For Quick Alerts
ALLOW NOTIFICATIONS  
For Daily Alerts

ಮರೆತೂ ಕೂಡ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬೇಡಿ

|

ವಾಸ್ತು ಪ್ರಕಾರ, ಯಾವುದೇ ಮನೆಯಲ್ಲಿ ದೇವರ ಕೋಣೆ ಅಥವಾ ಪೂಜೆಯ ಮಂದಿರ ಪ್ರಮುಖವಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಾಸ್ತುದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳ ಪ್ರಕಾರ, ಅಶುಭವೆಂದು ಪರಿಗಣಿಸಲಾದ ಕೆಲವು ವಸ್ತುಗಳನ್ನು ಮನೆಯ ದೇವರ ಕೋಣೆಯೊಳಗೆ ಇಡಬಾರದು. ಇದರಿಂದ ಮನಸ್ಸು ಚಂಚಲತೆಯ ಜೊತೆಗೆ, ಧನಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ, ಮರೆತೂ ದೇವರ ಕೋಣೆಯಲ್ಲಿ ಇಡಬಾರದ ವಸ್ತುಗಳಾವುವು ಎಂಬುದನ್ನು ನೋಡೋಣ.

ಮನೆಯ ದೇವರ ಕೋಣೆಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಈ ಕೆಳಗೆ ನೀಡಲಾಗಿದೆ:

ದೇವರ ಕೋಣೆಯ ಜಾಗದ ಬಗ್ಗೆ ಗಮನವಿರಲಿ:

ದೇವರ ಕೋಣೆಯ ಜಾಗದ ಬಗ್ಗೆ ಗಮನವಿರಲಿ:

ಸ್ಥಳಾವಕಾಶದ ಕೊರತೆಯಿಂದ ಕೆಲವರು ಪೂಜಾ ಕೊಠಡಿಯನ್ನು ಇರುವ ಕೊಠಡಿಯಲ್ಲಿ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಹಾಗೆ ಮಾಡುವುದು ಸರಿಯಲ್ಲ. ಒಂದು ವೇಳೆ ಹೀಗಿದ್ದರೂ ಪೂಜೆಯ ಕಪಾಟನ್ನು ಮನೆಯ ಅನಾವಶ್ಯಕ ವಸ್ತುಗಳು ಇಡುವಲ್ಲಿ, ಕಸದ ವಸ್ತುಗಳನ್ನು ಇಡುವ ಜಾಗದಲ್ಲಾಗಲಿ ಇರಬಾರದು. ನಿಮ್ಮ ಮನೆಯಲ್ಲಿ ಸ್ಥಳಾವಕಾಶದ ಕೊರತೆಯಿದ್ದರೆ, ಈಶಾನ್ಯ ಮೂಲೆಯಲ್ಲಿ ಸ್ವಚ್ಛವಾದ ಮರದ ಕಂಬವನ್ನು ಸ್ಥಾಪಿಸಿ, ಅಲ್ಲಿ ನಿಮ್ಮ ಪೂಜಾ ಸ್ಥಳವನ್ನು ನಿರ್ಮಿಸಬಹುದು. ಆದರೆ ಇತರ ಅನಗತ್ಯ ವಸ್ತುಗಳನ್ನು ಇರಿಸುವ ದೇವರ ಕೋಣೆ ನಿರ್ಮಿಸಬೇಡಿ.

ಪೂಜೆಯ ಕೋಣೆಯಲ್ಲಿ ಒಣಗಿದ ಹೂವುಗಳನ್ನು ಇಡಬೇಡಿ:

ಪೂಜೆಯ ಕೋಣೆಯಲ್ಲಿ ಒಣಗಿದ ಹೂವುಗಳನ್ನು ಇಡಬೇಡಿ:

ಪ್ರತಿದಿನ ದೇವರಕೋಣೆಯನ್ನು ಹೂವಿನಿಂದ ಅಲಂಕರಿಸುತ್ತೇವೆ. ದೇವರ ಪೂಜೆಯಲ್ಲಿ ಹೂವುಗಳನ್ನು ಅವಶ್ಯವೆಂದು ಪರಿಗಣಿಸುವುದು ಒಳ್ಳೆಯದು. ಆದರೆ ಕೆಲವರು ಪೂಜೆಗೆ ಅರ್ಪಿಸಿದ ಹೂವುಗಳನ್ನು ದೇವರ ಕೋಣೆಯ ಯಾವುದೋ ಮೂಲೆಯಲ್ಲಿ ಇಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ವಾಸ್ತು ಪ್ರಕಾರ, ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ. ಒಣ ಹೂವನ್ನು ಮನೆಯಲ್ಲಿಟ್ಟರೆ ಬಡತನಕ್ಕೆ ಆಹ್ವಾನ ನೀಡಿದಂತೆ. ಇದು ಅಕಾಲಿಕ ಮರಣ, ಮಂಗಳ ದೋಷ ಅಥವಾ ಮದುವೆಯಲ್ಲಿ ವಿಳಂಬದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ದೇವರ ಕೋಣೆಯಲ್ಲಿ ವಿಗ್ರಹವಿಡುವ ನಿಯಮ:

ದೇವರ ಕೋಣೆಯಲ್ಲಿ ವಿಗ್ರಹವಿಡುವ ನಿಯಮ:

ಪೂಜೆಯ ಕೊಠಡಿಯಲ್ಲಿ ದೊಡ್ಡ ವಿಗ್ರಹಗಳನ್ನು ಇಡಬಾರದು ಎಂದು ಈ ನಿಯಮವಿದೆ. ನೀವು ಅದರ ಸ್ಥಳದಲ್ಲಿ ಚಿತ್ರಗಳನ್ನು ಅಥವಾ ಚಿಕ್ಕ ವಿಗ್ರಹಗಳನ್ನು ಇರಿಸಬಹುದು. ಜೊತೆಗೆ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಅಥವಾ ಯಾವುದೇ ದೇವರ ಪ್ರತಿಮೆಯನ್ನು ಇಡಬೇಡಿ.

