For Quick Alerts
ALLOW NOTIFICATIONS  
For Daily Alerts

ಈ ವಾಸ್ತು ಸಲಹೆಗಳನ್ನು ಪಾಲಿಸಿದರೆ ಮನೆಯೊಳಗೆ ರೋಗ ಪ್ರವೇಶಿಸುವುದಿಲ್ಲ

|

ಕೊರೋನಾ ಎಲ್ಲರಿಗೂ ನರಕ ದರ್ಶನ ಮಾಡಿಸುತ್ತಿದ್ದು, ಮನೆ-ಮನದ ನೆಮ್ಮದಿ ಕಸಿದುಕೊಳ್ಳುತ್ತಿದೆ. ಇದಕ್ಕೆ ನಾವು ಹೊರಗಡೆ ಹೋಗದೇ, ಮನೆಯೊಳಗೇ ಇರುವುದೊಂದೇ ಸುರಕ್ಷಿತ ಮಾರ್ಗವಾಗಿದೆ. ಇಂತಹ ಸಮಯದಲ್ಲಿ ಮನೆಯಯೊಳಗೆ ರೋಗ ಪ್ರವೇಶಿಸದಂತೆ ಕೆಲವೊಂದು ವಾಸ್ತು ಸಲಹೆಗಳನ್ನು ಕೈಗೊಳ್ಳಬಹುದು. ಇದರಿಂದ ನೀವು ಹಾಗೂ ನಿಮ್ಮ ಕುಟುಂಬ ಆರೋಗ್ಯದಾಯಕವಾಗಿರುತ್ತದೆ. ಹಾಗಾದರೆ ಆ ವಾಸ್ತು ಸಲಹೆಗಳಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಮನೆಯೊಳಗೆ ರೋಗ ಪ್ರವೇಶ ನಿರ್ಬಂಧಿಸುವ ವಾಸ್ತು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಮುಖ್ಯ ದ್ವಾರ ಸ್ವಚ್ಛವಾಗಿರಲಿ:

ಮುಖ್ಯ ದ್ವಾರ ಸ್ವಚ್ಛವಾಗಿರಲಿ:

ಮನೆಯಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆ ಇದ್ದರೆ, ಇದಕ್ಕೆ ಕಾರಣ ವಾಸ್ತು ದೋಷ ಆಗಿರಬಹುದು. ನಕಾರಾತ್ಮಕತೆ ಅಥವಾ ಕೆಟ್ಟ ಶಕ್ತಿಗಳು ಮನೆಯ ಮುಖ್ಯ ದ್ವಾರದಿಂದ ಮನೆಗೆ ಪ್ರವೇಶಿಸುತ್ತದೆ. ಈ ಸಂದರ್ಭದಲ್ಲಿ, ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛಗೊಳಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮನೆಯ ಮುಖ್ಯ ದ್ವಾರವನ್ನು ಕಿತ್ತುಹಾಕಬಾರದು, ಇದು ಮನೆಯ ಸದಸ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಮನೆಯ ಮುಖ್ಯ ದ್ವಾರದ ಕಡೆಗೆ ಹೆಚ್ಚು ಗಮನ ಹರಿಸಿ.

ಮೂಲೆಯಲ್ಲಿ ಜೇಡರ ಬಲೆ ಇರದಂತೆ ನೋಡಿಕೊಳ್ಳಿ:

ಮೂಲೆಯಲ್ಲಿ ಜೇಡರ ಬಲೆ ಇರದಂತೆ ನೋಡಿಕೊಳ್ಳಿ:

ಮನೆಯ ಮೂಲೆಗಳು ಮತ್ತು ಗೋಡೆಗಳಲ್ಲಿ ಜೇಡರ ಜಾಲಗಳು ಇರಬಾರದು. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಾಲಕಾಲಕ್ಕೆ ಮನೆಯ ಮೂಳೆಗಳನ್ನು ಹಾಗೂ ಗೋಡೆಗಳನ್ನು ಸ್ವಚ್ಛಗೊಳಿಸುತ್ತಿರಿ. ಇದರಿಂದ ಆರೋಗ್ಯವು ಸ್ಥಿಮಿತದಲ್ಲಿರುತ್ತದೆ. ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.

