For Quick Alerts
ALLOW NOTIFICATIONS  
For Daily Alerts

ಚೂಟಿ ಹುಡುಗಿಯರಿಗೆ ತುಂಟಾಟ ಹುಡುಗರ ಕಿವಿಮಾತೇನು?

|

ಭಾರತೀಯ ಹುಡುಗಿಯರು ನೋಡಲು ಸುಂದರವಷ್ಟೇ ಅಲ್ಲ, ಮುದ್ದಾಗಿ ಸಹ ಇರುತ್ತಾರೆ. ಇವರಿಗೆ ಹುಡುಗರು ಆಗಾಗ ಸಲಹೆ ನೀಡುವುದು ಹೊಸತೇನಲ್ಲ. ಅದರಲ್ಲಿಯೂ ನಮ್ಮ ಭಾರತೀಯ ಹುಡುಗರಂತು, ಬಿಟ್ಟಿ ಸಲಹೆಗಳನ್ನು ಧಾರಾಳವಾಗಿ ನೀಡುತ್ತಿರುತ್ತಾರೆ. ಅದರಲ್ಲೂ ಇಡೀ ವಿಶ್ವದಲ್ಲಿ ನಮ್ಮ ಭಾರತೀಯ ಹುಡುಗರಷ್ಟು ಕಾಳಜಿ ಇರುವ, ಚೆನ್ನಾಗಿ ಓದಿಕೊಂಡಿರುವ ಮತ್ತು ಸುಂದರವಾಗಿರುವ ಹುಡುಗರು ಬೇರೆಡೆ ಸಿಗುವುದಿಲ್ಲ ಎಂಬುದು ಸತ್ಯ.

ಇವರಿಗೆ ತಮ್ಮದೇ ಆದ ಇಮೇಜ್ ಇದೆ. ಇದರ ಜೊತೆಗೆ ಇವರ ಕುರಿತಾಗಿ ನಿಮಗೆ ನಿರ್ದಿಷ್ಟವಾದ ಇಷ್ಟಾನಿಷ್ಟಗಳು ಇರಬಹುದು. ಆದರೆ ವಿಷಯ ಅದಲ್ಲ ಒಬ್ಬ ಭಾರತೀಯ ಹುಡುಗ ಹುಡುಗಿಯರಲ್ಲಿ ಏನು ಬಯಸುತ್ತಾನೆ? ಎಂಬುದನ್ನು ತಿಳಿದುಕೊಳ್ಳಿ. ಈ ಹುಡುಗರು ಅಮ್ಮನ ಮಕ್ಕಳು ಎಂದೇ ಪರಿಚಯ. ಈ ಹುಡುಗರು ಮಹಿಳೆಯರನ್ನು ಕಾಳಜಿಯಿಂದ ಮತ್ತು ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾರೆ. ಹಾಗಾದರೆ ಬನ್ನಿ ಇಂತಹ ಹುಡುಗರು ಹುಡುಗಿಯರಿಗೆ ನೀಡುವ ಸಲಹೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ!!.

ಸಲಹೆ 1

ಹುಡುಗರು ಕಾಫಿಗೆ ಕರೆದರೆ ಆಗೊಲ್ಲ ಎನ್ನಬೇಡಿ. ನಾವು ಮೂಲತಃ ಸಂಕೋಚ ಸ್ವಭಾವದವರು ಮತ್ತು ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವ ಜನ. ಈ ಕಾಫಿ ಕುಡಿಯುವ ಮೂಲಕ ನಮ್ಮ ಪ್ರೀತಿಯನ್ನು ನಿಮಗೆ ವ್ಯಕ್ತಪಡಿಸಲು ಬಯಸುತ್ತೇವೆ. ಇದನ್ನು ನಿರಾಕರಿಸಿದರೆ, ನಮಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಾಲೇಜ್ ಲೈಫ್: ಜೀವನದಲ್ಲಿ ಎಂದೂ ಮರೆಯಲಾಗದ ಸವಿ ನೆನಪು!

Heart to Heart with Indian Guys

ಸಲಹೆ 2

ಭಾರತೀಯ ಹುಡಗರು ಹುಡುಗಿಯರಲ್ಲಿ ಏನನ್ನು ಇಷ್ಟಪಡುತ್ತಾರೆ? ಅವರು ನಿಮ್ಮನ್ನು ತುಂಬಾ ಗೌರವಿಸುತ್ತಾರೆ. ಆದರೆ ನಮ್ಮ ಮೇಲೂ ಸಹ ಸ್ವಲ್ಪ ಕರುಣೆ ತೋರಿಸಿ. ನಾವು ನಿಮ್ಮನ್ನು ಇಷ್ಟಪಡುತ್ತೀವಿ ಎಂದ ಮಾತ್ರಕ್ಕೆ ನಿಮ್ಮ ಮನೆಗೆಲಸಗಳನ್ನು ನಾವು ಮಾಡಿಕೊಡುತ್ತೀವಿ ಎಂದು ಭಾವಿಸಬೇಡಿ. ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಸೌಜನ್ಯವಲ್ಲ ಎಂಬುದು ನಿಮಗೂ ತಿಳಿದಿರಲಿ.

