For Quick Alerts
ALLOW NOTIFICATIONS  
For Daily Alerts

ಪ್ರತಿರಾಶಿಯ ಈ ಗುಣವೇ ಇನ್ನೊಬ್ಬರನ್ನು ಸೆಳೆದು, ಪ್ರೀತಿಯಲ್ಲಿ ಬೀಳುವಂತೆ ಮಾಡುವುದು

|

ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಗುಣಗಳಿರುತ್ತವೆ. ಆ ಗುಣಗಳಿಂದಲೇ ಕೆಲವೊಮ್ಮೆ ನಾವು ಗುರುತಿಸಿಕೊಳ್ಳುವುದು, ಎಲ್ಲರ ಗಮನ ಸೆಳೆಯುವುದು. ಅದೇ ರೀತಿ ಪ್ರೀತಿಯಲ್ಲಿ ಬೀಳೋಕೆ ನಾನಾ ಕಾರಣಗಳಿರುತ್ತವೆ. ಆದರೆ ನಿಮ್ಮಲ್ಲಿನ ನಿರ್ದಿಷ್ಟ ಗುಣಗಳಿಂದಾಗಿ ನಿಮ್ಮ ಕಡೆಗೆ ಮನಸೋಲುವವರಿರುತ್ತಾರೆ. ಹಾಗಾದರೆ ಪ್ರತಿರಾಶಿಚಕ್ರದ ಪ್ರಕಾರ, ನಿಮ್ಮ ಯಾವ ಗುಣ ಕಂಡು, ಮತ್ತೊಬ್ಬರನ್ನು ಸೆಳೆದು ಪ್ರೀತಿಯಲ್ಲಿ ಬೀಳುವಂತೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿರಾಶಿ ಚಕ್ರದ ಈ ಗುಣವೇ ಇನ್ನೊಬ್ಬರನ್ನು ಸೆಳೆದು, ಪ್ರೀತಿಯಲ್ಲಿ ಬೀಳುವಂತೆ ಮಾಡುವುದು. ಆ ಗುಣಗಳಾವುವು ಈ ಕೆಳಗೆ ನೋಡಿ:

ಮೇಷ:

ಮೇಷ:

ಜನರು ನಿಮ್ಮ ಸ್ವ-ನೀತಿ ಮತ್ತು ಪ್ರಾಮಾಣಿಕತೆಗೆ ಆಕರ್ಷಿತರಾಗುತ್ತಾರೆ. ಜನರನ್ನು ಬೆರಗುಗೊಳಿಸುವಲ್ಲಿ ನೀವೆಂದಿಗೂ ವಿಫಲರಾಗುವುದಿಲ್ಲ, ಏಕೆಂದರೆ ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಸಹ, ನೀವು ಪ್ರಾಮಾಣಿಕತೆಯನ್ನೇ ಆಯ್ಕೆ ಮಾಡುತ್ತೀರಿ. ನಿಮಗೆ ತೊಂದರೆಯಾಗುತ್ತದೆ ಎಂದು ತಿಳಿದಿದ್ದರೂ, ಪ್ರಾಮಾಣಿಕತೆಯನ್ನು ಆಯ್ಕೆ ಮಾಡುವ ಗುಣಕ್ಕೆ ಯಾರನ್ನಾದರೂ ಬೀಳಿಸುವ ಶಕ್ತಿ ಇದೆ. ನೀವು ತುಂಬಾ ನಂಬಿಕಸ್ತರಾಗಿರುವ ಕಾರಣ ಎಲ್ಲರೂ ಕಣ್ಣುಮುಚ್ಚಿಕೊಂಡು ನಂಬುತ್ತಾರೆ.

ವೃಷಭ:

ವೃಷಭ:

ನಿಮ್ಮ ತ್ವರಿತ ನಿರ್ಧಾರಕ್ಕಾಗಿ ಪ್ರತಿಯೊಬ್ಬರೂ ನಿಮ್ಮನ್ನು ಮೆಚ್ಚುತ್ತಾರೆ. ಅದು ಈ ಸಮಯದಲ್ಲಿ ಬಹಳಷ್ಟು ತೊಂದರೆಗಳಿಂದ ಉಳಿಸುತ್ತದೆ. ನಿಮ್ಮ ಸ್ಮಾರ್ಟ್ ಗುಣಗಳೇ ಎಲ್ಲರನ್ನು ಆಕರ್ಷಣೆ ಮಾಡುವುದು. ಈ ಗುಣಗಳು ಯಾವುದೇ ಅಡೆತಡೆಗಳನ್ನು ತಡೆಯಲು ಮತ್ತು ಅಡೆತಡೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಮಿಥುನ:

ಮಿಥುನ:

