For Quick Alerts
ALLOW NOTIFICATIONS  
For Daily Alerts

ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಂದ ಕಲಿಯಬೇಕಾದ ಅಂಶಗಳಿವು

By Super
|

ಶಿಕ್ಷಕರು ನಿಮ್ಮನ್ನು ತಿದ್ದಿ ತೀಡಿ ನೀವು ಬಯಸಿದಂತಹ ವ್ಯಕ್ತಿಯನ್ನಾಗಿ ರೂಪಿಸುತ್ತಾರೆ. ನಿಮ್ಮ ಕುಟುಂಬದವರನ್ನು ಹೊರತುಪಡಿಸಿ ಶಿಕ್ಷಕರು ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ವ್ಯಕ್ತಿಯಾಗಿರುತ್ತಾರೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬದುಕಲು ಶಿಕ್ಷಕರು ನೆರವು ನೀಡುತ್ತಾರೆ. ಒಳ್ಳೆಯ ಶಿಕ್ಷಕ ನಿಮ್ಮನ್ನು ರೂಪಿಸಿದರೆ, ಕೆಟ್ಟ ಶಿಕ್ಷಕರು ನಿಮ್ಮ ಭವಿಷ್ಯವನ್ನೇ ಹಾಳು ಮಾಡಬಹುದು. ಎಲ್ಲಾ ವಿದ್ಯಾರ್ಥಿಗಳಿಗೆ ತಾನು ಇಷ್ಟಪಟ್ಟ ಶಿಕ್ಷಕನಿರುವಂತೆ ದ್ವೇಷಿಸುವ ಶಿಕ್ಷಕರೂ ಇರುತ್ತಾರೆ. ಆದರೆ ಮೆಚ್ಚಿನ ಶಿಕ್ಷಕರೆಂದರೆ ಅದರ ವಿಶೇಷತೆಯೇ ಬೇರೆ.

ಮಾದರಿ ವ್ಯಕ್ತಿ, ಆಪ್ತ ಮಾರ್ಗದರ್ಶಿ ಮತ್ತು ಸ್ನೇಹಿತ ಎಲ್ಲರೂ ಒಬ್ಬನೇ ವ್ಯಕ್ತಿಯಲ್ಲಿದ್ದಂತೆ. ಮೆಚ್ಚಿನ ಶಿಕ್ಷಕನ ಬಗ್ಗೆ ನೀವು ಜೀವಮಾನವಿಡಿ ನೆನಪಿನಲ್ಲಿಟ್ಟುಕೊಳ್ಳುತ್ತೀರಿ. ಆಕೆ ಅಥವಾ ಆತ ನಿಮ್ಮ ಜೀವನದಲ್ಲಿನ ಕೆಲವೊಂದು ಮಹತ್ವದ ನಿರ್ಧಾರಗಳ ಮೇಲೆ ಪರಿಣಾಮ ಬೀರಿರಬಹುದು. ಮೆಚ್ಚಿನ ಶಿಕ್ಷಕರು ನಿಮ್ಮ ಜೀವನದ ದಾರಿ ಮತ್ತು ಸತ್ಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತಾರೆ. ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ಅವರು ನಿಮಗೆ ನೆರವಾಗುತ್ತಾರೆ. ನಿಮ್ಮ ಮೆಚ್ಚಿನ ಶಿಕ್ಷಕರ ಬಗ್ಗೆ ತಿಳಿದುಕೊಳ್ಳಬೇಕಾದ ಮಹತ್ವದ ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಿ.

ಶಿಕ್ಷಕರ ದಿನಕ್ಕೆ ನಿಮ್ಮ ತರಗತಿಯನ್ನು ಅಲಂಕರಿಸುವುದು ಹೇಗೆ?

ಗುಪ್ತ ಪ್ರತಿಭೆ

ಗುಪ್ತ ಪ್ರತಿಭೆ

ನಿಮ್ಮಲ್ಲಿ ಅಡಗಿರುವ ಗುಪ್ತ ಪ್ರತಿಭೆಯನ್ನು ಗುರುತಿಸುವ ಶಿಕ್ಷಕರು ಅದನ್ನು ಹೊರತೆಗೆದು ಜಗತ್ತಿಗೆ ಪರಿಚಯಿಸುತ್ತಾರೆ.

