Just In
- 4 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
- 10 hrs ago
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- 12 hrs ago
ವಟ ಸಾವಿತ್ರಿ ವ್ರತ ಯಾವಾಗ? ಪತಿಯ ಪತಿಯ ಆಯುರ್-ಐಶ್ವರ್ಯ ವೃದ್ಧಿಗೆ ಈ ದಿನ ಏನು ಮಾಡಬೇಕು?
- 13 hrs ago
ಹಳದಿ ಉಗುರನ್ನು ನಿವಾರಿಸಲು ಈ 4 ಮನೆಮದ್ದನ್ನು ಬಳಸಿ ನೋಡಿ
Don't Miss
- Automobiles
ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್ಎಂಎಲ್
- Movies
ತೆಲುಗು ಸಿನಿಮಾ ಸೆಟ್ನಲ್ಲಿ ಸಲ್ಮಾನ್ ಖಾನ್ ಹಿಂದಿ ಸಿನಿಮಾ ಶೂಟಿಂಗ್!
- News
ಮೇ 25ರಂದು ಭಾರತದಲ್ಲಿ ಎಷ್ಟಿದೆ ಪೆಟ್ರೋಲ್-ಡೀಸೆಲ್ ದರ?
- Sports
ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯಕ್ಕೆ ಆರ್ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆ ಸಾಧ್ಯತೆ; ನಂಬಿಕಸ್ಥ ಆಟಗಾರ ಔಟ್!
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗೆಗಿನ ಇಂಟರೆಸ್ಟಿಂಗ್ ಸಂಗತಿ
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಶ್ರಮಿಸಿದ ಮಹಾತ್ಮ ಗಾಂಧೀಜಿಯವರ ನೆನಪು ಬರುವುದು ನಮಗೆ ಗಾಂಧಿಜಯಂತಿಯಂದು ಅಥವಾ ನೋಟುಗಳನ್ನು ನೋಡಿದಾಗ ಮಾತ್ರ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸೆಯ ಅಸ್ತ್ರ ಹಿಡಿದು ಇಡಿಯ ರಾಷ್ಟ್ರವನ್ನೇ ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ಎಲ್ಲವೂ ಭಗವಂತನ ಕೃಪೆ ಎಂದು ಭಾವಿಸಿ ತಮ್ಮ ಸರಳ ಬದುಕನ್ನು ಮುಂದುವರೆಸಿದ್ದ ಈ ಮಹಾನ್ ಚೇತನ ಇಂದಿಗೂ ಒಂದು ಮಾದರಿ ನಾಯಕರಾಗಿದ್ದಾರೆ.
ಮಹಾತ್ಮಾ ಎಂಬ ಹೆಸರನ್ನು ರವೀಂದ್ರನಾಥ ಠಾಗೋರ್ ಅವರು ನೀಡುವ ಮೊದಲು ಮೋಹನದಾಸ್ ಕರಮಚಂದ್ ಗಾಂಧಿಯವರನ್ನು ಬಾಪು ಎಂದೇ ಹೆಚ್ಚಾಗಿ ಜನರು ಕರೆಯುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಗಾಂಧೀಜಿಯವರು ಅಪ್ರತಿಮ ನಾಯಕರಾಗಿದ್ದರೂ, ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಅವರು ಮುಕ್ತವಾಗಿ ಬೆರೆಯುತ್ತಿದ್ದರು ಮತ್ತು ಎಲ್ಲರ ಪರ ಕಾಳಜಿ ವಹಿಸುತ್ತಿದ್ದರು.
ಸ್ವಾತಂತ್ರ್ಯಪೂರ್ವದಲ್ಲಿ ಪ್ರತಿಯೊಬ್ಬ ಭಾರತೀಯನೂ ಅವರ ಅಭಿಮಾನಿಯಾಗಿದ್ದರು, ಅಷ್ಟೇ ಏಕೆ, ವಿದೇಶೀಯರೂ ಅವರ ಸರಳತೆ ಮತ್ತು ಸಮರ್ಥ ನಾಯಕತ್ವವನ್ನು ಮೆಚ್ಚಿ ಅವರ ಅಭಿಮಾನಿಯಾಗುತ್ತಿದ್ದರು. ಅಂದಿನ ದಿನಗಳಲ್ಲಿ ಅವರು ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಅತ್ಯಂತ ಸಮತೋಲನದಲ್ಲಿ ಕಾಯ್ದಿರಿಸಿಕೊಳ್ಳುತ್ತಿದ್ದರು. ಇಡಿಯ ದೇಶಕ್ಕೇ ಮಾದರಿಯಾದ ಅವರಂತಹ ಇನ್ನೋರ್ವ ವ್ಯಕ್ತಿಯನ್ನು ಇಂದು ಕಾಣುವುದು ಭಾರತದಲ್ಲಿಯೇ ಏಕೆ ಇಡಿಯ ವಿಶ್ವದಲ್ಲಿಯೇ ಅತಿ ಕಷ್ಟಕರ.
ಬರೆಯ ಭಾರತದಲ್ಲಿ ಮಾತ್ರವಲ್ಲದೇ ಇಡಿಯ ವಿಶ್ವದ ಹಲವು ರಾಷ್ಟ್ರಗಳು ಗಾಂಧೀಜಿಯವರಿಗೆ ಆಯಾ ದೇಶದ ಉನ್ನತ ಗೌರವವನ್ನು ನೀಡಿ ಗೌರವಿಸಿವೆ. ಅಹಿಂಸೆ ಮೂಲಕ ಗೆದ್ದ ಯುದ್ಧದ ಮೂಲಕ ಇಂದಿಗೂ ಗಾಂಧೀಜಿ ಇಡಿಯ ವಿಶ್ವಕ್ಕೆ ಸವಾಲಾಗುತ್ತಾರೆ. ಈ ಮಹಾನ್ ಚೇತನದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳಿದ್ದು ಗಾಂಧಿಜಯಂತಿಯ ಶುಭಸಂದರ್ಭದಲ್ಲಿ ಇವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಮೂಲಕ ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.... ಮುಂದೆ ಓದಿ

