For Quick Alerts
ALLOW NOTIFICATIONS  
For Daily Alerts

ಶಿಕ್ಷಕರ ದಿನಕ್ಕೆ ನಿಮ್ಮ ತರಗತಿಯನ್ನು ಅಲಂಕರಿಸುವುದು ಹೇಗೆ?

By Staff
|

ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಕಲಾಗುತ್ತದೆ. ಈ ವರ್ಷ 2019ರಲ್ಲಿ ನಾಳೆ (ಬುಧವಾರ) ಎಲ್ಲಾ ಶಾಲೆಗಳಲ್ಲು ಸಂಭ್ರಮದ ಶಿಕ್ಷಕರ ದಿನಾಚರಣೆಯನ್ನು ಮಕ್ಕಳು ಆಚರಿಸುತ್ತಾರೆ. ಶಿಕ್ಷಕರ ದಿನವು ಯಾವಾಗಲೂ ವಿದ್ಯಾರ್ಥಿಗಳಿಗೆ ವಿಶೇಷ ಸಂಭ್ರಮವನ್ನುಂಟು ಮಾಡುವ ದಿನ. ಎಲ್ಲಾ ವಿದ್ಯಾರ್ಥಿಗಳು ತುಂಬಾ ಸಂಭ್ರಮ ಹಾಗೂ ಉತ್ಸಾಹದಿಂದ ಆಚರಿಸಲು ಕಾತರದಿಂದ ಇರುತ್ತಾರೆ. ಪ್ರತಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಾಲೆಯ ಕೊಠಡಿಯನ್ನು ಶೃಂಗರಿಸುವುದನ್ನು ಕಾಣಬಹುದು. ತಮ್ಮ ನೆಚ್ಚಿನ ಶಿಕ್ಷಕರಿಗೆ ಏನಾದರೂ ಉಡುಗೊರೆ ಕೊಡಲು ವಿದ್ಯಾರ್ಥಿಗಳು ಶಾಪಿಂಗ್ ಮಾಡುತ್ತಾರೆ. ಶಿಕ್ಷಕರ ದಿನಾಚರಣೆಯ ಬಗ್ಗೆ ಒಂದು ಜನಪ್ರಿಯ ನುಡಿಯಿದೆ.

ಅದೇನೆಂದರೆ, 'ಶಿಕ್ಷಕರ ದಿನ ಶಿಕ್ಷಕರ ಹುಟ್ಟುಹಬ್ಬ'. ಇದು ಯಾಕೆಂದರೆ ಈ ದಿನದಂದು ಶಿಕ್ಷಕರು ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾರೆ. ಎಲ್ಲಾ ತಯಾರಿಗಳನ್ನು ಅವರನ್ನು ಗೌರವಿಸಲು ಮಾಡಲಾಗುತ್ತದೆ. ಇದರಿಂದ ಶಿಕ್ಷಕರ ದಿನವು ಶಿಕ್ಷಕರು ಅದೇ ರೀತಿ ವಿದ್ಯಾರ್ಥಿಗಳಿಗೂ ವಿಶೇಷವಾಗಿದೆ. ವಿಶೇಷ ದಿನವು ಇನ್ನೇನೂ ಬರುತ್ತಿರುವಂತೆ ನೀವು ನಿಮ್ಮ ಕ್ಲಾಸ್ ರೂಂನ್ನು ಶೃಂಗರಿಸಬೇಕಾಗಿದೆ.

ಶಿಕ್ಷಕರ ದಿನದಂದು ಶಾಲೆಯ ಕೊಠಡಿ ಶೃಂಗರಿಸಲು ಹಲವಾರು ಐಡಿಯಾಗಳಿವೆ. ನೀವು ಬಜೆಟ್ ಬಗ್ಗೆ ಯೋಚಿಸುತ್ತಿದ್ದರೆ ಯಾವುದೇ ಚಿಂತೆ ಬೇಡ. ಯಾಕೆಂದರೆ ಬೋಲ್ಡ್‌ ಸ್ಕೈ ಬಜೆಟ್‌ನೊಳಗೆ ಶಾಲೆಯ ಕೊಠಡಿ ಶೃಂಗರಿಸಲು ನೆರವಾಗಲಿದೆ. ಈ ಐಡಿಯಾಗಳು ತುಂಬಾ ಸರಳ ಮತ್ತು ಸಮಯವನ್ನು ಉಳಿಸುತ್ತದೆ. ಏನಾದರೂ ಕ್ಲಿಷ್ಟಕರವಾಗಿರುವುದನ್ನು ಮಾಡುವ ಬದಲು ಈ ಸರಳ ಐಡಿಯಾಗಳನ್ನು ಬಳಸಿಕೊಂಡು ನಿಮ್ಮ ಕ್ಲಾಸ್ ರೂಂನ್ನು ಶೃಂಗರಿಸಿ.

