For Quick Alerts
ALLOW NOTIFICATIONS  
For Daily Alerts

ಹನ್ನೆರಡು ರಾಶಿಚಕ್ರಗಳ ದಿನಾಂಕ, ಗುಣ, ಹೊಂದಾಣಿಕೆ, ವ್ಯಕ್ತಿತ್ವ ಸೇರಿದಂತೆ ತಿಳಿದಿರಲೇಬೇಕಾದ ಪ್ರಾಥಮಿಕ ಮಾಹಿತಿ ಇಲ್ಲಿದೆ

|

ಜ್ಯೋತಿಶಾಸ್ತ್ರದ ಪ್ರಕಾರ ಒಟ್ಟು 12 ರಾಶಿಚಕ್ರಗಳಿವೆ, ನಮ್ಮ ಹುಟ್ಟಿದ ಸಮಯವನ್ನು ಆಧರಿಸಿ ನಮ್ಮ ರಾಶಿ ಯಾವುದು ಎಂಬುದನ್ನು ನಿರ್ಣಯಿಸಲಾಗುತ್ತದೆ. ಅಗ್ನಿ, ನೀರು, ಭೂಮಿ ಹಾಗೂ ವಾಯು ಎಂಬ 4 ಅಂಶಗಳ ಒಳಗೆ ಬರುವ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಈ 12 ರಾಶಿಚಕ್ರಗಳು ಒಂದಕ್ಕಿಂತ ಒಂದು ಭಿನ್ನತೆಯನ್ನು ಹೊಂದಿಗೆ ಅಂತೆಯೇ ಕೆಲವು ಕೆಲವಾರು ವಿಚಾರಗಳಲ್ಲಿ ಸಾಮ್ಯತೆಯನ್ನು ಸಹ ಹೊಂದಿದೆ.

Dina Bhavishya

ಪ್ರತಿಯೊಂದು ರಾಶಿಚಕ್ರವನ್ನು ಆಧರಿಸಿ ಅವರ ವರ್ತನೆ, ಗುಣಾವಗುಣಗಳು, ಅವರಿಗೆ ಹೊಂದಾಣಿಕೆ ಆಗಬಲ್ಲ, ಹೊಂದಾಣಿಕೆಯೇ ಆಗದ ರಾಶಿಗಳು ಯಾವುವು, ಇವರ ಕೌಟುಂಬಿಕ, ಪ್ರೀತಿಯ, ಲೈಂಗಿಕ ಹಾಗೂ ಆರ್ಥಿಕ ವಿಚಾರಗಳನ್ನು ಹೇಗೆ ನಿಭಾಯಸುತ್ತಾರೆ ಎಂಬುದು ಸೇರಿದಂತೆ ಸಾಕಷ್ಟು ಮಾಹಿತಿಯನ್ನು ತಿಳಿಯಬಹುದಾಗಿದೆ. ಅಲ್ಲದೇ ಪ್ರತಿ ರಾಶಿಚಕ್ರದ ಬಗ್ಗೆ ಹಾಗೂ ತಮ್ಮ ರಾಶಿಯಬಗ್ಗೆ ತಿಳಿಯಬೇಕಾದ ಹಲವು ವಿಚಾರಗಳಿವೆ. ಇಂದು ನಾವು ನಿಮಗೆ 12 ರಾಶಿಚಕ್ರದ ಬಗ್ಗೆ ಸವಿವರವಾದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ:

