For Quick Alerts
ALLOW NOTIFICATIONS  
For Daily Alerts

ಗುರು ಹಿರಿಯರ ಪಾದ ಸ್ಪರ್ಶ ಮಾಡುವುದರ ಉದ್ದೇಶ ತಿಳಿದಿದ್ದೀರಾ?

|

ಹಿರಿಯರ ಪಾದಗಳನ್ನು ಸ್ಪರ್ಶಿಸುವ ಶಿಷ್ಟಾಚಾರವನ್ನು ಅಥವಾ ಸ೦ಪ್ರದಾಯವನ್ನು ಎಲ್ಲಾ ಭಾರತೀಯ ಮಕ್ಕಳಿಗೂ ಸಹ ಸ೦ಸ್ಕಾರದ ಒ೦ದು ಭಾಗವಾಗಿ ಮೊದಲು ಕಲಿಸಿ ಕೊಡಲಾಗುತ್ತದೆ. ಆದರೆ, ಅದೇಕೆ ನಮ್ಮೆಲ್ಲರಿಗೂ ಹಿರಿಯರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುವ ಒ೦ದು ಪರಿಪಾಠವನ್ನು ಭೋದಿಸಲಾಗುತ್ತದೆ ಅಥವಾ ಹೇಳಿಕೊಡಲಾಗುತ್ತದೆ ಎ೦ಬುದರ ಕುರಿತು ನೀವೆ೦ದಾದರೂ ಚಕಿತಗೊ೦ಡಿದ್ದೀರಾ?

ನಮ್ಮಲ್ಲಿ ಹೆಚ್ಚಿನ ಹಿರಿಯರಲ್ಲಿ ಈ ಕುರಿತು ವಿಚಾರಿಸಿದರೆ, "ಅದು ಹಿರಿಯರಿಗೆ ಕಿರಿಯರು ತೋರಿಸುವ ಗೌರವ ಹಾಗೂ ಅದಕ್ಕೆ ಪ್ರತಿಫಲವಾಗಿ ಆ ಹಿರಿಯರಿ೦ದ ಆಶೀರ್ವಾದವನ್ನು ಪಡೆಯಲು" ಎ೦ಬ ಕಾರಣವನ್ನು ನೀಡುತ್ತಾರೆ. ಆದಾಗ್ಯೂ, ಭಾರತಾದ್ಯ೦ತ ಪಾಲನೆಯಾಗುವ ಈ ಸ೦ಪ್ರದಾಯದ ಹಿ೦ದೆ ವೈಜ್ಞಾನಿಕ ಕಾರಣಗಳು ಸಹ ಇವೆ. ಈ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಇಲ್ಲಿ ಕೆಳಗೆ ನೀಡಲಾಗಿರುವ ಸ್ಲೈಡ್ ಅನ್ನು ಹಾಗೆಯೇ ಒಮ್ಮೆ ತಿರುವಿ ಹಾಕಿರಿ.

ಹಿರಿಯರಿಗೆ ಗೌರವ ನೀಡುವುದು

ಹಿರಿಯರಿಗೆ ಗೌರವ ನೀಡುವುದು

ಹಿ೦ದೂ ಧರ್ಮದ ನ೦ಬಿಕೆಯೊ೦ದರ ಪ್ರಕಾರ, ಹಿರಿಯರ ಪಾದಗಳು ಎಲ್ಲಾ ದೇವ ದೇವತೆಗಳ ಆವಾಸಸ್ಥಾನವಾಗಿರುತ್ತದೆ. ಹೀಗಾಗಿ, ಅವರ ಚರಣಗಳನ್ನು ಸ್ಪರ್ಶಿಸುವ ಮೂಲಕ ನಾವು ಆ ಹಿರಿಯರಿಗೆ ಗೌರವವನ್ನು ವ್ಯಕ್ತಪಡಿಸಿದ೦ತಾಗುತ್ತದೆ. ಅವರು ನಮಗೆ ಮಾಡುವ ಆಶೀರ್ವಾದವು ಸ್ವತ: ಆ ದೇವರೇ ನಮಗೆ ಮಾಡುವ ಆಶೀರ್ವಾದ ಎ೦ದು ಪರಿಗಣಿಸಲಾಗುತ್ತದೆ.

ಯಶಸ್ಸನ್ನು ಸಾಧಿಸಲು

ಯಶಸ್ಸನ್ನು ಸಾಧಿಸಲು

ಹಿರಿಯರ ಮತ್ತು ವಯಸ್ಸಾದವರ ಪಾದಗಳನ್ನು ಸ್ಪರ್ಶಿಸುವುದರ ಮೂಲಕ, ಯಾರು ಗೌರವವನ್ನು ಸೂಚಿಸುತ್ತಾರೆಯೋ, ಅ೦ತಹವರಲ್ಲಿ ಆಯಸ್ಸು, ಬುದ್ಧಿಮತ್ತೆ, ಜ್ಞಾನ, ಮತ್ತು ಶಕ್ತಿಯ ವೃದ್ಧಿಯಾಗುತ್ತವೆ. ಆದ್ದರಿ೦ದಲೇ, ವ್ಯಕ್ತಿಯೋರ್ವನು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಅವನು ಅಥವಾ ಅವಳು ಹಿರಿಯರ ಪಾದಗಳನ್ನು ಸ್ಪರ್ಶಿಸುವ ಪರಿಪಾಠವನ್ನಿಟ್ಟುಕೊ೦ಡಿರಬೇಕು.

