For Quick Alerts
ALLOW NOTIFICATIONS  
For Daily Alerts

ನೀವು ಸಂತೋಷವಾಗಿರಬೇಕೆ? ಈ ಹವ್ಯಾಸಗಳನ್ನು ರೂಢಿಸಿಕೊಳ್ಳಿ

|

ಸಂತೋಷ ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯಾನ ನೀಡುವುದು ಕಷ್ಟ. ಪ್ರತಿಯೊಬ್ಬರಿಗೂ ಇದರ ವ್ಯಾಖ್ಯಾನ ಬೇರೆಯೇ ಇರುತ್ತದೆ. ನಾವೆಲ್ಲಾ ಹಣವೇ ಸಂತೋಷ ಎಂಬ ಭಾವನೆಯನ್ನು ಹೊಂದಿದ್ದೇವೆ. ಆದರೆ ಹಣವಂತರಿಗೆ ಇದೇ ಕಾರಣಕ್ಕೆ ನೆಮ್ಮದಿ ನಿದ್ದೆ ಹಾರಿಹೋಗಿರುವುದನ್ನು ನೋಡಿದರೆ ಈ ವ್ಯಾಖ್ಯಾನ ತಪ್ಪು ಎನಿಸುತ್ತದೆ. ನಿಮಗೆ, ನಿಮ್ಮ ಮನಸ್ಸಿನ ಶಾಂತಿಯೇ ಸಂತೋಷ ಎನಿಸಬಹುದು. ಬೇರೊಬ್ಬರಿಗೆ ಯಾವ ಗೌಜಿ ಗದ್ದಲವಿಲ್ಲದ ವಾತಾವರಣ ತಲೆಕೆಡಿಸಬಹುದು.

ಇವರಿಗೆ ಸುತ್ತ ಹಲವಾರು ಸ್ನೇಹಿತರು ಮತ್ತು ಚರ್ಚಿಸಲು ಸದಾ ಏನಾದರೂ ವಿಷಯವಿದ್ದೇ ಇರಬೇಕು, ಆಗಲೇ ಇವರಿಗೆ ಸಂತೋಷ. ಕೆಲವರಿಗೆ ತಮ್ಮ ಕನಸಿನ ಗುರಿಯನ್ನು ತಲುಪುವ ಪ್ರಯತ್ನಗಳಲ್ಲಿಯೇ ಸಂತೋಷ ಸಿಗಬಹುದು. ನಿಮ್ಮ ನಿಜವಾದ ಸಂತೋಷದ ಆವೃತ್ತಿಯ ಹೊರತಾಗಿಯೂ, ಸಂತೋಷದಾಯಕ, ಹೆಚ್ಚು ತೃಪ್ತಿಕರ ಜೀವನ ನಮ್ಮ ತಲುಪುವಿಕೆಯ ವ್ಯಾಪ್ತಿಯಲ್ಲಿಯೇ ಇದೆ. ಈ ವ್ಯಾಪ್ತಿಗಳನ್ನು ತಲುಪಬೇಕಾದರೆ ನಾವೇ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

ಈ ಅಭ್ಯಾಸಗಳೇ ನಮ್ಮ ಹವ್ಯಾಸಗಳಾಗಬೇಕು. ಆಂಗ್ಲ ಸುಭಾಷಿತವೊಂದು ಹೀಗೆ ಹೇಳುತ್ತದೆ: '"Idle brain is the devil's workshop" (ಖಾಲಿ ಮನಸ್ಸು ಸೈತಾನನ ಕಾರ್ಯಸ್ಥಳ). ಇದರರ್ಥ, ನಾವು ಯಾವುದಾದರೊಂದು ಕ್ರಿಯೆಯಲ್ಲಿ ನಮ್ಮ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ಸ್ಥಾನದಲ್ಲಿ ಬೇಡದ ಮತ್ತು ಋಣಾತ್ಮಕ ಚಿಂತನೆಗಳು ಮೂಡುತ್ತವೆ, ಇವೇ ನಮ್ಮ ಸಂತೋಷವನ್ನು ಕಸಿಯುತ್ತವೆ.

ಹೀಗೆ ಮನ್ನಸ್ಸನ್ನು ತೊಡಗಿಸಿಕೊಳ್ಳಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ ಇಂದಿನ ಲೇಖನದಲ್ಲಿ ಈ ಬಗ್ಗೆ ತಜ್ಞರು ನೀಡಿರುವ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಈ ಕೆಲವು ಅಭ್ಯಾಸಗಳು ಹೆಚ್ಚಿನ ಒತ್ತಡವನ್ನು ಉಂಟುಮಾಡಿದರೆ ಅಥವಾ ನಿಮ್ಮ ಜೀವನಶೈಲಿಗೆ ಸರಿಹೊಂದುವುದಿಲ್ಲವಾದರೆ, ಅವುಗಳನ್ನು ಹೊರಹಾಕಿ. ಸ್ವಲ್ಪ ಸಮಯ ಮತ್ತು ಅಭ್ಯಾಸದೊಂದಿಗೆ, ನಿಮಗಾಗಿ ಯಾವುದು ಕೆಲಸ ಮಾಡುತ್ತದೆ ಮತ್ತು ಕೆಲಸ ಮಾಡುವುದಿಲ್ಲ ಎಂದು ನಿಮಗೇ ಅರ್ಥವಾಗುತ್ತದೆ. ಯಾವುದು ಸೂಕ್ತವೋ ಅವು ನಿಮ್ಮ ನಿತ್ಯದ ಅಭ್ಯಾಸವಾಗಲಿ. ಬನ್ನಿ, ನೋಡೋಣ:

ದೈನಂದಿನ ಅಭ್ಯಾಸಳು

1. ಮುಗುಳುನಗೆ

1. ಮುಗುಳುನಗೆ

ನೀವು ಸಂತೋಷವಾಗಿರುವಾಗ ನಿಮ್ಮ ಮೊಗದಲ್ಲಿ ನಗು ಇರುತ್ತದೆ. ಆದರೆ ವಾಸ್ತವದಲ್ಲಿ ಇದೊಂದು ದ್ವಿಮುಖ ರಸ್ತೆ. ಅಂದರೆ ನೀವು ವಿರುದ್ದವಾಗಿ ಯೋಚಿಸಿ, ನೀವು ನಗುತ್ತಿದ್ದಷ್ಟೂ ಹೊತ್ತು ಸಂತೋಷವಾಗಿಯೇ ಇರುತ್ತೀರಿ!

