For Quick Alerts
ALLOW NOTIFICATIONS  
For Daily Alerts

ಎಚ್‌ಐವಿ ರೋಗದ ಮೂಲ ಹುಡುಕಿದರೆ ಕಾದಿದೆ ಅಚ್ಚರಿ!

|

ಎಚ್‌ಐವಿ ಎಂದರೆ ಸಾಕು ಒಂದು ಮಾರಣಾಂತಿಕ ರೋಗವಾದ ಏಡ್ಸ್ ಅನ್ನು ಹರಡುವ ವೈರಸ್ ಎಂಬ ಅಂಶ ಮನದಲ್ಲಿ ಹಾಗೆಯೇ ಸುಳಿದು ಹೋಗುತ್ತದೆ. ಹೌದು, ಹ್ಯೂಮನ್ ಇಮ್ಯುನೋಡಿಫಿಸಿಯನ್ಸಿ ವೈರಸ್ (ಎಚ್‌ಐವಿ) ಎಂದು ಕರೆಯಲ್ಪಡುವ ಈ ವೈರಸ್ ಅದು ಹೇಗೆ ಸೃಷ್ಟಿಯಾಯಿತು ಎಂಬ ಕುತೂಹಲಕಾರಿ ಸಂಗತಿ ನಿಮಗೆ ತಿಳಿಸುತ್ತೇವೆ. ಈ ವೈರಸ್ ಸಿಮಿಯನ್ ಇಮ್ಯುನೋಡಿಫಿಸಿಯನ್ಸಿ ವೈರಸ್ (ಎಸ್‌ಐವಿ‌ಗಳು)- ಎಂಬ ಚಿಂಪಾಂಜಿ ಮತ್ತು ಕೋತಿಗಳಿಗೆ ಬರುವ ವೈರಸ್‍ಗಳಿಂದ ಬಂದಿತು.

ಕೋತಿಗಳಿಗೆ ಮತ್ತು ಚಿಂಪಾಂಜಿಗಳಿಗೆ ಬರುವ ಈ ವೈರಸ್ ಮನುಷ್ಯರಿಗೆ ಹೇಗೆ ಬರಲು ಆರಂಭಿಸಿತು ಎಂಬ ಪ್ರಶ್ನೆ ನಿಮಗೆ ಬರುತ್ತದೆಯಲ್ಲವೇ? ಇದಕ್ಕೆ ಕೋತಿಗಳನ್ನು ಮತ್ತು ಚಿಂಪಾಂಜಿಗಳನ್ನು ಬೇಟೆಯಾಡುವ ಬೇಟೆಗಾರರೇ ಸೇತುವೆಯಂತೆ ಕೆಲಸ ಮಾಡಿದರು ಎಂಬ ಅಂಶವನ್ನು ಅಧ್ಯಯನಗಳು ಬೊಟ್ಟು ಮಾಡಿವೆ.

ಬಹುಶಃ ಅವರು ಈ ಕೋತಿ ಮತ್ತು ಚಿಂಪಾಂಜಿಗಳ ಮಾಂಸವನ್ನು ಸೇವಿಸಿರಬಹುದು ಅಥವಾ ಅವುಗಳೇ ಇವರಿಗೆ ಕಚ್ಚುವ ಮೂಲಕ ಈ ವೈರಸ್ ಮನುಷ್ಯರಿಗೆ ವರ್ಗಾವಣೆಯಾಗಿ ಹೊಸ ಬಗೆಯ ವೈರಸ್ ಹುಟ್ಟಿಗೆ ಕಾರಣವಾಗಿರಬಹುದು. ಈ ವೈರಸ್ ಮನುಷ್ಯರಲ್ಲಿಯೂ ಸೊಂಕನ್ನು ತಂದಿದ್ದರಿಂದ ಇದನ್ನು ಸಿಮಿಯನ್ ಎಂದು ಗುರುತಿಸದೆ ಹ್ಯೂಮನ್ (ಮಾನವ) ಎಂದು ಗುರುತಿಸಲು ಆರಂಭಿಸಲಾಯಿತು. ಬನ್ನಿ ಇನ್ನಷ್ಟು ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ನೋಡೋಣ..

ನಿಮಗೂ ಎಚ್‌ಐವಿ ಇರಬಹುದು ಅಥವಾ ಇಲ್ಲದಿರಬಹುದು

ನಿಮಗೂ ಎಚ್‌ಐವಿ ಇರಬಹುದು ಅಥವಾ ಇಲ್ಲದಿರಬಹುದು

ಎಚ್‌ಐವಿ ಬಂದ ಮಾತ್ರಕ್ಕೆ ನಿಮಗೆ ಕಾಯಿಲೆ ಬರಬೇಕು ಎಂದೇನಿಲ್ಲ. ಈ ಸೊಂಕು ತಗುಲಿದ ಸುಮಾರು ವರ್ಷಗಳ ಕಾಲ ನಿಮಗೆ ಯಾವುದೇ ಕಾಯಿಲೆಗಳು ಅಥವಾ ರೋಗ ಲಕ್ಷಣಗಳು ಕಾಣಿಸದೆ ಇರಬಹುದು. ದಶಕಗಳ ಕಾಲ ಇದರ ಪರಿಣಾಮ ನಿಮಗೆ ಗೊತ್ತಾಗದೆ ಸಹ ಇರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮಗೂ ಎಚ್‌ಐವಿ ಇರಬಹುದು ಅಥವಾ ಇಲ್ಲದಿರಬಹುದು

