For Quick Alerts
ALLOW NOTIFICATIONS  
For Daily Alerts

ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಅವರ ಬಗ್ಗೆ ತಿಳಿಯಲು ಹೆಚ್ಚು ಗೂಗಲ್‌ ಸರ್ಚ್ , ಯಾರಿವರು, ಇವರ ಹಿನ್ನೆಲೆಯೇನು?

|

ದ್ರೌಪದಿ ಮುರ್ಮ ಈ ಹೆಸರು ಸಾಮಾಜಿಕ ತಾಣದಲ್ಲಿ ತುಂಬಾನೇ ಟ್ರೆಂಡ್‌ ಆಗುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ಡ್ರೌಪದಿ ಮುರ್ಮು ಅವರ ಬಗ್ಗೆ, ಅವರ ಹಿನ್ನೆಲೆ ಬಗ್ಗೆ ಜನರಿಗೆ ಹೆಚ್ಚೆಚ್ಚು ತಿಳಿಯುವ ಕುತೂಹಲ ಜನರಿಗೆ.

ಜನರು ಕೂಡ ಈ ಅಭ್ಯರ್ಥಿ ಹೆಸರು ಸೂಚಿಸಿರುವುದಕ್ಕೆ ತುಂಬಾನೇ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ, ಅಲ್ಲದೆ ಬುಡಕಟ್ಟು ಸಮುದಾಯದ ಮೊದಲ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.

ದ್ರೌಪದಿ ಮುರ್ಮು ಅವರ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:

ಯಾರು ಈ ದ್ರೌಪದಿ ಮುರ್ಮು?

ಯಾರು ಈ ದ್ರೌಪದಿ ಮುರ್ಮು?

ಜಾರ್ಖಂಡ್‌ ಮೂಲದ ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು. 1958 ಜೂನ್‌ 20ರಂದು ಜನಿಸಿದರು. ಇವರು ಒಡಿಶಾ ಮೂಲದವರು. ಇವರ ಕುಟುಂಬ ಜೀವನದ ಬಗ್ಗೆ ನೋಡುವುದಾದರೆ ಇವರ ಇಬ್ಬರು ಗಂಡು ಮಕ್ಕಳು ಹಾಗೂ ಪತಿ ಸಾವನ್ನಪ್ಪಿದ್ದಾರೆ, ಪುತ್ರಿ ಮಾತ್ರ ಇದ್ದಾರೆ, ಅವರೊಂದಿಗೆ ವಾಸವಾಗಿದ್ದಾರೆ.

ಬಡತನದಲ್ಲಿ ಬೆಳೆದು ಸಾಧನೆ ಮಾಡಿದ ಗಟ್ಟಿಗಿತ್ತಿ

ಬಡತನದಲ್ಲಿ ಬೆಳೆದು ಸಾಧನೆ ಮಾಡಿದ ಗಟ್ಟಿಗಿತ್ತಿ

ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ವಿವಾಹದ ಬಳಿಕ ಮಕ್ಕಳ ಉಚಿತ ಶಿಕ್ಷಣ ನೀಡುತ್ತಿದ್ದರು, ಈ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಆದರೆ ಅವರು ರಾಜಕಾರಣಿ ಆಗಲು ತೀರ್ಮಾನಿಸಿದ ಬಳಿಕ ಅವರ ವೃತ್ತಿ ಜೀವನವೂ ಬದಲಾಯಿತು. 1997ರಲ್ಲಿ ರಾಯರಂಗಪುರ ನಗರ ಪಂಚಾಯತ್‌ನಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿ ಜೀವನ ಪ್ರಾರಂಭಿಸುತ್ತಾರೆ. ಅಲ್ಲಿಂದ ಅವರ ವತ್ತಿ ಜೀವನ ಇಷ್ಟು ದೊಡ್ಡದಾಗಿ ಬೆಳೆದಿದೆ.

ವೃತ್ತಿ ಜೀವನದಲ್ಲಿ ಹಲವು ವಿಷಯದಲ್ಲಿ ಮೊದಲ ಸ್ಥಾನ ಪಡೆದ ಮಹಿಳೆ

ವೃತ್ತಿ ಜೀವನದಲ್ಲಿ ಹಲವು ವಿಷಯದಲ್ಲಿ ಮೊದಲ ಸ್ಥಾನ ಪಡೆದ ಮಹಿಳೆ

* ಅವರು ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

* ಬುಡಕಟ್ಟು ಜನಾಂಗದ ಮೊದಲ ಮಹಿಳಾ ರಾಜ್ಯಪಾಲರು ಕೂಡ ಇವರೇ ಆಗಿದ್ದಾರೆ.

* ರಾಷ್ಟ್ರಪತಿ ಆಗಿ ಆಯ್ಕೆಯಾದರೆ ಬುಡಕಟ್ಟ ಜನಾಂಗದ ಮೊದಲ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ.

ಜುಲೈ 18ಕ್ಕೆ ನಡೆಯಲಿದೆ ರಾಷ್ಟ್ರಪತಿ ಚುನಾವಣೆ

ಜುಲೈ 18ಕ್ಕೆ ನಡೆಯಲಿದೆ ರಾಷ್ಟ್ರಪತಿ ಚುನಾವಣೆ

ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರ ಅವಧಿ ಜುಲೈ 18ಕ್ಕೆ ಮುಗಿಯಲಿದ್ದು ಹೊಸ ರಾಷ್ಟ್ರಪತಿಗೆ ಎಲ್ಲಾ ಪಕ್ಷದವರು ತಮ್ಮ-ತಮ್ಮ ಅಭ್ಯರ್ಥಿಯನ್ನು ಸೂಚಿಸಿದ್ದು ಎನ್‌ಡಿಎ, ಮೈತ್ರಿಪಕ್ಷದ ಬೆಂಬಲದೊಂದಿಗೆ ದ್ರೌಪದಿ ಮುರ್ಮು ಅವರ ಹೆಸರನ್ನು ಸೂಚಿಸಿದ್ದು ನಾಮಪತ್ರ ಸಲ್ಲಿಸಲಾಗಿದೆ. ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ (ಬಿಜು ಜನತಾ ದಳ) ಮುಖ್ಯಸ್ಥ ನವೀನ್ ಪಟ್ನಾಯಕ್, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ (ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ) ರಾಷ್ಟ್ರಪತಿ ಚುನಾವಣೆಗೆ ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ.

ವಿರೋಧ ಪಕ್ಷಗಳು ತಮ್ಮ ಸಾಮಾನ್ಯ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಿದೆ. ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೇಲ್ ಬಳಿಕ ರಾಷ್ಟ್ರಪತಿಯಾದ ಎರಡನೇ ಮಹಿಳೆಯಾಗಲಿದ್ದಾರೆ.

English summary

Who is Droupadi Murmu? Facts about first Presidential candidate from a tribal community in Kannada

Who is Droupadi Murmu? Facts about first Presidential candidate from a tribal community in Kannada, read on....
X
Desktop Bottom Promotion