For Quick Alerts
ALLOW NOTIFICATIONS  
For Daily Alerts

ವಿಶ್ವ ಆಹಾರ ದಿನ 2021: ನೀವು ವೇಸ್ಟ್ ಮಾಡುವ ಆಹಾರ, ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎಂಬುದನ್ನು ಮರೆಯದಿರಿ

|

ಇಂದು ವಿಶ್ವ ಆಹಾರ ದಿನ. ಇದು ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. ಆಹಾರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಕೆಲವೊಂದು ವಿಚಾರಗಳು ಇಲ್ಲಿವೆ.

ವಿಶ್ವ ಆಹಾರ ದಿನದ ಹಿನ್ನಲೆ:

ವಿಶ್ವ ಆಹಾರ ದಿನದ ಹಿನ್ನಲೆ:

ಯುನೈಟೆಡ್ ನೇಷನ್ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 1979 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವೆಂದು ಗುರುತಿಸಿತು. ಅಕ್ಟೋಬರ್ 16, 1945 ರಂದು ವಿಶ್ವಸಂಸ್ಥೆಯ (UN) ಆಹಾರ ಮತ್ತು ಕೃಷಿ ಸಂಸ್ಥೆ (FAO)ಸ್ಥಾಪನೆಯಾದ ದಿನವಾಗಿದ್ದು, ಅದರ ಸವಿನೆನಪಿಗಾಗಿ ಈ ದಿನವನ್ನು ಆರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತಿದೆ.

ಆರಂಭದಲ್ಲಿ ಎಫ್‌ಎಒ ಸ್ಥಾಪನೆಯ ನೆನಪಿಗಾಗಿದಾರೂ, ಕ್ರಮೇಣ ಈ ಆಚರಣೆಯು ಜಾಗತಿಕ ಘಟನೆಯಾಗಿ ಬದಲಾಯಿತು. ಆಹಾರದ ಕೊರತೆಯ ಬಗ್ಗೆ ಜಾಗೃತಿ ಮೂಡಿಸಿತು ಜೊತೆಗೆ ಜಗತ್ತಿನಾದ್ಯಂತ ಆಹಾರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಿತು.

ವಿಶ್ವ ಆಹಾರ ದಿನ 2021ರ ಥೀಮ್:

ವಿಶ್ವ ಆಹಾರ ದಿನ 2021ರ ಥೀಮ್:

2020 ರಲ್ಲಿ, ವಿಶ್ವ ಆಹಾರ ದಿನದ ಥೀಮ್, " ಒಟ್ಟಾಗಿ ಬೆಳೆಯಿರಿ, ಪೋಷಿಸಿ, ಉಳಿಸಿ. ನಮ್ಮ ಕೆಲಸಗಳೇ, ನಮ್ಮ ಭವಿಷ್ಯ." ಆಗಿತ್ತು. ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರ ನೋವನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಧರಿಸಲಾಗಿತ್ತು. ಈ ವರ್ಷ, ಯಾರೂ ಹಸಿವಿನಿಂದ ಇರದಂತೆ, ಸುಸ್ಥಿರ ಜಗತ್ತನ್ನು ನಿರ್ಮಿಸಲು ಕೊಡುಗೆ ನೀಡಿದ ನಾಯಕರು ಅಥವಾ ವ್ಯಕ್ತಿಗಳನ್ನು ಗೌರವಿಸಲು ಒತ್ತು ನೀಡಲಾಗಿದೆ.

