For Quick Alerts
ALLOW NOTIFICATIONS  
For Daily Alerts

ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ದೇಶ ಭಕ್ತಿಗೀತೆಗಳು

By Super
|

ಭಾರತದ ಸ್ವಾತಂತ್ರ್ಯಕ್ಕೆ ಅಹಿಂಸಾವಾದ ಎಷ್ಟು ಕಾರಣವೋ, ದೇಶಭಕ್ತಿಗೀತೆಗಳೂ ಅಷ್ಟೇ ಪ್ರೇರಣೆ ನೀಡಿವೆ. ಈ ದೇಶಭಕ್ತಿಗೀತೆಗಳನ್ನು ಕೇಳುತ್ತಿದ್ದಂತೆ ಮೈಯಲ್ಲಿ ರೋಮಾಂಚನವಾಗುತ್ತದೆ. ಸ್ವತಂತ್ರ ಸಂಗ್ರಾಮದ ಚಿತ್ರಗಳು ಮನಃಪಟಲದಲ್ಲಿ ಹಾದುಹೋಗುತ್ತವೆ.

ಮನೋಜ್ ಕುಮಾರ್ ರವರ 'ಹೈ ಪ್ರೀತ್ ಜಹಾಂ ಕೀ ರೀತ್ ಸದಾ' ಎಂಬ ಪೂರಬ್ ಔರ್ ಪಶ್ಚಿಮ್ ಚಿತ್ರದ ಗೀತೆಯಿಂದ ಹಿಡಿದು ಇತ್ತೀಚಿನ ಆಮಿರ್ ಖಾನ್ ರವರ ರಂಗ್ ದೇ ಬಸಂತಿ ಚಿತ್ರದ ಪ್ರಮುಖ ಗೀತೆಯವರೆಗೂ ಬಾಲಿವುಡ್ ನೀಡಿದ ದೇಶಭಕ್ತಿಗೀತೆಗಳ ಸಂಖ್ಯೆ ಅಪಾರವಾಗಿದೆ. ಏ ಮೇರೆ ವತನ್ ಕೇ ಲೋಂಗೋಂ ಎಂದು ಲತಾ ಮಂಗೇಶ್ಕರ್ ರವರು ಹಾಡಿದ ಹಾಡನ್ನು ಕೇಳುತ್ತಿದ್ದಂತೆಯೇ ಕಣ್ಣೀರು ಹರಿಸದ ಭಾರತೀಯನೇ ಇಲ್ಲ. ಸ್ವಾತಂತ್ರೋತ್ಸವಕ್ಕೆ ತ್ರಿವರ್ಣ ಬಣ್ಣದ ಜ್ಯೂಸ್

ಸ್ವತಂತ್ರ ದಿನಾಚರಣೆಯಂದು ಧ್ವಜಾರೋಹಣೆಗೆ ಹೋಗದಿದ್ದರೂ, ರಾಷ್ಟ್ರಗೀತೆ ಹಾಡುತ್ತಿದ್ದಾಗಲೂ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರೂ ದೇಶಭಕ್ತಿಗೀತೆಗಳು ಬಂದಾಗ ಮಾತ್ರ ನಾವೆಲ್ಲರೂ ಕೊಂಚವಾದರೂ ನಮ್ಮ ದೇಶದ ಬಗ್ಗೆ ಅಭಿಮಾನ ತಾಳಿಯೇ ತಾಳುತ್ತೇವೆ. ಸ್ವತಂತ್ರ ದಿನಾಚರಣೆಯ ಸಂಭ್ರಮದಲ್ಲಿರುವ ನಮಗೆ ಈ ದೇಶಭಕ್ತಿಗೀತೆಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಅಂತಹ ಗೀತೆಗಳ ಮಾಧುರ್ಯ ಸವಿಯಲು ಕೆಳಗಿನ ಸ್ಲೈಡ್ ಶೋ ಷೋ ನಿಮಗೆ ನೆರವು ನೀಡಬಲ್ಲುದು...