ನಿಮಗೂ ಎಚ್‌ಐವಿ ಇರಬಹುದು ಅಥವಾ ಇಲ್ಲದಿರಬಹುದು

ಎಚ್‌ಐವಿಯು ಏಡ್ಸ್- ಅಂದರೆ ಅಕ್ವೈರ್ಡ್ ಇಮ್ಯೂನೆ ಡಿಫಿಸಿಯನ್ಸಿ ಸಿಂಡ್ರೋಮ್- ಆಗಿ ಪರಿವರ್ತನೆ ಹೊಂದುವವರೆಗೆ ಇದರಿಂದ ತೊಂದರೆಯಿರುವುದಿಲ್ಲ. ಒಮ್ಮೆ ನಿಮಗೆ ಎಚ್‌ಐವಿಯು ಏಡ್ಸ್ ಆಗಿ ಕಾಣಿಸಿಕೊಂಡಾಗ ನಿಮ್ಮ ದೇಹದ ಇಡೀ ರೋಗ ನಿರೋಧಕ ಶಕ್ತಿ ಕುಸಿದು ಹೋಗುತ್ತದೆ. ಆಗ ನಿಮಗೆ ಡಯೋರಿಯಾ, ಕೆಮ್ಮು, ತೂಕ ಕಳೆದುಕೊಳ್ಳುವಿಕೆ, ಜ್ವರ ಮತ್ತು ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿ ಸಾವಿಗೆ ದಿನೇ ದಿನ ಹತ್ತಿರವಾಗುತ್ತಾ ಹೋಗುತ್ತಾನೆ.

ತಮಗೆ ಎಚ್‌ಐವಿ ಇದೆ ಎಂದು ತಿಳಿಯದ ಹಲವರು ಇದ್ದಾರೆ

ತಮಗೆ ಎಚ್‌ಐವಿ ಇದೆ ಎಂದು ತಿಳಿಯದ ಹಲವರು ಇದ್ದಾರೆ

ಅಮೆರಿಕಾದಲ್ಲಿರುವ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ ಸುಮಾರು 1.2 ಕೋಟಿ ಜನರಿಗೆ ತಮಗೆ ಎಚ್‌ಐವಿ ಬಂಡಿದೆ ಎಂದೇ ತಿಳಿದಿಲ್ಲವಂತೆ. ಅಮೆರಿಕಾದಲ್ಲಿಯೇ ಈ ರೀತಿ ಇದೆ ಎಂದರೆ ನಮ್ಮ ದೇಶದಲ್ಲಿರುವ ಪರಿಸ್ಥಿತಿಯನ್ನು ನೀವೇ ಊಹಿಸಿ. ಪ್ರತಿ 5 ರಲ್ಲಿ ಒಬ್ಬರಿಗೆ ಈ ಎಚ್‌ಐವಿ ಬಂದಿದೆ ಎಂಬ ಮಾಹಿತಿಯೇ ಇಲ್ಲವಂತೆ. ಹಲವಾರು ವೈದ್ಯರು ತಮ್ಮ ರೋಗಿಗಳನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸುವುದಿಲ್ಲವಂತೆ. ಹೀಗೆ ಇವರು ಸಿಡಿಸಿ ನೀಡಿರುವ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಚಿಕಿತ್ಸೆ ನೀಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಮಗೆ ಎಚ್‌ಐವಿ ಇದೆ ಎಂದು ತಿಳಿಯದ ಹಲವರು ಇದ್ದಾರೆ

ತಮಗೆ ಎಚ್‌ಐವಿ ಇದೆ ಎಂದು ತಿಳಿಯದ ಹಲವರು ಇದ್ದಾರೆ

ಹೀಗೆ ಎಚ್‌ಐವಿ ರೋಗಿಗಳಲ್ಲಿ ಇರುವುದರ ಜೊತೆಗೆ ಅವರ ಮೂಲಕ ಇತರರಿಗೂ ಸಹ ಹಬ್ಬುತ್ತದೆ. ಅಲ್ಲದೆ ಜನರು ಸಹ ತಾವೇ ಸ್ವಯಂ ಪ್ರೇರಿತರಾಗಿ ಎಚ್‌ಐವಿ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳದೆ ಇರುವುದು ಸಹ ಒಂದು ಸಮಸ್ಯೆಯೇ ಆಗಿದೆ. ಎಲ್ಲಿ ಎಚ್‌ಐವಿ ಇರುವ ಕಳಂಕಕ್ಕೆ ಈಡಾಗಬೇಕಾಗುತ್ತದೆಯೋ, ಎಂಬ ಭಯ ಅವರ ಈ ನಡೆಗೆ ಕಾರಣವಾಗಿರುತ್ತದೆ.

