For Quick Alerts
ALLOW NOTIFICATIONS  
For Daily Alerts

ವಿಶ್ವ ಘೇಂಡಾಮೃಗ ದಿನ: ಈ ಪ್ರಾಣಿಯ ಅಳಿವಿಗೆ ಮುಖ್ಯ ಕಾರಣವೇ ಅದರ ವಿಶೇಷ ಕೊಂಬುಗಳು!

|

ಇಂದು ವಿಶ್ವ ಘೇಂಡಾಮೃಗ ದಿನ. ಭೂಮಿಯ ಅತ್ಯಂತ ವೈಶಿಷ್ಟ್ಯಪೂರ್ಣ ಜೀವಿಯಲ್ಲಿ ಈ ಪ್ರಾಣಿಯೂ ಒಂದು. ಇಂತಹ ಜೀವವೈವಿಧ್ಯತೆಯೊಂದು ಅಳಿವಿನಂಚಿಗೆ ಸಾಗುತ್ತಿದೆ. ಇದನ್ನು ತಡೆದು, ಘೇಂಡಾಮೃಗಗಳ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಿ, ಅದನ್ನು ರಕ್ಷಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 22 ರಂದು ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತದೆ.

ಘೇಂಡಾಮೃಗದ ಕುರಿತ ಆಸಕ್ತಿಕರ ಅಂಶಗಳು:

ಘೇಂಡಾಮೃಗದ ಕುರಿತ ಆಸಕ್ತಿಕರ ಅಂಶಗಳು:

ಒಂದು ಕೊಂಬಿನ ಘೇಂಡಾಮೃಗವನ್ನು ಭಾರತೀಯ ಘೇಂಡಾಮೃಗ ಎಂದೂ ಕರೆಯುತ್ತಾರೆ. ಇದು IUCN ನಿಂದ ದುರ್ಬಲ ಜಾತಿ ಎಂಬ ಪಟ್ಟಿಗೆ ಸೇರಿಸಲಾಗಿದೆ. ಈ ಪ್ರಾಣಿಯು ಹೆಚ್ಚಾಗಿ ಹಿಮಾಲಯದ ತಪ್ಪಲಿನಲ್ಲಿ, ಭಾರತದಲ್ಲಿ ಮತ್ತು ನೇಪಾಳದಲ್ಲಿ ಕಂಡುಬರುತ್ತದೆ. ಈ ಭಾರತೀಯ ಒಂದು ಕೊಂಬಿನ ಘೇಂಡಾಮೃಗವನ್ನು ಹೊರತುಪಡಿಸಿ, ಇತರ ನಾಲ್ಕು ಪ್ರಸಿದ್ಧ ಜಾತಿಗಳಿವೆ. ಇವುಗಳಲ್ಲಿ ಸುಮಾತ್ರ ಘೇಂಡಾಮೃಗ, ಕಪ್ಪು ಘೇಂಡಾಮೃಗ, ಜಾವನ ಘೇಂಡಾಮೃಗ ಮತ್ತು ಬಿಳಿ ಘೇಂಡಾಮೃಗ ಸೇರಿವೆ.

ಇತ್ತೀಚಿನ ವರ್ಷಗಳಲ್ಲಿ ನಗರೀಕರಣ, ಹವಾಮಾನ ಬದಲಾವಣೆ ಮೊದಲಾದ ಅಂಶಗಳಿಂದ ಘೇಂಡಾಮೃಗದಂತಹ ಅಪರೂಪ ಜೀವಿಗಳು ಅಳಿವಿನತ್ತ ಸಾಗುತ್ತಿವೆ. ಇವುಗಳ ಅಳಿವಿಗೆ ಮುಖ್ಯ ಕಾರಣವೆಂದರೆ ಬೇಟೆಯಾಡುವುದು, ಏಕೆಂದರೆ ಪ್ರಪಂಚದ ಎಲ್ಲಾ ವೈವಿಧ್ಯಮಯ ಘೇಂಡಾಮೃಗಗಳ ವಿಶೇಷವಾದ ಕೊಂಬುಗಳಿಗೆ ಅವುಗಳನ್ನು ಬೇಟೆಯಾಡುತ್ತಿದ್ದಾರೆ ಜೊತೆಗೆ ಕೊಂಬುಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಹೆಚ್ಚಿನ ಬೇಡಿಕೆ ಇದೆ.