ನಾವು ಸಂತೋಷವಾಗಿರುವುದರಿಂದ ನಾವು ನಗುತ್ತೇವೆ, ಮತ್ತು ನಗುವುದರಿಂದ ಮೆದುಳು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ, ಅದು ನಮಗೆ ಸಂತೋಷವನ್ನು ನೀಡುತ್ತದೆ. ಇದರರ್ಥ ನೀವು ಯಾವಾಗಲೂ ನಿಮ್ಮ ಮುಖವನ್ನು ಗಂಟುಹಾಕಿಕೊಂಡಿದ್ದರೆ ಮತ್ತು ನಗಲೇಬೇಕಾದಾಗ ಕೃತಕ ನಗು ನಗಬೇಕೆಂದೇನಲ್ಲ. ಆದರೆ ಮುಂದಿನ ಬಾರಿ ನಿಮಗೆ ಸಂತೋಷವಾಗಿ ಇರದೇ ಇರುವ ಯಾವುದೇ ಕಾರಣವಿದ್ದರೂ ಸರಿ, ಪ್ರಯತ್ನಪೂರ್ವಕವಾಗಿ ನಿಮ್ಮ ಮೊಗದಲ್ಲಿ ನಗುವನ್ನು ಬರಿಸಿ.

ಇದಕ್ಕಾಗಿ ನಿಮ್ಮ ಮೆದುಳಿಗೆ ಹೀಗೆ ಹೇಳಬೇಕು. ನನ್ನ ಸಂತೋಷವನ್ನು ಕಸಿದುಕೊಳ್ಳಲಿಕ್ಕೆ ಈ ಕಾರಣ ಸಾಕಾಗುವುದಿಲ್ಲ, ಇದಕ್ಕೂ ಎಷ್ಟೋ ದೊಡ್ಡ ಕಾರಣಗಳಿರುವ ವ್ಯಕ್ತಿಗಳೂ ಸಂತೋಷವಾಗಿಯೇ ಇರಬೇಕಾದರೆ ನಾನೇಕೆ ಅಸಂತುಷ್ಟನಾಗಿರಲಿ? ಈ ಭಾವನೆಯಿಂದ ಮನ ಬಿಚ್ಚಿ ನಗಿ ಮತ್ತು ಏನಾಗುತ್ತದೆ ಎಂದು ನೋಡಿ. ಅಥವಾ ಕನ್ನಡಿಯಲ್ಲಿ ನಿಮ್ಮನ್ನು ನೋಡಿ ನಗುವ ಮೂಲಕ ಪ್ರತಿದಿನ ಬೆಳಿಗ್ಗೆ ಪ್ರಾರಂಭಿಸಲು ಪ್ರಯತ್ನಿಸಿ.್

 2. ವ್ಯಾಯಾಮ

2. ವ್ಯಾಯಾಮ

ವ್ಯಾಯಾಮವು ನಿಮ್ಮ ದೇಹಕ್ಕೆ ಮಾತ್ರವಲ್ಲ. ನಿತ್ಯದ ವ್ಯಾಯಾಮವು ಸ್ವಾಭಿಮಾನ ಮತ್ತು ಸಂತೋಷವನ್ನು ಹೆಚ್ಚಿಸುವ ಜೊತೆಗೇ ಒತ್ತಡ, ಆತಂಕದ ಭಾವನೆಗಳು ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲೂ ಸಹಾಯ ಮಾಡುತ್ತದೆ. ಅಲ್ಪ ಪ್ರಮಾಣದ ದೈಹಿಕ ಚಟುವಟಿಕೆಯು ಸಹ ವ್ಯತ್ಯಾಸವನ್ನುಂಟು ಮಾಡುತ್ತದೆ. ನೀವು ಟ್ರಯಥ್ಲಾನ್‌ಗಾಗಿ ತರಬೇತಿ ನೀಡಬೇಕಾಗಿಲ್ಲ ಅಥವಾ ಬಂಡೆಯನ್ನು ದೂಡಬೇಕಾಗಿಲ್ಲ.

ಒಟ್ಟಾರೆ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ವ್ಯಾಯಾಮವನ್ನು ನಿಮಗೆ ಯಾವುದು ಇಷ್ಟವಾಗುತ್ತದೆಯೋ ಅದನ್ನು, ಅದು ತಪ್ಪಾಗಿದ್ದರೂ ಸರಿ, ನಿತ್ಯವೂ ಒಂದೇ ಸಮಯದಲ್ಲಿ ನಿರ್ವಹಿಸಿ. ತಜ್ಞರ ಪ್ರಕಾರ ಮುಂಜಾನೆಯ ಹೊತ್ತಿನ ವ್ಯಾಯಾಮ ಅತ್ಯುತ್ತಮ. ಆದರೆ ನಿಮ್ಮ ದೇಹ ಈ ವ್ಯಾಯಾಮಕ್ಕೆ ಒಗ್ಗಿಕೊಳ್ಳುವಂತೆ ನಿಧಾನವಾಗಿ ಪ್ರಾರಂಭಿಸಿ ನಿತ್ಯವೂ ಕೊಂಚ ಹೆಚ್ಚಿಸುತ್ತಾ ಹೋಗಬೇಕು. ಒಮ್ಮೆಲೇ ಭಾರೀ ವ್ಯಾಯಾಮ ಮಾಡಿದರೆ ಮೈ ಕೈ ನೋವು ಮತ್ತು ಅನಾರೋಗ್ಯ ಎದುರಾಗಬಹುದು.

