For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನಾಚರಣೆ 2023: ಹೆಣ್ಣಿನ ಬಗ್ಗೆ ಸ್ಪೂರ್ತಿದಾಯಕ ಘೋಷಣೆಗಳು

|

ಹೆಣ್ಣು ಸಮಾಜದ ಕಣ್ಣು, ಹೆಣ್ಣಿನಿಂದ ಮಾತ್ರ ಒಂದು ಕುಟುಂಬ ಹಾಗೂ ಸಮಾಜದ ಏಳ್ಗೆ ಸಾಧ್ಯ ಎಂಬೆಲ್ಲಾ ಮಾತುಗಳನ್ನು ಕೇವಲ ಹೇಳಿಕೆಗಳಾಗಿ ಮಾತ್ರ ಕೇಳುತ್ತಿದ್ದೇವೆ. ಆದರೆ ಇಂದಿಗೂ ಒಂದಿಲ್ಲೊಂದು ಕಾರಣದಿಂದ ಮಹಿಳೆಯ ತುಳಿತ, ಅವಮಾನ ಸಾಗುತ್ತಲೇ ಇದೆ.

ಇದೆಲ್ಲದರ ನಡುವೆ ನಾವೀಗ 48ನೇ ಮಹಿಳಾ ದಿನಾಚರಣೆಯನ್ನು ಆಚರಿಸಲು ಸಿದ್ಧರಾಗಿದ್ದೇವೆ. 2023 ಮಾರ್ಚ್‌ 8 ವಿಶ್ವ ಮಹಿಳಾ ದಿನಾಚರಣೆ. ಸಮಾಜದ ಕಣ್ಣಿನಲ್ಲಿ ಮಹಿಳೆ ಎಷ್ಟೇ ತುಳಿತಕ್ಕೆ ಒಳಗಾದರೂ ಹೆಣ್ಣು ಇನ್ನಷ್ಟು ಸಬಲಗೊಳ್ಳುತ್ತಲೇ ಇದ್ದಾಳೆ.

ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ, ಹಲವರಿಗೆ ಸ್ಫೂರ್ತಿಯಾಗಿದ್ದಾಳೆ, ಸಮಾನ ಹಕ್ಕುಗಳನ್ನು ಪಡೆಯುತ್ತಿದ್ದಾಳೆ, ನ್ಯಾಯಕ್ಕಾಗಿ ಹೋರಾಡುತ್ತಾಳೆ, ಲಕ್ಷಾಂತರ ಮಹಿಳೆಯರನ್ನು ಪ್ರೇರೇಪಿಸುತ್ತಿದ್ದಾಳೆ.

ಮಹಿಳಾ ದಿನಾಚರಣೆಯ ಹಿನ್ನೆಲೆ ಅದ್ಭುತ ಶಕ್ತಿ ಇರುವ ಹೆಣ್ಣಿನ ಕುರಿತ ಪ್ರೇರಣಾತ್ಮಕ ಧ್ಯೇಯವಾಕ್ಯಗಳು ಇಲ್ಲಿದೆ ನೋಡಿ:

ಹೆಮ್ಮೆ

ಹೆಮ್ಮೆ

ಹೆಣ್ಣಾಗಿ ಹುಟ್ಟಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡೋಣ.

ಶ್ರೇಷ್ಠ

ಶ್ರೇಷ್ಠ

ಮಹಿಳೆಯ ಸದ್ಗುಣವು ಪುರುಷನ ಶ್ರೇಷ್ಠ ಆವಿಷ್ಕಾರಕ್ಕೆ ಕಾರಣ.

ಕ್ರಾಂತಿ

ಕ್ರಾಂತಿ

ಧೈರ್ಯವಿರುವ ಒಬ್ಬ ಹೆಣ್ಣು ಕ್ರಾಂತಿಯಂತೆ....!

ಬಣ್ಣ

ಬಣ್ಣ

ಜೀವನವು ಕಾಮನಬಿಲ್ಲಾಗಿದ್ದರೆ, ಮಹಿಳೆಯರು ಅದರ ಬಣ್ಣಗಳಂತೆ.

ಬೇಧ

ಬೇಧ

ವೃತ್ತಿಗೆ ಯಾವುದೇ ಲಿಂಗಬೇಧವಿಲ್ಲ.

ಪವಾಡ

ಪವಾಡ

ಮಹಿಳೆಯರು ಜೀವನದಲ್ಲಿ ಒಂದು ಸುಂದರ ಪವಾಡದಂತೆ.

ಇತಿಹಾಸ

ಇತಿಹಾಸ

ಒಳ್ಳೆಯ ನಡತೆಯ ಹೆಣ್ಣು ಇತಿಹಾಸ ನಿರ್ಮಿಸುತ್ತಾಳೆ.

ಹಕ್ಕು

ಹಕ್ಕು

ನನ್ನ ದೇಹ, ನನ್ನ ಹಕ್ಕು.

ವಾಸ್ತುಶಿಲ್ಪಿ

ವಾಸ್ತುಶಿಲ್ಪಿ

ಮಹಿಳೆಯರು ಸಮಾಜದ ನಿಜವಾದ ವಾಸ್ತುಶಿಲ್ಪಿಗಳು

ಮಹಿಳೆ

ಮಹಿಳೆ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ.

ಕುಟುಂಬ

ಕುಟುಂಬ

ಸಂತೋಷದ ಮಹಿಳೆ ನೆಮ್ಮದಿ ಮತ್ತು ಆರೋಗ್ಯಕರ ಕುಟುಂಬವನ್ನು ಸೂಚಿಸುತ್ತಾಳೆ.

ಆತ್ಮವಿಶ್ವಾಸ

ಆತ್ಮವಿಶ್ವಾಸ

ಮಹಿಳೆ ಹೊಂದಬಹುದಾದ ಅತ್ಯಂತ ಆಕರ್ಷಕ ವಿಷಯವೆಂದರೆ ಆತ್ಮವಿಶ್ವಾಸ.

ಬೆಳವಣಿಗೆ

ಬೆಳವಣಿಗೆ

ವಿದ್ಯಾವಂತ ಪುರುಷನು ಕುಟುಂಬವನ್ನು ಪೋಷಿಸುತ್ತಾನೆ, ಆದರೆ ವಿದ್ಯಾವಂತ ಮಹಿಳೆ ಅದರ ಬೆಳವಣಿಗೆಯನ್ನು ವೇಗಗೊಳಿಸುತ್ತಾಳೆ.

ಹೆಜ್ಜೆ

ಹೆಜ್ಜೆ

ಜನಸಮೂಹ ತೋರಿದ ದಿಕ್ಕನ್ನು ಅನುಸರಿಸುವ ಬದಲು ತನ್ನದೇ ಆದ ಹೆಜ್ಜೆಯಲ್ಲಿ ನಡೆಯುವವಳು ಮಹಿಳೆ.

ಗೌರವ

ಗೌರವ

ಹೆಣ್ಣನ್ನು ಅಗೌರವಿಸುವ ಹೇಳಿಕೆಗಳನ್ನು ಎಂದಿಗೂ ಗೌರವಿಸಬೇಡಿ.

ಪ್ರೀತಿ

ಹೆಣ್ಣನ್ನು ಎಂದಿಗೂ ಗೌರವಿಸಿ, ಪ್ರೀತಿಸಿ ಮತ್ತು ಅಭಿನಂದಿಸಿ.

English summary

Women's day slogans in kannada

Here we are discussing about Women's day slogans in kannada.International Women's Day 2022 will be observed on March 8 under the theme “Gender equality today for a sustainable tomorrow. Read more.
X
Desktop Bottom Promotion