ಬಾಲ್ಯದಲ್ಲಿ ಅವರು ಧೈರ್ಯಶಾಲಿಯಾಗಿರಲಿಲ್ಲ
ಅವರು ಬಾಲ್ಯದಲ್ಲಿ ಇತರ ಯಾವುದೇ ಸಾಮಾನ್ಯ ಮಕ್ಕಳಂತೆ ಪುಕ್ಕಲರಾಗಿದ್ದರು. ಅವರ ಜೀವನಚರಿತ್ರೆಯಲ್ಲಿ ಅವರೇ ಹೇಳಿಕೊಂಡ ಹಾಗೆ, ಚಿಕ್ಕ ಹುಡುಗನಾಗಿದ್ದಾಗ ಅವರು ಶಾಲೆ ಬಿಟ್ಟ ತಕ್ಷಣ ಮನೆಗೆ ಓಡೋಡಿ ಬರುತ್ತಿದ್ದರಂತೆ. ಏಕೆಂದರೆ ನಡುವೆ ಯಾರಾದರೂ ಮಾತನಾಡಿಸಿದರೆ ಎಂದು ಅಳುಕು ಅವರಲ್ಲಿ ಮನೆ ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ.

ನಡಿಗೆ ಪ್ರಿಯರಾಗಿದ್ದರು
ಗಾಂಧೀಜಿಯವರಿಗೆ ನಡೆಯುವುದು ಎಂದರೆ ಅತ್ಯಂತ ಪ್ರಿಯವಾದ ಹವ್ಯಾಸವಾಗಿತ್ತು. ಅವರು ಹೇಳಿಕೊಂಡ ಪ್ರಕಾರ 'ನಡಿಗೆ ಎಲ್ಲಾ ವ್ಯಾಯಮಗಳ ಪೈಕಿ ರಾಜಕುಮಾರನಿದ್ದಂತೆ'. ತಮ್ಮ ಶಾಲಾ ಕಾಲೇಜಿನ ದಿನಗಳಲ್ಲಿ ಅವರು ಮನೆಯಿಂದ ಕಾಲೇಜಿನವರೆಗೆ ನಡೆದುಕೊಂಡೇ ಹೋಗಿ ನಡೆದೇ ಹಿಂದಿರುಗುತ್ತಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಡಿಗೆ ಪ್ರಿಯರಾಗಿದ್ದರು
ಅವರಿಗೆ ಶಾಲೆಯ ಆಟಗಳಿಗಿಂತಲೂ ನಡಿಗೆಯೇ ಹೆಚ್ಚು ಪ್ರಿಯವಾಗಿತ್ತು. ಲಂಡನ್ ನಲ್ಲಿ ವಕೀಲ ಪದವಿಯನ್ನು ಓದುತ್ತಿದ್ದಾಗ ಪ್ರತಿದಿನ ಎಂಟರಿಂದ ಹತ್ತು ಮೈಲಿ ನಡೆದೇ ಹೋಗಿ ಆ ಪ್ರಯಾಣದ ಹಣವನ್ನೂ ಉಳಿಸುತ್ತಿದ್ದರು.