ಮೇಷ ರಾಶಿ

ಮೇಷ ರಾಶಿ

ಅರ್ಥಗರ್ಭಿತ ವರ್ತನೆ, ಇತರರ ಬಗ್ಗೆ ಸಹಾನೂಭೂತಿ, ಸೌಮಯ ಸ್ವಭಾವದಂತ ಉತ್ತಮಗುಣಗಳುಳ್ಳ ಮೇಷ ರಾಶಿಯವರು ಎಲ್ಲರನ್ನೂ ಅತಿಯಾಗಿ ನಂಬುತ್ತಾರೆ, ವಾಸ್ತವದಿಂದ ತಪ್ಪಿಸಿಕೊಳ್ಳಲು ಬಯಸುವುದೇ ಇವರ ದೌರ್ಬಲ್ಯವಾಗಿದೆ. ಏಕಾಂಗಿಯಾಗಿರಲು ಇಷ್ಟಪಡುವ ಇವರಿಗೆ ನಿದ್ರೆ, ಸಂಗೀತ, ಪ್ರಣಯ, ಈಜು, ಆಧ್ಯಾತ್ಮಿಕ ವಿಷಯಗಳು ಎಂದರೆ ಬಹಳ ಇಷ್ವವಂತೆ. ಇವರನ್ನು ಯಾರಾದರೂ ಟೀಕೆಗೆ ಗುರಿಮಾಡಿದರೆ ಅಥವಾ ಯಾವುದೇ ರೀತಿಯ ಕ್ರೌರ್ಯವನ್ನು ಇವರು ಕಿಂಚಿತ್‌ ಇಷ್ಟಪಡುವುದಿಲ್ಲ.

ಮೇಷ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ:

ಮೇಷ ರಾಶಿಯ ಬಗ್ಗೆ ಇನ್ನು ಸುದೀರ್ಘ ವಿಚಾರವನ್ನು ತಿಳಿಯನ್ನು ಈ ಲಿಂಕ್‌ ಕ್ಲಿಕ್‌ ಮಾಡಿ.

ಮೇಷ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ

ವೃಷಭ ರಾಶಿ

ವೃಷಭ ರಾಶಿ

12 ರಾಶಿಚಕ್ರದಲ್ಲಿ ದ್ವಿತೀಯವಾಗಿ ಬರುವ ಹಾಗೂ ಭೂಮಿ ಅಂಶದ ಮೊದಲ ರಾಶಿ ವೃಷಭ ರಾಶಿಯು ಸ್ಥಿರವಾದ ಗುಣವನ್ನು ಹೊಂದಿದೆ. ತುಂಬಾ ಪ್ರಾಯೋಗಿಕವಾಗಿ ಯೋಚನೆ ಮಾಡುವ ವೃಷಭ ರಾಶಿಯವರು ವಿಸ್ವಾಸಾರ್ಹತೆ, ತಾಳ್ಮೆ, ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸುವುದರಲ್ಲಿ ನಿಸ್ಸೀಮರು. ಹಠಮಾರಿ ಗುಣದ, ಯಾವುದರಲ್ಲೂ ರಾಜಿಯಾಗಲು ಇಷ್ಟಪಡದ ವೃಷಭರು ತೋಗಾರಿಕೆ, ಅಡುಗೆ ಕೆಲಸ, ಸಂಗೀತ, ಕರಕುಶಲ ಕಲೆಗಳನ್ನು ಬಹಳ ಇಷ್ಟಪಡುತ್ತಾರೆ. ಅಭದ್ರತೆಯನ್ನು ಇಚ್ಚಿಸದ ಇವರಿಗೆ ಯಾವುದೇ ರೀತಿಯ ತೊಡಕುಗಳು, ಇದ್ದಕ್ಕಿಂದ್ದಂತೆ ಆಗುವ ಬದಲಾವಣೆಗಳೆಂದರೆ ಆಗುವುದೇ ಇಲ್ಲ.

ವೃಷಭ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ವೃಷಭ ರಾಶಿಯ ಬಗ್ಗೆ ಇನ್ನೂ ಸಾಕಷ್ಟು ವಿಚಾರವನ್ನು/ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ.

ವೃಷಭ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ

ಮಿಥುನ ರಾಶಿ

ಮಿಥುನ ರಾಶಿ

ಎಲ್ಲ ವಿಷಯದ ಮೇಲೂ ಕುತೂಹಲ ಹೊಂದಿರುವ, ಹೊಂದಿಕೊಳ್ಳ ಸ್ವಭಾವದ ಮತ್ತು ತ್ವರಿತವಾಗಿ ಕಲಿಯುವ ಮಿಥುನ ರಾಶಿಯು 12 ಮೂರನೇ ಹಾಗೂ ಮೊದಲನೇ ವಾಯು ಅಂಶದ ರಾಶಿಯಾಗಿದೆ. ಸ್ನೇಹಿತರೊಂದಿಗೆ ಮಾತುಕತೆ, ಪ್ರವಾಸವನ್ನು ಇಷ್ಟಪಡುವ ಮಿಥುನ ರಾಶಿಯವರು, ಒಬ್ಬಂಟಿಯಾಗಿರುವುದು, ಸೀಮಿತವಾಗುವುದು, ಪುನರಾವರ್ತನೆ ಮತ್ತು ಒಂದೇ ತೆರನಾದ ದಿನಚರಿಯನ್ನು ಇಷ್ಟಪಡುವುದಿಲ್ಲ.