3. ಸಾಕಷ್ಟು ನಿದ್ರೆ ಪಡೆಯಿರಿ

3. ಸಾಕಷ್ಟು ನಿದ್ರೆ ಪಡೆಯಿರಿ

ಆಧುನಿಕ ಸಮಾಜದ ಜೀವನದಲ್ಲಿ ನಿದ್ದೆಗೆ ಕಡಿಮೆ ಪ್ರಾಶಸ್ತ್ಯವಿದ್ದರೂ ಪ್ರತಿಯೊಬ್ಬರಿಗೂ ಸಾಕಷ್ಟು ನಿದ್ರೆ ಅತ್ಯಗತ್ಯ ಎಂದು ನಮಗೆಲ್ಲಾ ತಿಳಿದಿದೆ. ಉತ್ತಮ ಆರೋಗ್ಯ, ಮೆದುಳಿನ ಕಾರ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಸಾಕಷ್ಟು ನಿದ್ದೆಯ ಅಗತ್ಯವಿದೆ. ಹೆಚ್ಚಿನ ವಯಸ್ಕರಿಗೆ ಪ್ರತಿ ರಾತ್ರಿ ಸುಮಾರು 7 ಅಥವಾ 8 ಗಂಟೆಗಳ ನಿದ್ದೆಯ ಅವಶ್ಯಕತೆ ಇದೆ. ಹಗಲಿನಲ್ಲಿಯೂ ನಿಮಗೆ ಕಿರು ನಿದ್ದೆ ಎದುರಾಗುತ್ತಿದ್ದು ಮನಸ್ಸು ಮಂಕು ಕವಿದಂತಿದ್ದರೆ ನಿಮ್ಮ ದೇಹ ನಿಮಗೆ ಹೆಚ್ಚಿನ ನಿದ್ದೆಯ ಅವಶ್ಯಕತೆಯ ಬಗ್ಗೆ ಸೂಚನೆ ನೀಡುತ್ತಿದ್ದಿರಬಹುದು.

ಹಾಗಾಗಿ ನಿಮ್ಮ ನಿದ್ದೆ ಕಸಿಯುತ್ತಿರುವ ನಿಮ್ಮ ನಿತ್ಯದ ಅಭ್ಯಾಸಗಳ ಬಗ್ಗೆ ಗಮನ ಹರಿಸಿ. ನಿದ್ದೆಗಿಂತಲೂ ಇದು ಅಮೂಲ್ಯವೇ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ವಾಸ್ತವದಲ್ಲಿ ನಿದ್ದೆಯನ್ನು ಹಣದಲ್ಲಿ ಅಳೆಯುವುದಾದರೆ ಸುಖನಿದ್ದೆಯ ಎಂಟು ಘಂಟೆಗಳು ಲಕ್ಷ ರೂಪಾಯಿ ಬೆಲೆ ಬಾಳಬಹುದು. ಈ ನಿದ್ದೆಯನ್ನು ಕಡೆಗಣಿಸುವ ಕಾರ್ಯ ಇದಕ್ಕೂ ಹೆಚ್ಚು ಮೌಲ್ಯದ್ದೇ ಎಂದು ಪ್ರಶ್ನಿಸಿಕೊಳ್ಳಿ.

4. ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಆಹಾರ ಸೇವಿಸಿ

4. ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಆಹಾರ ಸೇವಿಸಿ

ಆಹಾರದ ಆಯ್ಕೆಗಳೂ ನಿಮ್ಮ ಒಟ್ಟಾರೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಆದರೆ ಕೆಲವು ಆಹಾರಗಳು ನಿಮ್ಮ ಮನಸ್ಸಿನ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತವೆ.

ಉದಾಹರಣೆಗೆ: ಕಾರ್ಬೋಹೈಡ್ರೇಟ್‌ಗಳು ಸಿರೊಟೋನಿನ್ ಅನ್ನು ಬಿಡುಗಡೆ ಮಾಡುತ್ತವೆ, ಇದು "ಉತ್ತಮ ಭಾವನೆ ಮೂಡಿಸುವ" ರಸದೂತಗಳಾಗಿವೆ. ಸರಳವಾದ ಕಾರ್ಬೋಹೈಡ್ರೇಟುಗಳು - ಸಕ್ಕರೆ ಮತ್ತು ಪಿಷ್ಟಯುಕ್ತ ಆಹಾರಗಳನ್ನು ಕನಿಷ್ಠವಾಗಿ ಇರಿಸಿ, ಏಕೆಂದರೆ ಇದರಿಂದ ಶಕ್ತಿ ಎಷ್ಟು ಥಟ್ಟನೇ ದೇಹಕ್ಕೆ ದೊರಕುತ್ತದೆಯೋ ಅಷ್ಟೇ ಬೇಗ ಇಳಿದೂ ಹೋಗುತ್ತದೆ. ಹಾಗಾಗಿ ಸಂಕೀರ್ಣ ಕಾರ್ಬೋಹೈಡ್ರೇಟುಗಳಾದ ತರಕಾರಿಗಳು, ಬೀನ್ಸ್ ಮತ್ತು ಧಾನ್ಯಗಳು ಉತ್ತಮವಾಗಿವೆ.

ಬಿಳಿ ಮಾಂಸ, ಕೋಳಿ, ದ್ವಿದಳ ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಹೆಚ್ಚು ಪ್ರಮಾಣದಲ್ಲಿದೆ. ಈ ಆಹಾರಗಳು ಡೋಪಮೈನ್ ಮತ್ತು ನೋರೆಪಿನಿಫ್ರೀನ್ ಎಂಬ ರಸದೂತಗಳನ್ನು ಬಿಡುಗಡೆ ಮಾಡುತ್ತವೆ, ಇದು ಶಕ್ತಿ ಮತ್ತು ಸಾಂದ್ರತೆಯನ್ನು ಹೆಚ್ಚಿಸುತ್ತದೆ.