ಬ್ರಿಟಿಷರ ಕಪ್ಪುಮುಖ ಕಂಡ ಮೊದಲ ಅನುಭವ
ಒಮ್ಮೆ ಟಿಕೆಟ್ ಖರೀದಿಸಿ ರೈಲಿನಲ್ಲಿ ಪ್ರಯಾಣಿಸಲು ಒಳಗಡಿಯಿಟ್ಟಾಗ ಬ್ರಿಟಿಷ್ ಅಧಿಕಾರಿ ಅವರನ್ನು ದರ್ಪದಿಂದ ರೈಲಿನಿಂದ ಕೆಳಗಿಳಿಯಲು ಬಲವಂತಪಡಿಸಿದರು. ಇದಕ್ಕೆ ಕಾರಣ ಗಾಂಧೀಜಿಯವರು ಕಪ್ಪು ಮೈಬಣ್ಣ ಹೊಂದಿದ್ದರು. ಆದರೆ ಗಾಂಧೀಜಿಯವರು ತಮ್ಮ ಟಿಕೆಟ್ ತೋರಿಸಿ ರೈಲಿನಲ್ಲಿ ಪ್ರಯಾಣಿಸುವ ಹಕ್ಕನ್ನು ಪ್ರತಿಪಾದಿಸಿದರು. ಮುಂದೆ ಓದಿ

ಬ್ರಿಟಿಷರ ಕಪ್ಪುಮುಖ ಕಂಡ ಮೊದಲ ಅನುಭವ
ಆದರೆ ಇದಕ್ಕೆ ಒಪ್ಪದ ಆ ಬ್ರಿಟಿಷ್ ಅಧಿಕಾರಿ ಇತರ ರೈಲ್ವೇ ಅಧಿಕಾರಿಗಳ ನೆರವಿನಿಂದ ಬಲವಂತವಾಗಿ ರೈಲಿನಿಂದ ಹೊರದೂಡಿದರು. ಇದು ಬ್ರಿಟಿಷರ ಕಪ್ಪು ಮನಸ್ಸನ್ನು ಪ್ರಥಮವಾಗಿ ಗಾಂಧೀಜಿಯವರಿಗೆ ಪರಿಚಯಿಸಿತು.

ನಾನು ಈ ವಸ್ತುವಿನ ಮೂಲಕ ಮಾತನಾಡಬೇಕೇ?"
1931ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ ಅವರಿಗೆ ರೇಡಿಯೋ ಮಾಧ್ಯಮದ ಮೂಲಕ ಅಮೇರಿಕಾ ಸಂಯುಕ್ತ ಸಂಸ್ಥಾನದ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅತ್ತ ಗಾಂಧೀಜಿಯವರ ಮಾತುಗಳನ್ನು ಕೇಳಲು ಕಾತರದಿಂದ ಕಾದು ಮೈಯೆಲ್ಲಾ ಕಿವಿಯಾಗಿ ನಿಂತಿದ್ದ ಜನರಿಗೆ ಮೊತ್ತ ಮೊದಲನೆಯದಾಗಿ ಗಾಂಧೀಜಿಯವರ ಧ್ವನಿಯಲ್ಲಿ ಕೇಳಿ ಬಂದ ಪದಗಳು ಇವು: "ನಾನು ಈ ವಸ್ತುವಿನ ಮೂಲಕ ಮಾತನಾಡಬೇಕೇ?"

