For Quick Alerts
ALLOW NOTIFICATIONS  
For Daily Alerts

ಕೆಟ್ಟ ಗೆಳೆಯರನ್ನು ಗುರುತಿಸುವ ವಿಧಾನಗಳು

By Hemanth P
|

ಒಳ್ಳೆಯ ಗೆಳೆಯರನ್ನು ಹೊಂದಿರುವ ವ್ಯಕ್ತಿಗಳು ದೀರ್ಘಕಾಲ ಬದುಕುತ್ತಾರೆ, ಸಂತೋಷವಾಗಿರುತ್ತಾರೆ ಮತ್ತು ಸವಾಲುಗಳನ್ನು ಸುಲಭವಾಗಿ ಎದುರಿಸುತ್ತಾರೆ ಎಂದು ಇತ್ತೀಚೆಗೆ ಅಧ್ಯಯನವೊಂದು ಹೇಳಿದೆ. ಒಳ್ಳೆಯ ಗೆಳೆಯ ಮತ್ತು ಕೆಟ್ಟ ಗೆಳೆಯನ ಮಧ್ಯೆ ನಿಮಗೆ ಯಾವಾಗಲಾದರೂ ವ್ಯತ್ಯಾಸ ಕಂಡು ಬಂದಿದೆಯಾ? ಒಳ್ಳೆಯ ಗೆಳೆಯರು ಒತ್ತಡ ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿ, ಕಠಿಣ ಪರಿಸ್ಥಿತಿ ನಿಭಾಯಿಸಲು ನೆರವಾಗುತ್ತಾರೆ. ಆದರೆ ಕೆಟ್ಟ ಗೆಳೆಯರು ನಿಮ್ಮ ಜೀವನದಲ್ಲಿ ಗೊಂದಲವನ್ನುಂಟುಮಾಡಿ ಎಲ್ಲವನ್ನು ಅಲ್ಲೋಲಕಲ್ಲೋಲ ಮಾಡುತ್ತಾರೆ. ನೀವು ಒಳ್ಳೆಯ ಗೆಳೆಯನೆಂದು ಪರಿಗಣಿಸಿದ ವ್ಯಕ್ತಿ ನಿಮಗೆ ದ್ರೋಹ ಬಗೆಯಬಹುದು ಮತ್ತು ನೀವು ನಿರೀಕ್ಷಿಸಿದ್ದ ವೇಳೆ ತುಂಬಾ ನಿರಾಶೆಯುಂಟು ಮಾಡಬಲ್ಲ.

ಕೆಟ್ಟ ಗೆಳೆಯರು ಭಾವನಾತ್ಮಕ ಹಾಗೂ ಮಾನಸಿಕವಾಗಿ ನಿಮ್ಮ ಜೀವನವನ್ನು ಕಸಿಯಬಹುದು. ಅವರಿಂದು ದೂರ ಉಳಿಯುವುದು ಒಳ್ಳೆಯ ಮಾರ್ಗ. ಕೆಟ್ಟ ಗೆಳೆಯರನ್ನು ಗುರುತಿಸಲು ಸ್ವಲ್ಪ ಜಾಣ್ಮೆ ಪ್ರದರ್ಶಿಸಿ ಮತ್ತು ಮುಖ ನೋಡಿ ಯಾರನ್ನೂ ಸಂಪೂರ್ಣವಾಗಿ ನಂಬಬೇಡಿ. ಕೆಟ್ಟ ಗೆಳೆಯರ ಬಗ್ಗೆ ಇಲ್ಲಿ ಕೊಟ್ಟಿರುವ ಕೆಲವೊಂದು ಲಕ್ಷಣಗಳು ನೀವು ಅವರನ್ನು ಗುರುತಿಸಲು ಸಾಧ್ಯವಾಗಬಹುದು.