ವಿಶ್ವ ಆಹಾರ ದಿನದ ಮಹತ್ವ:

ವಿಶ್ವ ಆಹಾರ ದಿನದ ಮಹತ್ವ:

ಆಹಾರ ಮನುಷ್ಯನ ಜೀವನಕ್ಕೆ ಅತ್ಯಮೂಲ್ಯವಾಗಿದ್ದರೂ, ಇಂದಿಗೂ ಲಕ್ಷಾಂತರ ಜನರು ಹಸಿವಿನಿಂದ ಅಥವಾ ಅರೆಹೊಟ್ಟೆಯಿಂದ ನರಳುತ್ತಿದ್ದಾರೆ. ಇದಕ್ಕೆ ಕಾರಣ, ಉಳಿದವರು ಮಾಡುತ್ತಿರುವ ಆಹಾರದ ಪೋಲು ಎಂದರೆ ತಪ್ಪಾಗಲ್ಲ. ಇದಕ್ಕೆ ಸಾಕ್ಷಿ, ಪ್ರತಿವರ್ಷ ಸಾವಿರಾರು ಟನ್ ಗಟ್ಟಲೇ ಉತ್ಪಾದನೆಯಾಗುತ್ತಿರುವ ಆಹಾರ ತ್ಯಾಜ್ಯ. ನಾವು ಪ್ರತಿನಿತ್ಯ ಹಾಳು ಮಾಡುವ ಆಹಾರ, ಇನ್ಯೋರೋ ವ್ಯಕ್ತಿಯ ಹೊಟ್ಟೆ ತುಂಬಿಸಬಹುದು ಎಂಬುದನ್ನು ಎಂದಿಗೂ ಮರೆಯಬಾರದು. ಇದನ್ನು ಕಡಿಮೆಮಾಡಲು, ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ.

ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ಏನು ಮಾಡಬಹುದು?:

ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ಏನು ಮಾಡಬಹುದು?:

FAO ಪ್ರಕಾರ, ಆಹಾರ ತ್ಯಾಜ್ಯ ಕಡಿಮೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಇದು ಒಬ್ಬರಿಂದ ಸಾಧ್ಯವಾಗುವುದಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ತೆಗೆದುಕೊಳ್ಳಲು ಆರಂಭಿಸುವ ಕೆಲವು ವಿಧಾನಗಳು ಇಲ್ಲಿವೆ:

  • ಆರೋಗ್ಯಕರ ಆಹಾರವನ್ನು ಆರಿಸಿ, ಈ ಮೂಲಕ ಆರೋಗ್ಯಕರ ದೇಹ ಮತ್ತು ಪರಿಸರವನ್ನು ಕಾಪಾಡಿಕೊಳ್ಳಿ.
  • ನಿಮಗೆ ಆರೋಗ್ಯಕರ ಹಾಗೂ ಪರಿಸರಕ್ಕೆ ಸಮರ್ಥವಾಗಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ. ಉತ್ಪನ್ನಗಳನ್ನು ಆಯ್ಕೆ ಮಾಡುವ ಮೊದಲು ಲೇಬಲ್‌ಗಳು ಮತ್ತು ಪ್ಯಾಕೇಜಿಂಗ್ ಅನ್ನು ಎಚ್ಚರಿಕೆಯಿಂದ ಓದಿ.
  • ಆಹಾರ ಸಂಗ್ರಹಣೆಯನ್ನು ಸುಧಾರಣೆ ಮಾಡುವುದರ ಮೂಲಕ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಿ.
  • ಸಾಧ್ಯವಾದಷ್ಟು ಮರುಬಳಕೆ ಮಾಡಿ. ಉಳಿದ ಆಹಾರದಿಂದ ಗೊಬ್ಬರ ತಯಾರಿಸಲು ಪ್ರಯತ್ನಿಸಿ.
  • ಸ್ಥಳೀಯ ಪರಿಸರ ವ್ಯವಸ್ಥೆಗಳನ್ನು ಪೋಷಿಸಲು ಸಣ್ಣ ರೈತರು ಮತ್ತು ಸ್ಥಳೀಯ ಉತ್ಪಾದಕರನ್ನು ಬೆಂಬಲಿಸಿ.
English summary

World Food Day 2021: Date, Theme, Significance And How To Reduce Food Waste

Here we talking about World Food Day 2021: Date, Theme, Significance And How To Reduce Food Waste, read on
Story first published: Saturday, October 16, 2021, 13:09 [IST]
X
Desktop Bottom Promotion