ಚಕ್ ದೇ ಚಿತ್ರದ ಚಕ್ ದೇ...... ಇಂಡಿಯಾ ಹಾಡು

ಚಕ್ ದೇ ಚಿತ್ರದ ಚಕ್ ದೇ...... ಇಂಡಿಯಾ ಹಾಡು

2007ರಲ್ಲಿ ಬಿಡುಗಡೆಯಾದ ಶಾರುಖ್ ಅಭಿನಯದ ಹಿಂದಿ ಚಿತ್ರ ಚಕ್ ದೇ ಭಾರತದ ಮಹಿಳಾ ಹಾಕಿ ತಂಡವನ್ನು ಹುರಿದುಂಬಿಸಿ ತಮ್ಮ ನೈಜ ಪ್ರತಿಭೆಯಿಂದ ಜಯಸಾಧಿಸಲು ಯತ್ನಿಸುವ ತರಬೇತುದಾರನ ಕಥೆ. ಇದಕ್ಕೆ ಸುಖ್ವಿಂದರ್ ಸಿಂಗ್ ರವರು ತಮ್ಮ ಕಂಚಿನ ಕಂಠದಲ್ಲಿ ಹಾಡಿದ ಚಕ್ ದೇ ಇಂಡಿಯಾ ಹಾಡು ಇಡಿಯ ಭಾರತ ಕ್ರಿಕೆಟ್ಟಿನ ಗುಂಗಿನಲ್ಲಿದ್ದಾಗ ಭಾರತೀಯರಿಗೆ ಕ್ರಿಕೆಟ್ ನಮ್ಮ ದೇಶದ್ದಲ್ಲ, ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಎಂದು ಚೀರಿ ಹೇಳಿದ ಹಾಡು. ಮುಂದೆ ಓದಿ

ಚಕ್ ದೇ ಚಿತ್ರದ ಚಕ್ ದೇ...... ಇಂಡಿಯಾ ಹಾಡು

ಚಕ್ ದೇ ಚಿತ್ರದ ಚಕ್ ದೇ...... ಇಂಡಿಯಾ ಹಾಡು

ಈ ಹಾಡು ಕೇಳುತ್ತಿದ್ದಂತೆಯೇ ನಮ್ಮೊಳಗಿನ ಭಾರತೀಯತೆ ಮೆರೆಯುವುದು ಮಾತ್ರ ಸುಳ್ಳಲ್ಲ. ಬೇಕಿದ್ದರೆ ಚಕ್ ದೇ ಇಂಡಿಯಾ ಎಂದು ಹೇಳುತ್ತಿದ್ದಾಗ ನಿಮ್ಮ ಮೊಣಕೈಯ ರೋಮಗಳನ್ನು ಗಮನಿಸಿ.

ಗಂಗಾ ಜಮುನಾ ಚಿತ್ರದ ’ಇನ್ಸಾಫ್ ಕೀ ಡಗರ್ ಪೇ’ ಹಾಡು

ಗಂಗಾ ಜಮುನಾ ಚಿತ್ರದ ’ಇನ್ಸಾಫ್ ಕೀ ಡಗರ್ ಪೇ’ ಹಾಡು

1961ರಲ್ಲಿ ಭಾರತ ಸ್ವಾತಂತ್ರ್ಯ ಬಂದ ಬಳಿಕದ ತಾರುಣ್ಯದಲ್ಲಿದ್ದಾಗ ಕೈಗಾರಿಕಾ ಕ್ರಾಂತಿಯಿಂದಾಗಿ ನಡೆದ ಅಭಿವೃದ್ಧಿಗೆ ಕೈಜೋಡಿಸಲು ಯುವಜನತೆಯನ್ನು ಹುರುದುಂಬಿಸಲು ಹಾಡಿದ ಈ ಚಿತ್ರ ಇಂದಿಗೂ ಭಾರತದ ಬಗ್ಗೆ ಹೆಮ್ಮೆ ಮೂಡಿಸುತ್ತದೆ. ಜೀವನದಲ್ಲಿ ಮುಂದುವರೆಯಲು ಸತ್ಯ, ಸ್ವಾಭಿಮಾನ, ಒಗ್ಗಟ್ಟುಗಳನ್ನು ಚಿಕ್ಕಂದಿನಿಂದಲೇ ಅಳವಡಿಸಿಕೊಳ್ಳಲು ಪ್ರೇರಣೆ ನೀಡಿರುವ ಈ ಹಾಡು ಕೇಳುತ್ತಿದ್ದಂತೆ ಅವರೊಂದಿಗೇ ಹಾಡುವ ಮನಸ್ಸಾಗುತ್ತದೆ.

ಉಪಕಾರ್ ಚಿತ್ರದ ’ಮೇರೆ ದೇಶ್ ಕೀ ಧರ್ತೀ...

