For Quick Alerts
ALLOW NOTIFICATIONS  
For Daily Alerts

ಸಿಂಹರಾಶಿಗೆ ಶುಕ್ರ ಸಂಚಾರ: ಧನಯೋಗವಿರುವ ರಾಶಿಗಳು ಯಾವೆಲ್ಲಾ ಗೊತ್ತಾ? ಇಲ್ಲಿ ನೋಡಿ

|

ಇದೇ ಬರುವ ಜುಲೈ 17 ಅಂದರೆ ಇಂದು, ಶುಕ್ರನು ಸಿಂಹ ರಾಶಿಗೆ ಸಂಚರಿಸಲಿದ್ದಾನೆ. ಈ ಸಂಚಾರವು ಪ್ರತಿಯೊಂದು ರಾಶಿಚಕ್ರಗಳ ಮೇಲೂ ಪರಿಣಾಮ ಬೀರಲಿದೆ. ಕರ್ಕದಿಂದ ಸಿಂಹ ರಾಶಿಗೆ ಸಂಚಾರ ಮಾಡಿರುವ ಶುಕ್ರನಿಂದ ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ ಫಲ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಿಂಹರಾಶಿಗೆ ಶುಕ್ರ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಈ ಕೆಳಗೆ ವಿವರಿಸಲಾಗಿದೆ:

ಮೇಷ:

ಮೇಷ:

ಮೇಷ ರಾಶಿಯವರಿಗೆ ಶುಕ್ರ ಐದನೇ ಮನೆಗೆ ಸಂಚರಿಸುತ್ತಾನೆ. ಇದು ಪ್ರೀತಿ, ವ್ಯವಹಾರ, ಸಂಬಂಧಗಳು ಮತ್ತು ಅಧ್ಯಯನಗಳ ಸ್ಥಾನವಾಗಿದೆ. ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯ ಬಗ್ಗೆ ಉತ್ತಮವಾದ ಭಾವನೆಗಳನ್ನು ಹೊಂದಿರುತ್ತಾರೆ. ನಿಮ್ಮ ಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳಬಹುದು, ಅಂದರೆ ಮದುವೆಯ ಬಗ್ಗೆ ಆಲೋಚಿಸಬಹುದು. ವಿವಾಹವಾದವರು ತಮ್ಮ ಸಂಗಾತಿಯೊಂದಿಗೆ ಪ್ರಣಯ ಕಾಲ ಕಳೆಯುತ್ತಾರೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಉತ್ತಮವಾಗಿ ಅಧ್ಯಯನ ಮಾಡುತ್ತೀರಿ. ಇದು ನಿಮ್ಮ ಪರೀಕ್ಷೆಯ ಸಮಯದಲ್ಲಿ ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಸೃಜಶೀಲ ಕೆಲಸಗಳಲ್ಲಿ ತೊಡಗಿಕೊಂಡಿರುವವರೆಗೆ ಉತ್ತಮ ಅವಕಾಶ, ತಮ್ಮ ಈ ಹವ್ಯಾಸವನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತೀರಿ. ಇದಲ್ಲದೆ, ಫ್ಯಾಷನ್ ಅಥವಾ ವಿನ್ಯಾಸ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಅವರ ಕೆಲಸದಲ್ಲಿ ಉತ್ತಮ ಅವಕಾಶಗಳು ಮತ್ತು ಮೆಚ್ಚುಗೆ ಸಿಗುತ್ತದೆ.

ಪರಿಹಾರ- ಶುಕ್ರವಾರ ದೇವಾಲಯದಲ್ಲಿ ಅನ್ನ ದಾನ ಮಾಡಿ.

ವೃಷಭ:

ವೃಷಭ:

ಈ ರಾಶಿಯವರಿಗೆ ಶುಕ್ರ ಆರನೇ ಮನೆ ಸೇರುತ್ತಾನೆ. ಇದು ಸೇವೆಗಳು, ಸಂಘರ್ಷಗಳು ಮತ್ತು ರೋಗಗಳ ಮನೆಯಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬ ಮತ್ತು ಅವರ ಸೌಕರ್ಯಗಳ ಕಡೆಗೆ ಹೆಚ್ಚು ಒಲವು ತೋರುತ್ತೀರಿ. ನೀವು ಮನೆಯ ವಸ್ತುಗಳ ಮೇಲೆ ಖರ್ಚು ಮಾಡುತ್ತೀರಿ, ನೀವು ಕುಟುಂಬ ಸದಸ್ಯರಿಗಾಗಿ ಖರ್ಚು ಮಾಡುತ್ತೀರಿ ಮತ್ತು ಅವರನ್ನು ಖುಷಿಯಿಂದ ಇಡುವ ಎಲ್ಲಾ ಪ್ರಯತ್ನ ಮಾಡುತ್ತೀರಿ. ನಿಮ್ಮ ತಾಯಿಯ ಆರೋಗ್ಯದ ಕಾಳಜಿ ತೆಗೆದುಕೊಳ್ಳುತ್ತೀರಿ. ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲವು ನ್ಯಾಯಾಲಯ ಪ್ರಕರಣಗಳಿಗೆ ಸಿಲುಕಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಈ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ಉತ್ತಮ ಅವಕಾಶಗಳು ಸಿಗುತ್ತವೆ. ವಿಷಯಗಳನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಆಸಕ್ತಿ ಹೆಚ್ಚಿರುವುದರಿಂದ ಶೈಕ್ಷಣಿಕ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲಕರ ಸಮಯವಿರುತ್ತದೆ.

ಪರಿಹಾರ- ಪ್ರತಿದಿನ ಶುಕ್ರ ಮಂತ್ರವನ್ನು ಪಠಿಸಿ ಅಥವಾ ಧ್ಯಾನ ಮಾಡಿ.

ಮಿಥುನ:

ಮಿಥುನ:

ಶುಕ್ರವು ಈ ರಾಶಿಗೆ ಅನುಕೂಲಕರ ಗ್ರಹವಾಗಿದ್ದು, ಮೂರನೇ ಮನೆಯಲ್ಲಿ ಸಾಗುತ್ತಾನೆ. ವ್ಯಾಪಾರೋದ್ಯಮಿಗಳು ಅನುಕೂಲಕರ ಸಮಯವನ್ನು ಹೊಂದಿರುತ್ತಾರೆ, ಏಕೆಂದರೆ ಅವರು ತಮ್ಮ ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯುತ್ತಾರೆ ಆದರೆ ನೀವು ಕುಟುಂಬ ಅಥವಾ ಮನೆಯ ವ್ಯವಹಾರಗಳಿಗೆ ಹಣವನ್ನು ಖರ್ಚು ಮಾಡುವಾಗ ಬೇಸರಗೊಳ್ಳುತ್ತೀರಿ. ಈ ಸಮಯದಲ್ಲಿ ಕಿರಿಯ ಸಹೋದರರು ಮತ್ತು ಸಹೋದರಿಯರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಅವರು ಕೆಲವು ಸಣ್ಣ ಪ್ರವಾಸ ಅಥವಾ ಲಾಗ್ ಡ್ರೈವ್ ನ್ನು ಆಯೋಜನೆ ಮಾಡಿ, ನಿಮ್ಮ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಬರವಣಿಗೆ, ಲಲಿತಕಲೆ ಮತ್ತು ಸಾಹಿತ್ಯದಲ್ಲಿ ತೊಡಗಿರುವವರು ಈ ಸಮಯದಲ್ಲಿ ಹೆಚ್ಚು ಸೃಜನಶೀಲರಾಗಿರುತ್ತಾರೆ, ಇದು ನಿಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಸಂಗಾತಿಯನ್ನು ಹುಡುಕುವವರಿಗೆ ಉತ್ತಮ ಸಮಯ. ನಿಮ್ಮ ಮಾತು ಮತ್ತು ವ್ಯಕ್ತಿತ್ವವು ಆಕರ್ಷಕ ಮತ್ತು ಪ್ರಭಾವಶಾಲಿಯಾಗಿರುವುದರಿಂದ ಸ್ನೇಹಿತರು ಮತ್ತು ಸಹವರ್ತಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಪ್ರೀತಿಯಲ್ಲಿರುವವರು ಸ್ವಲ್ಪ ಜಾಗರೂಕರಾಗಿರಿ. ನಿಮ್ಮ ಬಂಧದಲ್ಲಿ ಅಡಚಣೆಯನ್ನು ಉಂಟುಮಾಡಬಹುದು.