ಮಿಥುನ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ಮಿಥುನ ರಾಶಿಯ ಬಗ್ಗೆ ಇಂಥಾ ಇನ್ನೂ ಸಾಕಷ್ಟು ಆಸಕ್ತಿಕರ ವಿಷಯಗಳು ಹಾಗೂ ತಿಳಿಯಲೇಬೇಕಾದ ಅಂಶಗಳನ್ನುತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಮಿಥುನ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ಕ ರಾಶಿ

ಕರ್ಕ ರಾಶಿ

ಜ್ಯೋತಿಶಾಸ್ತ್ರದ 12 ರಾಶಿಚಕ್ರಗಳಲ್ಲಿ ನಾಲ್ಕನೇಯ ರಾಶಿ ಕರ್ಕ ರಾಶಿ. ಅತ್ಯಂತ ಸೂಕ್ಷ್ಮ ಮನಸ್ಸಿನ, ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ, ನಿಷ್ಠಾವಂತ, ಕುಟುಂಬಕ್ಕಾಗಿ ತನ್ನನ್ನೇ ಅರ್ಪಿಸುವ, ಕೆಲಸ ಎಂದು ಬಂದಾಗ ಯಾವುದೇ ಅಡೆತಡೆ ಇದ್ದರೂ ಪೂರ್ಣಗೊಳಿಸುವ ಏಕೈಕ ರಾಶಿ ಕರ್ಕ ರಾಶಿ. ಕರ್ಕ ರಾಶಿಗೆ ವೃಷಭ ಹಾಗೂ ವೃಶ್ಚಿಕ ರಾಶಿಯವರು ದಾಂಪತ್ಯ ಜೀವನಕ್ಕೆ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ.

ಕರ್ಕ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ಈ ಕರ್ಕ ರಾಶಿಯ ಬಗ್ಗೆ ಇನ್ನಷ್ಟು ಆಕ್ತಿಕರ ಸಂಗತಿಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

ಕರ್ಕ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ

ಸಿಂಹ ರಾಶಿ

ಸಿಂಹ ರಾಶಿ

ಹನ್ನೆರಡು ರಾಶಿಚಕ್ರಗಳಲ್ಲಿ ಅತ್ಯುತ್ತಮ ನಾಯಕತ್ವ ಗುಣ ಇರುವ, ಗರ್ವ, ಅಹಂಕಾರ, ಕೆಲಸದಲ್ಲಿ ಶ್ರದ್ಧೆ, ಮಾಡಬೇಕೆಂಬ ಹಠ ಇದ್ಧರೆ ಛಲ ಬಿಡದ ತ್ರಿವಿಕ್ರಮನಂತೆ ಮಾಡುವ, ಒಲ್ಲದ ಮನಸ್ಸಿನಲ್ಲಿ ಏನನ್ನೂ ಒಪ್ಪಿಕೊಳ್ಳದ, ಸದಾ ನಗು ಮನಸ್ಸಿನ, ಹಠಮಾರಿ ಸೊಕ್ಕಿನ ರಾಶಿಚಕ್ರ ಎಂದರೆ ಅದು ಸಿಂಹ ರಾಶಿ ಮಾತ್ರ.

