Just In
Don't Miss
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Movies
'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಮಗಳ ಸಾಕಲು 36 ವರ್ಷದಿಂದ ಗಂಡಸಿನ ವೇಷದಲ್ಲಿರುವ ತಾಯಿ, ಅಬ್ಬಾ! ಇವರ ಬದುಕಿನಲ್ಲಿ ವಿಧಿ ತುಂಬಾನೇ ಕ್ರೂರವಾಗಿತ್ತು
ಕೆಲವರ ಬದುಕು ನೋಡುವಾಗ ಈ ಬದುಕು ಎಂಬುವುದು ಎಷ್ಟೊಂದು ಎಷ್ಟೊಂದು ವಿಚಿತ್ರವಲ್ಲಾ? ಬದುಕಲು ಏನೆಲ್ಲಾ ವೇಷ ಕಟ್ಟಬೇಕು, ಎಂಥೆಲ್ಲಾ ನಾಟಕವಾಡಬೇಕು ಎಂದು ಅನಿಸದೆ ಇರಲ್ಲ. ಇಲ್ಲಿ ನಾವು ಹೇಳುತ್ತಿರುವುದು ಅಂಥದ್ದೇ ನಾ ಟಕದ ಬದುಕಿನ ಬಗ್ಗೆ, ಆದರೆ ಆ ಕತೆ ಕೇಳಿದರೆ ನಿಮ್ಮ ಹೃದಯ ಚುರ್ ಅನ್ನದೆ ಇರಲ್ಲ.... ತನ್ನ ಮಗಳನ್ನು ಸಾಕಲು ಒಬ್ಬ ತಾಯಿ ಗಂಡಸಿನಂತೆ ವೇಷ ಧರಿಸಿ ಬದುಕಿದ ಕತೆ.
ಈ ಬದುಕಿನ ಕತೆಯ ಕಥಾ ನಾಯಕ ಅಲ್ಲಲ್ಲ ಕಥಾ ನಾಯಕಿ ತಮಿಳುನಾಡಿನ ತೂತುಕುಡಿಯವರು. ಈಗ ಅವರಿಗೆ 57 ವರ್ಷ ಕಳೆದ 36 ವರ್ಷದಿಂದ ಪುರುಷನಂತೆ ವೇಷ ಮರೆಸಿಕೊಂಡು ಬದುಕುತ್ತಿದ್ದಾರೆ.
ಈ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಮಗಳನ್ನು ಸಾಕಲು ತನ್ನ ಅಸ್ತಿತ್ವವನ್ನೇ ಮರೆ ಮಾಚುವ ಅವಶ್ಯಕತೆ ಅವಳಿಗೆ ಎದುರಾಯ್ತು.

ಮದುವೆಯಾದ 15ನೇ ದಿನಕ್ಕೆ ಗಂಡನ ಸಾವು
ನೂರಾರು ಕನಸುಗಳನ್ನು ಹೊತ್ತುಕೊಂಡು ಹೊಸ ಬದುಕಿಗೆ ಕಾಲಿಟ್ಟಿದ್ದ ಪೆಟ್ಟಿಚೈಮಾಳ್ಗೆ ಕೆಲವೇ ದಿನಗಳನ್ನು ತನ್ನ ಕನಸು ನುಚ್ಚು ಚೂರಾಗಿ ಬದುಕಿನಲ್ಲಿ ಕತ್ತಲೆ ಆವರಿಸುತ್ತದೆ ಎಂಬ ಯಾವ ಚಿಕ್ಕ ಸುಳಿವೂ ಇರಲಿಲ್ಲ. ಮದುವೆಯಾಗಿ ಹದಿನೈದು ದಿನಕ್ಕೆ ಗಂಡ ತೀರಿ ಹೋಗುತ್ತಾನೆ. ಆದರೆ ಅಲ್ಲಿಗೂ ಆಕೆಯ ಬದುಕಿನ ಕಷ್ಟಕಾಲ ಮುಗಿಯುವುದಿಲ್ಲ, ದಾಂಪತ್ಯ ನಡೆಸಿರುವುದು ಕೆಲವೇ ಇನಗಳಾದರೂ ಅವರಿಬ್ಬರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಗರ್ಭದಲ್ಲಿ ಜೀವವೊಂದು ಮೂಡಿತ್ತು.

20ನೇ ವಯಸ್ಸಿಗೆ ಮಗಳಿಗೆ ಜನ್ಮ ನೀಡುತ್ತಾಳೆ
20ನೇ ವರ್ಷಕ್ಕ ಮಗಳು ಹುಟ್ಟುತ್ತಾಳೆ. ಅವಳ ಹೆಸರು ಷಣ್ಮುಗಸುಂದರಿ. ಮಗಳನ್ನು ಸಾಕಬೇಕು ಆದರೆ ಆಸರೆ ಅಂತ ಯಾರೂ ಇಲ್ಲ. ಮತ್ತೊಂದು ಮದುವೆಯಾಗಲು ಪೆಟ್ಟಿಚೈಮಾಳ್ ಮನಸ್ಸು ಮಾಡಲಿಲ್ಲ, ನಾನೇ ದುಡಿದು ಮಗಳನ್ನು ಸಾಕುತ್ತೇನೆ ಎಂದು ನಿರ್ಧಾರ ಮಾಡುತ್ತಾರೆ.