ಪರಿಹಾರ- ಈ ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯಲು ಈ ಅವಧಿಯಲ್ಲಿ ವರಾಹಮಿಹಿರಾ ಅವರ ಪೌರಾಣಿಕ ಕಥೆಗಳನ್ನು ಓದಿ.

ಕರ್ಕಾಟಕ:

ಕರ್ಕಾಟಕ:

ಈ ಸಂಚಾರದಿಂದ ಶುಕ್ರ ಹನ್ನೊಂದನೇ ಮನೆ ಅಂದರೆ ಆದಾಯದ ಮನೆ ಸೇರುತ್ತಾನೆ. ಈ ಕಾಲದಲ್ಲಿ ನಿಮಗೆ ಧನಯೋಗ ಇರಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯುವುದನ್ನು ಕಾಣುತ್ತೀರಿ. ನಿಮ್ಮ ಆದಾಯದ ಮೂಲಗಳಲ್ಲಿಯೂ ಹೆಚ್ಚಳ ಇರುತ್ತದೆ. ಯಾವುದೇ ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ತಾಯಿಯೊಂದಿಗೆ ಉತ್ತಮ ಬಂಧವನ್ನು ಹಂಚಿಕೊಳ್ಳುತ್ತೀರಿ ಮತ್ತು ಅವರ ಆಸೆಗಳ ಬಗ್ಗೆ ಗಮನ ಕೊಡುತ್ತೀರಿ. ಸಮಾಜದಲ್ಲಿ ಒಳ್ಳೆಯ ಹೆಸರು ಮತ್ತು ಖ್ಯಾತಿಯನ್ನು ಗಳಿಸುವಿರಿ, ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮ ಸಿಹಿ ಮಾತುಗಳನ್ನು ಮತ್ತು ಸಾಂತ್ವನ ಹೇಳಿಕೆಗಳನ್ನು ಕೇಳಲು ಕುತೂಹಲದಿಂದ ಕಾಯುತ್ತಾರೆ. ನಿಮ್ಮ ವೃತ್ತಿಪರ ಜೀವನದಲ್ಲಿ ನಿಮ್ಮ ಸ್ನೇಹಿತ ಮತ್ತು ಪರಿಚಯಸ್ಥರಿಂದಲೂ ಸಹಾಯ ಪಡೆಯಬಹುದು. ಒಟ್ಟಾರೆಯಾಗಿ ಈ ಸಂಚಾರವು ಈ ರಾಶಿಯರಿಗೆ ಪ್ರಯೋಜನಕಾರಿಯಾಗಲಿದೆ, ಏಕೆಂದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷವಾಗಿರುತ್ತಾರೆ, ಅವರ ಆರ್ಥಿಕ ಜೀವನವೂ ಉನ್ನತಿಗೇರುತ್ತದೆ.

ಪರಿಹಾರ- ಶುಕ್ರವಾರದಂದು ಸರಸ್ವತಿ ದೇವಿಯನ್ನು ಪೂಜಿಸಿ

ಸಿಂಹ:

ಸಿಂಹ:

ಸಿಂಹ ರಾಶಿಯವರಲ್ಲಿ ಶುಕ್ರವು ಹತ್ತನೇ ಮನೆಯಲ್ಲಿ ಸಂಚಾರ ನಡೆಸುತ್ತಾನೆ. ಮನೆಯಲ್ಲಿ ಶುಕ್ರವು ವ್ಯಕ್ತಿಗಳಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಅವಧಿಯಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದು, ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಅಲಂಕಾರಗಳು, ಸಂಗೀತ, ವಿನ್ಯಾಸ, ಮಾಧ್ಯಮ, ಸಾಹಿತ್ಯ, ನಾಟಕ ಮತ್ತು ಕಲೆಗಳಂತಹ ಸೃಜನಶೀಲ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭ ಕಾಲವಾಗಿವೆ. ವಿವಾಹಿತರು ತಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಕಾಳಜಿಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಬಹುದು. ಸಂಗಾತಿಯಿಲ್ಲದವರಿಗೆ ಯಾವುದಾದರೂ ವ್ಯಕ್ತಿಯ ಮೇಲೆ ಕ್ರಷ್ ಆಗಬಹುದು.

ಪರಿಹಾರ- ದಯವಿಟ್ಟು ನಿಮ್ಮ ಸಂಗಾತಿಯನ್ನು ಉಡುಗೊರೆಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಿ.