ಉಪಕಾರ್ ಚಿತ್ರದ ’ಮೇರೆ ದೇಶ್ ಕೀ ಧರ್ತೀ..." ಹಾಡು

ದೇಶಭಕ್ತಿಗೀತೆಗಳಿಗೆ ಖ್ಯಾತರಾದ ಮಹೇಂದ್ರ ಕಪೂರ್ ರವರ ಮೇರೆ ದೇಶ್ ಕೀ ಧರ್ತೀ ಹಾಡು ಯಾವಾಗ ಕೇಳಿದರೂ ದೇಶದ ಬಗ್ಗೆ ಅಭಿಮಾನ ಮೂಡಿಸುತ್ತದೆ.

courtesy

ಉಪಕಾರ್ ಚಿತ್ರದ ’ಮೇರೆ ದೇಶ್ ಕೀ ಧರ್ತೀ...

ಉಪಕಾರ್ ಚಿತ್ರದ ’ಮೇರೆ ದೇಶ್ ಕೀ ಧರ್ತೀ..." ಹಾಡು

ಹಳ್ಳಿಯ ಜೀವನ ಮತ್ತು ಪ್ರಮುಖವಾಗಿ ಕೃಷಿಯನ್ನು ಬಲವಾಗಿ ಬೆಂಬಲಿಸುವ, ತನ್ಮೂಲಕ ಗಾಂಧೀಜಿಯವರ ಗ್ರಾಮರಾಜ್ಯದ ಕಲ್ಪನೆಗೆ ಪೂರಕವಾದ ಈ ಚಿತ್ರ ಎಂದಿಗೂ ಸಲ್ಲುವ ಚಿತ್ರವಾಗಿದ್ದು ಈ ಹಾಡು ರೇಡಿಯೋದಲ್ಲಿ ಯಾವಾಗ ಬಂದರೂ ಬದಲಿಸದಿರಲು ಪ್ರೇರಣೆ ನೀಡುತ್ತದೆ.

ಪೂರಬ್ ಔರ್ ಪಶ್ಚಿಮ್ ಚಿತ್ರದ ’ಹೈ ಪ್ರೀತ್ ಜಹಾಂ ಕೀ ರೀತ್ ಸದಾ

ಪೂರಬ್ ಔರ್ ಪಶ್ಚಿಮ್ ಚಿತ್ರದ ’ಹೈ ಪ್ರೀತ್ ಜಹಾಂ ಕೀ ರೀತ್ ಸದಾ

ವಿದೇಶಕ್ಕೆ ಹೋದ ಸ್ವತಂತ್ರ ಹೋರಾಟಗಾರನ ಪುತ್ರ ವಿದೇಶದಲ್ಲಿ ನೆಲೆಸಿ ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದ ಜನರಿಗೆ ಭಾರತದ ಮೌಲ್ಯಗಳನ್ನು ತಿಳಿಸಿ ಹೇಳುವ ಈ ಹಾಡು ಭಾರತದಲ್ಲಿದ್ದೂ ಇದರ ಮೌಲ್ಯವನ್ನು ಅರಿಯದ ನಮಗೆ ಚುರುಕು ಮುಟ್ಟಿಸುತ್ತದೆ.

courtesy

ರಂಗ್ ದೇ ಬಸಂತಿ ಚಿತ್ರದ ’ರಂಗ್ ದೇ ಬಸಂತಿ...

ರಂಗ್ ದೇ ಬಸಂತಿ ಚಿತ್ರದ ’ರಂಗ್ ದೇ ಬಸಂತಿ..." ಹಾಡು

2006ರಲ್ಲಿ ದೇಶಭಕ್ತಿಯನ್ನು ಒಂದು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿದ ಹಿಂದಿ ಚಿತ್ರ ರಂಗ್ ದೇ ಬಸಂತಿ ಚಿತ್ರದ ಅತಿವೇಗದ ಹಾಡು ರಂಗ್ ದೇ ಬಸಂತಿ ಹಾಡು ಸಹಾ ಕೇಳುಗರಲ್ಲಿ ದೇಶಾಭಿಮಾನ ಮೂಡಿಸುತ್ತದೆ.

courtesy

ಹಖೀಖತ್ ಚಿತ್ರದ

ಹಖೀಖತ್ ಚಿತ್ರದ "ಕರ್ ಚಲೇ ಹಂ ಫಿದಾ....