ಹೆಚ್ಚು ಸಂಸ್ಕರಿಸಿದ ಅಥವಾ ಆಳವಾಗಿ ಹುರಿದ ಆಹಾರಗಳು ನಿಮ್ಮ ಮನಸ್ಸನ್ನು ಕುಗ್ಗಿಸುವ ಗುಣ ಪಡೆದಿವೆ. ಅಲ್ಲದೇ ಇವುಗಳ ಸೇವನೆಯ ಬಳಿಕ ಆರೋಗ್ಯಕರ ಆಹಾರವನ್ನು ಸೇವಿಸದಿರಲು ಮನಸ್ಸು ಬದಲಾಗುತ್ತದೆ. ಹಾಗಾಗಿ ಈ ಆಹಾರಗಳನ್ನು ಸೇವಿಸುವ ಮನಸ್ಸಾದಾಗಲೆಲ್ಲಾ ಇದರ ಬದಲಿಗೆ ಹೊಸದಾದ ಒಂದು ಉತ್ತಮ ಆಹಾರವನ್ನು ಆಯ್ದುಕೊಂಡು ಸೇವಿಸಲು ಪ್ರಾರಂಭಿಸಿ. ಉದಾಹರಣೆಗೆ ಉಪಾಹರದಲ್ಲಿ ಸಿಹಿಯ ಬದಲಾಗಿ ಹಣ್ಣು ಬೆರೆಸಿದ ಮೊಸರು ಸೇವಿಸಿ. ಇದರಿಂದ ನಿಮ್ಮ ಆಹಾರ ಸೇವನೆಯ ಬಯಕೆಯೂ ಪೂರ್ಣಗೊಳ್ಳುತ್ತದೆ ಮತ್ತು ಬೆಳಗ್ಗಿನ ಚಟುವಟಿಕೆಗಳಿಗೆ ಅಗತ್ಯವಾದ ಪ್ರೋಟೀನ್ ಸಹಾ ದೊರಕುತ್ತದೆ. ಹೊಸ ಹೊಸ ಆರೋಗ್ಯಕರ ಆಹಾರಗಳನ್ನು ಆಹಾರಕ್ರಮದಲ್ಲಿ ಅಳವಡಿಸುತ್ತಾ ಹೋಗಿ. ಕೆಲವೇ ದಿನಗಳಲ್ಲಿ ನಿಮಗೆ ಹಿಂದಿನ ಆಹಾರಪದ್ದತಿಯೇ ಮರೆತು ಹೋಗುವಷ್ಟು ಹೊಸ ಆರೋಗ್ಯಕರ ಆಹಾರಗಳು ಲಭಿಸುತ್ತವೆ.

5. ಕೃತಜ್ಞರಾಗಿರಿ

5. ಕೃತಜ್ಞರಾಗಿರಿ

ಸರಳವಾಗಿ ಕೃತಜ್ಞರಾಗಿರುವುದು ನಿಮ್ಮ ಮನಸ್ಥಿತಿಗೆ ಇತರ ಪ್ರಯೋಜನಗಳ ಜೊತೆಗೆ ದೊಡ್ಡ ಉತ್ತೇಜನವನ್ನೂ ನೀಡುತ್ತದೆ. ಉದಾಹರಣೆಗೆ, ಇತ್ತೀಚಿನ ಎರಡು ಭಾಗಗಳ ಅಧ್ಯಯನವೊಂದರಲ್ಲಿ ಕೃತಜ್ಞತೆಯನ್ನು ಅಭ್ಯಾಸ ಮಾಡುವುದರಿಂದ ಭರವಸೆ ಮತ್ತು ಸಂತೋಷದ ಭಾವನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಕಂಡುಕೊಳ್ಳಲಾಗಿದೆ. ನೀವು ಕೃತಜ್ಞರಾಗಿರುವ ಒಂದು ವಿಷಯವನ್ನು ಅಂಗೀಕರಿಸುವ ಮೂಲಕ ಪ್ರತಿದಿನವನ್ನು ಪ್ರಾರಂಭಿಸಿ. ನೀವು ಹಲ್ಲುಜ್ಜುವಾಗ ಅಥವಾ ಸ್ನೂಜ್ ಮಾಡಿದ ಅಲಾರಂ ಆಫ್ ಆಗುವವರೆಗೆ ಕಾಯುತ್ತಿರುವಾಗ ನೀವು ಇದನ್ನು ಮಾಡಬಹುದು.

ನಿಮ್ಮ ದಿನದ ಸಮಯ ಕಳೆಯುತ್ತಿರುವಂತೆಯೇ, ನಿಮ್ಮ ಜೀವನದಲ್ಲಿ ಆದ ಆಹ್ಲಾದಕರ ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಲು ಪ್ರಯತ್ನಿಸಿ. ಯಾರಾದರೂ ನಿಮ್ಮನ್ನು ಪ್ರೀತಿಸುತ್ತಾರೆ ಎಂದು ತಿಳಿದುಕೊಳ್ಳುವುದು ಅಥವಾ ಅರ್ಹವಾದ ಭಡ್ತಿಯನ್ನು ಪಡೆಯುವುದು ಮುಂತಾದ ದೊಡ್ಡ ವಿಷಯಗಳಾಗಿರಬಹುದು. ಸಾಮಾನ್ಯವಾಗಿ ಇದಕ್ಕೂ ಹೆಚ್ಚಿನ ಸಂತೋಷಗಳನ್ನು ನಿಮ್ಮ ನಿತ್ಯದ ಕೆಲವು ಚಿಕ್ಕ ಪುಟ್ಟ ಸಂಗತಿಗಳೇ ನೀಡಬಹುದು.

