For Quick Alerts
ALLOW NOTIFICATIONS  
For Daily Alerts

ಕೈಗಳಿಲ್ಲದ ವಿಶ್ವದ ಮೊದಲ ಪೈಲೆಟ್ ಜೆಸ್ಸಿಕಾ ಕಾಕ್ಸ್

|

ಸಾಧನೆ ಮಾಡುವ ಮನಸ್ಸು ಒಂದಿದ್ದರೆ ಸಾಕು ನಮಗೆ ಯಾವುದೇ ಅಡೆತಡೆಗಳಿರಲಿ, ಎಷ್ಟೇ ಕಷ್ಟವಿರಲಿ, ನಮ್ಮ ದೇಹದಲ್ಲಿ ಯಾವುದೇ ನ್ಯೂನತೆ ಇರಲಿ ಅದು ಯಾವುದೂ ನಮಗೊಂದು ಸವಾಲು ಅನಿಸುವುದೇ ಇಲ್ಲ. ನಮ್ಮ ದೃಢ ಇಚ್ಛಾ ಶಕ್ತಿಯ ಮುಂದೆ ಅವೆಲ್ಲಾ ಮಂಡಿಯೂರಿ ಕೂತು ಬಿಡುತ್ತವೆ.

arm less pilot jessica cox

ನಮಗೆ ಎಲ್ಲಾ ಇದ್ದರೂ ಇಲ್ಲದಿರುವುದರ ಬಗ್ಗೆ ಕುರಿತು ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳುವವರೇ ಹೆಚ್ಚು. ಇನ್ನು ಚಿಕ್ಕ ಕಷ್ಟಕ್ಕೆ ಹೆದರಿಕೊಳ್ಳುವವರೂ ಇದ್ದಾರೆ, ಅಂಥವಾರು ಜೆಸ್ಸಿಕಾ ಕಾಕ್ಸ್ ನೋಡಿ ಕಲಿಯುವಂಥದ್ದು ತುಂಬಾ ಇದೆ. ಹೌದು ಜೆಸ್ಸಿಕಾ ಕಾಕ್ಸ್ ಬಗ್ಗೆ ತಿಳಿಯುತ್ತಾ ಹೋದರೆ ನಿಮಗೆ ಬದುಕಿನಲ್ಲಿ ಸ್ಪೂರ್ತಿ ಸಿಗುವುದು ಹಾಗೂ ಆಕೆಯ ದೃಢ ಸಂಕಲ್ಪ ನೋಡಿ ಆಕೆಗೊಂದು ಸಲ್ಯೂಟ್‌ ಹೇಳುವಿರಿ.

ಜೆಸ್ಸಿಕಾ ಕಾಕ್ಸ್‌ಗೆ ಎರಡು ಕೈಗಳಿಲ್ಲ, ಆದರೇನಂತೆ ಆಕಾಶದಲ್ಲಿ ಹಾರಾಡುತ್ತಾರೆ, ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಾರೆ, ಪಿಯಾನೋ ನುಡಿಸುತ್ತಾರೆ, ಅಷ್ಟೇ ಏಕೆ ಯಾರಾದರೂ ತಂಟೆಗೆ ಬಂದರೆ ಕರಾಟೆ ಸೈಲಿಯಲ್ಲಿ ಸದೆ ಬಡೆಯುವ ತಾಕತ್ತು ಅವರಿಗಿದೆ.

'ಕೈಗಳಿಲ್ಲದ ಕಾರಣ ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಜನರು ಭಾವಿಸಿದ್ದರು, ಆದರೆ ಅವರು ಅಂದುಕೊಂಡಿದ್ದು ತಪ್ಪು' ಎಂದು ಸಾಬೀತು ಮಾಡಿದ್ದೇನೆ' ಎನ್ನುತ್ತಾರೆ ಜೆಸ್ಸಿಕಾ. ಇವರು ಜನರಿಗೆ ಸ್ಪೂರ್ತಿ ತುಂಬಲು ಜಗತ್ತಿನ ಎಲ್ಲಾ ಕಡೆ ಹೀಗಿ ಮೋಟಿವೇಷನಲ್ ಸ್ಪೀಚ್‌ ಕೊಡುತ್ತಾರೆ. ಹುಟ್ಟುವಾಗಲೇ ಜೆಸ್ಸಿಕಾ ಅವರಿಗೆ ಕೈಗಳಿರಲಿಲ್ಲ, ಆದರೂ ಅವರಮ್ಮ ಮಗಳಿಗೆ ಧೈರ್ಯ ತುಂಬಿ ಬೆಳೆಸಿದರು. ಎಂಟನೇ ತರಗತಿಯಲ್ಲಿ ಇರುವಾಗ ಜೆಸ್ಸಿಕಾ ಅವರನ್ನು ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. 5 ವರ್ಷ ಇರುವಾಗಲೇ ಈಜು ಕಲಿತರು. ಕೈಗಳಿಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ನಾವು ಯೋಚಿಸುವ ಪ್ರತಿಯೊಂದು ಚಟುವಟಿಕೆಯನ್ನು ಇವರು ಮಾಡಿದರು. ಇವರು ತಮ್ಮ ಕಾಲುಗಳನ್ನೇ ಕೈಗಳಾಗಿ ಬಳಸಿದರು.

ಏನಾದರೂ ಸಾಧಿಸಲು ಮನಸ್ಸಿನಲ್ಲಿ ಛಲವಿದ್ದರೆ ನಮ್ಮ ಮುಂದೆ ದಾರಿಗಳು ತೆರೆದುಕೊಳ್ಳುತ್ತವೆ ಎನ್ನುವುದಕ್ಕೆ ಇವರೇ ಉದಾಹರಣೆ ಅಲ್ಲವೇ?

English summary

world first arm less pilot jessica cox

She is real motivator, brave woman, Even though she born as arm less, but her will power made her to become a first licenced arm less pilot. Read the Story about jessica Cox.
Story first published: Friday, December 13, 2019, 15:47 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more