿಸಿದ ಸಂಗೀತ ವಿಶ್ವವಿಖ್ಯಾತವಾಗಿದ್ದು ಇಂದಿಗೂ ಸಂಗೀತಾಸಕ್ತರ ನೆಚ್ಚಿನ ಆಯ್ಕೆಯಾಗಿದೆ. ಅಚ್ಚರಿಗೊಳಿಸುವ ಸಂಗತಿ ಎಂದರೆ ಇವರಿಗೆ ಹುಟ್ಟಿನಿಂದಲೇ ಸಿಫಿಲಿಸ್ ಎಂಬ ರೋಗ ಅಂಟಿಕೊಂಡಿತ್ತು. ವಯಸ್ಸಿನೊಂದಿಗೆ ರೋಗವೂ ಉಲ್ಬಣಗೊಳ್ಳುತ್ತಾ ಕಿವಿಗಳಲ್ಲಿ ರಿಂಗಣಿಸುವ ತೊಂದರೆ ಆವರಿಸಿತ್ತಾ ಬಂದಿತ್ತು.ವರ್ಷಗಳೆದಂತೆ ಸುಮಾರು ಮೂವತ್ತನೇ ವಯಸ್ಸಿಗೆ ಸಂಪೂರ್ಣ ಕಿವುಡು ಆವರಿಸಿತು. ಓರ್ವ ಸಂಗೀತಗಾರನಿಗೆ ಕಿವುಡನಾಗುವುದಕ್ಕಿಂತ ದೊಡ್ಡ ಶಾಪ ಇನ್ನೊಂದಿಲ್ಲ. ಕಿವುಡಾದ ಬಳಿಕವೂ ತಾವು ಸ್ವತಃ ಕೇಳಲು ಸಾಧ್ಯವಿಲ್ಲದಿದ್ದರೂ ಹೀಗೇ ಇರಬಹುದು ಎಂದು ಮನಸ್ಸಿನಲ್ಲಿ ಕಲ್ಪಿಸಿ ಅವರು ಸಂಯೋಜಿಸಿದ ಸಂಗೀತ ಒಂದು ಶಾಶ್ವತ ನಿಧಿಯಾಗಿದೆ.

ಚಾರ್ಲ್ಸ್ ಡಾರ್ವಿನ್

ಚಾರ್ಲ್ಸ್ ಡಾರ್ವಿನ್

ಖ್ಯಾತ ಭೂವಿಜ್ಞಾನಿ ಚಾರ್ಲ್ಸ್ ಡಾರ್ವಿನ್ನರಿಗೆ ಒಂದು ವಿಚಿತ್ರ ಕಾಯಿಲೆ ಇತ್ತು. ಸಾಮಾನ್ಯವಾದ ಆರೋಗ್ಯ ಹೊಂದಿದ್ದ ಇವರಿಗೆ ಆಗಾಗ ಹಠಾತ್ತನೆ ಕೆಳಹೊಟ್ಟೆಯಲ್ಲಿ ಅಪಾರವಾದ ನೋವು ಕಾಣಿಸಿಕೊಳ್ಳುತ್ತಿತ್ತು. ಕೊಂಚ ಹೊತ್ತಿನ ಬಳಿಕ ಹೊಟ್ಟೆಯಲ್ಲಿದ್ದುದೆಲ್ಲಾ ವಾಂತಿಯಾಗಿ ಅಪಾರ ಸುಸ್ತು ಆವರಿಸುತ್ತಿತ್ತು. ಇವರ ಕಾಯಿಲೆಗೆ ಕಾರಣವೇನು ಎಂದು ಅಂದಿನ ಯಾವುದೇ ವೈದ್ಯರಿಗೆ ಅರ್ಥವಾಗುತ್ತಿರಲಿಲ್ಲ. ಇಂತಹ ಸ್ಥಿತಿ ಇದ್ದರೂ ಇವರು ವಾರಗಟ್ಟಲೇ ಹಳ್ಳಿಯಲ್ಲಿ ಏಕಾಂಗಿಯಾಗಿ ವಿಕಾಸವಾದದ ಬಗ್ಗೆ ತಮ್ಮ ಸಂಶೋಧನೆಯನ್ನು ನಡೆಸಿಕೊಂಡು ಬರುತ್ತಿದ್ದರು. ಅನಾರೋಗ್ಯದಲ್ಲಿದ್ದಕೊಂಡೇ ಇವರು ತಮ್ಮ ಸಂಶೋಧನೆಯನ್ನು ಮಂಡಿಸಿ ವಿಶ್ವವಿಖ್ಯಾತಿ ಗಳಿಸಿದರು. ಇವರಿಗಿದ್ದ ಕಾಯಿಲೆಯನ್ನು ಇಂದು cyclical vomiting syndrome (CVS) ಎಂದು ವೈದ್ಯರು ಗುರುತಿಸಿದ್ದಾರೆ.