Ways to recognise a bad friend

ಅಧಿಕಾರ ಚಲಾವಣೆ ಅಥವಾ ದರ್ಪ
ಸ್ನೇಹಿತರು ಯಾವಾಗಲೂ ಪ್ರೀತಿ ಹಾಗೂ ಆಕರ್ಷಣೆ ಹಂಚಿಕೊಳ್ಳಬೇಕು. ಒಂದು ವೇಳೆ ನಿಮ್ಮ ಗೆಳೆಯ ಯಾವಾಗಲೂ ಅಧಿಕಾರ ಚಲಾಯಿಸುವುದು ಅಥವಾ ದರ್ಪ ಪ್ರದರ್ಶಿಸುತ್ತಿದ್ದರೆ ಇದು ಕೆಟ್ಟ ಸ್ನೇಹಿತನ ಲಕ್ಷಣ. ನಿಮ್ಮ ಗೆಳೆಯ ಯಾವಾಗಲೂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರೆ ಆಗ ಅಂತಹ ಕೆಟ್ಟ ಗೆಳೆಯನ ಸಂಗದಲ್ಲಿರುವುದು ಒಳ್ಳೆಯದಲ್ಲ.

ಮುಜುಗರ ಉಂಟುಮಾಡು
ನಿಮ್ಮ ಗೆಳೆಯ ಪ್ರತಿಯೊಂದು ಸನ್ನಿವೇಶದಲ್ಲಿ ನಿಮ್ಮನ್ನು ದೂಷಿಸಿ, ಪ್ರತಿಯೊಬ್ಬರ ಎದುರಿನಲ್ಲಿ ನಿಮ್ಮನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾನೆಯಾ? ಸ್ನೇಹವಿಲ್ಲದ ಚಹರೆಗಳನ್ನು ಗುರುತಿಸುವುದು ಕೆಟ್ಟ ಸ್ನೇಹಿತರನ್ನು ಪತ್ತೆಹಚ್ಚಲು ಒಳ್ಳೆಯ ವಿಧಾನ. ನಿಮ್ಮ ಗೆಳೆಯ ಯಾವಾಗಲೂ ನಿಮ್ಮನ್ನು ಕೀಳಾಗಿ, ಎಲ್ಲರ ಎದುರಲ್ಲಿ ನಿಮ್ಮನ್ನು ಕೆಳಮಟ್ಟದಲ್ಲಿ ತೋರಿಸಲು ಮತ್ತು ನೀವು ವಿಶ್ವಾಸ ಕಳಕೊಳ್ಳುವಂತೆ ಮಾಡುತ್ತಿದ್ದರೆ ಅದು ಕೆಟ್ಟ ಸ್ನೇಹಿತನ ಲಕ್ಷಣ.

ಯಾವಾಗಲೂ ವ್ಯಸ್ತವಾಗಿರುವುದು
ನೀವು ಯಾವಾಗಲೂ ನಿಮ್ಮ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೀರಾ? ನೀವು ಪರಸ್ಪರ ಭೇಟಿಯಾಗಲು ಅಥವಾ ನಿಮ್ಮ ಜೀವನದ ಬಗ್ಗೆ ಚರ್ಚಿಸಲು ಸಮಯ ಮಾಡಿಕೊಂಡಿದ್ದೀರಾ? ಸ್ನೇಹಿತ ಯಾವಾಗಲೂ ನೀವು ಮುಖ್ಯವೆಂದು ಭಾವಿಸಬೇಕು ಮತ್ತು ನಿಮಗೆ ಅಗತ್ಯವಿರುವಾಗ ಗಮನ ನೀಡಬೇಕು. ನಿಮ್ಮ ಗೆಳೆಯ ನಿಮ್ಮ ಸಂತೋಷ, ಸಮಸ್ಯೆ ಅಥವಾ ಅಭಿಪ್ರಾಯ ಮತ್ತು ನಿಮಗೋಸ್ಕರ ಸಮಯ ನೀಡಲು ಬಯಸದಿದ್ದರೆ ಅದು ಕೆಟ್ಟ ಸ್ನೇಹಿತನ ಲಕ್ಷಣ. ಇದು ಕೆಟ್ಟ ಸ್ನೇಹಿತನನ್ನು ಗುರುತಿಸುವ ವಿಧಾನ.