ಸಲಿಂಗಕಾಮಿ ಗಂಡಸರು ಮಾತ್ರ ಎಚ್‌ಐವಿಗೆ ಗುರಿಯಾಗುವುದಿಲ್ಲ!

ಸಲಿಂಗಕಾಮಿ ಗಂಡಸರು ಮಾತ್ರ ಎಚ್‌ಐವಿಗೆ ಗುರಿಯಾಗುವುದಿಲ್ಲ!

ಎಚ್‌ಐವಿ/ಏಡ್ಸ್ ಮೊದಲು ಕಂಡು ಹಿಡಿದಾಗ, ಆ ವೈರಸ್‌ಗೆ ಗುರಿಯಾಗಿದ್ದವರು ಬಹುತೇಕ ಮಂದಿ ಸಲಿಂಗ ಕಾಮಿ ಗಂಡಸರೇ ಆಗಿದ್ದರು. ಯಾವ ಗಂಡಸರು ಗಂಡಸರ ಜೊತೆಗೆ ಲೈಂಗಿಕ ಕ್ರಿಯೆಯನ್ನು ನಡೆಸುತ್ತಾರೋ (ಎಮ್‌ಎಸ್‌ಎಮ್) ಅವರಲ್ಲಿ ಎಚ್‌ಐವಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಲಿಂಗಕಾಮಿ ಗಂಡಸರು ಮಾತ್ರ ಎಚ್‌ಐವಿಗೆ ಗುರಿಯಾಗುವುದಿಲ್ಲ!

ಸಲಿಂಗಕಾಮಿ ಗಂಡಸರು ಮಾತ್ರ ಎಚ್‌ಐವಿಗೆ ಗುರಿಯಾಗುವುದಿಲ್ಲ!

ಆದರೆ 2010 ರ ನಂತರ ವಿರುದ್ಧ ಲಿಂಗಿಗಳ ಜೊತೆಗೂ ಲೈಂಗಿಕ ಕ್ರಿಯೆ ನಡೆಸುವವರಲ್ಲಿ ಎಚ್‌ಐವಿ ಕಂಡು ಬಂದಿದೆ. ಇಂಜೆಕ್ಷನ್ ಮೂಲಕ ಡ್ರಗ್ ತೆಗೆದುಕೊಳ್ಳುವಿಕೆಯು ಸಹ ಎಚ್‌ಐವಿಗೆ ಕಾರಣವಾಗಿದೆ. ಅಲ್ಲದೆ ಇನ್‌ಫೆಕ್ಷನ್ ಇರುವ ರೇಜರ್‌ಗಳ ಬಳಕೆಯಿಂದ ಸಹ ಎಚ್‌ಐವಿ ಹರಡುತ್ತಿದೆ.

ಭೌಗೋಳಿಕ ಸ್ಥಿತಿಯು ಸಹ ವ್ಯತ್ಯಾಸವನ್ನುಂಟು ಮಾಡುತ್ತದೆ

ಭೌಗೋಳಿಕ ಸ್ಥಿತಿಯು ಸಹ ವ್ಯತ್ಯಾಸವನ್ನುಂಟು ಮಾಡುತ್ತದೆ

ಅಮೆರಿಕಾದಲ್ಲಿ ಹಲವಾರು ಎಚ್‌ಐವಿ ಇನ್‌ಫೆಕ್ಷನ್‌ಗಳು ನಗರಗಳಲ್ಲಿಯೇ ಕಂಡು ಬಂದಿದೆ. ದಕ್ಷಿಣ ಮತ್ತು ಈಶಾನ್ಯ ಭಾಗದಲ್ಲಿ ಇದರ ಸೊಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಆಫ್ರಿಕಾದಲ್ಲಿ ಸಹ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

ಭೌಗೋಳಿಕ ಸ್ಥಿತಿಯು ಸಹ ವ್ಯತ್ಯಾಸವನ್ನುಂಟು ಮಾಡುತ್ತದೆ

ಭೌಗೋಳಿಕ ಸ್ಥಿತಿಯು ಸಹ ವ್ಯತ್ಯಾಸವನ್ನುಂಟು ಮಾಡುತ್ತದೆ

ಆದರೆ ಏಶ್ಯಾ, ಪೂರ್ವ ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಸೊಂಕು ಕಾಣಿಸಿಕೊಳ್ಳಲು ಆರಂಭಿಸಿದೆ. ಹೀಗೆ ಎಚ್‌ಐವಿ ತನ್ನ ಕರಾಳ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಾಗಿದೆ.

English summary

Most Surprising Facts About HIV

Human immunodeficiency virus (HIV) originated with simian immunodeficiency viruses (SIVs)—viruses in chimpanzees and monkeys. But how did the virus jump species? It's thought human hunters were the bridge.
X
Desktop Bottom Promotion