ಕನ್ಯಾ:

ಕನ್ಯಾ:

ಈ ರಾಶಿಯಲ್ಲಿ ಶುಕ್ರ ಎರಡು, ಒಂಬತ್ತು ಹಾಗೂ ಹನ್ನೆರಡನೇ ಮನೆಯಲ್ಲಿರುತ್ತಾನೆ. ಇದು ಐಷಾರಾಮಿ, ಸಂತೋಷ ಮತ್ತು ಖರ್ಚಿನ ಸ್ಥಾನವಾಗಿದೆ. ರಫ್ತು ಉದ್ಯಮದಲ್ಲಿ ತೊಡಗಿರುವ ಅಥವಾ ವಿದೇಶಿ ಗ್ರಾಹಕರೊಂದಿಗೆ ವ್ಯವಹಾರ ನಡೆಸುವವರಿಗೆ ಲಾಭವಾಗುತ್ತದೆ. ನಿಮ್ಮ ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಹೆಚ್ಚು ಖರ್ಚು ಮಾಡುವವರಾಗಿರುತ್ತೀರಿ. ನಿಮಗಾಗಿ ಮತ್ತು ನಿಮ್ಮ ಆತ್ಮೀಯರಿಗಾಗಿ ಅತ್ಯಂತ ದುಬಾರಿ ಮತ್ತು ಐಷಾರಾಮಿ ಉತ್ಪನ್ನಗಳನ್ನು ಖರೀದಿಸುವ ಹಂಬಲವನ್ನು ಹೊಂದಿರುತ್ತೀರಿ. ವಿದೇಶ ಪ್ರವಾಸಕ್ಕೆ ಯೋಜಿಸುತ್ತಿದ್ದರೆ, ಈ ಅವಧಿಯನ್ನು ಬಳಸಿಕೊಳ್ಳಿ, ಏಕೆಂದರೆ ನಿಮ್ಮ ವೀಸಾ ಅರ್ಜಿ ಸುಗಮವಾಗಿರುತ್ತದೆ. ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಹಣವನ್ನು ದಾನ ಮಾಡಲು ನೀವು ಒಲವು ಹೊಂದಿರುತ್ತೀರಿ. ನಿಮ್ಮ ತಾಯಿ ಅಥವ ಕುಟುಂಬದೊಂದಿಗೆ ಪುಣ್ಯಕ್ಷೇತ್ರಗಳಿಗೆ ಹೋಗಬಹುದು.

ಪರಿಹಾರ- ಬುಧ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ನಿಮ್ಮ ಬಲಗೈ ಸಣ್ಣ ಬೆರಳಿನಲ್ಲಿ ಚಿನ್ನ ಅಥವಾ ಬೆಳ್ಳಿಯ ಉತ್ತಮ ಗುಣಮಟ್ಟದ ಪಚ್ಚೆಯನ್ನು ಧರಿಸಿ.

ತುಲಾ:

ತುಲಾ:

ಈ ಸಮಯದಲ್ಲಿ, ಶುಕ್ರ ಹನ್ನೊಂದನೇ ಮನೆ ಸೇರುತ್ತಾನೆ. ಹನ್ನೊಂದನೇ ಮನೆ ಲಾಭದ ಮನೆ ಆದ್ದರಿಂದ ಇದು ಸಾಮಾನ್ಯವಾಗಿ ಶುಭವಾಗಿರುತ್ತದೆ. ಈ ಸಮಯದಲ್ಲಿ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಸಂಪತ್ತು ನಿಮಗೆ ಸುಲಭವಾಗಿ ಬರುತ್ತದೆ. ನಿಮ್ಮ ಆಸೆಗಳನ್ನು ಈಡೇರಿಸಲು ಮತ್ತು ಸಂತೋಷವನ್ನು ಪಡೆಯಲು, ನೀವು ಭೌತಿಕ ವಿಷಯಗಳಿಗೆ ಸಾಕಷ್ಟು ಖರ್ಚು ಮಾಡುತ್ತೀರಿ. ನಿಮ್ಮ ಸಂಗಾತಿಯ ಸಹಾಯದಿಂದ, ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ವಿದೇಶಕ್ಕೆ ಭೇಟಿ ನೀಡುವ ಅವಕಾಶವನ್ನು ಪಡೆಯಬಹುದು. ಕೆಲವರು ಅಲ್ಲಿಯೇ ನೆಲೆಸಲು ಯೋಚಿಸಬಹುದು. ನೀವು ಮುಕ್ತ ಮನಸ್ಸನ್ನು ಹೊಂದಿರುತ್ತೀರಿ ಮತ್ತು ಎಲ್ಲರನ್ನೂ ಕೇಳುವಿರಿ. ಕೆಲವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಬಹುದು, ಅದು ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ಈ ಸಮಯದಲ್ಲಿ ಪ್ರಯಾಣದ ಯೋಜನೆಗಳನ್ನು ಸಹ ಮಾಡಬಹುದು. ಒಟ್ಟಾರೆಯಾಗಿ, ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.

