ಹೊಸತನ್ನು ಪ್ರಾರಂಭಿಸುವ ಮುನ್ನ 'ಚಾಣಕ್ಯ ನೀತಿ' ಪಾಲಿಸಿ....

By: Arshad
Subscribe to Boldsky

ಚಾಣಕ್ಯ, ಭಾರತೀಯ ಇತಿಹಾಸ ಕಂಡ ಓರ್ವ ಶ್ರೇಷ್ಠ ವಿದ್ವಾಂಸ ಮತ್ತು ಬುದ್ಧಿವಂತ. ಚಾಣಕ್ಯ ಅಂದು ನುಡಿದ ಹಿತವಚನಗಳೆಲ್ಲಾ ಚಾಣಕ್ಯನ ನೀತಿಗಳ ರೂಪದಲ್ಲಿ ಇಂದು ನಮಗೆ ಲಭ್ಯವಿದೆ. ಈತನ ನೀತಿಗಳೆಲ್ಲಾ ಕಾಲಾತೀತವಾಗಿದ್ದು ಇಂದಿಗೂ ಪ್ರಸ್ತುತವಿವೆ.

ಬನ್ನಿ, ಹೊಸತೇನಾದರೊಂದನ್ನು ಪ್ರಾರಂಭಿಸುವ ಮುನ್ನ ಯಾವ ರೀತಿಯ ಎಚ್ಚರಿಕೆ ವಹಿಸಬೇಕೆಂಬುದನ್ನು ಚಾಣಕ್ಯ ತಿಳಿಸಿದ್ದಾನೆ ಮುಂದೆ ಓದಿ....

ಧನಾತ್ಮಕ ಚಿಂತನೆ

ಧನಾತ್ಮಕ ಚಿಂತನೆ

ಚಾಣಕ್ಯನ ಪ್ರಕಾರ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮುನ್ನ ಕೆಲವು ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು. ಅವೆಂದರೆ ಕೆಲಸ ಪ್ರಾರಂಭಿಸುವ ಸಮಯ, ಸ್ಥಳ, ಇದಕ್ಕೆ ತಗಲುವ ವೆಚ್ಚ ಮತ್ತು ನಿಮ್ಮ ಈ ಕೆಲಸಕ್ಕೆ ನೆರವು ನೀಡುವವರು. ಧನಾತ್ಮಕ ಚಿಂತನೆ ಮಾಡುವುದು ಹೇಗೆ ?

ಸಾಮರ್ಥ್ಯ

ಸಾಮರ್ಥ್ಯ

ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ಆ ಕೆಲಸ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿದೆಯೇ ಅರಿತುಕೊಳ್ಳಬೇಕು. ಏಕೆಂದರೆ ಸಾಮರ್ಥ್ಯಕ್ಕೆ ಮೀರಿದ ಕೆಲಸವನ್ನು ಪ್ರಾರಂಭಿಸಿದ ಬಳಿಕ ಭಾರೀ ತೊಂದರೆಗೆ ಒಳಗಾಗಬಹುದು.

ನಿಮ್ಮ ನಾಲಿಗೆಯ ಮೇಲೆ ನಿಯಂತ್ರಣ

ನಿಮ್ಮ ನಾಲಿಗೆಯ ಮೇಲೆ ನಿಯಂತ್ರಣ

ಯಾವುದೇ ಹೊಸ ಕೆಲಸ ಯಶಸ್ವಿಯಾಗುವುದು ಅಥವಾ ವಿಫಲವಾಗುವುದು ಎರಡೂ ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಅವಲಂಬಿಸಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಿ ವಿಶ್ವಾಸ ಗಳಿಸುವ ಮೂಲಕ ಹೊಸ ಕೆಲಸ ಯಶಸ್ಸು ಪಡೆಯುತ್ತಾ ಸಾಗುತ್ತದೆ.

ನಿಮ್ಮ ದೇಹದ ಆರೋಗ್ಯ

ನಿಮ್ಮ ದೇಹದ ಆರೋಗ್ಯ

ಭಗವಂತನ ನೀಡಿರುವ ಅದ್ಭುತ ಕೊಡುಗೆಯಲ್ಲಿ ನಮ್ಮ ಶರೀರವೂ ಒಂದು. ಯಾವುದೇ ಹೊಸ ಕೆಲಸ ಪ್ರಾರಂಭಿಸುವ ಮುನ್ನ ನಿಮ್ಮ ದೇಹ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.

ಕೆಲಸದಲ್ಲಿ ಯಶಸ್ಸಿಗಾಗಿ

ಕೆಲಸದಲ್ಲಿ ಯಶಸ್ಸಿಗಾಗಿ

ಎಂದಿಗೂ ನಿಮ್ಮ ಬೆನ್ನು ಮುಖ್ಯದ್ವಾರಕ್ಕೆ ಎದುರಾಗಿರುವಂತೆ ಕೆಲಸದ ಸ್ಥಳದಲ್ಲಿ ಕುಳಿತುಕೊಳ್ಳಬಾರದು. ಅಂದರೆ ಗ್ರಾಹಕ ಪ್ರಧಾನ ಬಾಗಿಲಿನ ಮೂಲಕ ಒಳಬಂದಾಗ ಸ್ವಾಗತಿಸುವವರ ಮುಖವನ್ನು ಸ್ಪಷ್ಟವಾಗಿ ಕಾಣುವಂತಿರಬೇಕು.

ಕೆಲಸದಲ್ಲಿ ಯಶಸ್ಸಿಗಾಗಿ

ಕೆಲಸದಲ್ಲಿ ಯಶಸ್ಸಿಗಾಗಿ

ಬೆನ್ನು ಗೋಡೆ ಅಥವಾ ಇನ್ನಾವುದಾದರೂ ದೃಢ ವಸ್ತುವಿನ ಆಧಾರ ಪಡೆದಿರಬೇಕು. ಇದು ಸಾಧ್ಯವಾಗದಿದ್ದರೆ ಇನ್ನೋರ್ವ ವ್ಯಕ್ತಿಯ ಬೆನ್ನಿಗೆ ಬೆನ್ನು ತಾಗಿರುವಂತೆ ಕುಳಿತುಕೊಳ್ಳಬೇಕು.

ಎತ್ತರದ ಕುರ್ಚಿ

ಎತ್ತರದ ಕುರ್ಚಿ

ಕಛೇರಿಯಲ್ಲಿ ಕುಳಿತುಕೊಳ್ಳುವ ಕುರ್ಚಿಗಳು ಎತ್ತರವಾಗಿರಲಿ. ಅಂದರೆ ಹೊಕ್ಕಳು ಸರಿಸುಮಾರು ಮೇಜಿನ ಮಟ್ಟದಲ್ಲಿರುವಷ್ಟಿರಬೇಕು. ಇದರಿಂದ ಕೆಲಸದಲ್ಲಿ ಉತ್ಪಾದಕತೆ ಹೆಚ್ಚುತ್ತದೆ.

  
English summary

chanakya neeti do these things before starting something new

We all know that Acharya Chanakya was a learned scholar and an intelligent man --- the mantras he gave about life hold water even today. His Chanakya Neeti as we better know it, offers pearls of wisdom on everything that hold relevance today.
Please Wait while comments are loading...
Subscribe Newsletter