For Quick Alerts
ALLOW NOTIFICATIONS  
For Daily Alerts

ವರ್ಕ್ ಲೋಡ್ ಹೆಚ್ಚಾಗ್ತಿದ್ಯಾ? ಈ ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಿ

|

ಆಧುನಿಕ ಜೀವನ ಶೈಲಿಯೇ ಹಾಗೇ, ಪ್ರತಿಯೊಂದಕ್ಕೂ ರೇಸ್. ನಾ ಮುಂದು ತಾಮುಂದು ಅನ್ನುವ ಈ ಕಾಲದಲ್ಲಿ ಪ್ರತಿಯೊಬ್ಬರೂ ಓಡೋದು ಸಕ್ಸಸ್ ಅನ್ನೋ ಶಿಖರ ಮುಟ್ಟೋಕೆ. ಮನೆ, ಸಂಸಾರ, ಯಶಸ್ಸು, ಸಮಯ ಹೀಗೆ ಎಲ್ಲವನ್ನ ಸರಿತೂಗಿಸಿಕೊಂಡು ಹೋಗೋದು ಸವಾಲೇ ಸರಿ .ಇದರ ಜೊತೆಗೆ ನಿಮ್ಮ ಕೆಲಸದ ಒತ್ತಡನೂ ಸೇರಿಕೊಂಡರೆ ಏನಾಗಬಹುದು ಒಮ್ಮೆ ಊಹೆ ಮಾಡಿ. ಅತಿಯಾದ ಕೆಲಸದ ಹೊರೆಯಿಂದ ನಿಮಗೆ ಒತ್ತಡ ಅನಿಸುತ್ತಿದ್ದರೆ ಈ ಸಿಂಪಲ್ ಸಲಹೆಗಳನ್ನು ಅನುಸರಿಸಿ. ವರ್ಕ್ ಲೋಡ್ ಕಡಿಮೆ ಮಾಡಿಕೊಳ್ಳಿ.

ವರ್ಕ್ ಲೋಡ್ ನಿಂದ ನಿಮಗೆ ಒತ್ತಡವಾಗುತ್ತಿದ್ದರೆ ಅನುಸರಿಸಬೇಕಾದ ಟಿಪ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ:

1. ವೇಳಾಪಟ್ಟಿಯನ್ನು ರಚಿಸಿ:

1. ವೇಳಾಪಟ್ಟಿಯನ್ನು ರಚಿಸಿ:

ಗೂಗಲ್ ಕ್ಯಾಲೆಂಡರ್ನಲ್ಲಿ ಕಾಲಕ್ಕೆ ಮುಗಿಯಬೇಕಾದ ಎಲ್ಲಾ ಕೆಲಸಗಳನ್ನು ನಮೂದಿಸಿ. ಅದಕ್ಕೆ ತಕ್ಕಂತೆ ಕೆಲಸ ಮಾಡಿ. ಯಾವ ಕಾಲಕ್ಕೆ ಯಾವ ಕೆಲಸ ಮುಗಿಯಬೇಕು? ಯಾವ ಕೆಲಸವನ್ನು ಮೊದಲು ಮುಗಿಸಬೇಕು ಎಂಬುದೆಲ್ಲವೂ ಒಂದೇ ಕಡೆ ಸಿಗುವುದರಿಂದ ಯಾವ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ತಿಳಿಯುತ್ತದೆ. ಜೊತೆಗೆ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವಂತೆ ನೋಡಿಕೊಳ್ಳಿ. ಆಗ ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಸಹ ಅವಕಾಶ ದೊರೆಯುವುದು.

2. ಅಲರ್ಟ್ ಆಗಿರಿ:

2. ಅಲರ್ಟ್ ಆಗಿರಿ:

ನೀವು ಕೇವಲ ಟೈಮ್ ಟೇಬಲ್ ನ್ನು ರಚಿಸಿದರೆ ಮಾತ್ರ ಆಗುವುದಿಲ್ಲ. ಅದಕ್ಕೆ ತಕ್ಕಂತೆ ಕೆಲಸವನ್ನೂ ಮಾಡಿ ಮುಗಿಸಬೇಕು. ಜೊತೆಗೆ ಪ್ರತಿದಿನ ಆ ವೇಳಾಪಟ್ಟಿಯನ್ನು ಗಮನಿಸುತ್ತಿರಿ. ಈ ಅಭ್ಯಾಸ ನಿಮಗೆ ಇಲ್ಲದಿದ್ದರೆ, ನಿಮ್ಮ ಕೆಲಸ ಅರ್ಧಕ್ಕೆ ಉಳಿಬಹುದು. ಅಥವಾ ಅದನ್ನು ಮುಂದೂಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ನಿಮ್ಮ ಗಡುವಿಗೆ ಸಂಬಂಧಿಸಿದಂತೆ ಕೆಲವೊಂದು ಎಚ್ಚರಿಕೆ ಸೂಚನೆಗಳನ್ನು ಟೈಮ್ ಟೇಬಲ್ ಗೆ ಹಾಕಿರಿ. ನಿಮ್ಮ ಕಂಪ್ಯೂಟರ್ ಅಥವಾ ಫೋನ್ನಲ್ಲಿನ ಪಾಪ್-ಅಪ್ ಬಂದಾಗ ನಿಮಗೆ ಬಾಕಿ ಇರುವ ಕೆಲಸದ ನೆನಪಾಗಬಹುದು.