ಪರಿಹಾರ- ದುರ್ಗಾ ಚಾಲಿಸಾವನ್ನು ಪ್ರತಿದಿನ ಪಠಿಸಿ.

ವೃಶ್ಚಿಕ:

ವೃಶ್ಚಿಕ:

ಈ ರಾಶಿಯವರಿಗೆ ಶುಕ್ರ ಹತ್ತನೇ ಮನೆಯಲ್ಲಿ ಸಂಚರಿಸುವುದರಿಂದ ಮಿಶ್ರ ಫಲಿತಾಂಶ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿರುವವರು ಹೆಚ್ಚಿನ ಸಂಪರ್ಕಗಳನ್ನು ಮಾಡುತ್ತಾರೆ, ಅದು ಅವರ ವ್ಯವಹಾರವನ್ನು ಪ್ರಪಂಚದಾದ್ಯಂತ ಹರಡಲು ಸಹಾಯ ಮಾಡುತ್ತದೆ. ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಜಾಗರೂಕರಾಗಿರಬೇಕು. ಮತ್ತೊಂದೆಡೆ, ಕೆಲಸದಲ್ಲಿರುವವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಕಚೇರಿ ರಾಜಕಾರಣದಲ್ಲಿ ತಲೆಹಾಕಬೇಡಿ. ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ಸಿಗದ ಕಾರಣ ನೀವು ಹೆಚ್ಚು ಶ್ರಮಿಸಬೇಕಾಗಬಹುದು. ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವವರು ಯಶಸ್ಸನ್ನು ಕಾಣುತ್ತಾರೆ. ವಿವಾಹಿತರು ತಮ್ಮ ಜೀವನದಲ್ಲಿ ಸಾಮರಸ್ಯವನ್ನು ನೋಡುತ್ತಾರೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಹೊಸ ವ್ಯಕ್ತಿಯನ್ನು ನೀವು ನಂಬಬಾರದು ಏಕೆಂದರೆ ಕೆಲವರು ನಿಮ್ಮ ಹಣಕ್ಕಾಗಿ ನಿಮ್ಮ ಜೀವನದಲ್ಲಿ ಬರಲು ಪ್ರಯತ್ನಿಸಬಹುದು.

ಪರಿಹಾರ- ನಿಮ್ಮ ಮಲಗುವ ಕೋಣೆಯಲ್ಲಿ ಗುಲಾಬಿ ಬಣ್ಣದ ಸ್ಫಟಿಕ ಕಲ್ಲು ಇಡಿ.

ಧನು ರಾಶಿ:

ಧನು ರಾಶಿ:

ಈ ಸಮಯದಲ್ಲಿ, ಧನು ರಾಶಿಯವರಿಗೆ ಶುಕ್ರ ಗ್ರಹವು ಒಂಬತ್ತನೇ ಮನೆಯಲ್ಲಿರುತ್ತದೆ. ಇದನ್ನು ಶುಭವೆಂದು ಪರಿಗಣಿಸಬಹುದು. ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಅವರ ಆಶೀರ್ವಾದವನ್ನು ಪಡೆಯುತ್ತೀರಿ. ಮನಸ್ಸಿನ ಶಾಂತಿ ಪಡೆಯಲು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸಬಹುದು. ನೀವು ಕೆಲವು ಸಾಮಾಜಿಕ ಅಥವಾ ದತ್ತಿ ಕಾರ್ಯಗಳನ್ನು ಮಾಡಲು ಬಯಸಬಹುದು, ಈ ಸಂತೋಷವನ್ನು ಕಾಣುತ್ತೀರಿ. ಸಂಪತ್ತನ್ನು ಸಂಗ್ರಹಿಸುವಲ್ಲಿ ಈ ಸಮಯದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯುತ್ತೀರಿ. ವಿವಾಹಿತರು ಉತ್ತಮ ಜೀವನವನ್ನು ಹೊಂದಿರುತ್ತಾರೆ. ನಿಮ್ಮ ಮಕ್ಕಳಿಂದಲೂ ನೀವು ಸಂತೋಷವನ್ನು ಕಾಣುವಿರಿ. ಹಣಕಾಸು ಕ್ಷೇತ್ರದಲ್ಲಿ ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳು ಯಶಸ್ಸನ್ನು ಕಾಣುತ್ತಾರೆ. ಈ ಸಮಯದಲ್ಲಿ ನಿಮ್ಮ ಒಟ್ಟಾರೆ ವರ್ತನೆ ಹರ್ಷಚಿತ್ತದಿಂದ ಕೂಡಿರುತ್ತದೆ.

ಪರಿಹಾರ- ಶುಕ್ರವಾರ ಏಳು ಧಾನ್ಯಗಳನ್ನು ದಾನ ಮಾಡಿ.

ಮಕರ :

ಮಕರ :

ಮಕರ ರಾಶಿಯವರಿಗೆ ಶುಕ್ರ ಗ್ರಹವನ್ನು ಎಂಟನೇ ಮನೆ ಸೇರುತ್ತಾನೆ. ಈ ಸಮಯ ನಿಮಗೆ ಅನುಕೂಲಕರವೆಂದು ಹೇಳಲಾಗುವುದಿಲ್ಲ. ವ್ಯವಹಾರದಲ್ಲಿ ಅಥವಾ ಉದ್ಯೋಗದಲ್ಲಿರುವವರುಲ್ಲಿ ಸಾಕಷ್ಟು ಕಠಿಣ ಪರಿಶ್ರಮದ ನಂತರವೇ ಯಶಸ್ಸನ್ನು ಪಡೆಯುತ್ತಾರೆ. ಆದರೆ, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಯಶಸ್ಸನ್ನು ಕಾಣುತ್ತಾರೆ. ನೀವು ಬ್ಯಾಂಕಿನಿಂದ ಸಾಲ ಪಡೆಯಲು ಹೆಣಗಾಡುತ್ತಿದ್ದರೆ, ಈ ಸಮಯದಲ್ಲಿ ಅದನ್ನು ಸುಲಭವಾಗಿ ಪಡೆಯಬಹುದು. ಕೆಲವು ಪೂರ್ವಜರ ಆಸ್ತಿಯಿಂದ ಹಣವನ್ನು ಪಡೆಯಬಹುದು. ಪ್ರೀತಿಯ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಬೇಕಾಗುತ್ತದೆ ಏಕೆಂದರೆ ಅದು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ವಿವಾಹಿತರು ನಿಮ್ಮ ಹೆಂಡತಿಯ ಅದೃಷ್ಟದಿಂದ ನೀವು ಸಂಪತ್ತನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳಬಹುದು ಮತ್ತು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಪರಿಹಾರ- ಪ್ರತಿದಿನ ಬೆಳಿಗ್ಗೆ ನಿಂಬೆ ನೀರು ಕುಡಿಯಿರಿ.

ಕುಂಭ:

ಕುಂಭ:

ಕುಂಭ ರಾಶಿಗೆ ಶುಕ್ರವು ಯೋಗಕರ ಗ್ರಹವಾಗಿದೆ, ಇದು ಸಂತೋಷ ಮತ್ತು ಸೌಕರ್ಯಗಳ ನಾಲ್ಕನೇ ಮನೆಯ ಪ್ರಭುತ್ವವನ್ನು ಹೊಂದಿದೆ. ಅಲ್ಲದೆ, ಇದು ಅದೃಷ್ಟ, ಸಮೃದ್ಧಿ ಮತ್ತು ಧರ್ಮದ ಒಂಬತ್ತನೇ ಮನೆಯ ಅಧ್ಯಕ್ಷತೆಯನ್ನು ವಹಿಸುತ್ತದೆ. ಈ ಅವಧಿಯು ವಿವಾಹಿತ ವ್ಯಕ್ತಿಗಳ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಪ್ರಣಯ ಸಂಬಂಧದಲ್ಲಿರುವವರು ತಮ್ಮ ಪ್ರೇಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು. ಪಾಲುದಾರಿಕೆ ಸಂಸ್ಥೆಗಳಲ್ಲಿ ತೊಡಗಿರುವವರು ಶುಭ ಸಮಯವನ್ನು ಹೊಂದಿರುತ್ತಾರೆ, ಅದೃಷ್ಟವು ನಿಮ್ಮ ಪರವಾಗಿರುತ್ತದೆ. ನಿಮ್ಮ ಎಲ್ಲಾ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ಮತ್ತು ಒಟ್ಟಿಗೆ ಪ್ರವಾಸಕ್ಕೆ ಹೋಗಬಹುದು. ಧಾರ್ಮಿಕ ಚಟುವಟಿಕೆಗಳತ್ತ ಒಲವು ಹೊಂದಿರುತ್ತೀರಿ. ನೀವು ಸ್ನೇಹಪರ ಮತ್ತು ಕಾಳಜಿಯುಳ್ಳವರಾಗಿರುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಸಮಾಜದಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತೀರಿ.

ಪರಿಹಾರ- ಸಂಜೆ ಒಂದು ಕರ್ಪೂರವನ್ನು ಬೆಳಗಿಸಿ .

ಮೀನ:

ಮೀನ:

ಈ ರಾಶಿಯವರಿಗೆ ಶುಕ್ರ ಸಂಚಾರವು ಮಿಶ್ರಣ ಫಲಿತಾಂಶಗಳನ್ನು ನೀಡುವುದು. ಹೊಟ್ಟೆ, ಹಾರ್ಮೋನುಗಳ ಅಸಮತೋಲನ ಮತ್ತು ಕಣ್ಣಿನ ತೊಂದರೆಗಳಿಂದ ಬಳಲುತ್ತಿರುವ ಕಾರಣ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಚೆನ್ನಾಗಿ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಹೆದ್ದಾರಿಯಲ್ಲಿ ಸವಾರಿ ಮಾಡುವಾಗ ಅಥವಾ ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು. ತಿಳುವಳಿಕೆಯ ಕೊರತೆಯಿಂದಾಗಿ ನಿಮ್ಮ ಕಿರಿಯ ಸಹೋದರರೊಂದಿಗೆ ಮನಸ್ತಾಪವಾಗಬಹುದು. ಆದ್ದರಿಂದ, ನಿಮ್ಮ ಮನೆಯಲ್ಲಿ ದೊಡ್ಡ ಜಗಳಗಳು ಮತ್ತು ತೊಂದರೆಗಳನ್ನು ತಪ್ಪಿಸಲು ಮಾತನಾಡುವಾಗ ಜಾಗರೂಕರಾಗಿರಿ. ನೀವು ಸಾಲಕ್ಕೆ ಸಿಲುಕಬಹುದು, ಏಕೆಂದರೆ ಪಡೆದ ಹಣವನ್ನು ಹಿಂದಿರುಗಿಸಲು ನಿಮಗೆ ಕಷ್ಟವಾಗುತ್ತದೆ. ತೈಲ ಮತ್ತು ಅನಿಲ ಉದ್ಯಮ, ವಿಮಾ ಕ್ಷೇತ್ರ ಮತ್ತು ಸಂಶೋಧನಾ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ಅವಧಿ ಇರುತ್ತದೆ, ಏಕೆಂದರೆ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯಗಳನ್ನು ತೋರಿಸಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ಸಾಕಷ್ಟು ಪ್ರಕ್ಷುಬ್ಧತೆಯನ್ನು ಅನುಭವಿಸಬಹುದು.

ಪರಿಹಾರ- ಪಾರ್ವತಿ ದೇವಿಗೆ ಶುಕ್ರವಾರ ಹಾಲು, ಅಕ್ಕಿ ಮತ್ತು ಸಕ್ಕರೆ ಅರ್ಪಿಸಿ .

English summary

Venus Transit in Leo On 17 July 2021 Effects on Zodiac Signs in Kannada

Venus Transit in Leo Effects on Zodiac Signs in kannada : The Venus Transit in Leo will take place on 17 July 2021. Learn about remedies to perform in kannada
Story first published: Saturday, July 17, 2021, 19:11 [IST]
X
Desktop Bottom Promotion