For Quick Alerts
ALLOW NOTIFICATIONS  
For Daily Alerts

ಪ್ರೀತಿ, ನಿಷ್ಠೆ ಹಾಗೂ ಸಂಪತ್ತು: ರಾಶಿಚಕ್ರದ ಪ್ರಕಾರ, ನಿಮ್ಮ ಸಂಗಾತಿಯ ಆಯ್ಕೆ ಯಾವುದು ಗೊತ್ತಾ?

|

ಸಂಬಂಧಗಳೇ ಹಾಗೇ, ಭಾವನೆಗಳ ಸಮ್ಮಿಲನ. ಸ್ವಲ್ಪ ಕೋಪ, ಜಾಸ್ತಿ ಪ್ರೀತಿ, ಸಣ್ಣ ಅಭದ್ರತೆ ಹೀಗೆ ಎಲ್ಲದರ ಮಿಶ್ರಣವೇ ಸಂಬಂಧ. ಇಂತಹ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯಿಂದ ಏನು ಬಯಸುತ್ತಾರೆ ಎಂಬುದು ತಿಳಿದಿರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯು ತಮ್ಮ ಸಂಗಾತಿಯಿಂದ ಪ್ರೀತಿ, ನಿಷ್ಠೆ ಹಾಗೂ ಸಂಪತ್ತಿನಲ್ಲಿ ಯಾವುದಾದರೊಂದನ್ನು ನಿರೀಕ್ಷೆ ಮಾಡುತ್ತಾರೆ. ಅದು ಯಾವುದು ಎಂಬುದನ್ನು ಇಲ್ಲಿ ನೀಡಿದ್ದೇವೆ.

ರಾಶಿಚಕ್ರದ ಪ್ರಕಾರ, ಪ್ರೀತಿ, ಪ್ರಾಮಾಣಿಕತೆ ಹಾಗೂ ಸಂಪತ್ತಿನಲ್ಲಿ ನಿಮ್ಮ ಸಂಗಾತಿಯ ಆಯ್ಕೆ ಯಾವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:

ಮೇಷ:

ಈ ರಾಶಿಚಕ್ರದ ವ್ಯಕ್ತಿಗಳು ಉತ್ತಮ ನಾಯಕತ್ವ ಕೌಶಲ್ಯ, ಆತ್ಮ ವಿಶ್ವಾಸ, ಸಕಾರಾತ್ಮಕ ಶಕ್ತಿ ಮತ್ತು ಸೃಜನಶೀಲತೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ದೃಢ ಮತ್ತು ಕಠಿಣ ನಿರ್ಧಾರಕ್ಕೂ ಹೆಸರುವಾಸಿ. ತಮ್ಮನ್ನು ತೊಡಗಿಸಿಕೊಳ್ಳುವ ಯಾವುದೇ ವಿಷಯಗಳಿಂದ ಏನು ಸಿಗಬೇಕು ಎಂಬುದರ ಕುರಿತು ಸ್ಪಷ್ಟ ನಿಲುವು ಹೊಂದಿರುತ್ತಾರೆ. ಅದೇನೇ ಇದ್ದರೂ, ಪ್ರೀತಿ ವಿಚಾರ ಬಂದಾಗ ಅವರ ಮುಖ್ಯ ಆದ್ಯತೆ ಪ್ರೀತಿಯಷ್ಟೇ ಆಗಿರುವುದು.

ವೃಷಭ:

ವೃಷಭ:

ಅತ್ಯಂತ ನಿಷ್ಠಾವಂತ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾದ ವೃಷಭ ರಾಶಿಯವರು ಸಂಬಂಧಗಳಲ್ಲೂ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನೇ ಹುಡುಕುತ್ತಿದ್ದಾರೆ. ಅವರು ತಮ್ಮ ಸಂಗಾತಿಯೊಡನೆ ಮುಕ್ತವಾಗಲು ಮತ್ತು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ದಾಂಪತ್ಯದಲ್ಲಿ ಯಾವುದೇ ದ್ರೋಹ ಇವರಿಂದ ಆಗದು, ನಿಮ್ಮಿಂದ ಆದರೂ ಅದನ್ನು ಸಹಿಸರು.