ವಿಶ್ವ ಘೇಂಡಾಮೃಗ ದಿನದ ಇತಿಹಾಸ:

ವಿಶ್ವ ಘೇಂಡಾಮೃಗ ದಿನದ ಇತಿಹಾಸ:

ವರ್ಲ್ಡ್ ವೈಲ್ಡ್‌ ಲೈಫ ಫಂಡ್-ಸೌತ್ ಆಫ್ರಿಕಾ ವತಿಯಿಂದ ವಿಶ್ವದಲ್ಲೇ ಪ್ರಥಮ ಬಾರಿಗೆ 2010 ರಲ್ಲಿ ಸೆಪ್ಟೆಂಬರ್ 22 ರಂದು ವಿಶ್ವ ಘೇಂಡಾಮೃಗ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಈ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವೇದಿಕೆಗಳಲ್ಲಿ ಪ್ರಾರಂಭವಾಯಿತು. ನಂತರ ಲಿಸಾ ಜೇನ್ ಕ್ಯಾಂಬಲ್ ಮತ್ತು ರಿಶ್ಚಾ ಲಾರ್ಸನ್ ಎಂಬುವವರು, ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲು 2011 ರಲ್ಲಿ ಉತ್ತೇಜಿಸಿದರು. ಅಂದಿನಿಂದ ಸರ್ಕಾರಗಳು, ಪ್ರಾಣಿ ಸಂರಕ್ಷಣಾ ಸಂಸ್ಥೆಗಳು, ಪ್ರಾಣಿ ಪ್ರಿಯರು ಸೆ. 22ರಂದು ವಿಶ್ವ ಘೇಂಡಾಮೃಗ ದಿನವನ್ನು ಪ್ರತಿವರ್ಷ ಆಚರಣೆ ಮಾಡುತ್ತಾರೆ.

2021ರ ವಿಶ್ವ ಘೇಂಡಾಮೃಗ ದಿನದ ಥೀಮ್:

2021ರ ವಿಶ್ವ ಘೇಂಡಾಮೃಗ ದಿನದ ಥೀಮ್:

ವಿಶ್ವ ಖಡ್ಗಮೃಗ ದಿನದ 2021 ರ ವಿಷಯವು 'ಐದನ್ನು ಬದುಕಿಸಿಕೊಳ್ಳಿ' ಎಂಬುದು. ಅಂದರೆ ಐದು ಬಗೆಯ ಎಲ್ಲಾ ಐದು ಬಗೆಯ ಘೇಂಡಾಮೃಗಗಳ ಸಂತತಿಯನ್ನು ಉಳಿಸಿಕೊಳ್ಳಬೇಕು, ಯಾವುದನ್ನೂ ಅಳಿವಿಗೆ ಸಾಗದಂತೆ ನೋಡಿಕೊಳ್ಳಬೇಕು ಎಂಬುದಾಗಿದೆ.

ವಿಶ್ವ ಘೇಂಡಾಮೃಗ ದಿನದ ಮಹತ್ವ:

ವಿಶ್ವ ಘೇಂಡಾಮೃಗ ದಿನದ ಮಹತ್ವ:

ಮೇಲೆ ಹೇಳಿದಂತೆ, ಆಫ್ರಿಕಾ ಮತ್ತು ಏಷ್ಯಾದಲ್ಲಿ ಐದು ಜಾತಿಯ ಘೇಂಡಾಮೃಗಗಳಿವೆ. ಕೆಲವು ಜಾತಿಯ ಘೇಂಡಾಮೃಗಗಳು ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿದ್ದು, ಇವುಗಳು ಆವಾಸಸ್ಥಾನ ನಾಶ ಮತ್ತು ಬೇಟೆಯಾಡುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬುದು UNEP ಅಭಿಪ್ರಾಯವಾಗಿದೆ. ಆದ್ದರಿಂದ ಈ ದಿನವು ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಜೊತೆಗೆ ಅವುಗಳಿಗೆ ನಮ್ಮ ಸಹಾಯದ ಅವಶ್ಯಕತೆ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಿದೆ.

ವಿಶ್ವ ಘೇಂಡಾಮೃಗ ದಿನದ ಉಲ್ಲೇಖಗಳು:

ವಿಶ್ವ ಘೇಂಡಾಮೃಗ ದಿನದ ಉಲ್ಲೇಖಗಳು:

"ಘೇಂಡಾಮೃಗವನ್ನು ಉಳಿಸುವ ಏಕೈಕ ಮಾರ್ಗವೆಂದರೆ ಅದು ವಾಸಿಸುವ ಪರಿಸರವನ್ನು ಉಳಿಸುವುದು, ಏಕೆಂದರೆ ಪ್ರಾಣಿಗಳ ಮತ್ತು ಸಸ್ಯಗಳ ಲಕ್ಷಾಂತರ ಜಾತಿಗಳ ನಡುವೆ ಪರಸ್ಪರ ಅವಲಂಬನೆ ಇದೆ." -ಡೇವಿಡ್ ಅಟೆನ್‌ಬರೋ

"ಭಯಾನಕ ವಿಷಯವೆಂದರೆ ನನ್ನ ಜೀವಿತಾವಧಿಯಲ್ಲಿ, ಪ್ರಪಂಚದ 95 % ಘೇಂಡಾಮೃಗಗಳನ್ನು ಕೊಲ್ಲಲಾಗಿದೆ." -ಮಾರ್ಕ್ ಕಾರ್ವರ್ಡಿನ್.

English summary

World Rhino Day 2021: Date, History, Theme, Significance and Interesting Facts about Rhino in Kannada

Here we talking about World Rhino Day 2021: Date, History, Theme, Significance and Interesting Facts about Rhino in Kannada
X
Desktop Bottom Promotion