For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನಾಚರಣೆ 2022: ದೇಶದ 29 ಸಾಧಕ ಮಹಿಳೆಯರಿಗೆ ಪ್ರತಿಷ್ಠಿತ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನ

|

ಮಹಿಳೆಯ ಸಬಲೀಕರಣದ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಸಾಮಾಜಿಕ ವ್ಯವಸ್ಥೆಯನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಅಸಾಧಾರಣ ಕೊಡುಗೆ ನೀಡುವ ಅಸಾಮಾನ್ಯ ಮಹಿಳೆಯರು ಮತ್ತು ಸಂಸ್ಥೆಗಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನೀಡಲ್ಪಡುವ ಪ್ರಶಸ್ತಿ 'ನಾರಿ ಶಕ್ತಿ ಪುರಸ್ಕಾರ'.

Womens day 2022: President Kovind to Confer Nari Shakti Puraskars to 29 Women: List in kannada

ಸಮಾಜದ ಪ್ರಗತಿಯಲ್ಲಿ ಮಹಿಳೆಯರನ್ನು ಸಮಾನ ಪಾಲುದಾರರನ್ನಾಗಿ ಗುರುತಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದ್ದು, 2020 ಮತ್ತು 2021ನೇ ಸಾಲಿನ ತಲಾ 14 ಪ್ರಶಸ್ತಿ ಪುರಸ್ಕೃತರು, ಒಟ್ಟಾರೆ 29 ಪ್ರಶಸ್ತಿಗಳನ್ನು ದುರ್ಬಲ ಮತ್ತು ನಿರ್ಲಕ್ಷಿತ ಮಹಿಳೆಯರ ಸಬಲೀಕರಣಕ್ಕಾಗಿ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರ ಅಸಾಧಾರಣ ಕೆಲಸ ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ.

"ಆಜಾದಿ ಕಾ ಅಮೃತ ಮಹೋತ್ಸವ"ದ ಭಾಗವಾಗಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಾರಪೂರ್ತಿ ಕಾರ್ಯಕ್ರಮಗಳು 2022 ಮಾರ್ಚ್ 1ರಿಂದ ದೆಹಲಿಯಲ್ಲಿ ಆರಂಭವಾಗಿವೆ. 2022 ಮಾರ್ಚ್ 8ರಂದು ಅಂದರೆ ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು 2020 ಮತ್ತು 2021ನೇ ಸಾಲಿನ 'ನಾರಿ ಶಕ್ತಿ ಪುರಸ್ಕಾರ' ಪ್ರದಾನ ಮಾಡಲಿದ್ದಾರೆ.

2020ನೇ ಸಾಲಿನ ನಾರಿ ಶಕ್ತಿ ಪುರಸ್ಕಾರದ ವಿಜೇತರನ್ನು ಉದ್ಯಮಶೀಲತೆ, ಕೃಷಿ, ನಾವೀನ್ಯತೆ, ಸಾಮಾಜಿಕ ಕಾರ್ಯ, ಕಲೆ ಮತ್ತು ಕರಕುಶಲ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ(STEMM) ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ವೈವಿಧ್ಯಮಯ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದೆ.

ಅಂತೆಯೇ, 2021ನೇ ಸಾಲಿನ ನಾರಿ ಶಕ್ತಿ ಪುರಸ್ಕಾರ ವಿಜೇತರನ್ನು ಭಾಷಾಶಾಸ್ತ್ರ, ಉದ್ಯಮಶೀಲತೆ, ಕೃಷಿ, ಸಮಾಜಕಾರ್ಯ, ಕಲೆ ಮತ್ತು ಕರಕುಶಲ, ಮರ್ಚೆಂಟ್ ನೇವಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ(STEMM), ಶಿಕ್ಷಣ ಮತ್ತು ಸಾಹಿತ್ಯ, ಅಂಗವೈಕಲ್ಯ ಹಕ್ಕುಗಳು ಮತ್ತಿತರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದೆ.