ಸಿಂಹ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ:

ಸಿಂಹ ರಾಶಿಯ ಬಗ್ಗೆ ಇಂಥಾ ಸಾಕಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಸಿಂಹ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಕನ್ಯಾ ರಾಶಿ

ಕನ್ಯಾ ರಾಶಿ

ಹನ್ನೆರಡು ರಾಶಿಚಕ್ರಗಳಲ್ಲಿ ಹೆಚ್ಚು ನಿಷ್ಠಾವಂತ, ಸದಾ ಪ್ರಾಯೋಗಿಕವಾಗಿ ಯೋಚಿಸುವ, ಇತರರ ಭಾವನೆಗಳಿಗೆ ಉತ್ತಮವಾಗಿ ಸ್ಪಂದಿಸುವ, ಸ್ವಲ್ಪ ಸಂಕೋಚ ಸ್ವಭಾವದ, ಎಲ್ಲವನ್ನೂ ವಿಶ್ಲೇಷಣಾತ್ಮಕವಾಗಿ ನೋಡುವ ರಾಶಿಚಕ್ರ ಕನ್ಯಾ ರಾಶಿ.

ಕನ್ಯಾ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ:

ಈ ಬಗ್ಗೆ ತಿಳಿಯಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

ಕನ್ಯಾ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ತುಲಾ ರಾಶಿ

ತುಲಾ ರಾಶಿ

ಹನ್ನೆರಡು ರಾಶಿಚಕ್ರಗಳಲ್ಲಿ ಗಾಳಿಯ ಅಂಶದ ಏಳನೇ ರಾಶಿ ಚಕ್ರ ತುಲಾ ರಾಶಿ ಸಾಕಷ್ಟು ವಿಚಾರಗಳಿಂದಾಗಿ ಇತರೆ ರಾಶಿಗಳಿಗಿಂತ ಭಿನ್ನ. ತನ್ನ ರಾಶಿಚಕ್ರದ ತಕ್ಕಡಿಯ ಚಿಹ್ನೆಯಂತೆ ನ್ಯಾಯಸಮ್ಮತ ಮನಸ್ಥಿತಿಯ, ಇತತರಿಗೆ ಸಹಾಯ ಹಸ್ತ ಚಾಚುವ ಸಹಕಾರಿ ಗುಣದ, ಒಂಟಿಯಾಗಿ ಇರುವುದನ್ನು ಎಂದಿಗೂ ಇಷ್ಟಪಡದ, ಶಾಂತಸ್ವಭಾವದ, ಹಸನ್ಮುಖಿ ಸದಾ ಸುಖಿ ಎನ್ನುವಂತಿರುವ ರಾಶಿಚಕ್ರವೇ ತುಲಾ ರಾಶಿ.

ತುಲಾ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ತುಲಾ ರಾಶಿಯ ಬಗ್ಗೆ ಇನ್ನೂ ಸಾಕಷ್ಟು ಆಸಕ್ತಿಕರ ಹಾಗೂ ತಿಳಿಯಲೇಬೇಕಾದ ಅಂಶಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ತುಲಾ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಹನ್ನೆರಡು ರಾಶಿಚಕ್ರಗಳಲ್ಲಿ ಎಂಟನೆಯದಾಗಿ ಬರುವ ವೃಶ್ಚಿಕ ರಾಶಿ ಶ್ರದ್ಧೆ, ದೃಢ ನಿಶ್ಚಯ, ಕರ್ತವ್ಯ ನಿಷ್ಠೆ, ಬದ್ಧತೆಯ ಪ್ರತೀಕ ಎನ್ನಬಹುದು. ಸ್ವಲ್ಪ ಅಸೂಯೆಪಡುವ ಗುಣ, ತಂತ್ರಗಾರಿಕೆ, ಪ್ರಾಮಾಣಿಕತೆ ವಿಚಾರದಲ್ಲಿ ವಿಚಾರಗಳಲ್ಲಿ ಇವರನ್ನು ನಂಬುವುದು ಕಷ್ಟವಾದರೂ, ಸದಾ ಉತ್ಸಾಹದಿಂದಿರುವ, ನೈಜತೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಪ್ರತಿಭಾವಂತ ರಾಶಿ ವೃಶ್ಚಿಕ.