ನಿಮ್ಮನ್ನು ವ್ಯಕ್ತಪಡಿಸಿ

ನಿಮ್ಮನ್ನು ವ್ಯಕ್ತಪಡಿಸಿ

ನಿಮ್ಮನ್ನು ವ್ಯಕ್ತಪಡಿಸಲು ನಿಮ್ಮ ಮೆಚ್ಚಿನ ಶಿಕ್ಷಕರು ಅವಕಾಶ ನೀಡುತ್ತಾರೆ. ನೀವು ತಮಾಷೆ ಅಥವಾ ನಗುತ್ತಾರೆಂಬ ಭೀತಿಯಿಲ್ಲದೆ ಮುಕ್ತವಾಗಿ ಚಿಂತಿಸಲು ಮತ್ತು ಮಾತನಾಡಲು ಅವರು ಪ್ರೋತ್ಸಾಹ ನೀಡುತ್ತಾರೆ.

ಕಲಿಯುವುದು ಮನೋರಂಜನೆ

ಕಲಿಯುವುದು ಮನೋರಂಜನೆ

ನಿಮ್ಮ ಮೆಚ್ಚಿನ ಶಿಕ್ಷಕರು ಕಲಿಯುವುದನ್ನು ಅಷ್ಟು ಕಠಿಣವೆನ್ನುವುದನ್ನು ತೋರಿಸಿಕೊಡಲ್ಲ. ಅವರು ಕಲಿಯುವುದು ಮನೋರಂಜನೆ ಎಂದು ಕಲಿಸುತ್ತಾರೆ.

ಅಭಿಪ್ರಾಯ ಮಂಡಿಸುವುದು

ಅಭಿಪ್ರಾಯ ಮಂಡಿಸುವುದು

ನಿಮ್ಮ ಮೆಚ್ಚಿನ ಶಿಕ್ಷಕರು ನಿಮ್ಮ ಜೀವನದಲ್ಲಿ ಸರಿಯಾದ ಅಭಿಪ್ರಾಯ ಮಂಡಿಸಲು ನೆರವಾಗುತ್ತಾರೆ. ನಿಮಗೆ ಯಾರೋ ಹೇಳಿದ್ದನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಬದಲು ಸರಿಯಾಗಿ ಯೋಚಿಸುವಂತೆ ಮಾಡುತ್ತಾರೆ.

ಮಾತನಾಡಿ

ಮಾತನಾಡಿ

ಇತರ ಹಿರಿಯ ವ್ಯಕ್ತಿಗಳಂತೆ ನಿಮ್ಮ ಮೆಚ್ಚಿನ ಶಿಕ್ಷಕರು ಮಕ್ಕಳು ನೋಡುತ್ತಲೇ ಇರುತ್ತಾರೆ ಮತ್ತು ಕೇಳುವುದಿಲ್ಲ ಎಂದು ಯಾವತ್ತೂ ಹೇಳಲ್ಲ. ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವರು ಬೆಂಬಲಿಸುತ್ತಾರೆ.

ಯಾವುದೇ ಪೂರ್ವಗ್ರಹವಿಲ್ಲ

ಯಾವುದೇ ಪೂರ್ವಗ್ರಹವಿಲ್ಲ

ಯಾವುದೇ ಬಾಹ್ಯ ವಿಷಯ ಮತ್ತು ವೈಯಕ್ತಿಕ ದ್ವೇಷದಿಂದ ಪೂರ್ವಗ್ರಹಪೀಡಿತರಾಗಬೇಡಿ ಎಂದು ನಿಮ್ಮ ಮೆಚ್ಚಿನ ಶಿಕ್ಷಕರು ಕಲಿಸುತ್ತಾರೆ.