3. ಎಲ್ಲವೂ ಸಂಘಟಿತವಾಗಿರಲಿ:

3. ಎಲ್ಲವೂ ಸಂಘಟಿತವಾಗಿರಲಿ:

ನೀವು ಒಂದೇ ಸಮಯದಲ್ಲಿ ಹಲವಾರು ಕೆಲಸ ಮಾಡುತ್ತಿರುವಾಗ, ನಿಮ್ಮ ಇನ್ಬಾಕ್ಸ್ ಅವ್ಯವಸ್ಥೆಯ ಗೂಡಾಗಬಹುದು. ಆದ್ದರಿಂದ, ನಿಮಗೆ ಅಗತ್ಯವಿರುವಾಗ ಪ್ರಮುಖ ಮಾಹಿತಿಯನ್ನು ಹುಡುಕಲು ಸಹಾಯ ಮಾಡಲು ಪ್ರತ್ಯೇಕ ಇನ್ಬಾಕ್ಸ್ಗೆ ಫೋಲ್ಡರ್ಗಳನ್ನು ಮಾಡಲು ಪ್ರಯತ್ನಿಸಿ. ಅಥವಾ ನಿಮ್ಮ ಫೋಲ್ಡರ್ ಗೆ ಕಲರ್ ಕೋಡಿಂಗ್ ಕೂಡ ಬಳಸಬಹುದು. ಇದರಿಂದ ಅಗತ್ಯ ಮಾಹಿತಿ ಹುಡುಕುವ ಸಮಯ ಕಡಿಮೆಯಾಗಬಹುದು. ಉದಾಹರಣೆಗೆ, ನೀವು ಕೆಲಸ ಮಾಡುತ್ತಿರುವ ಪ್ರತಿಯೊಂದು ನಿರ್ದಿಷ್ಟ ಕೆಲಸಕ್ಕಾಗಿ ಪ್ರತ್ಯೇಕ ಫೋಲ್ಡರ್ ರಚಿಸಿ.

4. ಅಪ್ ಟು ಡೇಟ್ ಆಗಿರಿ:

4. ಅಪ್ ಟು ಡೇಟ್ ಆಗಿರಿ:

ಆ ದಿನಕ್ಕೆ ಏನು ಮಾಡಿ ಮುಗಿಸಬೇಕೋ ಅದನ್ನು ಅಂದೇ ಮುಗಿಸಿ. ನೀವೇನೂ ಮಾಡಿದ್ದೀರಿ ಅಥವಾ ಏನು ಬಾಕಿ ಇದೆ ಎಂದು ತಿಳಿದುಕೊಳ್ಳಲು ಪ್ರತಿದಿನ ನಿಮ್ಮನ್ನು ನೀವೇ ಮಾನಿಟರ್ ಮಾಡಿಕೊಳ್ಳಿ. ಇದು ಮುಂದೆ ಬಾಕಿ ಇರುವ ಹಾಗೂ ನಿಮ್ಮ ಪ್ರಗತಿಯನ್ನು ನೋಡಲು ಸಾಧ್ಯವಾಗುವುದು. ಬಾಕಿ ಉಳಿದಿರುವ ಕೆಲಸವನ್ನು ಆದಷ್ಟು ಮರುದಿನವೇ ಮುಗಿಸಲು ಪ್ರಯತ್ನಿಸಿ. ಇಲ್ಲವಾದಲ್ಲಿ ಅದು ಹಿಂದೆಯೇ ಉಳಿಯುವ ಸಾಧ್ಯತೆ ಹೆಚ್ಚು. ಸರಿಯಾದ ಟೈಮ್ ಗೆ ಕೆಲಸ ಮುಗಿಸುವುದರಿಂದ ನಿಮಗೆ ಸ್ವಲ್ಪ ಫ್ರೀ ಸಮಯ ಸಿಗಬಹುದು.

5. ಕೆಲಸದ ಹೊರೆ ಹಂಚಿಕೊಳ್ಳುವ ಬಗ್ಗೆ ಮಾತನಾಡಿ:

5. ಕೆಲಸದ ಹೊರೆ ಹಂಚಿಕೊಳ್ಳುವ ಬಗ್ಗೆ ಮಾತನಾಡಿ:

ಸಾಕಷ್ಟು ಸಮಯವಿಲ್ಲದ ಕಾರಣ ನಿಮ್ಮ ಕೆಲವು ಸಣ್ಣ-ಗುರಿಗಳನ್ನು ಪೂರ್ಣಗೊಳಿಸಲಾಗುತ್ತಿಲ್ಲ ಎಂದು ನಿಮಗೆ ಭಾವಿಸಲು ಪ್ರಾರಂಭಿಸಿದರೆ, ನಿಮ್ಮ ಕೆಲಸವನ್ನು ಹಂಚಿಕೊಳ್ಳುವ ಬಗ್ಗೆ ವ್ಯವಸ್ಥಾಪಕರೊಂದಿಗೆ ಮಾತನಾಡಬಹುದು. ಆಗ ನಿಮ್ಮ ಸಣ್ಣ ಕೆಲಸಗಳನ್ನು ಮಾಡಲು ಅವಕಾಶ ದೊರೆಯಬಹುದು.

Read more about: insync work ಕೆಲಸ
English summary

Things To Do When You Feel Overwhelmed by Your Workload in Kannada

Here we talking about things to do when you feel overwhelmed by your workload in kannada, read on
Story first published: Thursday, May 20, 2021, 17:35 [IST]
X
Desktop Bottom Promotion