For Quick Alerts
ALLOW NOTIFICATIONS  
For Daily Alerts

ಜಗತ್ತಿನ ವಿಚಿತ್ರ ವಿವಾಹ ಸಂಪ್ರದಾಯಗಳ ಬಗ್ಗೆ ನಿಮಗೆ ಗೊತ್ತಾ? ಈ ರೀತಿ ಮದುವೆ ಆಗ್ತಾರಾ ಅಂತ ಶಾಕ್ ಆಗೋಗ್ತೀರಾ!

|

ಮದುವೆ ಎಂದರೆ ಗಂಡು ಹೆಣ್ಣಿನ ಜೀವನದಲ್ಲಿ ಬರುವ ಅತ್ಯಂತ ಮೌಲ್ಯಯುತವಾದ ಕ್ಷಣ. ಈ ಸಮಯವನ್ನು ಅನೇಕರು ಅತ್ಯಂತ ಸಂತೋಷದಿಂದ ಕಳೆಯುತ್ತಾರೆ. ತಮ್ಮ ದೇಶ, ತಮ್ಮ ಧರ್ಮ, ತಮ್ಮ ಪೂರ್ವಜರು ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾರೆ. ಒಂದೊಂದು ಸಮುದಾಯದಲ್ಲಿ ಒಂದೊಂದು ರೀತಿಯ ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬರುತ್ತಾರೆ. ಹಿಂದೂ ವಿವಾಹದಲ್ಲಿ ವರನ ಶೂಗಳನ್ನು ಕದಿಯುವ ಸಂಪ್ರದಾಯವನ್ನು ಆಚರಿಸಿದರೆ ಬೇರೆ ಧರ್ಮದಲ್ಲಿ ಬೇರೆ ರೀತಿಯ ಸಂಪ್ರಾದಾಯ ಇರುತ್ತದೆ. ನಾವಿಂದು ನಿಮಗೆ ಬೇರೆ ಬೇರೆ ದೇಶಗಳಲ್ಲಿ ವಿಚಿತ್ರವಾಗಿ ವಿವಾಹ ಸಂಪ್ರದಾಯಗಳನ್ನು ಆಚರಿಸುವ ಬಗ್ಗೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಸ್ಟೋರಿ ಕೇಳಿದರೆ ನೀವು ಈ ಬಗ್ಗೆ ಶಾಕ್ ಆಗೋದು ಪಕ್ಕಾ? ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ವರನ ಚಪ್ಪಲಿ ಅಡಗಿಸಿಡುವುದು!

ವರನ ಚಪ್ಪಲಿ ಅಡಗಿಸಿಡುವುದು!

ಭಾರತದಲ್ಲಿ ವರನ ಚಪ್ಪಲಿಯನ್ನು ಅಡಗಿಸಿಡುವ ಸಂಪ್ರದಾಯವಿದೆ. ಹೌದು, ವಿಲಕ್ಷಣ ಅನಿಸಿದರು ಇದು ಸತ್ಯ. ವರ ಮದುವೆಗೆ ಹಾಕ ಬೇಕಾಗಿರುವ ಚಪ್ಪಲಿ ಅಥವಾ ಶೂ ಅನ್ನು ಆತನ ಕುಟುಂಬಸ್ಥರು ಅಡಗಿಸಿಡುತ್ತಾರೆ. ಅದರಲ್ಲೂ ಸಹೋದರಿಯರು ಅಥವಾ ಕಸಿನ್ಸ್ ಗಳು ಈ ಚಪ್ಪಲಿ ಅಥವಾ ಶೂ ಅನ್ನು ಅಡಗಿಸಿಡುತ್ತಾರೆ. ಬಳಿಕ ಹಣ ಕೊಟ್ಟರೆ ಚಪ್ಪಲಿಯನ್ನು ಸುರಕ್ಷಿತವಾಗಿ ವಾಪಸ್ ನೀಡುತ್ತೇವೆ ಎನ್ನುತ್ತಾರೆ. ಹಣ ನೀಡಿದ ಬಳಿಕ ಹೇಳಿದ ಮಾತಿನಂತೆ ವಾಪಸ್ ಕೊಡುತ್ತಾರೆ. ಇದು ವಿವಾಹಕ್ಕೂ ಮುನ್ನ ನಡೆಯುವ ಸಂಪ್ರದಾಯವಾಗಿದೆ. ಈ ಮೂಲಕ ಮದುವೆಗೆ ದಿನವನ್ನು ರಂಗೇರಿಸುವುದಾಗಿದೆ. ಇದು ಭಾರತದ ವಿವಾಹದ ವೇಳೆ ನಡೆಯುವ ಆಚರಣೆ ಆಗಿದೆ.