ಒಂದು ಕಪ್ ಕಾಫಿ ನೀಡಿದ ಸಹೋದ್ಯೋಗಿ ಅಥವಾ ನಡೆಯುತ್ತಿದ್ದಾಗ ಮುಂದಿನಿಂದ ಬಂದ ನಿಮ್ಮ ಅಕ್ಕ ಪಕ್ಕದವರು ಕೈಬೀಸಿ 'ಹೇಗಿದ್ದೀರಿ' ಎಂದು ವಿಚಾರಿಸಿದರೂ ಸಾಕು, ಇದು ನಿಮಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಬೆಳಗ್ಗಿನ ಹೊತ್ತಿನ ಪ್ರಥಮ ಕಿರಣಗಳ ಬೆಚ್ಚನೆಯ ಅನುಭವವೂ ನಿಮಗೆ ಅತೀವವಾದ ಸಂತೋಷವನ್ನು ನೀಡಬಹುದು. ಇದನ್ನೆಲ್ಲಾ ನೀಡಿದ ಆ ದೇವರಿಗೆ ನಾವು ಕೃತಜ್ಞರಾಗಿರುವ ಮೂಲಕ ಸಂತೋಷ ಅನುಭವಿಸಬಹುದು. ಸ್ವಲ್ಪ ಅಭ್ಯಾಸದಿಂದ, ನಿಮ್ಮ ಸುತ್ತಲಿನ ಎಲ್ಲಾ ಸಕಾರಾತ್ಮಕ ವಿಷಯಗಳ ಬಗ್ಗೆ ನೀವು ಹೆಚ್ಚು ಜಾಗೃತಿ ಪಡೆಯಬಹುದು.

6. ಅಭಿನಂದನೆಗಳನ್ನು ಸಲ್ಲಿಸಿ

6. ಅಭಿನಂದನೆಗಳನ್ನು ಸಲ್ಲಿಸಿ

ದಯೆಯ ಕೃತ್ಯಗಳನ್ನು ಮಾಡುವುದರಿಂದ ನೀವು ಹೆಚ್ಚು ತೃಪ್ತಿಯನ್ನು ಅನುಭವಿಸಬಹುದು ಎಂಬುದನ್ನು ಒಂದು ಸಂಶೋಧನೆ ಸಾಬೀತುಪಡಿಸುತ್ತದೆ. ಪ್ರಾಮಾಣಿಕ ಅಭಿನಂದನೆಯನ್ನು ನೀಡುವುದು ನಿಮ್ಮ ಸ್ವಂತ ಸಂತೋಷಕ್ಕೆ ಉತ್ತೇಜನ ನೀಡುವಾಗ ಇನ್ನೊಬ್ಬರ ದಿನವನ್ನು ಬೆಳಗಿಸಲು ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ.

ವ್ಯಕ್ತಿಯ ಕಣ್ಣನ್ನು ಸೆಳೆಯಿರಿ ಮತ್ತು ನಿಮ್ಮ ಅಭಿನಂದನೆಯನ್ನು ನಗುವಿನೊಂದಿಗೆ ಹೇಳಿ ಆದ್ದರಿಂದ ನೀವು ಅದನ್ನು ಅರ್ಥೈಸಿಕೊಳ್ಳುತ್ತೀರಿ ಎಂದು ಅವರಿಗೆ ತಿಳಿಯುತ್ತದೆ.

ಅದು ನಿಮಗೆ ಎಷ್ಟು ಒಳ್ಳೆಯದು ಮಾಡುತ್ತದೆ ಎಂದು ತಿಳಿದಾಗ ನಿಮಗೇ ಆಶ್ಚರ್ಯವಾಗಬಹುದು. ಒಂದು ವೇಳೆ ನೀವು ಯಾವುದೇ ವ್ಯಕ್ತಿಯ ದೈಹಿಕ ನೋಟದ ಬಗ್ಗೆ ಯಾರಿಗಾದರೂ ಅಭಿನಂದನೆಯನ್ನು ನೀಡಲು ಬಯಸಿದರೆ, ಅದನ್ನು ಗೌರವಯುತವಾಗಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಏಕೆಂದರೆ ಹೊಗಳಿಕೆ ಪ್ರಾಮಾಣಿಕವಾಗಿಲ್ಲದಿದ್ದರೆ ಅವರಿಗೆ ನಿಮ್ಮಿಂದ ಹೊಟ್ಟೆಕಿಚ್ಚಿನ ಸೂಚನೆ ಸಿಗಬಹುದು. ಇದು ಅಪಾಯಕಾರಿಯಾಗಿದೆ.

7. ಆಳವಾಗಿ ಉಸಿರಾಡಿ

7. ಆಳವಾಗಿ ಉಸಿರಾಡಿ

ನೀವು ಉದ್ವಿಗ್ನರಾಗಿದ್ದೀರಿ, ನಿಮ್ಮ ಭುಜಗಳು ಬಿಗಿಯಾಗಿರುತ್ತವೆ, ಮುಖ ಗಂಟಿಕ್ಕಿರುತ್ತದೆ ಮತ್ತು ನೀವು "ಏನನ್ನೋ ಕಳೆದುಕೊಳ್ಳಬಹುದು" ಎಂದು ಭಾವನೆಯ ಒತ್ತಡದಲ್ಲಿರುತ್ತೀರಿ. ಸಾಮಾನ್ಯವಾಗಿ ಕೆಲವು ಸಂದರ್ಭಗಳಲ್ಲಿ, ಉದಾಹರಣೆಗೆ ಪರೀಕ್ಷೆಯ ಮುನ್ನ ಸಮಯದಲ್ಲಿ, ಈ ಭಾವನೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಸದಾ ಇದೇ ಭಾವನೆಯಲ್ಲಿದ್ದರೆ ಸಂತೋಷದಿಂದಿರಲು ಹೇಗೆ ಸಾಧ್ಯ? ಈ ಪರಿಸ್ಥಿತಿಯಿಂದ ಹೊರಬರುವುದು ಹೇಗೆ ಎಂಬುದನ್ನು ನೀವೇ ಯೋಚಿಸಬೇಕಾಗುತ್ತದೆ.