1964ರಲ್ಲಿ ಬಿಡುಗಡೆಯಾದ ಹಖೀಖತ್ ಚಿತ್ರಕ್ಕೆ ಕೈಫೀ ಆಜ್ಮಿಯವರ ಸಾಹಿತ್ಯದಲ್ಲಿ ಮೊಹಮ್ಮದ್ ರಫಿಯವರು ಹಾಡಿದರು. ಇದಕ್ಕೆ ಎರಡು ವರ್ಷಗಳ ಹಿಂದೆ 1962ರಲ್ಲಿ ಭಾರತ ಚೀನಾ ನಡುವೆ ನಡೆದ ಯುದ್ಧದಲ್ಲಿ ಭಾರತೀಯರು ನೀಡಿದ ಬಲಿದಾನ, ತನ್ಮೂಲಕ ಭಾರತವನ್ನು ಆಕ್ರಮಣದಿಂದ ಉಳಿಸಿದ ಯೋಧರಿಗೆ ಅರ್ಪಿಸಿದ ಶೃದ್ಧಾಂಜಲಿಯಾಗಿದೆ. ಈ ಹಾಡನ್ನು ಕೇಳುತ್ತಿದ್ದಂತೆ ನಮ್ಮ ಸೈನ್ಯದ ಬಗ್ಗೆ ಅಪಾರ ಅಭಿಮಾನ ಮೂಡುತ್ತದೆ.

courtesy

ಸ್ವದೇಸ್ ಚಿತ್ರದ ’ಯೆ ಜೋ ದೇಸ್ ಹೈ ಮೇರಾ...

ಸ್ವದೇಸ್ ಚಿತ್ರದ ’ಯೆ ಜೋ ದೇಸ್ ಹೈ ಮೇರಾ... " ಹಾಡು

ಭಾರತಕ್ಕಾಗಿ ತುಡಿಯುವ ಹೃದಯವಿರುವ ಯುವಕ ಅಮೇರಿಕಾದ ನಾಸಾದಂತಹ ಕೋಟ್ಯಾಂತರ ರೂಪಾಯಿ ಗಳಿಸಬಹುದಾದ ನೌಕರಿಯನ್ನು ಬಿಟ್ಟು ನಾಡಿಗಾಗಿ ಏನಾದರೂ ಮಾಡಬೇಕೆಂದು ಹಳ್ಳಿಗೆ ಹಿಂದಿರುಗುವ ಚಿತ್ರ.

ಸ್ವದೇಸ್ ಚಿತ್ರದ ’ಯೆ ಜೋ ದೇಸ್ ಹೈ ಮೇರಾ

ಸ್ವದೇಸ್ ಚಿತ್ರದ ’ಯೆ ಜೋ ದೇಸ್ ಹೈ ಮೇರಾ

ಅಮೇರಿಕಾದಲ್ಲಿದ್ದಾಗಲೂ ಸುಖದ ಪ್ರತಿಯೊಂದೂ ವಿಷಯವೂ ನಾಡಿನ ಮಣ್ಣನ್ನು ನೆನಪಿಸುವ ಈ ಹಾಡನ್ನು ಎ.ಆರ್. ರೆಹಮಾನ್ ರವರ ಕಂಠದಲ್ಲಿ ಕೇಳುತ್ತಿದ್ದರೆ ಬೆನ್ನುಹುರಿಯಿಂದ ಕಂಪನ ಇಡಿಯ ಮೈ ಆವರಿಸುತ್ತದೆ.

ನಯಾ ದೌರ್ ಚಿತ್ರದ ’ ಏ ದೇಶ್ ಹೈ ವೀರ್ ಜವಾನೋಂ ಕಾ’ ಹಾಡು

ನಯಾ ದೌರ್ ಚಿತ್ರದ ’ ಏ ದೇಶ್ ಹೈ ವೀರ್ ಜವಾನೋಂ ಕಾ’ ಹಾಡು

ಭಾರತೀಯರ ಸ್ವಾಭಿಮಾನವನ್ನೇ ಕೆಣಕುವ ಕಥೆ ಇರುವ ನಯಾ ದೌರ್ ಚಿತ್ರದ ಈ ಹಾಡು ಎಲ್ಲಾ ಭಾರತೀಯರಿಗೂ ಅವರಲ್ಲಿರುವ ಸ್ವಾಭಿಮಾನವನ್ನು ಬಡಿದೆಚ್ಚರಿಸುತ್ತದೆ. ಕುದುರೆಗಾಡಿ ಓಡಿಸಿ ಹೊಟ್ಟೆಹೊರೆಯುತ್ತಿದ್ದವರ ಎದುರಿಗೆ ಬಸ್ಸು ಓಡಿಸುವ ಮೂಲಕ ಅವರ ಹೊಟ್ಟೆಪಾಡಿಗೇ ಕಲ್ಲು ಹಾಕುವವರ ವಿರುದ್ಧ ಸೆಟೆದು ನಿಲ್ಲುವ ಪಾತ್ರದಲ್ಲಿ ದಿಲೀಪ್ ಕುಮಾರ್ ಮನೋಜ್ಞ ಅಭಿನಯ ನೀಡಿದ್ದಾರೆ.