ಮರದೊಂದಿಗೆ ವಿವಾಹ!

ಮರದೊಂದಿಗೆ ವಿವಾಹ!

ಇದು ಕೂಡ ಭಾರತದಲ್ಲಿ ವಿವಾಹದ ವೇಳೆ ಆಚರಿಸುವ ಸಂಪ್ರದಾಯವಾಗಿದೆ. ಹೌದು, ನೀವು ಹಿಂದೂ ಧರ್ಮದಲ್ಲಿ ಹುಟ್ಟಿದ ಮಹಿಳ್ಖೆಯಾಗಿದ್ದರೆ. ನೀವು ಜನಿಸುವಾಗ ಜ್ಯೋತಿಷ್ಯದ ಪ್ರಕಾರ ಮಂಗಳ ಮತ್ತು ಶನಿ ನಿಮ್ಮ ಏಳನೇ ಮನೆಯಲ್ಲಿದ್ದರೆ ಮದುವೆ ವಿಚಾರದಲ್ಲಿ ನೀವು ಶಾಪಗ್ರಸ್ತರಾಗಿದ್ದೀರಿ ಎಂದು ಹೇಳುತ್ತದೆ. ಹೀಗೆ ನೀವು ಮದುವೆಯಾದರೆ ನಿಮ್ಮ ಗಂಡನಿಗೂ ದೋಷಗಳು ಅಂಟಿಕೊಳ್ಳುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹೀಗಾಗಿ ಜ್ಯೋತಿಷಿಗಳ ಸೂಚನೆ ಪ್ರಕಾರ ಅನೇಕರು ವರನನ್ನು ಮದುವೆಯಾಗುವ ಮೊದಲು ಮರವನ್ನು ಮದುವೆಯಾಗುತ್ತಾರೆ. ಈ ಮೂಲಕ ಎಲ್ಲಾ ದೋಷಗಳು ಮರಕ್ಕೆ ಅಂಟುತ್ತದೆ ಎನ್ನುವ ನಂಬಿಕೆ.

ಚೀನಾದಲ್ಲಿ ಅಳುವ ಸಂಪ್ರದಾಯ!

ಚೀನಾದಲ್ಲಿ ಅಳುವ ಸಂಪ್ರದಾಯ!

ವಿವಾಹದ ಬಳಿಕ ಮನೆ ಬಿಟ್ಟು ಹೋಗುವ ಬೇಸರದಲ್ಲಿ ವಧು ಅಳುವುದು ಸಾಮಾನ್ಯ. ಆದರೆ ಚೀನಾದಲ್ಲಿ ಮದುವೆಗೆ ತಯಾರಿ ನಡೆಯುತ್ತಿದೆ ಎಂದರೆ ಅಳಬೇಕು. ಹೌದು, ವಧುಗಳು ತಮ್ಮ ಮದುವೆಗೆ ಒಂದು ತಿಂಗಳ ಮೊದಲು ಪ್ರತೀದಿನ ಒಂದು ಗಂಟೆ ಅಳಬೇಕು. ಇತರ ಸ್ತ್ರೀ ಸಂಬಂಧಿಗಳು ಕೂಡ ಸೇರಿಕೊಂಡು ಅಳಬೇಕು. ಚೀನಾದಲ್ಲಿ ತುಜಿಯಾ ಜನರಿಗೆ ಅಳು ಉತ್ತಮ ವಿವಾಹ ಅಥವಾ ಸಮಾರಂಭದ ಸಂಕೇತವಾಗಿದೆಯಂತೆ.

ಸ್ಕಾಟ್ಲೆಂಡ್‌ನ ವಧು ವರರನ್ನು ಕಪ್ಪುಗೊಳಿಸುವುದು!