ಮಿಥುನ:

ಮಿಥುನ:

ಪ್ರೀತಿಯಲ್ಲಿ ವಿನೋದ ಅಥವಾ ಫನ್ ಆಗಿರುವುದು ಇವರ ಲಕ್ಷಣ. ಫನ್ ಅವರ ವ್ಯಕ್ತಿತ್ವದ ಒಂದು ದೊಡ್ಡ ಅಂಶವಾಗಿರುವುದರಿಂದ, ಅವರು ಉತ್ತಮ ವಿಚಾರಗಳಿಗೆ ಹೆಚ್ಚು ಖರ್ಚು ಮಾಡುವತ್ತ ಗಮನಹರಿಸುತ್ತಾರೆ. ಅಂದ್ರೆ ರಜೆಗೆ ಪ್ರವಾಸ ಹೋಗುವುದು, ಅದಕ್ಕಾಗಿ ಹಣ ಉಳಿತಾಯ ಮಾಡುವುದು ಹೀಗೆ. ಆದ್ದರಿಂದ, ಅವರು ತಮ್ಮ ಜೀವನ ನಿರ್ಧಾರಗಳಿಗೆ ಸಮಾನ ಕೊಡುಗೆ ನೀಡುವ ಪಾಲುದಾರನನ್ನು ಹುಡುಕುತ್ತಾರೆ. ಆದ್ದರಿಂದ ಇವರ ಆಯ್ಕೆ ಒಂದು ರೀತಿ ಸಂಪತ್ತಾಗಿರುವುದು.

ಕರ್ಕ:

ಕರ್ಕ:

ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಹೆಚ್ಚು ಭಾವನಾತ್ಮಕ ಈ ಕರ್ಕಾಟಕ ರಾಶಿಯವರು. ಇವರು ಪ್ರೀತಿಯನ್ನು ಹೊರತುಪಡಿಸಿ ಏನನ್ನೂ ನಿರೀಕ್ಷಿಸುವುದಿಲ್ಲ. ಪ್ರೀತಿಯೇ ಅವರ ಜಗತ್ತನ್ನು ಆಳುತ್ತದೆ ಎಂದು ಹೇಳಬಹುದು. ಅವರು ತಮ್ಮ ಪಾಲುದಾರರ ಮೇಲೆ ಭಾವನಾತ್ಮಕವಾಗಿ ಅವಲಂಬಿತರಾಗಿರುತ್ತಾರೆ. ನೀವು ಈ ರಾಶಿಯವರವನ್ನು ಪ್ರೀತಿಸುತ್ತಿದ್ದರೆ ಚಿಂತಿಸುವ ಅಗತ್ಯವೇ ಇಲ್ಲ.

ಸಿಂಹ:

ಸಿಂಹ:

ಇವರು ಹುಟ್ಟುತ್ತಲೇ ನಾಯಕರು. ಆಜ್ಞೆ ಮಾಡುವುದನ್ನು ಮತ್ತು ಗೌರವ ಪಡೆಯುವುದನ್ನು ಬಯಸುತ್ತಾರೆ. ಎಲ್ಲಾ ವಿಷಯಗಳನ್ನು ವ್ಯವಹರಿಸುವಾಗ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುತ್ತಾರೆ. ಇವರು ನಿಷ್ಠೆಯಿಂದ ಇದ್ದರೆ, ಸಂಪತ್ತು ಇವರ ಕೈ ಬಿಡುವುದಿಲ್ಲ.