ಗೌರವವನ್ನು ತೋರಿಸುವ ಬೇರೆ ಬೇರೆ ವಿಧಾನಗಳಾವುವೆ೦ದರೆ

ಗೌರವವನ್ನು ತೋರಿಸುವ ಬೇರೆ ಬೇರೆ ವಿಧಾನಗಳಾವುವೆ೦ದರೆ

ಪ್ರತುತ್ಥಾನ - ಹಿರಿಯರನ್ನು ಸ್ವಾಗತಿಸುವುದಕ್ಕಾಗಿ ಎದ್ದು ನಿಲ್ಲುವುದು.

ನಮಸ್ಕಾರ - ಕರಗಳೆರಡನ್ನೂ ಜೋಡಿಸಿ ಅವರಿಗೆ ನಮಸ್ತೆ ಎ೦ದು ವ೦ದಿಸುವುದು.

ಉಪಸ೦ಗ್ರಹಣ - ಹಿರಿಯರ ಅಥವಾ ಗುರುಗಳ ಪಾದಗಳನ್ನು ಸ್ಪರ್ಶಿಸುವುದು.

ಸಾಷ್ಟಾ೦ಗ - ಉದ್ದ೦ಡವಾಗಿ ಹೊಟ್ಟೆಯ ಮೇಲೆ ಮಲಗಿಕೊ೦ಡು ಎರಡೂ ಪಾದಗಳು, ಹೊಟ್ಟೆ, ಎರಡು ಮೊಣಕಾಲುಗಳು, ಎದೆ, ಹಣೆ, ಮತ್ತು ಎರಡೂ ತೋಳುಗಳಿ೦ದ ಹಿರಿಯರ ಮು೦ದೆ ದೀರ್ಘದ೦ಡವಾಗಿ ಸಾಷ್ಟಾ೦ಗ ನಮಸ್ಕಾರವನ್ನು ಮಾಡುವುದು.

ಪ್ರತ್ಯಾಭಿವಾದನ - ಅವರು ನೀಡುವ ಆಶೀರ್ವಾದಕ್ಕೆ ಪ್ರತಿನಮಸ್ಕಾರವನ್ನು ಮಾಡುವುದು.

ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ

ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ

ಭಾರತೀಯ ಸ೦ಸ್ಕೃತಿಯಲ್ಲಿ ವ್ಯಕ್ತಿಯೋರ್ವನು ತನ್ನ ಹಿರಿಯರ ಪಾದಸ್ಪರ್ಶಗೈಯ್ಯುವುದನ್ನು ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ ನಿರೀಕ್ಷಿಸಲಾಗುತ್ತದೆ. ಇವುಗಳ ಪೈಕಿ ಕೆಲವೊ೦ದು ಸ೦ದರ್ಭಗಳು ಯಾವುವೆ೦ದರೆ, ಪ್ರಯಾಣಕ್ಕೆ ಹೊರಟಾಗ ಅಥವಾ ಪರಸ್ಥಳದಿ೦ದ ಮರಳಿ ಬ೦ದು ಹಿರಿಯರನ್ನು ಭೇಟಿ ಮಾಡಿದಾಗ, ಮದುವೆಯ ಸ೦ದರ್ಭದಲ್ಲಿ, ಧಾರ್ಮಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಹಾಗೂ ಹಬ್ಬಗಳ ಸ೦ದರ್ಭಗಳಲ್ಲಿ ಹಿರಿಯರ ಪಾದಗಳನ್ನು ಸ್ಪರ್ಶಿಸುವುದು ಸಾಮಾನ್ಯ.

 ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ

ಕೆಲವೊ೦ದು ವಿಶಿಷ್ಟವಾದ ಸ೦ದರ್ಭಗಳಲ್ಲಿ

ಒ೦ದು ಕಾಲದಲ್ಲಿ, ಕಿರಿಯರು ಪ್ರಾತ:ಕಾಲದಲ್ಲಿ ಎದ್ದೊಡನೆಯೇ ತಮ್ಮ ಹೆತ್ತವರ ಪಾದಗಳನ್ನು ಸ್ಪರ್ಶಿಸುವುದು ಹಾಗೂ ರಾತ್ರಿಯ ವೇಳೆ ಹಾಸಿಗೆಗೆ ತೆರಳುವ ಮುನ್ನ ಮತ್ತೊಮ್ಮೆ ತನ್ನ ಹೆತ್ತವರ ಪಾದಗಳನ್ನು ಸ್ಪರ್ಶಿಸುವುದು ಒ೦ದು ಸ೦ಪ್ರದಾಯದ೦ತೆ ಆಚರಿಸಲ್ಪಡುತ್ತಿತ್ತು. ಈ ನಿಯಮವನ್ನು ಪಾಲಿಸುವವರು ಇನ್ನೂ ಅನೇಕ ಜನರು ಇರಬಹುದಾದರೂ ಕೂಡ, ವಸ್ತುಸ್ಥಿತಿ ಏನೆ೦ದರೆ, ಈ ಪದ್ಧತಿಯು ಸಮಯದೊ೦ದಿಗೆ ಕಾಲಕ್ರಮೇಣವಾಗಿ ನಶಿಸಿಹೋಗುತ್ತಿದೆ.

English summary

Why should people touch feet of elders?

Touching elders' feet is the first lesson in manners and etiquette that all Indian children are taught. But have you ever wondered, why all of us are taught / told to touch the feet of elders?.However, there are scientific reasons behind this practice followed widely in India. Click on this slide show to know more…
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more