For Quick Alerts
ALLOW NOTIFICATIONS  
For Daily Alerts

Raven Saunders: ಟೋಕಿಯೋ ಒಲಿಂಪಿಕ್ಸ್: ಸಲಿಂಗಿ ಸಮುದಾಯವನ್ನು ಬೆಂಬಲಿಸುವ ಸ್ಟೈಲ್‌ನಲ್ಲಿ ಗಮನ ಸೆಳೆದ ರಾವೆನ್ ಸಾಂಡರ್ಸ್

|

ರಾವೆನ್ ಸಾಂಡರ್ಸ್ ಈ ಹೆಸರು ಸಾಮಾಜಿಕ ತಾಣದಲ್ಲಿ ತುಂಬಾ ಟ್ರೆಂಡ್‌ನಲ್ಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಶಾಟ್‌ ಪುಟ್‌ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ ... ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇವರ ಸ್ಟೈಲ್‌ ಹೆಚ್ಚಿನ ಗಮನ ಸೆಳೆದಿದ್ದು ತಮ್ಮ ವಿಭಿನ್ನ ಸ್ಟೈಲ್‌ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ.

ಹಸಿರು ಹಾಗೂ ನೀಲಿ ಬಣ್ಣದ ತಲೆ ಕೂದಲು ಕೈಯಲ್ಲಿ ಒಲಿಂಪಿಕ್ಸ್‌ ಟ್ಯಾಟೂ, ಮೂಗಿಗೆ ದೊಡ್ಡದ ರಿಂಗ್ ಮೂಗೂತಿ ಒಟ್ಟಿನಲ್ಲಿ ಇವರ ಸ್ಟೈಲ್‌ ಮಾತ್ರ ತುಂಬಾನೇ ಭಿನ್ನವಾಗಿದೆ.

ಅವರೇ ಹೇಳುವಂತರ ಅವರೊಬ್ಬರು ಸಲಿಂಗಿ. LGBTQ ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ ಆಟದ ವೇಳೆ ಜೋಕರ್‌ ಮುಖವಾಡ ಧರಿಸಿ, ಕೂದಲಿಗೆ ಹಸಿರು ಹಾಗೂ ನೀಲಿ ಬಣ್ಣವನ್ನು ಬಳಿದು ಆಡುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಅಲ್ಲದೆ ಪದಕವನ್ನು ಸ್ವೀಕರಿಸುವಾಗ ಕೈಗಳನ್ನು X ರೀತಿ ಹಿಡಿದು ಕ್ಯಾಮರಾಗೆ ಪೋಸ್‌ ನೀಡುವ ಮೂಲಕ ಪ್ರತಿಭಟನೆಯ ಸಂಕೇತ ತೋರಿದ್ದಾರೆ.

20216ರ ರಿಯೋ ಒಲಿಂಪಿಕ್ಸ್‌ನಲ್ಲಿ 5ನೇ ಸ್ಥಾನ ತಲುಪಿದರೂ ಅವರಿಗೆ ಅದನ್ನು ಸಂಭ್ರಮಿಸಲು ಸಾಧ್ಯವಾಗಲಿಲ್ಲ... ಅವರ ಜೀವನದಲ್ಲಿ ಇದ್ದಕ್ಕಿದ್ದಂತೆ ಕತ್ತಲಾವರಿಸಿತ್ತು. ಅವರು ಗೇ ಎಂಬ ಕಾರಣ ಅವರಿಗೆ ಅವಕಾಶ ಸಿಗಲಿಲ್ಲ. ಈ ಕಾರಣಕ್ಕೆ ದೊಡ್ಡ ಪ್ರತಿಭಟನೆಯೇ ನಡೆಯಿತು. 2018ರಲ್ಲಿ ಇದರಿಂದಾಗಿ ತುಂಬಾ ಖಿನ್ನತೆಗೆ ಒಳಗಾಗಿದ್ದ ರಾವೆನ್ ತಮ್ಮ ಜೀವನವನ್ನೇ ಕೊನೆಗಾಣಿಸಲು ಯೋಚಿಸಿದ್ದರು... ನಾನು ಇನ್ನು ಬದುಕಿರಲಾರೆ ಎಂದು ನಿರ್ಧರಿಸಿದ ಅವರು ಕೊನೆಯ ಕ್ಷಣದಲ್ಲಿ ತನ್ನ ಕೋಚ್‌ಗೆ ಒಂದು ಮೆಸೇಜ್‌ ಕಳುಹಿಸುತ್ತಾರೆ, ಅದರಿಂದಾಗಿ ಅವರ ಜೀವ ಉಳಿಯುತ್ತೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪ್ರತಿಭಟನೆಯ ಫಲವಾಗಿ ನಿಯಮಗಳನ್ನು ಸ್ವಲ್ಪ ಸಡಿಸಿಲಾಯಿತು. ಈ ಕಾರಣಕ್ಕೆ ಅವರು ಈ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಯಿತು. ಈಗ ಅವರು ಮಾಡಿರುವ ಸಾಧನೆಯಿಂದ ಅವರಂತೆಯೇ ತುಂಬಾ ಮಾನಸಿಕ ಸಮಸ್ಯೆ ಅನುಭವಿಸುತ್ತಿರುವವರಿಗೆ ಅದರಿಂದ ಹೊರ ಬರಲು ಪ್ರೇರೇಣೆಯಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾವೆನ್ ಸಾಂಡರ್ಸ್ ತಮ್ಮ ಆಟದ ಮೂಲಕ ಮಾತ್ರವಲ್ಲ, ತಮ್ಮ ವೇಷ ಹಾಗೂ ನಡತೆಯ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ.

English summary

Who is Raven Saunders? Inspiring Story of athlete who won silver at Tokyo Olympics in women's shot put

Who is Raven Saunders? Inspiring Story of athlete who won silver at Tokyo Olympics in women's shot put
X
Desktop Bottom Promotion