ಎಲ್ಲರ ನಡುವೆ ಎದ್ದು ಕಾಣುವಂತಹ ವ್ಯಕ್ತಿತ್ವ. ಈ ರಾಶಿಯನ್ನು ಸಾಮಾನ್ಯವಾಗಿ ಸಾಮಾಜಿಕ ಚಿಟ್ಟೆ ಎಂದು ನಿಮ್ಮನ್ನು ಕರೆಯಲಾಗುತ್ತದೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಸಂತೋಷವಾಗಿರಿಸುವುದು ನಿಮ್ಮ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಈ ಗುಣವು ನಿಮ್ಮ ಸಂಗಾತಿಯಾಗುವವರ ಮನಸ್ಸನ್ನು ಬೇಘ ಕದ್ದುಬಿಡುತ್ತದೆ. ನೀವು ಮಾತನಾಡಲು ತುಂಬಾ ಆಸಕ್ತಿದಾಯಕರು!

ಕರ್ಕ:

ಕರ್ಕ:

ಜನರು ನಿಮ್ಮನ್ನು ನಂಬದಿರಲು ಸಾದ್ಯವೇ ಇಲ್ಲ, ಏಕೆಂದರೆ ನಂಬಿಕೆ ಹಾಗೂ ಬದ್ಧತೆಗೆ ಹೆಸರುವಾಸಿ ನೀವು. ಯಾರೂ ಅವರ ಕುಟುಂಬವನ್ನು ಇಷ್ಪಪಡುವುದಿಲ್ಲವೋ, ಅವರು ನಿಮಗೆ ಇಷ್ಟವಾಗುವುದಿಲ್ಲ, ಏಕೆಂದರೆ ನಿಮಗೆ ಕುಟುಂಬವೇ ಎಲ್ಲಾ. ನಿಮ್ಮಲ್ಲಿ ಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ಇರುತ್ತದೆ.

ಸಿಂಹ:

ಸಿಂಹ:

ನೀವು ಗಮನವನ್ನು ಪ್ರೀತಿಸುತ್ತೀರಿ ಆದರೆ ಅದು ನಿಮ್ಮ ಪ್ರೀತಿಪಾತ್ರರಿಂದ ಬಂದಾಗ ಮಾತ್ರ ಅದನ್ನು ಹೆಚ್ಚು ಇಷ್ಟಪಡುತ್ತೀರಿ. ಇತರರು ನೀವು ನಿಮ್ಮ ಸುತ್ತಲಿನ ಜನರನ್ನು ಖುಷಿಯಾಗಿಡಲು ಮಾಡುವ ಕೆಲಸ, ಸಂತೋಷ ಹರಡುವ ರೀತಿಯನ್ನು ಇಷ್ಟಪಡುತ್ತಾರೆ. ಅದೇ ಗುಣಕ್ಕೆ ಆಕರ್ಷಿತರಾಗುತ್ತಾರೆ. ನಿಮ್ಮಲ್ಲಿನ ಕರುಣೆಗೂ ಸಹ ಕೆಲವರು ನಿಮ್ಮನ್ನು ಪ್ರೀತಿಸುತ್ತಾರೆ.

ಕನ್ಯಾ:

ಕನ್ಯಾ:

ನೀವು ವಿಮರ್ಶಾತ್ಮಕ ವ್ಯಕ್ತಿತ್ವವನ್ನು ಹೊಂದಿರಬಹುದು ಆದರೆ ನಿಮ್ಮ ಆಪ್ತರಿಗೆ ನೀವು ತುಂಬಾ ಬೆಂಬಲ ನೀಡುತ್ತೀರಿ. ನಿಮ್ಮ ವಿಮರ್ಶೆಯ ಏಕೈಕ ಉದ್ದೇಶವೆಂದರೆ ಇತರರು ತಮ್ಮನ್ನು ತಾವು ಅತ್ಯುತ್ತಮ ಆವೃತ್ತಿಯನ್ನಾಗಿ ಮಾಡಲು ಪ್ರೇರೇಪಿಸುವುದು ಮತ್ತು ಈ ಅದ್ಭುತ ಗುಣಕ್ಕಾಗಿ ಯಾರಾದರೂ ಖಂಡಿತವಾಗಿಯೂ ನಿಮ್ಮನ್ನು ಶ್ಲಾಘಿಸುತ್ತಾರೆ ಮತ್ತು ಪ್ರೀತಿಸುತ್ತಾರೆ.

ತುಲಾ:

ತುಲಾ:

ನೀವು ಶಾಂತ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಅದೇ ಜನರು ನಿಮ್ಮನ್ನು ಪ್ರೀತಿಸುವಂತೆ ಮಾಡುವುದು. ನಿಮ್ಮ ಶಾಂತ ವರ್ತನೆ ಯಾವುದೇ ವಾದವನ್ನು ಸುಲಭವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಸಾಕಷ್ಟು ಸಮರ್ಥನೆಗಳನ್ನು ಕೊಡುವ ನಿಮ್ಮ ಜೊತೆಗಿನ ಮಾತು ಪ್ರೀತಿಯಲ್ಲಿ ಬೀಳುವಂತೆ ಮಾಡುವುದು.