ಇದಕ್ಕಾಗಿ ಮೊದಲಿಗೆ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ದೀರ್ಘವಾದ, ಆಳವಾದ ಉಸಿರನ್ನು ತೆಗೆದುಕೊಳ್ಳಿ. ಯಾವಾಗ ಮೆದುಳಿಗೆ ಹೆಚ್ಚಿನ ರಕ್ತ ಮತ್ತು ಆಮ್ಲಜನಕ ದೊರಕಿತೋ, ನಿಮ್ಮ ಯೋಚನಾ ಲಹರಿಯೂ ತರ್ಕಬದ್ದವಾಗಿ ನಡೆಯುತ್ತದೆ. ಈ ಪ್ರವೃತ್ತಿಯನ್ನು ಅಭ್ಯಾಸವಾಗಿ ರೂಢಿಸಿಕೊಂಡರೆ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿಯನ್ನು ಎದುರಿಸಿಯೂ ಸಂತೋಷದಿಂದಿರಲು ನಿಮಗೆ ಸಾಧ್ಯವಾಗುತ್ತದೆ. ಹಾರ್ವರ್ಡ್ ಆರೋಗ್ಯ ಸಂಸ್ಥೆಯ ಪ್ರಕಾರ, ಆಳವಾದ ಉಸಿರಾಟದ ವ್ಯಾಯಾಮವು ಮನಸ್ಸನ್ನು ನಿರಾಳವಾರಿಸಲು ಸಹಾಯ ಮಾಡುತ್ತದೆ

8. ಅತೃಪ್ತ ಕ್ಷಣಗಳನ್ನು ಒಪ್ಪಿಕೊಳ್ಳಿ

8. ಅತೃಪ್ತ ಕ್ಷಣಗಳನ್ನು ಒಪ್ಪಿಕೊಳ್ಳಿ

ಸಕಾರಾತ್ಮಕ ಮನೋಭಾವವು ಸಾಮಾನ್ಯವಾಗಿ ಒಳ್ಳೆಯದು, ಆದರೆ ಎಲ್ಲರಿಗೂ ಎಲ್ಲಾ ಸಮಯದಲ್ಲಿ ಒಳ್ಳೆಯದೇ ಆಗುತ್ತಿರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಕೆಟ್ಟ ವಿಷಯಗಳೂ ಸಂಭವಿಸುತ್ತವೆ. ಇದು ಜೀವನದ ಒಂದು ಭಾಗವಾಗಿದೆ. ಯುಗಾದಿಯ ಸಂದರ್ಭದಲ್ಲಿ ಬೇವು ಬೆಲ್ಲ ನೀಡುವ ಪರಿಪಾಠಕ್ಕೆ ಇದೇ ಕಾರಣ.

ನೀವು ಕೆಲವೊಮ್ಮೆ ನಿಮಗೆ ದುಃಖ ತರುವ ಕೆಟ್ಟ ಸುದ್ದಿಗಳನ್ನು ಪಡೆದರೆ, ತಪ್ಪು ಮಾಡಿದರೆ ಅಥವಾ ನಿಮ್ಮ ಸಂತೋಷ ಕುಂದುವ ಯಾವುದೇ ಘಟನೆ ಎದುರಾದರೆ, ನೀವು ಸಂತೋಷವಾಗಿ ನಟಿಸಲು ಪ್ರಯತ್ನಿಸಬೇಡಿ.

ಇವು ಸಹಾ ಜೀವನದ ಭಾಗ ಎಂದು ಅತೃಪ್ತಿಯ ಭಾವನೆಯನ್ನು ಅಂಗೀಕರಿಸಿ, ಅದನ್ನು ಒಂದು ಕ್ಷಣ ಅನುಭವಿಸಲು ಬಿಡಿ. ನಂತರ, ನಿಮ್ಮ ಗಮನವನ್ನು ನಿಮಗೆ ಈ ರೀತಿ ಅನಿಸುತ್ತದೆ ಮತ್ತು ಇದರಿಂದ ಚೇತರಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಕಡೆಗೆ ಬದಲಾಯಿಸಿ. ಈ ಕ್ಷಣದಲ್ಲಿ ಆಳವಾದ ಉಸಿರಾಟದ ವ್ಯಾಯಾಮ ಸಹಾಯ ಮಾಡುತ್ತದೆ. ಹೊರಗೆ ಸುದೀರ್ಘ ನಡಿಗೆಯೂ ಆಗಬಹುದು. (ಹಿರಿಯರು ಶತಪಥ ಅತ್ತಿತ್ತ ತಿರುಗುವುದನ್ನು ಗಮನಿಸಿರಬಹುದು). ನೀವು ನಂಬುವ ವ್ಯಕ್ತಿಗಳೊಂದಿಗೆ ಚರ್ಚಿಸಿ.

ಈ ಕ್ಷಣದಲ್ಲಿ ನೀವು ಈ ಬಗ್ಗೆ ಚಿಂತಿಸಿದಷ್ಟೂ ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಈ ಕ್ಷಣದಲ್ಲಿ ಏನನ್ನೂ ಯೋಚಿಸದೇ ಹಾಗೇ ಬಿಡಿ. ಬಳಿಕ ನಿಮ್ಮ ಮನಸ್ಸು ಸ್ಥಿಮಿತಕ್ಕೆ ಬಂದ ಬಳಿಕ ಈ ಬಗ್ಗೆ ಚಿಂತಿಸಿ. ಇದೇ ಕಾರಣಕ್ಕೆ ದುಃಖ ಮತ್ತು ಸಂತೋಷದಲ್ಲಿದ್ದಾಗ ಯಾವುದೇ ಮಾತು ಕೊಡಬಾರದು ಎಂದು ಸುಭಾಷಿತ ತಿಳಿಸುತ್ತದೆ. ನೆನಪಿಡಿ, ಈ ಜಗತ್ತಿನಲ್ಲಿ ಸದಾ ಸಂತೋಷವಾಗಿರುವ ಒಂದೇ ಜೀವಿಯೂ ಇಲ್ಲ. ಆದರೆ ಹೆಚ್ಚು ಹೊತ್ತು ಸಂತೋಷದಿಂದಿರುವ ವ್ಯಕ್ತಿಗಳಿದ್ದಾರೆ. ನೀವೂ ಇವರಾಗಬಹುದು.