ಒಂಟಿ ಹೆಣ್ಣಿಗೆ ಈ ಸಮಾಜ ಸುರಕ್ಷಿತವಲ್ಲ
ಪ್ರಾಯದ ಹೆಣ್ಣು, ಗಂಡು ದಿಕ್ಕಿಲ್ಲ, ಆರ್ಥಿಕ ತೊಂದರೆಯಲ್ಲಿ ಇದ್ದಾಳೆ ಎಂದರೆ ಕಾಮುಕರು ಅವಕಾಶ ಸಿಕ್ಕರೆ ಕುಕ್ಕಿ ತಿನ್ನಲು ಹೊಂಚು ಹಾಕುತ್ತಾರೆ. ಒಂಟಿ ಹೆಣ್ಣಿಗೆ ಎದುರಾಗುವ ಕಷ್ಟ ಅಷ್ಟಿಟ್ಟಲ್ಲ, ಅಂಥ ಹೆಣ್ಮಕ್ಕಳ ಕಷ್ಟ ನಮ್ಮ ಊಹೆಗೂ ಮೀರಿ ಭಯಾನಕವಾಗಿರುತ್ತದೆ.
ಮಗಳನ್ನು ಇಂಥ ಸಮಾಜದಲ್ಲಿ ಸಾಕಲು ಪೆಟ್ಟಿಚೈಮಾಳ್ ಕಂಡುಕೊಂಡ ದಾರಿ ತನ್ನ ಗುರುತನ್ನು ಮರೆಮಾಚುವುದು, ಅಂದರೆ ತಾನು ಗಂಡಿನಂತೆ ವೇಷ ಮರೆಸಿ ಜೀವಿಸುವುದು.

ಮುತ್ತುವಾದ ಪೆಟ್ಟಿಚೈಮಾಳ್
ಹೋಟೆಲ್, ಟೀ ಶಾಪ್, ಕನ್ಸ್ಟ್ರಕ್ಷನ್ ಸೈಟ್ಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕಿದ್ದಾರೆ, ಆದರೆ ಯಾರಿಗೂ ಅವರು ಹೆಣ್ಣೆಂಬುವುದು ಗೊತ್ತಿರಲಿಲ್ಲ, ಗಂಡಿನ ವೇಷದಲ್ಲಿ ದುಡಿದು ಮಗಳನ್ನು ಸಾಕಿದ್ದಾರೆ. ಕಟ್ಟುನಾಯಕನಪಟ್ಟಿಗೆ ಬಂದು ಅಲ್ಲಿ ಕಳೆದ 20 ವರ್ಷದಿಂದ ಪುರುಷನಂತೆ ಬದುಕಿದ್ದಾರೆ. ಅವರ ಐಡಿಕಾರ್ಡ, ಆಧಾರ್ ಕಾರ್ಡ್ ಎಲ್ಲದರಲ್ಲೂ ಪುರುಷ ಅಂತಲೇ ಇದೆ. ಮಗಳಿಗೆ ಹಾಗೂ ತುಂಬಾ ಹತ್ತಿರದ ಕುಟುಂಬಸ್ಥರಿಗೆ ಮಾತ್ರ ಅವರ ಬಗ್ಗೆ ತಿಳಿದಿತ್ತು.
ಮಗಳನ್ನು ಚೆನ್ನಾಗಿಯೇ ಸಾಕಿ ಮದುವೆ ಮಾಡಿ ಕೊಟ್ಟಿದ್ದಾರೆ. ಮಗಳು, ಕುಟುಂಬ ಆರ್ಥಿಕವಾಗಿ ಚೆನ್ನಾಗಿದ್ದಾರೆ, ಆದರೆ ಬದುಕಿನಲ್ಲಿ ಸುರಕ್ಷತೆ ನೀಡಿರುವ ಮುತ್ತು ವೇಷ ಕಳಚಲು ಅವರಿಗೆ ಮನಸ್ಸಾಗುತ್ತಿಲ್ಲ. ಇತ್ತೀಚೆಗಷ್ಟೇ ಅವರಿಗೆ ಸ್ತ್ರೀ ಗುರುತಿನಲ್ಲಿ ಮ್ಯಾನೇಜರ್ ಜಾಬ್ ಕಾರ್ಡ್ ಸಿಕ್ಕಿದೆ.
ಈ ಬದುಕೇ ಒಂದು ನಾಟಕ ರಂಗ ಅಲ್ವಾ..... ಇಲ್ಲಿ ಬದುಕಲು ಎಂಥೆಲ್ಲಾ ವೇಷ ಕಟ್ಟಬೇಕು, ಪರಿಸ್ಥಿತಿಗಳು ನಮ್ಮಿಂದ ಆ ರೀತಿಯ ವೇಷ ಕಟ್ಟಿಸುತ್ತೆ ಅಲ್ವಾ?