ಸ್ಕಾಟ್ಲೆಂಡ್‌ನ ವಧು ವರರನ್ನು ಕಪ್ಪುಗೊಳಿಸುವುದು!

ಈ ಸಂಪ್ರದಾಯದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಸೇರಿಕೊಂಡು ವಧು ಮತ್ತು ವರನನ್ನು ಅಸಹ್ಯಕರವಾದ ವಸ್ತುಗಳಿಂದ ಅಂದರೆ ಟ್ರೆಕಲ್, ಮಸಿ, ಗರಿಗಳು ಮತ್ತು ಹಿಟ್ಟಿನಿಂದ ಸ್ನಾನ ಮಾಡಿಸಿ ಅವರನ್ನು ಕಪ್ಪಾಗಿಸುತ್ತಾರೆ. ಬಳಿಕ ಅವರನ್ನು ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಈ ಮೂಲಕ ವಧು ಮತ್ತು ವರರಿಂದ ದುಷ್ಟಶಕ್ತಿಗಳನ್ನು ದೂರವಿಡುವ ಉದ್ದೇಶದಿಂದ ಈ ರೀತಿಯ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.

ಫ್ರೆಂಚ್ ನಲ್ಲಿ ಅತಿಥಿಗಳು ತಿಂದ ಆಹಾರವನ್ನು ಸೇವಿಸಿವುದು!

ಫ್ರೆಂಚ್ ನಲ್ಲಿ ಅತಿಥಿಗಳು ತಿಂದ ಆಹಾರವನ್ನು ಸೇವಿಸಿವುದು!

ಪ್ರಾನ್ಸ್ ನಲ್ಲಿ ಇದೊಂದು ವಿಚಿತ್ರ ಸಂಪ್ರದಾಯವಾಗಿದೆ. ಮದುವೆ ಆದ ಗಂಡು ಹಾಗೂ ಹೆಣ್ಣಿಗೆ ಹೊಸ ಆಹಾರ ನೀಡದೆ, ಅತಿಥಿಗಳು ತಿಂದು ವೇಸ್ಟ್ ಎಂದು ಬಿಸಾಡಿದ ಆಹಾರವನ್ನು ವಧು-ವರರಿಗೆ ಕೊಡಲಾಗುತ್ತಿದೆ. ಇಲ್ಲಿನ ಸಂಪ್ರದಾಯದ ಪ್ರಕಾರ, ಗೇಸ್ಟ್ ಗಳು ತಿಂದು ಉಳಿದ ಆಹಾರಗಳಿಂದ ವರ ಹಾಗೂ ವಧುಗೆ ಶಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಈ ಸಂಪ್ರದಾಯವನ್ನು ನಿಲ್ಲಿಸಲಾಗಿದ್ದು, ಎನರ್ಜಿಗಾಗಿ ಚಾಕೋಲೆಟ್ ಹಾಗೂ ಶ್ಯಾಂಪೇನ್ ಕೊಡಲಾಗುತ್ತಿದೆ.

3 ದಿನ ಬೊರ್ನಿಯೊದಲ್ಲಿ ಮಲಮೂತ್ರವನ್ನು ವಿಸರ್ಜಿಸುವಂತಿಲ್ಲ!

3 ದಿನ ಬೊರ್ನಿಯೊದಲ್ಲಿ ಮಲಮೂತ್ರವನ್ನು ವಿಸರ್ಜಿಸುವಂತಿಲ್ಲ!

ಇಂಡೋನೇಷಿಯಾ ಹಾಗೂ ಮಲೇಷಿಯಾದ ಬೊರ್ನಿಯೊದಲ್ಲಿರುವ ಟಿಡಾಂಗ್ ಸಮುದಾಯದ ವಧು -ವರರು ಮನೆ ಅಥವಾ ಕೋಣೆಯಲ್ಲೇ 3 ದಿನ ಮತ್ತು 3 ರಾತ್ರಿಗಳವರೆಗೆ ಇರಬೇಕು. ಈ ಸಮಯದಲ್ಲಿ ಅವರು ಮಲ ಮೂತ್ರ ವಿಸರ್ಜಿಸುವಂತಿಲ್ಲ. ಇವರು ಏಷ್ಟು ಆಹಾರ ಸೇವಿಸುತ್ತಾರೆ. ಎಷ್ಟು ನೀರು ಸೇವಿಸುತ್ತಾರೆ ಎನ್ನುವುದನ್ನು ನೋಡಲು ಒಬ್ಬರನ್ನು ನೇಮಿಸಿರುತ್ತಾರೆ. ಈ ದಂಪತಿಯ ಜೀವನದಲ್ಲಿ ಯಾವುದೇ ಸಮಸ್ಯೆ ಬರದೆ ಇರಲು ಹಾಗೂ ಇವರ ಮಕ್ಕಳು ಆರೋಗ್ಯವಾಗಿರಲು ಈ ರೀತಿಯ ವಿಚಿತ್ರ ಆಚರಣೆ ಮಾಡಲಾಗುತ್ತದೆ.