9. ನಿಮ್ಮ ಆಲೋಚನೆಗಳನ್ನು ಬರೆದಿರಿಸಿ

9. ನಿಮ್ಮ ಆಲೋಚನೆಗಳನ್ನು ಬರೆದಿರಿಸಿ

ನಿಮ್ಮ ಆಲೋಚನೆಗಳನ್ನು ಸಂಘಟಿಸಲು, ನಿಮ್ಮ ಭಾವನೆಗಳನ್ನು ವಿಶ್ಲೇಷಿಸಲು ಮತ್ತು ಯೋಜನೆಗಳನ್ನು ರೂಪಿಸಲು ದಾಖಲಿಸಿರುವುದು ಉತ್ತಮ ಮಾರ್ಗವಾಗಿದೆ. ಮತ್ತು ನೀವು ಇದಕ್ಕಾಗಿ ಸಾಹಿತ್ಯದ ಪ್ರತಿಭೆ ಪಡೆದಿರಬೇಕಾಗಿಲ್ಲ ಅಥವಾ ಪ್ರಕಟಿಸಿ ಲಾಭ ಗಳಿಸಲು ಪುಸ್ತಕಗಳನ್ನೂ ಬರೆಯಬೇಕಾಗಿಲ್ಲ. ಪ್ರತಿ ರಾತ್ರಿ ನೀವು ಮಲಗುವ ಮುನ್ನ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಕ್ಷಿಪ್ರವಾಗಿ ಬರೆದಿಡಿ. ಮುಂದಿನ ಕ್ರಿಯೆಗಳನ್ನು ದಾಖಲಿಸಿ.

ಹೇಗೆ ಮಾಡಬಹುದು, ಯಾವ ಕ್ರಮದಲ್ಲಿ ಮಾಡಬೇಕು ಎಂಬುದನ್ನು ದಾಖಲಿಸಿ. ಈ ಕಾರ್ಯ ಮುಗಿದ ಬಳಿಕ ಈ ಕಾಗದವನ್ನು ಹರಿದು ಹಾಕಬಹುದು. ಮರುದಿನ ಇದೇ ಕಾಗದವನ್ನು ಮತ್ತೆ ಓದಿ ನೋಡಿದಾಗ ಇದನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದೆಂಬುದು ನಿಮಗೇ ಗೊತ್ತಾಗುತ್ತದೆ. ಹಾಗೇ ಮಾಡಿದಾಗ ನಿಮಗೆ ಅಚ್ಚರಿಯ ಜೊತೆ ಸಂತೋಷವೂ ಸಿಗುತ್ತದೆ. ಹಾಗಾಗಿ ನಿಮ್ಮ ಆಲೋಚನೆಗಳನ್ನು ಬರೆದಿಡಲು ಕಾಗದದ ಬದಲು ಡೈರಿ ಅಥವಾ ಪುಸ್ತಕವಾದರೆ ಇನ್ನೂ ಉತ್ತಮ.

10. ಮನಸ್ಸಿನ ಒತ್ತಡಕ್ಕೆ ಕಾರಣಗಳನ್ನು ನೇರವಾಗಿ ಎದುರಿಸಿ

10. ಮನಸ್ಸಿನ ಒತ್ತಡಕ್ಕೆ ಕಾರಣಗಳನ್ನು ನೇರವಾಗಿ ಎದುರಿಸಿ

ಜೀವನದಲ್ಲಿ ಎದುರಾಗುವ ಎಲ್ಲವೂ ಸಂತೋಷವನ್ನೇ ನೀಡುತ್ತವೆ ಎನ್ನುವಂತಿಲ್ಲ. ಹೆಚ್ಚಿನವು ಒತ್ತಡವನ್ನೇ ತರುತ್ತವೆ. ಇವುಗಳನ್ನು ತಡೆಯಲು ಸಾಧ್ಯವಿಲ್ಲ. ಇದರ ಅಗತ್ಯವೂ ಇಲ್ಲ. ಒತ್ತಡವು ಯಾವಾಗಲೂ ಹಾನಿಕಾರಕವಲ್ಲ ಎಂದು ಸ್ಟ್ಯಾನ್‌ಫೋರ್ಡ್ ಮನಶ್ಶಾಸ್ತ್ರಜ್ಞರಾದ ಕೆಲ್ಲಿ ಮೆಕ್‌ಗೊನಿಗಲ್‌ರವರು ಹೇಳುತ್ತಾರೆ. ಒತ್ತಡದ ಬಗ್ಗೆ ನಮ್ಮ ವರ್ತನೆಗಳನ್ನು ಸಹ ನಾವು ಬದಲಾಯಿಸಬಹುದು.

ಆ ಒತ್ತಡದ ಕಾರಣಗಳನ್ನು ನೀವು ತಪ್ಪಿಸಲು ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ಒತ್ತಡವಿದೆ ಎಂದು ನೀವೇ ನೆನಪಿಸಿಕೊಳ್ಳಿ - ಒತ್ತಡಗಳು ಪ್ರತಿಯೊಬ್ಬರಿಗೂ ಇವೆ. ವಾಸ್ತವದಲ್ಲಿ ಒಂದು ಹಂತದ ಒತ್ತಡವೂ ಅಗತ್ಯವೇ ಹೌದು. ಶಿಕ್ಷಕ ಕಲಿಸುವಿಕೆಯ ಒತ್ತಡವನ್ನು ಹೇರದ ಹೊರತು ವಿದ್ಯಾರ್ಥಿಗಳು ಕಲಿಯುವುದಿಲ್ಲ. ಈ ಒತ್ತಡವನ್ನು ಎದುರಿಸಲು ನೀವು ಯೋಚಿಸುವುದಕ್ಕಿಂತಲೂ ನೀವು ಹೆಚ್ಚು ಬಲಶಾಲಿಯಾಗಿದ್ದೀರಿ.