ವೃಶ್ಚಿಕ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ವೃಶ್ಚಿಕ ರಾಶಿಯ ಬಗ್ಗೆ ಇನ್ನೂ ಸಾಕಷ್ಟು ಅಂಶಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ವೃಶ್ಚಿಕ ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಧನು ರಾಶಿ

ಧನು ರಾಶಿ

ಹನ್ನೆರಡು ರಾಶಿಚಕ್ರಗಳಲ್ಲಿ ಒಂಬತ್ತನೇಯದಾಗಿ ಬರುವ ಧನು ರಾಶಿ ಇತರೆ ಎಲ್ಲಾ ರಾಶಿಗಳಿಗಿಂತ ಹೆಚ್ಚು ಹಾಸ್ಯಪ್ರಜ್ಞೆ ಉಳ್ಳ ರಾಶಿಯಾಗಿದೆ. ಅತೀ ಹೆಚ್ಚು ಉದಾರ ಗುಣಗಳನ್ನು ಹೊಂದಿರುವ ಇವರು ತಮ್ಮ ಕೈಮೀರಿದ ವಿಚಾರಗಳನ್ನು ಈಡೆರಿಸುವುದಾಗಿ ಭರವಸೆ ನೀಡುವ ವಿಭಿನ್ನರು. ಸ್ವಾತಂತ್ಯ್ಯ, ಪ್ರಯಾಣ, ಸಮಾಜಮುಖಿ, ಸ್ನೇಹಪರ ಗುಣ ಇರುವ ಇವರಿಗೆ ಕಟ್ಟಿಹಾಕುವುದು, ನಿರ್ಬಧಿಸುವುದು ಇಷ್ಟವೇ ಆಗುವುದಿಲ್ಲ.

ಧನು ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ಧನು ರಾಶಿಯ ಬಗ್ಗೆ ಇಂಥಾ ಇನ್ನೂ ಸಾಕಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಧನು ರಾಶಿಯ ಗುಣ, ವೃತ್ತಿ ಜೀವನ, ಪ್ರೀತಿ, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಮಕರ ರಾಶಿ

ಮಕರ ರಾಶಿ

ಹನ್ನೆರಡು ರಾಶಿಚಕ್ರಗಳಲ್ಲಿ ಆರ್ಥಿಕ ವಿಚಾರಗಳಲ್ಲಿ ಗೊಂದಲ ಇಲ್ಲದೆ, ಹಣಕಾಸಿನ ವಿಚಾರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು, ಶಿಸ್ತುಬದ್ಧ ಜೀವನ ನಡೆಸುವ, ಅತ್ಯುತ್ತಮ ವ್ಯವಸ್ಥಾಪಕ ರಾಶಿಚಕ್ರ ಮಕರ ರಾಶಿ. ರಾಶಿಚಕ್ರದಲ್ಲಿ ಹತ್ತನೇಯದಾಗಿ ಬರುವ ಮಕರ ರಾಶಿಯವರನ್ನು ಜೀವನ ಸಂಗಾತಿಯಾಗಿ ಪಡೆಯುವವರು ಅದೃಷ್ಟವಂತರು ಎನ್ನಬಹುದು. ಕುಟುಂಬಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ಇವರ ಕೋಪಕ್ಕೆ ತುತ್ತಾದರೆ ಕ್ಷಮೆ ಸಿಗುವುದು ಮಾತ್ರ ಕನಸಿನ ಮಾತು.

ಮಕರ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ಮಕರ ರಾಶಿಯ ಬಗ್ಗೆ ತಿಳಿಯಲೇಬೇಕಾದ ವಿಷುಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಮಕರ ರಾಶಿಯ ಗುಣ, ವೃತ್ತಿ, ಪ್ರೀತಿ, ಹಣಕಾಸು, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಕುಂಭ ರಾಶಿ