ಸ್ವೀಡನ್‌ನಲ್ಲಿ ವಧುಗೆ ಕಿಸ್ ಕೊಡುವುದು!

ಸ್ವೀಡನ್‌ನಲ್ಲಿ ವಧುಗೆ ಕಿಸ್ ಕೊಡುವುದು!

ಸ್ವೀಡನ್ ನಲ್ಲಿ ವಿಚಿತ್ರ ಕಸ್ಟಮ್ ಆಚರಣೆ ಮಾಡಲಾಗುತ್ತಿದೆ. ಅದೇನೆಂದರೆ ಮದುವೆ ಸಮಾರಂಭದಲ್ಲಿ ವರನು ಕಣ್ಮರೆಯಾಗುತ್ತಾನೆ. ಈ ವೇಳೆ ವಧು ಏಕಾಂಗಿಯಾಗಿ ಇರುತ್ತಾಳೆ. ಈ ವೇಳೆ ಮದುವೆಗೆ ಬಂದ ಯುವಕರು ಹಾಗೂ ಅವಿವಾಹಿತ ಪುರುಷರು ವಧುವನ್ನು ಸಮಾಧಾನ ಮಾಡಿ ಕಿಸ್ ಮಾಡಬಹುದಾಗಿದೆ. ಇನ್ನು ಕಣ್ಮರೆಯಾಗುವ ವರನಿಗೆ, ವಧುವಿನ ಜೊತೆ ಇರುವ ಕನ್ಯೆಯರು ಕೂಡ ಚುಂಬಿಸುವುದುಂಟು. ಹೀಗೆ ವಿಚಿತ್ರವಾದ ಸಂಪ್ರದಾಯಕ್ಕೆ ಸ್ವೀಡನ್ ದೇಶ ಸಾಕ್ಷಿಯಾಗಿದೆ.

ಕಾಂಗೋದಲ್ಲಿ ಮದುವೆಯಲ್ಲಿ ನಗುವಂತಿಲ್ಲ!

ಕಾಂಗೋದಲ್ಲಿ ಮದುವೆಯಲ್ಲಿ ನಗುವಂತಿಲ್ಲ!

ಮದುವೆ ಎಂದರೆ ಎಲ್ಲರ ಜೀವನದಲ್ಲಿ ಖುಷಿ ತರುವ ಸಮಯ. ಆದರೆ ಕಾಂಗೋದ ಕೆಲವು ಕಡೆ ಮದುವೆಯಲ್ಲಿ ನಗುವಂತಿಲ್ಲ. ಹೌದು, ವಿಚಿತ್ರ ಎನಿಸಿದರು ಇದು ಸತ್ಯ, ಕಾಂಗೋದಲ್ಲಿ ಮದುವೆ ಎಂದರೆ ಎರಡು ಕುಟುಂಬಗಳ ನಡೆಯುವ ವ್ಯವಹಾರ ಎಂಬುದಾಗಿದೆ. ವಧುವಿಗೆ ಬೆಲೆ ಕೊಟ್ಟು ಖರೀದಿಸುವುದು ಎಂಬುವುದಾಗಿದೆ. ಹೀಗಾಗಿ ಈ ದಿನವನ್ನು ಗಂಭೀರ ದಿನ ಎಂದು ಅವರು ಪರಿಗಣಿಸುತ್ತಾರೆ.

English summary

Unusual Wedding Traditions From Around The World in Kannada

Have You Heard Unusual Wedding Traditions From Around The World in Kannada, Read on,
X
Desktop Bottom Promotion