ಮುಖ್ಯ ದ್ವಾರ ಹೀಗಿರಲಿ:

ಮುಖ್ಯ ದ್ವಾರ ಹೀಗಿರಲಿ:

ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ. ಇದು ಪಾಸಿಟಿವಿಟಿಯನ್ನು ಮನೆಗೆ ಆಹ್ವಾನಿಸುತ್ತದೆ. ಇದರ ಜೊತೆಗೆ ಮನೆಯ ಪ್ರವೇಶದ್ವಾರದಲ್ಲಿ ಸಂಗೀತದ ಗಂಟೆಗಳನ್ನು ಹಾಕಿ. ಇದೂ ಕೂಡ ಮನೆಗೆ ಒಳ್ಳೆಯ ಶಕ್ತಿಯನ್ನು ಸ್ವಾಗತಿಸುತ್ತದೆ. ಮನೆಯೊಳಗೆ ಧನಾತ್ಮಕತೆ ನೆಲೆಗೊಳ್ಳಲು ಸಹಾಯ ಮಾಡುತ್ತದೆ. ಮನೆಯ ಮಧ್ಯಭಾಗವನ್ನು ಖಾಲಿ ಇರಿಸಿ. ಎಂದಿಗೂ ಆ ಜಾಗದಲ್ಲಿ ವಸ್ತುಗಳನ್ನು ಇರಿಸಬೇಡಿ.

ಆರೋಗ್ಯ ಕಾಪಾಡುವ ಇತರ ವಾಸ್ತು ಸಂಗತಿಗಳು:

ಆರೋಗ್ಯ ಕಾಪಾಡುವ ಇತರ ವಾಸ್ತು ಸಂಗತಿಗಳು:

  • ಬಲ್ಬ ನ ದೀಪದ ಕೆಳಗೆ ಎಂದಿಗೂ ಮಲಗಬೇಡಿ.
  • ಅಗತ್ಯವಿರುವವರಿಗೆ ದಾನ ಮಾಡುವುದು ಉತ್ತಮ ಫಲ ನೀಡುತ್ತದೆ.
  • ಉತ್ತಮ ನಿದ್ರೆ ಮಾಡಿ - ಮಲಗುವ ಸಮಯದಲ್ಲಿ, ತಲೆ ದಕ್ಷಿಣದ ಕಡೆಗೆ ಮತ್ತು ಪಾದಗಳು ಉತ್ತರದ ಕಡೆಗೆ ಇರಬೇಕು.
  • ಪ್ರತಿ ಶನಿವಾರ ಕಪ್ಪು ಉದ್ದು ಮತ್ತು ಸಾಸಿವೆ ಎಣ್ಣೆಯನ್ನು ದಾನ ಮಾಡಿ.
  • ಧಾರ್ಮಿಕ ಮನಸ್ಸಿನಿಂದ ಹನುಮಾನ್ ಚಾಲಿಸಾವನ್ನು ಪಠಿಸುವುದರಿಂದ ಹನುಮನ ಅನುಗ್ರಹ ಸಿಗುತ್ತದೆ. ಇದು ಎಲ್ಲಾ ರೀತಿಯ ಅಹಿತಕರಕರ ಘಟನೆಯಿಂದ ನಮ್ಮನ್ನು ರಕ್ಷಿಸುತ್ತದೆ. ಹನುಮನ ಫೋಟೋವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ.
  • ಆರೋಗ್ಯ ಕಾಪಾಡುವ ಇತರ ವಾಸ್ತು ಸಂಗತಿಗಳು:

    ಆರೋಗ್ಯ ಕಾಪಾಡುವ ಇತರ ವಾಸ್ತು ಸಂಗತಿಗಳು:

    • ವಾಸ್ತು ದೋಷವನ್ನು ತೊಡೆದುಹಾಕಲು, ಒಂಬತ್ತು ದಿನಗಳ ಕಾಲ ಮನೆಯಲ್ಲಿ ಅಖಂಡ ರಾಮಾಯಣವನ್ನು ನಿರಂತರವಾಗಿ ಪಠಿಸಿ.
    • ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಕರ್ಪೂರದಿಂದ ಆರತಿ ಮಾಡಿ.
    • ಮನೆಯಲ್ಲಿ ಎಂದಿಗೂ ಮುಳ್ಳಿನ ಗಿಡಗಳನ್ನು ನೆಡಬೇಡಿ.
    • ಕೊಠಡಿಗಳಲ್ಲಿ ನೈಸರ್ಗಿಕ ಬೆಳಕು ಮತ್ತು ಗಾಳಿ ಬರುವಂತೆ ನೋಡಿಕೊಳ್ಳಿ.
    • ಪ್ರತಿ ಹುಣ್ಣಿಮೆಯಂದು ಶಿವನನ್ನು ಆರಾಧಿಸಿ.
English summary

Vastu Tips For Good Health of You and Your Family in Kannada

Here we talking about Vastu tips for good health of you and your family in Kannada, read on
Story first published: Tuesday, May 4, 2021, 16:53 [IST]
X
Desktop Bottom Promotion