ನಯಾ ದೌರ್ ಚಿತ್ರದ ’ ಏ ದೇಶ್ ಹೈ ವೀರ್ ಜವಾನೋಂ ಕಾ’ ಹಾಡು

ನಯಾ ದೌರ್ ಚಿತ್ರದ ’ ಏ ದೇಶ್ ಹೈ ವೀರ್ ಜವಾನೋಂ ಕಾ’ ಹಾಡು

ಅತಿವೇಗದ ಬಸ್ಸಿಗೆ ಕುದುರೆಗಾಡಿಯನ್ನು ಎದುರಾಳಿಯಾಗಿ ನಿಲ್ಲಿಸುವ ಮೂಲಕ ಭಾರತೀಯರ ಕೆಚ್ಚೆದೆಯನ್ನು ತೋರ್ಪಡಿಸುವ ಈ ಹಾಡು ನಿಮ್ಮಲ್ಲೂ ಸ್ವಾಭಿಮಾನದ ಹೊಗೆಯನ್ನು ಎಬ್ಬಿಸಬಹುದು.

ಕಾಬೂಲಿವಾಲಾ ಚಿತ್ರದ ’ಏ ಮೆರೇ ಪ್ಯಾರೇ ವತನ್’ ಹಾಡು

ಕಾಬೂಲಿವಾಲಾ ಚಿತ್ರದ ’ಏ ಮೆರೇ ಪ್ಯಾರೇ ವತನ್’ ಹಾಡು

ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ರವರ ಕಥೆಯನ್ನಾಧರಿಸಿದ ಕಾಬೂಲಿವಾಲಾ ಚಿತ್ರ ಕಪ್ಪು ಬಿಳಿಪಾಗಿದ್ದರೂ ಈ ಹಾಡು ಮಾತ್ರ ವರ್ಣರಂಜಿತವಾಗಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ ರಹಮತ್ ಗೆ ಭಾರತದ ಮಿನಿಯೇ ತನ್ನ ಮಗಳ ರೂಪದಲ್ಲಿ ಕಂಡುಬರುತ್ತಾಳೆ.

courtesy

ಕಾಬೂಲಿವಾಲಾ ಚಿತ್ರದ ’ಏ ಮೆರೇ ಪ್ಯಾರೇ ವತನ್’ ಹಾಡು

ಕಾಬೂಲಿವಾಲಾ ಚಿತ್ರದ ’ಏ ಮೆರೇ ಪ್ಯಾರೇ ವತನ್’ ಹಾಡು

ಕಾರಣಾಂತರದಿಂದ ಹತ್ತು ವರ್ಷ ಜೈಲು ಸೇರಿದ ರಹಮತ್ ಗೆ ಹೊರಬಂದ ಬಳಿಕ ಮಿನಿ ಗುರುತಿಸುವುದಿಲ್ಲ. ಆದರೆ ಮಿನಿಯ ತಂದೆ ಗುರುತಿಸುತ್ತಾನೆ. ಈಗ ತನ್ನ ಮನೆ ಸೇರುವ ರಹಮತ್ ಗೆ ಮಿನಿಯ ಮದುವೆಗೆಂದು ಇಟ್ಟಿದ್ದ ಹಣವನ್ನು ನೀಡಿ ನಿನ್ನ ಸ್ವಂತ ಮಗಳ ಬಳಿ ನಡೆ ಎಂದು ದಾನ ನೀಡುವ ಈ ಕಥೆಯಲ್ಲಿರುವ ಈ ಹಾಡು ಯಾರದ್ದಾದರೂ ಮನ ಕಲಕದಿರದು.

English summary

Independence Day Special: Patriotic songs that will make Us proud

From Manoj Kumar’s Hai preet jahan ki reet sada from Purabh Aur Paschim to Aamir Khan’s Rang de Basanti title track, Bollywood has given us a spate of patriotic songs that generate the feeling of nationalism among Indians.There are numerous Bollywood songs, which have the power to invoke your patriotic emotions. As the nation gears up to celebrate Independence Day, we have compiled a list of the top patriotic songs of Bollywood to add flavor of freedom to your life.
Story first published: Saturday, August 15, 2015, 9:16 [IST]
X