ಜ್ಯೂಲಿಯಸ್ ಸೀಜರ್

ಜ್ಯೂಲಿಯಸ್ ಸೀಜರ್

ಕ್ರಿಪೂ ನೂರನೆಯ ಇಸವಿಯಲ್ಲಿ ರೋಮನ್ನಿನ ಸರ್ವಾಧಿಕಾರಿಯಾಗಿದ್ದ ಜ್ಯೂಲಿಯಸ್ ಸೀಜರ್ ರಿಗೆ ಅಪಸ್ಮಾರ (epilepsy) ರೋಗವಿತ್ತು. ಅಲ್ಲದೇ ಜೀವನದಲ್ಲಿ ಇವರು ಹಲವು ಬಾರಿ ಲಘು ಹೃದಯಾಘಾತಕ್ಕೊಳಗಾಗಿದ್ದರು. ಇವರ ಅಂದಿನ ಸ್ಥಿತಿಯನ್ನು ಆಧುನಿಕ ವೈದ್ಯವಿಜ್ಞಾನ "transient ischaemic attack" ಎಂದು ಗುರುತಿಸಿದೆ.

ಎಡ್ಗರ್ ಅಲನ್ ಪೋ

ಎಡ್ಗರ್ ಅಲನ್ ಪೋ

ಖ್ಯಾತ ಕವಿ ಎಡ್ಗರ್ ಅಲನ್ ಪೋ ರವರು ರೇಬೀಸ್ ಕಾಯಿಲೆಯಿಂದ ಅಂತ್ಯ ಕಂಡರು. ಇವರ ಸಾವು ಒಂದು ರಹಸ್ಯವಾಗಿತ್ತು. ಏಕೆಂದರೆ ಇವರು ಏಕಾಏಕಿ ತಮ್ಮ ಮನೆಯಿಂದ ಕಾಣೆಯಾದ ಒಂದು ವಾರದ ಬಳಿಕ ಸಮೀಪದ ಗಟಾರದಲ್ಲಿ ಇನ್ನೊಬ್ಬರ ವಸ್ತ್ರಗಳನ್ನು ತೊಟ್ಟಿದ್ದ ಸ್ಥಿತಿಯಲ್ಲಿ ಶವವಾಗಿ ಕಂಡುಬಂದಿದ್ದರು. ಶವಪರೀಕ್ಷೆಯಲ್ಲಿ ಸಾವಿಗೂ ಮುನ್ನ ನಾಲ್ಕು ದಿನಗಳ ಕಾಲ ಇವರು ಅಪಾರ ನೋವು ಅನುಭವಿಸಿದ್ದರು ಎಂದು ತಿಳಿದುಬಂದಿತು.