ಒಂದು ಪಾದರಕ್ಷೆ ಕಳೆದಾಗ ಇನ್ನೊಂದನ್ನೂ ಎಸೆದ ಗಾಂಧೀಜಿ!
ಗಾಂಧೀಜಿಯವರು ತಮ್ಮ ಸುತ್ತಮುತ್ತಲ ಎಲ್ಲಾ ಜನರ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದರು. ಒಮ್ಮೆ ರೈಲಿಗೆ ಹತ್ತುವ ಗಡಿಬಿಡಿಯಲ್ಲಿ ಅವರ ಒಂದು ಕಾಲಿನ ಪಾದರಕ್ಷೆ ರೈಲ್ವೇ ನಿಲ್ದಾಣದ ಕಟ್ಟೆಯಲ್ಲಿ ಕಳಚಿಕೊಂಡಿತು. ಈಗಾಗಲೇ ರೈಲು ವೇಗ ಪಡೆದುಕೊಂಡಿದ್ದರಿಂದ ಇಳಿದು ತರಲು ಸಾಧ್ಯವೇ ಇರಲಿಲ್ಲ. ತಕ್ಷಣ ಗಾಂಧೀಜಿಯವರು ಇನ್ನೊಂದು ಕಾಲಿನ ಪಾದರಕ್ಷೆಯನ್ನೂ ಕಳಚಿ ಹಿಂದಿನ ಪಾದರಕ್ಷೆಯತ್ತ ಎಸೆದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಂದು ಪಾದರಕ್ಷೆ ಕಳೆದಾಗ ಇನ್ನೊಂದನ್ನೂ ಎಸೆದ ಗಾಂಧೀಜಿ!
ಹೀಗೇಕೆ ಮಾಡಿದಿರಿ ಎಂದು ಕೇಳಿದವರಿಗೆ ಅವರು ಹೀಗೆ ಉತ್ತರ ನೀಡಿದರು: "ಈ ಒಂದು ಪಾದರಕ್ಷೆ ಹೇಗೂ ನನ್ನ ಕೆಲಸಕ್ಕೆ ಬರುವುದಿಲ್ಲ. ಇದು ಸಿಗುವ ಬೇರಾರಿಗಾದರೂ ಇದು ಪ್ರಯೋಜನಕ್ಕೆ ಬರಲಿ ಎಂದು ಎಸೆದೆ". ಎಂದರು

ಮಹಾತ್ಮಾ ಹೆಸರಿಗೆ ತಕ್ಕ ವ್ಯಕ್ತಿತ್ವ
ಯಾವುದೇ ವ್ಯಕ್ತಿಗೆ ಮಹಾತ್ಮಾ ಎಂಬ ಬಿರುದು ಸಿಗಲು ಅವರ ಅಂತರಂಗದಲ್ಲಿರುವ ಸದ್ಗುಣಗಳು ಬೇರೆಯವರಿಗೆ ಮಾದರಿಯಾಗಬೇಕು. ಗಾಂಧೀಜಿಯವರಲ್ಲಿದ್ದ ಅಹಿಂಸಾ ತತ್ವ, ಆಧ್ಯಾತ್ಮಿಕ, ಧಾರ್ಮಿಕ ಭಾವನೆಗಳು, ಪ್ರಾಮಾಣಿಕತೆ, ಶಿಸ್ತು, ನಿಷ್ಠೆ, ಅಭಿಲಾಷೆ ಮೊದಲಾದ ಗುಣಗಳು ಅವರ ಸುತ್ತ ಇರುವ ಎಲ್ಲರನ್ನೂ ಪ್ರೇರೇಪಿಸುತ್ತಿತ್ತು. ಈ ಗುಣಗಳೇ ಅವರಿಗೆ ಮಹಾತ್ಮಾ ಎಂಬ ಬಿರುದು ಪಡೆಯಲು ಕಾರಣವಾಯಿತು.