ವೃಶ್ಚಿಕ:

ವೃಶ್ಚಿಕ:

ನೀವು ಭಾವನೆಗಳಿಗೆ ಬೇಗ ಸ್ಪಂದಿಸುತ್ತೀರಿ, ನಿಮ್ಮ ಇದೇ ಗುಣ ಇನ್ನೊಬ್ಬರನ್ನು ಬೇಗನೇ ಸೆಳೆದುಬಿಡುತ್ತದೆ. ಹೊರಗಿನಿಂದ ನೀವು ನಿಗೂಢ ವ್ಯಕ್ತಿ ಎನಿಸಿದರೂ, ನಿಮ್ಮ ಆಂತರ್ಯದಲ್ಲಿ ಬಹಳ ಪ್ರಾಮಾಣಿಕ ಹಾಗೂ ಮೃದುಸ್ವಭಾವವಿರುತ್ತದೆ. ಈ ಗುಣವೇ ನಿಮ್ಮ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿಬಿಡುತ್ತದೆ.

ಧನು:

ಧನು:

ನೀವು ಯಾವುದೇ ಭಾವನೆಗಳನ್ನು ಎದುರಿಸಲು ಬೇಕಾದರೂ ಸೈ, ಅದು ನೋವು, ನಗು, ಪ್ರೀತಿ ಯಾವುದೇ. ನೀವು ತುಂಬಾ ಪ್ರೀತಿಯಿಂದ ಮತ್ತು ಇತರರ ಬಗ್ಗೆ ಕಾಳಜಿ ವಹಿಸುತ್ತೀರಿ, ಈ ಗುಣ ಇತರರನ್ನು ಸೆಳೆದುಬಿಡುತ್ತದೆ.

ಮಕರ:

ಮಕರ:

ಸಂಬಂಧಗಳ ವಿಷಯಕ್ಕೆ ಬಂದಾಗ ನೀವು ತುಂಬಾ ನಿರಂತರವಾಗಿರುತ್ತೀರಿ. ಅದು ನಿಮ್ಮಲ್ಲಿರುವ ಅನನ್ಯ ಗುಣವಾಗಿದ್ದು ಅದು ಇತರರನ್ನು ಆಕರ್ಷಿಸುತ್ತದೆ. ಜೊತೆಗೆ ಆಗಬೇಕಾದ ಕೆಲಸದಿಂದ ಹಿಂಜರಿಯದ ನಿಮ್ಮ ಮನೋಭಾವವನ್ನೂ ಸಹ ಮೆಚ್ಚಿಕೊಳ್ಳುತ್ತಾರೆ. ಅದರ ಜೊತೆಗೆ ನೀವು ಮಾಡುವ ಕಾಳಜಿ ಕೂಡ ಈ ಗುಣಗಳ ಸಾಲಿನಲ್ಲಿದೆ.

ಕುಂಭ:

ಕುಂಭ:

ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಕಠಿಣ ಶ್ರಮ ಪಡಬೇಕು ಎಂದು ಬಲವಾದ ನಂಬಿಕೆಯುಳ್ಳವರು. ಒಂದು ಯೋಜನೆಯಲ್ಲಿ ಯಶಸ್ವಿಯಾಗಲು ಮಾಡಬೇಕಾದ ಕೆಲಸಕ್ಕೆ ಯಾವುದೇ ಹಿಂಜರಿಕೆಯಿಲ್ಲ. ನಿಮ್ಮ ಪರಿಶ್ರಮ ಮತ್ತು ದೃಢ ನಿಶ್ಚಯವು ಒಂದು ಸರ್ವೋಚ್ಚ ಗುಣವಾಗಿದ್ದು ಅದು ಜನರು ನಿಮ್ಮನ್ನು ಪ್ರೀತಿಸುವಂತೆ ಮಾಡುತ್ತದೆ.

ಮೀನ:

ಮೀನ:

ನೀವು ಇತರರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮತ್ತೊಂದು ಸೂಕ್ಷ್ಮ ಚಿಹ್ನೆ. ನೀವು ಕಾಳಜಿವಹಿಸುವ ಜನರನ್ನು ರಕ್ಷಿಸಲು ನೀವು ಏನನ್ನೂ ಬೇಕಾದರೂ ಮಾಡುತ್ತೀರಿ. ಈ ಗುಣವೇ ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳುವಂತೆ ಮಾಡುವುದು.

English summary

Why People Fall in Love with You Based on Your Zodiac Sign in Kannada

Here we talking about Why People Fall in Love with You Based on Your Zodiac Sign in Kannada, read on
Story first published: Tuesday, July 20, 2021, 16:36 [IST]
X