ವ್ಲಾಡಿಮೀರ್ ಲೆನಿನ್

ವ್ಲಾಡಿಮೀರ್ ಲೆನಿನ್

ಇತಿಹಾಸ ಕಂಡ ಅತ್ಯಂತ ಕುಖ್ಯಾತ ಕ್ರಾಂತಿಕಾರಿ, ರಾಜಕಾರಣಿ, ರಾಜನೀತಿಯ ಸಿದ್ಧಾಂತಿ ಮತ್ತು ಕಮ್ಯೂನಿಸಂ ಸಿದ್ದಾಂತವನ್ನು ಬಲವಾಗಿ ಪ್ರತಿಪಾದಿಸಿದ ವ್ಯಕ್ತಿ ಎಂದರೆ ಲೆನಿನ್. ಇವರನ್ನು ಜಗತ್ತಿನ ಅತ್ಯಂತ ಸಬಲ ವ್ಯಕ್ತಿ ಎಂದು ಭಾವಿಸಲಾಗುತ್ತಿದ್ದರೂ ದೈಹಿಕವಾಗಿ ಇವರಿಗೆ ಒಂದು ವಿಚಿತ್ರವಾದ ಖಾಯಿಲೆಯಿತ್ತು. ಆಗಾಗ ಕುಸಿದು ಬೀಳುತ್ತಿದ್ದು ನಿಧಾನವಾಗಿ ಅವರ ದೇಹ ಕಸುವನ್ನು ಕಳೆದುಕೊಳ್ಳುತ್ತಾ ಹೋಗುತ್ತಿತ್ತು. ಅಂದಿನ ವೈದ್ಯರು ಈ ಸ್ಥಿತಿ ಮಾನಸಿಕವಾಗಿ ಬಳಲಿದ ಕಾರಣ ಬಂದಿದೆ ಎಂದು ತಿಳಿದು ಆ ಪ್ರಕಾರವೇ ಚಿಕಿತ್ಸೆ ನೀಡುತ್ತಿದ್ದರು. ದಿನೇ ದಿನೇ ಕುಸಿಯುತ್ತಿದ್ದ ದೇಹದ ಬಲ ಅವರನ್ನು ಗಾಲಿಕುರ್ಚಿಯಲ್ಲಿ ತಂದಿರಿಸಿತು. ನಾಲ್ಕು ಬಾರಿ ಹೃದಯಾಘಾತ, ಎರಡು ಪಾರ್ಶ್ವವಾಯು, ಸಾಯುವ ಮುನ್ನಾ ದಿನ ಕೋಮಾಸ್ಥಿತಿ ಎಲ್ಲವನ್ನೂ ಅನುಭವಿಸಿ ೧೯೨೪ರ ಜನವರಿ ೨೧ರಂದು ನಿಧನರಾದರು. ಮರಣೋತ್ತರ ಪರೀಕ್ಷೆಯಲ್ಲಿ ಇವರ ಖಾಯಿಲೆ ವಿಚಿತ್ರವಾದುದೆಂದು ಕಂಡುಬಂದಿತು. cerebrovascular atherosclerosis ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಈ ಖಾಯಿಲೆಯಿಂದ ಮೆದುಳು ನಿಧಾನವಾಗಿ ಕಲ್ಲಾಗುತ್ತಾ ಹೋಗುತ್ತದೆ, ಕ್ರಮೇಣ ಎಲ್ಲಾ ಅಂಗಗಳು ಸ್ವಾಧೀನ ಕಳೆದುಕೊಳ್ಳುತ್ತವೆ.

ಕಿಂಗ್ ಹೆರಾಡ್

ಕಿಂಗ್ ಹೆರಾಡ್

ಯೇಸುಕ್ರಿಸ್ತನ ಜನನ ಸಮಯದಲ್ಲಿ ಸಾವಿರಾರು ಮುಗ್ಧರನ್ನು ಕೊಲ್ಲಲು ಆಜ್ಞೆ ನೀಡಿದ್ದ ರೋಮನ್ ಚಕ್ರವರ್ತಿ ಕಿಂಗ್ ಹೆರಾಡ್ ಸಹಾ ಒಂದು ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದ. ಈತನಿಗೆ ಹಲವಾರು ಕಾಯಿಲೆಗಳು ಏಕಕಾಲದಲ್ಲಿ ಬಂದಿದ್ದರೂ "Fournier's Gangrene" ಎಂಬ ಕಾಯಿಲೆಯ ಕಾರಣ ದೇಹದ ಜನನಾಂಗ ದೇಹಕ್ಕೆ ಅಂಟಿಕೊಂಡಿದ್ದಂತೆಯೇ ತುದಿಯಲ್ಲಿ ಕೊಳೆಯಲು ಪ್ರಾರಂಭಿಸಿತ್ತು. ಈ ನೋವನ್ನು ತಡೆಯದೇ ಆತ ಆತ್ಮಹತ್ಯೆ ಮಾಡಿಕೊಂಡ ಎಂದು ಅನಧಿಕೃತವಾಗಿ ತಿಳಿದುಬರುತ್ತದೆ.

English summary

Famous Historic People Who Had Horrifying Diseases

In this article, we bring to you information on some of the famous historic people who had suffered from life-threatening diseases. Read on to know more about these historic people who succumbed to their deadly diseases
X
Desktop Bottom Promotion