1. ಪ್ರಶಸ್ತಿ ಪುರಸ್ಕೃತರ ಪಟ್ಟಿ

ನಾರಿ ಶಕ್ತಿ ಪುರಸ್ಕಾರ 2020

ಅನಿತಾ ಗುಪ್ತ

ಬಿಹಾರ

ಸಾಮಾಜಿಕ ಉದ್ಯಮಶೀಲತೆ

ಉಷಾ ಬೆನ್ ದಿನೇಶ್ ಭಾಯಿ ವಾಸವ

ಗುಜರಾತ್

ಸಾವಯವ ಕೃಷಿಕರು ಮತ್ತು ಬುಡಕಟ್ಟು ಕಾರ್ಯಕರ್ತೆ

ನಸಿರಾ ಅಖ್ತರ್

ಜಮ್ಮು-ಕಾಶ್ಮೀರ

ಅನುಶೋಧಕಿ - ಪರಿಸರ ಸಂರಕ್ಷಣೆ

ಸಂಧ್ಯಾ ಧಾರ್

ಜಮ್ಮು-ಕಾಶ್ಮೀರ

ಸಾಮಾಜಿಕ ಕಾರ್ಯಕರ್ತೆ

ನಿವೃತಿ ರಾಯ್

ಕರ್ನಾಟಕ

ಕಂಟ್ರಿ ಹೆಡ್, ಇಂಟೆಲ್ ಇಂಡಿಯಾ

ಟಿಫಾನಿ ಬ್ರಾರ್

ಕೇರಳ

ಸಾಮಾಜಿಕ ಕಾರ್ಯಕರ್ತ - ಅಂಧರಿಗೆ ಸೇವಾ ಕಾರ್ಯ

ಪದ್ಮ ಯಂಗ್ ಚನ್

ಲಡಖ್

ಲೇಹ್ ಪ್ರದೇಶದಲ್ಲಿ ನಶಿಸಿದ ಪಾಕಪದ್ಧತಿ ಮತ್ತು ವಸ್ತ್ರಗಳ ಪುನರುಜ್ಜೀವನ ಕಾರ್ಯ

ಜೊಧೈಯ ಬಾಯ್ ಬೈಗಾ

ಮಧ್ಯಪ್ರದೇಶ

ಬುಡಕಟ್ಟು ಬೈಗಾ ಕಲೆಯ ವರ್ಣ ಚಿತ್ರ ಕಲಾವಿದ

ಸೇಲಿ ನಂದ್ ಕಿಶಓರ್ ಅಗವಾನೆ

ಮಹಾರಾಷ್ಟ್ರ

ಅನುವಂಶಿಕ ಅಸ್ವಸ್ಥತೆಯಿಂದ ಬಾಧಿತ ಕಥಕ್ ನೃತ್ಯಪಟು

ವನಿತಾ ಜಗ್ ದೇವ್ ಬೊರಾಡೆ

ಮಹಾರಾಷ್ಟ್ರ

ಹಾವುಗಳ ರಕ್ಷಣೆಯ ಮೊದಲ ಮಹಿಳೆ

ಮೀರಾ ಥಾಕೂರ್

ಪಂಜಾಬ್

ಸಿಕ್ಕಿ ಹುಲ್ಲಿನಿಂದ ಕಲಾಕೃತಿ ತಯಾರಿಸುವ ಕಲಾವಿದೆ

ಜಯ ಮುತ್ತು, ತೇಜಮ್ಮ(ಇಬ್ಬರಿಗೂ ಸೇರಿ 1 ಪ್ರಶಸ್ತಿ)

ತಮಿಳುನಾಡು

ಕುಶಲಕರ್ಮಿಗಳು - ಟೋಡಾ ಕಸೂತಿ ಕಲೆ

ಎಲಾ ಲೋಢ್ (ಮರಣೋತ್ತರವಾಗಿ)