ಕುಂಭ ರಾಶಿ

ಹನ್ನೆರಡು ರಾಶಿಚಕ್ರಗಳ ಪಟ್ಟಿಯಲ್ಲಿ 11ನೇ ರಾಶಿ ಕುಂಭ ರಾಶಿ ವಿಚಿತ್ರ ಸ್ವಭಾವಗಳನ್ನು ಹೊಂದಿದೆ. ಜೀವನದಲ್ಲಿ ಅಪಾಯವನ್ನು ಎದುರಿಸದಿದ್ದರೆ ಅದೊಂದು ಜೀವನವೇ ಎಂದು ಚಿಂತಿಸುವ, ಸದಾ ನೈಜತೆಯನ್ನೇ ಬಯಸುವ ಹಾಗೂ ನೈಜವಾಗಿಯೇ ಇರುವ, ಸ್ವತಂತ್ರ ಇಲ್ಲದ ಬದುಕನ್ನು ಇವರು ಊಹಿಸುವುದು ಇಲ್ಲ, ಪ್ರೀತಿಯ ವಿಚಾರಕ್ಕೆ ಬಂದರೆ ಇಷ್ಟಪಟ್ಟರೇ ಎಂದಿಗೂ ಬಿಡದ, ಇಷ್ಟ ಆಗದೇ ಇದ್ದರೆ ಎಂದಿಗೂ ನಿಮ್ಮ ಕಡೆ ತಿರುಗಿಯೂ ನೋಡದ ಅತೀ ವಿಶಿಷ್ಟ ಗುಣಾವಗುಣಗಳನ್ನು ಹೊಂದಿರುವ ರಾಶಿಚಕ್ರ ಕುಂಭ ರಾಶಿ.

ಕುಂಭ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ಕುಂಭ ರಾಶಿಯ ಬಗ್ಗೆ ಇನ್ನಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಕುಂಭ ರಾಶಿಯ ಗುಣ, ವೃತ್ತಿ, ಪ್ರೀತಿ, ಹಣಕಾಸು, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಮೀನ ರಾಶಿ

ಮೀನ ರಾಶಿ

ಹನ್ನೆರಡು ರಾಶಿಚಕ್ರಗಳ ಪಟ್ಟಿಯಲ್ಲಿ ಅಂತಿಮವಾಗಿ ಬರುವ 12ನೇ ನೀರಿನ ಅಂಶದ ರಾಶಿ ಮೀನ ರಾಶಿಯವರಿಗೆ ಇತರರ ಮೇಲಿನ ಸಹಾನುಭೂತಿಯೇ ಇವರ ಬದುಕಿನ ಧ್ಯೇಯವಾಗಿದೆ. ಅತೀ ಸೌಮ್ಯ ಸ್ವಭಾವದ, ಬುದ್ಧಿವಂತ, ಸಂಗೀತ ಪ್ರೇಮಿ ರಾಶಿ ಮೀನವು ಇತರರ ಮೇಲೆ ಕೋಪಗೊಂಡರೆ ಕ್ಷಮೆ ಎಂಬ ಪದಕ್ಕೆ ಇವರ ಶಬ್ದಕೋಶದಲ್ಲಿ ಹುಡುಕಬೇಕಿರುತ್ತದೆ. ಎಲ್ಲರನ್ನೂ ಅತಿಯಾಗಿ ನಂಬುವ ಇವರು ಬಹು ಬೇಗ ಬಲಿಪಶುಗಳಾಗುತ್ತಾರೆ. ಏಕಾಂಗಿತನ, ನಿದ್ರೆ, ಆಧ್ಯಾತ್ಮಿಕತೆಗೆ ಮನಸೋಲುವ ಇವರ ಬಗ್ಗೆ ಹೇಳಲು ಇನ್ನೂ ಸಾಕಷ್ಟು ವಿಚಾರಗಳಿವೆ.

ಮೀನ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಹಾಗೂ ಲೈಂಗಿಕ ಜೀವನ, ವೃತ್ತಿಜೀವನ ಮತ್ತು ಹಣ ಹೇಗಿರುತ್ತದೆ, ಇತರೆ ಆಸಕ್ತಿಗಳ ಸಂಗತಿಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದೇವೆ. ಮೀನ ರಾಶಿಯ ಬಗ್ಗೆ ಇನ್ನೂ ಸಾಕಷ್ಟು ಆಸಕ್ತಿಕರ ವಿಷಯಗಳನ್ನು ತಿಳಿಯಲು ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

ಮೀನ ರಾಶಿಯ ಗುಣ, ವೃತ್ತಿ, ಪ್ರೀತಿ, ಹಣಕಾಸು, ಸಂಬಂಧ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

English summary

12 Zodiac Signs: Dates, Traits, Compatibility and Personality of Each Star Sign in Kannada

Here we talking about the 12 Zodiac Signs: Dates, Traits, Compatibility and Personality of Each Star Sign in Kannada. Read on.
X
Desktop Bottom Promotion