ನಿಮ್ಮ ಶಾಲೆಯ ಕೊಠಡಿಯನ್ನು ಶೃಂಗರಿಸಲು ಬೇಕಾಗಿರುವುದೆಂದರೆ ಸ್ಟ್ರೀಮರ್, ಪೇಪರ್ ರಿಬ್ಬನ್ ಮತ್ತು ಬಣ್ಣದ ಚಾಕ್ ಬೇಕಾಗುತ್ತದೆ. ಶಿಕ್ಷಕರ ದಿನದಂದು ನಿಮ್ಮ ಶಾಲೆಯ ಕೊಠಡಿಯನ್ನು ಶೃಂಗರಿಸಲು ಬೇಕಾಗಿರುವ ಕೆಲವೊಂದು ಸರಳ ಸಾಮಗ್ರಿಗಳನ್ನು ಇಲ್ಲಿ ನೀಡಲಾಗಿದೆ.

ಇತಿಹಾಸದಲ್ಲಿ ನಾವು ಕಾಣುವ ಪ್ರಸಿದ್ಧ ಶಿಕ್ಷಕರು

ಬಲೂನ್

ಬಲೂನ್

ಬಣ್ಣ ಬಣ್ಣದ ಬಲೂನ್‌ಗಳನ್ನು ಶಾಲೆಯ ಕೊಠಡಿ ಅನ್ನು ಶೃಂಗರಿಸಲು ಬಳಸಬಹುದು. ಇದನ್ನು ನೆಲದ ಮೇಲೆ ಹರಡಬಹುದು ಅಥವಾ ಗೋಡೆಗಳಿಗೆ ಹಚ್ಚಬಹುದು.

ಗೋಲ್ಡನ್ ಬಾಲ್

ಗೋಲ್ಡನ್ ಬಾಲ್

ಶಿಕ್ಷಕರ ಟೇಬಲ್‌ನ್ನು ಶೃಂಗರಿಸಲು ಕ್ರಿಸ್ಮಸ್‌ಗೆ ಬಳಸುವ ಗೋಲ್ಡನ್ ಬಾಲ್‌ನ್ನು ಬಳಸಬಹುದು. ಗೋಲ್ಡನ್ ಚೈನ್‌ನಂತಹ ದಾರಗಳನ್ನು ಕೂಡ ಟೇಬಲ್ ಶೃಂಗರಿಸಲು ಬಳಸಬಹುದು.

ನೀವು ಬಯಸಿದರೆ ಕೇಕ್

ನೀವು ಬಯಸಿದರೆ ಕೇಕ್

ಶಿಕ್ಷಕರ ಟೇಬಲ್‌ನ್ನು ನೀವು ಕೇಕ್ ಮೂಲಕ ಶೃಂಗರಿಸಬಹುದು. ಬಲೂನ್ ಮತ್ತು ಕ್ಯಾಂಡಲ್‌ಗಳ ದೀಪದಿಂದ ಇದರ ಸುತ್ತ ಅಲಂಕಾರ ಮಾಡಬಹುದು. ನಿಮ್ಮ ಕ್ಲಾಸ್ ಟೀಚರ್‌ಗೆ ಸಪ್ರೈಸ್ ನೀಡಿ.

ಬಣ್ಣಬಣ್ಣದ ಚಾಕ್

ಬಣ್ಣಬಣ್ಣದ ಚಾಕ್

ಬಣ್ಣಬಣ್ಣದ ಚಾಕ್‌ಗಳು ತುಂಬಾ ಹೊಳೆಯುತ್ತದೆ ಮತ್ತು ಇದರಿಂದ ಶಾಲಾ ಕೊಠಡಿಯ ಕಪ್ಪು ಹಲಗೆಯನ್ನು ಅಲಂಕರಿಸಬಹುದು.

ಉಡುಗೊರೆ

ಉಡುಗೊರೆ

ಬಣ್ಣದ ಕಾಗದಿಂದ ಸುತ್ತಿರುವ ಉಡುಗೊರೆಯಿಂದ ಶಾಲೆಯ ಕೊಠಡಿಯನ್ನು ಅಲಂಕರಿಸುವುದು ತುಂಬಾ ಸುಂದರವಾಗಿ ಕಾಣುತ್ತದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ ಖಾಲಿ ಬಾಕ್ಸ್‌ಗಳನ್ನು ಸುತ್ತಿ ಕಟ್ಟಿ.