ಕನ್ಯಾ:

ಕನ್ಯಾ:

ಈ ರಾಶಿಯವರಿಗೆ ಎಲ್ಲವೂ ಪರಿಪೂರ್ಣವಾಗಿರಬೇಕು. ಇದೇ ವಿಚಾರಕ್ಕೆ ಹೆಚ್ಚು ಆತಂಕಗೊಳ್ಳುವುದು. ತಮ್ಮ ಉಡುಗೆ-ತೊಡುಗೆಯಲ್ಲಿ ಪರ್ಫೆಕ್ಟ್ ನೆಸ್ ಬಯಸುವ ಈ ರಾಶಿಯವರು ತಮ್ಮ ಸಂಗಾತಿಯಿಂದ ನಿಷ್ಠೆ, ಪ್ರಾಮಾಣಿಕ ಭಾವನೆಗಳನ್ನು ನಿರೀಕ್ಷೆ ಮಾಡುತ್ತಾರೆ. ಏಕೆಂದರೆ ಅವರಿಗೂ ಅದೇ ಇಷ್ಟ.

ತುಲಾ

ತುಲಾ

ತುಲಾ ರಾಶಿಯವರಿಗೆ ಮನಸ್ಸಿನ ಶಾಂತಿ ಮತ್ತು ವೃತ್ತಿಜೀವನವು ಮೊದಲು ಬರುತ್ತದೆ. ಅವರು ತಮ್ಮ ಭವಿಷ್ಯದ ಗುರಿಗಳು, ಪ್ರಸ್ತುತ ನಿರೀಕ್ಷೆಗಳ ಬಗ್ಗೆ ಸ್ಪಷ್ಟವಾಗಿರುತ್ತಾರೆ. ಅಷ್ಟೇ ಅಲ್ಲ, ಅವರ ಪಾಲುದಾರರಿಂದ ಅದೇ ನಿರೀಕ್ಷಿಸುತ್ತಾರೆ. ಸಂಗಾತಿಗೆ ತೆಗೆದುಕೊಳ್ಳುವುದರಲ್ಲಿ ಮೊದಲು ಸ್ವಲ್ಪ ನಿಧಾನವಾದರೂ, ಒಮ್ಮೆ ಪ್ರೀತಿಯ ಕೊಳದಲ್ಲಿ ಬಿದ್ದರೆ ಹಿಂತಿರುಗಿ ನೋಡುವುದಿಲ್ಲ. ಪ್ರೀತಿಯೇ ಇವರಿಗೂ ಮುಖ್ಯವಾದ ಅಂಶ.

ವೃಶ್ಚಿಕ:

ವೃಶ್ಚಿಕ:

ಈ ರಾಶಿಯವರು ಭಾವೋದ್ರಿಕ್ತ, ನಿಗೂಢತೆಗಳಿಗೆ ಹೆಸರುವಾಸಿಯಾಗಿದ್ದರೂ, ಸಂಬಂಧಗಳಿಗೆ ಬಂದಾಗ ಇವರನ್ನು ಅಭದ್ರತೆ ಹೆಚ್ಚಾಗಿ ಕಾಡುವುದು. ಇದೇ ಕಾರಣದಿಂದ ಕೆಲವೊಮ್ಮೆ ಇವರು ಭಾವನೆ ಇಲ್ಲದ ವ್ಯಕ್ತಿಯೆಂದು ಎನಿಸಬಹುದು. ಆದರೆ ಪ್ರೀತಿ ಮತ್ತು ಪ್ರಾಮಾಣಿಕತೆ ಇವರು ತಮ್ಮ ಸಂಗಾತಿಯಿಂದ ನಿರೀಕ್ಷೆ ಮಾಡುತ್ತಾರೆ.