ಟೈಮ್ಸ್ ಮ್ಯಾಗಜಿನ್‌ನ ವರ್ಷದ ವ್ಯಕ್ತಿ
ಅಮೇರಿಕಾದ ಅತ್ಯಂತ ಪ್ರಬಲ ಮತ್ತು ಜನಪ್ರಿಯ ಮಾಧ್ಯಮವಾದ ಟೈಮ್ಸ್ ಪಬ್ಲಿಕೇಶನ್ 1930ರಲ್ಲಿ ಮಹಾತ್ಮಾ ಗಾಂಧಿಯವರನ್ನು ವರ್ಷದ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿತ್ತು.

ಶತಮಾನದ ನೂರು ಪ್ರಮುಖ ಕೃತಿಗಳಲ್ಲಿ ಗಾಂಧೀಜಿಯವರ ಆತ್ಮಚರಿತ್ರೆ
My Experiments with Truth ಎಂಬ ಹೆಸರಿನಲ್ಲಿ ಬರೆದ ಅವರ ಆತ್ಮಚರಿತ್ರೆಯಲ್ಲಿ 1920ರವರೆಗಿನ ಜೀವನವನ್ನು ಅವರು ವಿವರವಾಗಿ ಬರೆದಿದ್ದರು. ಈ ವಿವರಗಳ ಹೊತ್ತಿಗೆ 1927 ರಲ್ಲಿ ಬಿಡುಗಡೆಯಾಗಿತ್ತು. 1999ರಲ್ಲಿ ಪ್ರಖ್ಯಾತ ಪ್ರಕಾಶಕರಾದ ಹರ್ಪರ್ ಕೋಲಿನ್ಸ್ ರವರು ಪ್ರಕಟಿಸಿದ ಇಪ್ಪತ್ತನೆಯ ಶತಮಾನದ ಪ್ರಮುಖ ಪಾರಮಾರ್ಥಿಕವಾದ ನೂರು ಕೃತಿಗಳಲ್ಲಿ ಈ ಕೃತಿಯೂ ಪ್ರಮುಖ ಸ್ಥಾನದಲ್ಲಿತ್ತು.

ಮಹಾತ್ಮಾ ಗಾಂಧೀಜಿಯವರ ಇಂಗ್ಲಿಷ್ ಉಚ್ಛಾರಣೆ ಐರ್ಲೆಂಡಿನವರಂತಿತ್ತು
ಮಹಾತ್ಮಾ ಗಾಂಧೀಜಿಯವರ ಇಂಗ್ಲಿಷ್ ಉಚ್ಛಾರಣೆಯನ್ನು ಆಲಿಸಿದರೆ ಐರ್ಲೆಂಡಿನ ಉಚ್ಛಾರವಿರುವುದು ಸ್ಪಷ್ಟವಾಗುತ್ತಿತ್ತು. ಏಕೆಂದರೆ ಅವರಿಗೆ ಪ್ರಾಥಮಿಕ ಇಂಗ್ಲಿಷ್ ಬೋಧಿಸಿದ ಗುರುಗಳು ಐರ್ಲೆಂಡಿನವರಾಗಿದ್ದರು. ಸ್ವತಂತ್ರ ಸಂಗ್ರಾಮದಲ್ಲಿ ಅವರು ತಮ್ಮ ಮೈಮೇಲೆ ಖಾದಿಯ ಸರಳ ಉಡುಪನ್ನು ಮಾತ್ರ ಧರಿಸುತ್ತಿದ್ದರು

ಮಹಾತ್ಮಾ ಗಾಂಧೀಜಿಯವರ ಇಂಗ್ಲಿಷ್ ಉಚ್ಛಾರಣೆ ಐರ್ಲೆಂಡಿನವರಂತಿತ್ತು
ಆದರೆ ಲಂಡನ್‌ನಲ್ಲಿದ್ದಾಗ ಅವರು ಸಾಮಾನ್ಯ ಉಡುಗೆ, ಕಾಲಿಗೆ ಚರ್ಮದ ಪಾದರಕ್ಷೆಯ ಮೇಲಿನ ಕವಚ ತೊಟ್ಟು ತಲೆಗೆ ರೇಷ್ಮೆಯ ಟೋಪಿ ಧರಿಸುತ್ತಿದ್ದರು.