ಕ್ಯಾಂಡೀಸ್

ಕ್ಯಾಂಡೀಸ್

ಈ ಸಾಮಗ್ರಿಯನ್ನು ಬಳಸಿಕೊಂಡು ಮಕ್ಕಳು ತಮ್ಮ ಶಿಕ್ಷಕರೊಂದಿಗಿನ ಸಮಯವನ್ನು ಆನಂದಿಸಬಹುದು. ಶಾಲಾ ಕೊಠಡಿಯ ವಿವಿಧ ಬಣ್ಣ, ಗಾತ್ರದ ಕ್ಯಾಂಡಿ ಮತ್ತು ಲಾಲಿಪಾಪ್‌ಗಳಿಂದ ಅಲಂಕರಿಸಿ.

ಪೇಪರ್ ರಿಬ್ಬನ್

ಪೇಪರ್ ರಿಬ್ಬನ್

ಶಿಕ್ಷಕರ ದಿನಾಚರಣೆಗೆ ಅಲಂಕಾರಕ್ಕೆ ಸಾಮಾನ್ಯವಾಗಿ ಬಳಸುವ ಸಾಮಗ್ರಿಯೆಂದರೆ ಅದು ಪೇಪರ್ ರಿಬ್ಬನ್. ಗೋಡೆಗಳು ಮತ್ತು ಕಪ್ಪುಹಲಗೆಯ ಬದಿಗಳನ್ನು ಪೇಪರ್ ರಿಬ್ಬನ್‌ನಿಂದ ಶೃಂಗರಿಸಿ.

ಡ್ರಾಯಿಂಗ್

ಡ್ರಾಯಿಂಗ್

ಸಣ್ಣ ಮಕ್ಕಳು ಕಪ್ಪು ಹಲಗೆ ಅಥವಾ ಶಾಲಾ ಕೊಠಡಿಯ ಪ್ರವೇಶ ದ್ವಾರದಲ್ಲಿ ಚಿತ್ರ ಬಿಡಿಸಬಹುದು. ಪ್ರಾಣಿಗಳು ಅಥವಾ ಹೂಗಳ ಬಣ್ಣಬಣ್ಣದ ಡ್ರಾಯಿಂಗ್ ಮಾಡಿ.

ಸ್ಟ್ರೀಮರ್ ಮತ್ತು ಬಣ್ಣದ ಕಾಗದ

ಸ್ಟ್ರೀಮರ್ ಮತ್ತು ಬಣ್ಣದ ಕಾಗದ

ಬಣ್ಣಬಣ್ಣದ ಸ್ಟ್ರೀಮರ್ ಮತ್ತು ಬಣ್ಣದ ಕಾಗದವನ್ನು ಶಿಕ್ಷಕರ ದಿನಾಚರಣೆಗೆ ಶಾಲೆಯ ಕೊಠಡಿ ಅಲಂಕರಿಸಲು ಬಳಸಬಹುದು.

ಪ್ರಾಚೀನ ಕಲಾಕೃತಿಗಳು

ಪ್ರಾಚೀನ ಕಲಾಕೃತಿಗಳು

ಒಂದು ದಿನಕ್ಕಾಗಿ ಪ್ರಾಚೀನ ಕಲಾಕೃತಿಗಳನ್ನು ನಿಮ್ಮ ತಾಯಿಯಿಂದ ಪಡೆದುಕೊಂಡು ಶಿಕ್ಷಕರ ದಿನದಂದು ಶಾಲೆಯ ಕೊಠಡಿ ಶೃಂಗರಿಸಿ.

ವಾಲ್ ಹ್ಯಾಂಗಿಂಗ್

ವಾಲ್ ಹ್ಯಾಂಗಿಂಗ್

ಮೇಲ್ಭಾವಣಿಗಳನ್ನು ವಿವಿಧ ರೀತಿಯ ವಾಲ್ ಹ್ಯಾಂಗಿಂಗ್ ಮೂಲಕ ಅಲಂಕರಿಸಬಹುದು. ಇದು ಮತ್ತಷ್ಟು ಮೆರಗು ನೀಡಿ ಶಾಲೆಯ ಕೊಠಡಿ ವಿಶೇಷವಾಗಿ ಕಾಣುವಂತೆ ಮಾಡುತ್ತದೆ.

ಹೂಗಳು

ಹೂಗಳು

ಶಾಲೆಯ ಕೊಠಡಿಯಲ್ಲಿ ಕೆಲವು ತಾಜಾ ಹೂಗಳನ್ನಿಡಿ. ಇದು ಕೊಠಡಿಯನ್ನು ವಿಶೇಷವಾಗಿ ಕಾಣುವಂತೆ ಮಾಡುತ್ತದೆ.

English summary

Decorate Classroom For Teacher's Day

Teacher's Day is always a special occasion for the students. They are all excited and energetic to celebrate it with great vigour and fun. In every school and college, you will find the classrooms getting decorated. Thus Teacher's Day is special for both the teachers as well as the students. As the special day is around the corner,
X
Desktop Bottom Promotion