ತ್ರಿಪುರ

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು

ಆರ್ತಿ ರಾಣಾ

ಉತ್ತರ ಪ್ರದೇಶ

ಕೈಮಗ್ಗ ನೇಕಾರರು ಮತ್ತು ಶಿಕ್ಷಕಿ

2. ನಾರಿ ಶಕ್ತಿ ಪುರಸ್ಕಾರ - 2021

ಸತುಪತಿ ಪ್ರಸನ್ನ ಶ್ರೀ

ಆಂಧ್ರ ಪ್ರದೇಶ

ಭಾಷಾಶಾಸ್ತ್ರಜ್ಞ - ಅಲ್ಪಸಂಖ್ಯಾತ ಬುಡಕಟ್ಟು ಭಾಷೆಗಳ ಸಂರಕ್ಷಕ

ತಗೆ ರೀಟಾ ಟಖೆ

ಅರುಣಾಚಲ ಪ್ರದೇಶ

ಉದ್ಯಮಶೀಲ

ಮಧುಲಿಕಾ ರಾಮ್ ಟೇಕೆ

ಛತ್ತೀಸ್ ಗಢ

ಸಾಮಾಜಿಕ ಕಾರ್ಯಕರ್ತ

ನಿರಂಜನ್ ಬೆನ್ ಮುಕುಲ್ ಭಾಯ್ ಕಲಾರ್ತಿ

ಗುಜರಾತ್

ಲೇಖಕ ಮತ್ತು ಶಿಕ್ಷಣ ತಜ್ಞ.

ಪೂಜಾ ಶರ್ಮ

ಹರ್ಯಾಣ

ಕೃಷಿಕ ಮತ್ತು ಉದ್ಯಮಶೀಲ

ಅನ್ಶುಲ್ ಮಲ್ಹೋತ್ರ

ಹಿಮಾಚಲ ಪ್ರದೇಶ

ನೇಕಾರ - ನೇಯ್ಗೆ

ಶೋಭಾ ಗಸ್ತಿ

ಕರ್ನಾಟಕ

ಸಾಮಾಜಿಕ ಕಾರ್ಯಕರ್ತೆ - ದೇವದಾಸಿ ಪದ್ಧತಿ ಕೊನೆಗಾಣಿಸಲು ಶ್ರಮಿಸುತ್ತಿದ್ದಾರೆ

ರಾಧಿಕಾ ಮೆನನ್

ಕೇರಳ

ಕ್ಯಾಪ್ಟನ್ ಮರ್ಚೆಂಟ್ ನೇವಿ - ಸಾಗರ ಭಾಗದಲ್ಲಿ ಅಸಾಧಾರಣ ಶೌರ್ಯ ತೋರಿದ ಮೊದಲ ಮಹಿಳೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಾಧನೆ ಗುರುತಿಸಿದ ಅಂತಾರಾಷ್ಟ್ರೀಯ ಸಾಗರ ಸಂಘಟನೆ.

ಕಮಲ್ ಕುಂಬಾರ್

ಮಹಾರಾಷ್ಟ್ರ

ಸಾಮಾಜಿಕ ಉದ್ಯಮಶೀಲ

ಶೃತಿ ಮೊಹಾಪಾತ್ರ

ಒಡಿಶಾ

ಅಂಗವೈಕಲ್ಯ ಹಕ್ಕುಗಳ ಕಾರ್ಯಕರ್ತೆ

ಬತೂಲ್ ಬೇಗಂ

ರಾಜಸ್ಥಾನ

ಮಾಂದ್ ಮತ್ತು ಭಜನ್ ಜಾನಪದ ಗಾಯಕರು

ತಾರಾ ರಂಗಸ್ವಾಮಿ

ತಮಿಳುನಾಡು

ಮನೋವೈದ್ಯ ಮತ್ತು ಸಂಶೋಧಕ

ನೀರ್ಜಾ ಮಾಧವ್

ಉತ್ತರಪ್ರದೇಶ

ಹಿಂದಿ ಲೇಖಕರು - ತೃತೀಯಲಿಂಗಿಗಳು ಮತ್ತು ಟಿಬೆಟಿಯನ್ ನಿರಾಶ್ರಿತರ ಹಕ್ಕುಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ

ನೀನಾ ಗುಪ್ತ

ಪಶ್ಚಿಮ ಬಂಗಾಳ

ಗಣಿತ ಶಾಸ್ತ್ರ

English summary

Women's day 2022: President Kovind to Confer Nari Shakti Puraskars to 29 Women: List in kannada

Here we are discussing about Women's day 2022: President Kovind to Confer Nari Shakti Puraskars to 29 Women: List in kannada. Read more.
Story first published: Tuesday, March 8, 2022, 15:04 [IST]
X
Desktop Bottom Promotion