ಸೋಲು ಒಳ್ಳೆಯದು

ಸೋಲು ಒಳ್ಳೆಯದು

ನಿಮ್ಮ ಮೆಚ್ಚಿನ ಶಿಕ್ಷಕರು ನಿಮ್ಮನ್ನು ಗೆಲುವಿನಲ್ಲಿ ಬೆನ್ನುತಟ್ಟುವುದು ಮಾತ್ರವಲ್ಲದೆ, ಸೋಲಿನ ಸಮಯದಲ್ಲೂ ಬೆಂಬಲಿಸುತ್ತಾರೆ. ಈ ಪಾಠವು ನಿಮ್ಮ ಜೀವನಪೂರ್ತಿ ನೆರವಾಗುತ್ತದೆ.

ಜೀವನದ ಪಾಠ

ಜೀವನದ ಪಾಠ

ಜೀವನದಲ್ಲಿ ಬರಬಹುದಾದ ಕಷ್ಟ ಮತ್ತು ಯಶಸ್ಸಿಗೆ ನಿಮ್ಮ ಮೆಚ್ಚಿನ ಶಿಕ್ಷಕರು ನಿಮ್ಮನ್ನು ಸಜ್ಜುಗೊಳಿಸುತ್ತಾರೆ. ಅವರಿಂದಾಗಿ ನೀವು ಜೀವನಕ್ಕೆ ಏನು ಕೊಡುಗೆ ನೀಡಬಹುದೆಂದು ಕಲಿಯಬಹುದು. ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಿ ಎಂದು ಅವರು ಯಾವಾಗಲೂ ನಿಮ್ಮ ಯೋಚನಾ ಶಕ್ತಿಗೆ ಹೇಳುತ್ತಿರುತ್ತಾರೆ.

ಸಮಾನರು

ಸಮಾನರು

ವಯಸ್ಸಿನ ಕಾರಣದಿಂದಾಗಿ ನಿಮ್ಮನ್ನು ಕೆಳಗಿನ ಮಟ್ಟದವರೆಂದು ಭಾವಿಸುವುದಿಲ್ಲ. ಇತರ ಹಿರಿಯರೊಂದಿಗೆ ಮಾತನಾಡುವಂತೆ ನೀವು ಯಾವಾಗಲೂ ಸಣ್ಣವರೆಂಬ ಭಾವನೆ ನಿಮ್ಮಲ್ಲಿ ಮೂಡುವುದಿಲ್ಲ. ಅವರು ನಿರ್ದೇಶನ ನೀಡುವ ಬದಲು ನಿಮ್ಮ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಮಾತನಾಡುತ್ತಾರೆ.

ಕಠಿಣ ಪರಿಶ್ರಮ

ಕಠಿಣ ಪರಿಶ್ರಮ

ಕಠಿಣ ಪರಿಶ್ರಮದ ಮಹತ್ವ ಮತ್ತು ಮೋಸದ ದುಷ್ಪರಿಣಾಮಗಳ ಬಗ್ಗೆ ನಿಮ್ಮ ಮೆಚ್ಚಿನ ಶಿಕ್ಷಕರು ಕಲಿಸುತ್ತಾರೆ. ದಿನದ ಅಂತ್ಯದಲ್ಲಿ ಕಠಿಣ ಪರಿಶ್ರಮದ ಫಲವು ತುಂಬಾ ಹಿತವಾಗಿರುತ್ತದೆ ಎಂದು ನಿಮಗನಿಸುತ್ತದೆ.

ಸ್ನೇಹ ಮಾಡಿ

ಸ್ನೇಹ ಮಾಡಿ

ಸ್ನೇಹ ಹೇಗೆ ಮಾಡುವುದು ಮತ್ತು ಅದನ್ನು ಉಳಿಸಿಕೊಳ್ಳುವುದು ಹೇಗೆ ಎಂದು ನಿಮ್ಮ ಮೆಚ್ಚಿನ ಶಿಕ್ಷಕರು ಕಲಿಸುತ್ತಾರೆ. ಸ್ನೇಹದ ಮೌಲ್ಯ ಮತ್ತು ಮಹತ್ವವನ್ನು ನೀವು ಕಲಿತುಕೊಳ್ಳುತ್ತೀರಿ.

English summary

Things You Learned From Your Favourite Teacher

Teachers mold you into the person you are supposed to be. Other than your family, teachers are the most prominent and important adults in your life. So let us look at the 15 things that you learn from your favourite teacher.
X
Desktop Bottom Promotion