ಸಲಹೆ 3

ನಿಮ್ಮ ಉಬ್ಬು ತಗ್ಗುಗಳು ನಮಗಿಷ್ಟ. ಆದ್ದರಿಂದ ನೀವು ದಪ್ಪಗಿದ್ದರು, ನಾನು ಹೇಗೆ ಕಾಣುತ್ತೀನಿ ಎಂದು ನಮ್ಮನ್ನು ಕೇಳಬೇಡಿ. ನೀವು ಹೇಗಿದ್ದರು ನಮಗೆ ಚೆನ್ನ. ಅದನ್ನು ಸುಧಾರಿಸಲು, ನೀವು ಇನ್ನೂ ಚೆನ್ನಾಗಿ ಕಾಣಲು ಪ್ರಯತ್ನಗಳನ್ನು ನಿಲ್ಲಿಸಿ. ಒಂದು ವೇಳೆ ನಮ್ಮನ್ನು ಕೇಳಿದರೂ, ನಾವು ಸುಳ್ಳು ಹೇಳುವುದಿಲ್ಲ.

ಸಲಹೆ 4

ಹರೆಯದ ಹುಡುಗಿಗೆ ನಮ್ಮ ಹುಡುಗರ ಸಲಹೆ!. ನಾವೆಲ್ಲರು ಉದಾರವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಈ ಪ್ರಪಂಚ ನಿಮಗೆ ಹೇಗೋ, ನಮಗೂ ಹಾಗೆಯೇ, ಹಾಗಾಗಿ ನಿಮ್ಮ ಮನಸ್ಸಿಗೆ ಒಪ್ಪಿದಂತೆ ನೀವೂ ಸಹ ಮಾಡಿ. ಹೋಗು ಹುಡುಗಿ ನೀನು ಇಷ್ಟಪಟ್ಟಿದ್ದನ್ನು ಮೊದಲು ಮಾಡು, ನಿನ್ನ ನಗುವನ್ನು ನೋಡುವ ಕಾತರ ನಮಗಿದೆ. ನಾವು ಜೀವನದಲ್ಲಿ ಮಾಡುವ ಅತಿ ದೊಡ್ಡ 10 ತಪ್ಪುಗಳು

Heart to Heart with Indian Guys

ಸಲಹೆ 5

ಇದು ಹುಡುಗಿಯರಿಗೆ ಹುಡುಗರು ನೀಡುವ ಸಾಮಾನ್ಯ ಸಲಹೆ. ನಿಮ್ಮನ್ನು ನಮ್ಮೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನಾವು ಬೇರೆ ರೀತಿಯ ತಳಿಗಳು!. ಒಮ್ಮೆ ಆ ಪ್ರಸಿದ್ಧ ಪುಸ್ತಕವನ್ನು ಒಮ್ಮೆ ನೆನಪಿಸಿಕೊಳ್ಳಿ " ಮೆನ್ ಆರ್ ಫ್ರಮ್ ಮಾರ್ಸ್ ಅಂಡ್ ವಿಮೆನ್ ಫ್ರಂ ವಿನಸ್". ಹಾಗೆ ನಾವು ಸ್ವಲ್ಪ ವಿಭಿನ್ನ ಬಗೆಯವರು, ನಮ್ಮ ರುಚಿ ಮತ್ತು ಅಭಿರುಚಿಗಳಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ. ಅವುಗಳು ನಿಮ್ಮೊಂದಿಗೆ ಬೆರೆಯುವುದಿಲ್ಲ. ಶಾಪಿಂಗ್‌ನಲ್ಲಿ ಮುಳುಗುವವರು ನಮಗೆ ಇಷ್ಟವಾಗುವುದಿಲ್ಲ. ಕೊಂಡುಕೊಳ್ಳುವುದು ನಮಗೆ ಹಿಡಿಸುವುದೂ ಇಲ್ಲ.

Heart to Heart with Indian Guys

ಸಲಹೆ 6

ಕೊನೆಯದಾಗಿ ಮತ್ತು ಪ್ರಮುಖವಾಗಿ ನಾವು ನಮ್ಮ ತಾಯಿಯನ್ನು ಇಷ್ಟಪಡುತ್ತೇವೆ. ಹಾಗೆಂದು ನಿಮ್ಮನ್ನು ನಾವು ಕಡಿಮೆ ಪ್ರೀತಿಸುತ್ತೇವೆ ಎಂದು ಅರ್ಥವಲ್ಲ. ಇಬ್ಬರೂ ನಮಗೆ ಒಂದೇ. ಆ ವಿಚಾರವಾಗಿ ಯಾವುದೇ ಹೋಲಿಕೆ ಬೇಡ. ನಿಮಗೂ ಸಹ ನಮ್ಮ ಹೃದಯದಲ್ಲಿ ಮತ್ತು ಜೀವನದಲ್ಲಿ ಅಮೂಲ್ಯ ಸ್ಥಾನವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

English summary

Heart to Heart with Indian Guys

Indian girls are gorgeous and homely, however there are a few advices to girls from boys. Often one feels that Indian guys are good at giving advices and moral lecture of what their perception is of right and wrong. Guys are here to give you some advices that would help you deal with them more effectively!!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more