ಪೂರ್ವಜರ ಫೋಟೋ ಇಡಬೇಡಿ:

ಪೂರ್ವಜರ ಫೋಟೋ ಇಡಬೇಡಿ:

ಪೂಜೆಯ ಕೋಣೆಯಲ್ಲಿ ಪೂರ್ವಜರ ಭಾವಚಿತ್ರವನ್ನು ಹಾಕಬಾರದು. ದೇವರ ಕೋಣೆಯಲ್ಲಿ ಪೂರ್ವಜರ ಚಿತ್ರಗಳನ್ನು ಹಾಕುವ ಬದಲು ನಿಮ್ಮ ಮನೆಯ ದಕ್ಷಿಣ ಗೋಡೆಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ನಿಮ್ಮ ಬಗ್ಗೆ ಸಂತಸಪಡುತ್ತಾರೆ.

ಶಂಖದ ನಿಯಮ:

ಶಂಖದ ನಿಯಮ:

ಪೂಜೆಯ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಶಂಖಗಳನ್ನು ಇಡಬೇಡಿ. ಪೂಜೆಗೆ ಪ್ರತಿದಿನ ಒಂದೇ ಒಂದು ಶಂಖವನ್ನು ಬಳಸಿ. ಶಂಖವನ್ನು ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗಿದೆ, ಆದ್ದರಿಂದ ಅದನ್ನು ಪ್ರತಿದಿನ ಬದಲಾಯಿಸುವುದು ಸರಿಯಲ್ಲ.

ಶಿವಲಿಂಗಕ್ಕೆ ಸಂಬಂಧಿಸಿದ ವಿಶೇಷ ವಿಷಯ :

ಶಿವಲಿಂಗಕ್ಕೆ ಸಂಬಂಧಿಸಿದ ವಿಶೇಷ ವಿಷಯ :

ದೇವರ ಕೋಣೆಯಲ್ಲಿ ಯಾವ ರೀತಿಯ ಶಿವಲಿಂಗ ಇರಬೇಕು ಎಂಬುದರ ಬಗ್ಗೆ ಶಾಸ್ತ್ರಗಳಲ್ಲಿ ವಿಶೇಷ ನಿಯಮಗಳನ್ನು ಹೇಳಲಾಗಿದೆ. ದೇವರ ಕೋಣೆಯಲ್ಲಿ ಶಿವಲಿಂಗವನ್ನು ಇಡಲು ಬಯಸಿದರೆ ಅದು ಹೆಬ್ಬೆರಳು ಗಾತ್ರಕ್ಕಿಂತ ದೊಡ್ಡದಾಗಿರಬಾರದು ಎಂಬುದನ್ನು ನೆನಪಿಡಿ. ಶಿವಲಿಂಗವನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ನೀವು ದೊಡ್ಡ ಶಿವಲಿಂಗವನ್ನು ಇರಿಸಲು ಬಯಸಿದರೆ, ಅದನ್ನು ಮನೆಯ ಹೊರಗೆ ಸ್ಥಾಪಿಸುವುದು ಉತ್ತಮ.

ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬೇಡಿ :

ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬೇಡಿ :

ದೇವಸ್ಥಾನದಲ್ಲಿ ಹರಿತವಾಗಿರುವ ಯಾವುದೇ ವಸ್ತುವನ್ನು ಇಡಬೇಡಿ. ದೇವಸ್ಥಾನದಲ್ಲಿ ಚೂಪಾದ ಕಬ್ಬಿಣದ ವಸ್ತುಗಳನ್ನು ಇಡುವುದರಿಂದ ನಿಮ್ಮ ಮೇಲೆ ಶನಿಯ ದುಷ್ಪರಿಣಾಮಗಳು ಉಂಟಾಗುತ್ತವೆ ಮತ್ತು ನಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರಸಾದದಲ್ಲಿ ಹಣ್ಣುಗಳನ್ನು ಕತ್ತರಿಸಲು ಚಾಕುವನ್ನು ಬಳಸಿದರೂ, ಅದನ್ನು ಬಳಸಿದ ತಕ್ಷಣ ಅದನ್ನು ಆ ಸ್ಥಳದಿಂದ ಹೊರಗೆ ಇಡಿ.

English summary

Vastu for Pooja Room : Don't Keep these Things in your Pooja Place at Home in Kannada

Here we talking about Vastu for Pooja Room : Don't keep these things in your pooja place at home in kannada, read on
Story first published: Saturday, March 19, 2022, 12:21 [IST]
X
Desktop Bottom Promotion