ಅವಕಾಶವಾದಿ ಸ್ನೇಹಿತನಿಂದ ದೂರವಿರಿ
ನಿಮ್ಮ ಸ್ನೇಹಿತ ಅವಕಾಶವಾದಿಯಾಗಿದ್ದರೆ ಮತ್ತು ಎಲ್ಲಾ ಸಮಯದಲ್ಲಿ ನಿಮ್ಮ ವಿಷಯದಲ್ಲಿ ಮೂಗು ತೂರಿಸುತ್ತಿದ್ದರೆ ಆಗ ಅದು ಕೆಟ್ಟ ಸ್ನೇಹಿತನ ಲಕ್ಷಣ. ಅವಕಾಶವಾದಿ ಸ್ನೇಹಿತರು ಯಾವಾಗಲೂ ಅವರ ಆಸೆ ಅಥವಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಸ್ನೇಹ ಮತ್ತು ಒಳ್ಳೆಯ ಗುಣದ ಲಾಭ ಪಡೆದುಕೊಳ್ಳುತ್ತಾರೆ. ನಿಮ್ಮ ಸಾಧನೆ ಬಗ್ಗೆ ಅವರು ನಿಮ್ಮ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಕೆಟ್ಟ ಸ್ನೇಹಿತನನ್ನು ಗುರುತಿಸುವ ಕೆಲವೊಂದು ಸಾಮಾನ್ಯ ಲಕ್ಷಣಗಳು.

ಅಸೂಯೆ
ಇತರರೊಂದಿಗೆ ನೀವು ಸ್ನೇಹ ಸಂಪಾದಿಸುವ ಬಗ್ಗೆ ನಿಮ್ಮ ಸ್ನೇಹಿತ ದ್ವೇಷಿಸುತ್ತಿದ್ದಾನೆಯಾ? ಇತರರೊಂದಿಗೆ ನೀವು ಬೆರೆಯುವುವಾಗ ಕೆಟ್ಟ ಗೆಳೆಯನಿಗೆ ಅಸೂಯೆಯಾಗುತ್ತದೆ. ಯಾಕೆಂದರೆ ನೀವು ಹೊಸ ಸ್ನೇಹಿತರನ್ನು ಸಂಪಾದಿಸುವುದು ಬೇಕಾಗುವುದಿಲ್ಲ. ಇದು ಕೆಟ್ಟ ಗೆಳೆಯನ ಗುರುತಿಸುವ ಒಳ್ಳೆಯ ವಿಧಾನ.

ಗಾಳಿಸುದ್ದಿ ಹರಡುವುದು
ನಿಜವಾದ ಗೆಳೆಯನು ನೀವು ಹೇಗಿದ್ದೀರೋ ಅದನ್ನು ಮೆಚ್ಚುತ್ತಾನೆ ಮತ್ತು ನಿಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾನೆ. ಆತ/ಆಕೆ ನೀವು ಇಲ್ಲದಿರುವಾಗ ಕೂಡ ನಿಮ್ಮ ಬಗ್ಗೆ ಒಳ್ಳೆಯ ಸತ್ಯಾಸತ್ಯತೆಯನ್ನು ನಿರ್ವಹಿಸುತ್ತಾರೆ ಮತ್ತು ನಿಮ್ಮ ಬೆನ್ನ ಹಿಂದೆ ಕೆಟ್ಟದಾಗಿ ಮಾತನಾಡಲ್ಲ. ಇದು ಕೆಟ್ಟ ಗೆಳೆಯನನ್ನು ಗುರುತಿಸುವ ಸಾಮಾನ್ಯ ಲಕ್ಷಣ.

ಹಾನಿ ಉಂಟುಮಾಡುವ ಮತ್ತು ಕೆಟ್ಟದಾಗಿ ಮಾತನಾಡುವ ಗೆಳೆಯನನ್ನು ಹೊಂದಲು ಯಾರೂ ಬಯಸುವುದಿಲ್ಲ. ನಮ್ಮ ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಗೆಳೆಯರಿರುತ್ತಾರೆ. ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದನ್ನು ಮಾಡುವಂತಹ ವ್ಯಕ್ತಿಗಳಿಂದ ದೂರು ಇರುವುದೇ ಒಳ್ಳೆಯದು.

English summary

Ways to recognise a bad friend

According to recent studies it is found that people who have good friends live longer, are happier and find it easier to face challenges.
X
Desktop Bottom Promotion