ಧನಸ್ಸು:

ಧನಸ್ಸು:

ಸ್ವಭಾವತಃ ಈ ರಾಶಿಯವರು ಸಾಹಸಮಯ ವ್ಯಕ್ತಿತ್ವಯುಳ್ಳವರು. ಧನು ರಾಶಿಯವರು ಸಂಪತ್ತಿನ ಕಡೆಗೆ ಸ್ವಲ್ಪ ಹೆಚ್ಚು ಒಲವು ತೋರುತ್ತಾರೆ. ಜೊತೆಗೆ ಸಂಬಂಧದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಸಹ ಬಯಸುತ್ತಾರೆ. ಅದು ಅವರು ಪ್ರದರ್ಶಿಸುವ ಹೆಚ್ಚು ಅಗತ್ಯವಾದ ಸದ್ಗುಣಗಳಾಗಿವೆ.

ಮಕರ:

ಮಕರ:

ನೀವು ಮಕರ ರಾಶಿಯವರಾಗಿದ್ದರೆ, ಮುಂದಿನ ಹತ್ತು ವರ್ಷಗಳನ್ನು ನೀವು ಈಗಲೇ ಯೋಜಿಸುತ್ತೀರಿ. ನೀವು ಏನು ಮಾಡಲು ಬಯಸುತ್ತೀರಿ ಮತ್ತು ಜೀವನದಲ್ಲಿ ನೀವು ಎಲ್ಲಿಗೆ ಹೋಗಬೇಕೆಂದು ನಿಖರವಾಗಿ ನಿಮಗೆ ತಿಳಿದಿರುವುದು. ನಿಮಗೆ ಸುರಕ್ಷತೆ ಮತ್ತು ಸ್ಥಿರತೆಯು ಮುಖ್ಯವಾಗಿರುವುದರಿಂದ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವುದು ನಿಮ್ಮ ಪ್ರಮುಖ ಆದ್ಯತೆ. ಯಾವುದೇ ಭಾವನೆಗಳಿಗೆ ಅತಿಯಾಗಿ ಒಳಗೊಳ್ಳುವುದಿಲ್ಲ.

ಕುಂಭ:

ಕುಂಭ:

ಈ ರಾಶಿಯವರು ಗದ್ದಲ ಮತ್ತು ತೊಡಕುಗಳನ್ನು ಇಷ್ಟಪಡುವುದಿಲ್ಲ. ಅವರು ಏನು ಬೇಕಾದರೂ ಮಾಡಲು ಸ್ವಾತಂತ್ರ್ಯ, ಸ್ಥಿರತೆ ಮತ್ತು ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ. ಆದ್ದರಿಂದ ಇವರ ಆಯ್ಕೆ ಇದೇ.

ಮೀನ:

ಮೀನ:

ಈ ರಾಶಿಯವರು ತಮ್ಮ ಪಾಲುದಾರರಿಂದ ಬದಲಾಯಿಸಲಾಗದ ಪ್ರೀತಿಯನ್ನು ಮಾತ್ರ ಬಯಸುತ್ತಾರೆ. ಅವರು ತಮ್ಮ ಪಾಲುದಾರರೊಂದಿಗೆ ಬಂಡೆಯಂತೆ ಸ್ಥಿರವಾಗಿ ನಿಲ್ಲುತ್ತಾರೆ. ನೀವು ಸ್ವಲ್ಪ ಕೆಳಗೆ ಹೋದರೂ ನಿಮ್ಮನ್ನು ಮೇಲಕ್ಕೆತ್ತಲು ಸದಾ ಸಿದ್ಧವಾಗಿರುತ್ತಾರೆ. ಪ್ರಣಯವು ಅವರ ಜಗತ್ತನ್ನು ಆಳುವುದು, ಸಂಬಂಧದಲ್ಲಿ ಅವರು ಎದುರು ನೋಡುತ್ತಿರುವ ಏಕೈಕ ವಿಷಯ ಕೂಡ ಅದೇ.

English summary

What Each Zodiac Sign Wants From A Relationship in Kannada

Here we talking about What Each Zodiac Sign Wants From A Relationship in Kannada, read on
Story first published: Friday, July 9, 2021, 21:00 [IST]
X