ಯಾವುದೇ ಒತ್ತಡ ನಿಮ್ಮನ್ನು ಅತಿಯಾಗಿ ಮುಳುಗಿಸಲು ಬಿಡದೇ, ಒತ್ತಡವನ್ನು ಎದುರಿಸಲು ಪ್ರಯತ್ನಿಸಿ. ಅಂದರೆ, ಒತ್ತಡವಿದ್ದಾಗ ನಿಮ್ಮ ನಿರ್ವಹಣೆ ಈ ಕೆಲಸವನ್ನು ಪೂರೈಸಿದ ಬಳಿಕ ಸಿಗುವ ಫಲಿತಾಂಶ ಧನಾತ್ಮಕವಾಗಿದ್ದರೆ ಹೆಚ್ಚು ಸಂತೋಷವಾಗುತ್ತದೆ. ಉದಾಹರಣೆಗೆ ತಲೆತಿನ್ನುವ ಗ್ರಾಹಕರ ಬೇಡಿಕೆಯ ಒತ್ತಡಗಳನ್ನು ಎದುರಿಸುವ ಸೇಲ್ಸ್‌ಮ್ಯಾನ್ ರಿಗೆ ಗ್ರಾಹಕ ಆ ವಸ್ತುವನ್ನು ಕೊಂಡ ಬಳಿಕ ಎದುರಾಗುವ ಸಂತೋಷ.

ವಾರದ ಅಭ್ಯಾಸಗಳು

ವಾರದ ಅಭ್ಯಾಸಗಳು

11. ಗೋಜಲನ್ನು ತಪ್ಪಿಸಿ

ನಿಮ್ಮ ವೈಯಕ್ತಿಯ ಸ್ಥಳವನ್ನು ಗೋಜಲಿನಿಂದ ಮುಕ್ತಗೊಳಿಸುವುದು ದೊಡ್ಡ ಯೋಜನೆಯಂತೆ ಕಾಣಿಸುತ್ತದೆ. ಆದರೆ ಆದರೆ ವಾರಕ್ಕೆ ಕೇವಲ 20 ನಿಮಿಷಗಳನ್ನು ನಿಗದಿಪಡಿಸುವುದರಿಂದ ದೊಡ್ಡ ಪರಿಣಾಮವನ್ನೇ ಕಾಣಬಹುದು. ನಿಮ್ಮ ಫೋನ್‌ನಲ್ಲಿ ಟೈಮರ್ ಅನ್ನು ಹೊಂದಿಸಿ ಮತ್ತು ಒಂದು ಕೋಣೆಯ ನಿರ್ದಿಷ್ಟ ಪ್ರದೇಶವನ್ನು ಅಚ್ಚುಕಟ್ಟಾಗಿ ಮಾಡಲು 15 ನಿಮಿಷಗಳನ್ನು ತೆಗೆದುಕೊಳ್ಳಿ - ಹೇಳಿ, ನಿಮ್ಮ ಕಪಾಟು ಅಥವಾ ನಿಯಂತ್ರಣವಿಲ್ಲದ ವಸ್ತುಗಳ ಡ್ರಾಯರ್. ಎಲ್ಲವನ್ನೂ ಅದರ ಸ್ಥಳದಲ್ಲಿ ಇರಿಸಿ ಮತ್ತು ನಿಮಗೆ ಸೇವೆ ನೀಡದ ಯಾವುದೇ ಹೆಚ್ಚುವರಿ ವಸ್ತುವನ್ನು ನಿವಾರಿಸಿ ಅಗತ್ಯವಿರುವುದನ್ನು ಮಾತ್ರ ಅಚ್ಚುಕಟ್ಟಾಗಿ ಇರಿಸಿ.

ಈ ಕೆಲಸವನ್ನು ನಿರ್ವಹಿಸಲು ಚೌಕಾಕಾರದ ಟ್ರೇಗಳು ಲಭ್ಯವಿವೆ. ಇವುಗಳನ್ನು ಬಳಸಿ ಗರಿಷ್ಟ ಬಳಕೆಯ, ಮಧ್ಯಮ ಬಳಕೆಯ ಮತ್ತು ಕಡಿಮೆ ಬಳಕೆಯ ವಸ್ತುಗಳಾಗಿ ವಿಂಗಡಿಸಿ ಆ ಪ್ರಕಾರವೇ ಅವುಗಳನ್ನು ನಿಮ್ಮಿಂದ ದೂರ ಇರಿಸಿ. ಕಡೆಯ ಐದು ನಿಮಿಷಗಳಲ್ಲಿ ನಿಮ್ಮ ಸ್ಥಳವನ್ನು ಸಮೀಕ್ಷೆ ಮಾಡಿ ಎಲ್ಲವೂ ಸರಿ ಇದೆಯೇ ಎಂದು ಪರಿಶೀಲಿಸಿ ಕೊನೆಯ ಕ್ಷಣದ ಬದಲಾವಣೆ ಮಾಡಿ. ಅಚ್ಚುಕಟ್ಟಾಗಿರುವ ಸ್ಥಳ ಮನಸ್ಸನ್ನು ಸಂತೋಷವಾಗಿಯೇ ಇರಿಸುತ್ತದೆ. ನೀವು ವಾರಕ್ಕೊಮ್ಮೆ, ದಿನಕ್ಕೆ ಒಂದು ಬಾರಿ ಅಥವಾ ನಿಮ್ಮ ಸ್ಥಳವು ನಿಯಂತ್ರಣ ತಪ್ಪುತ್ತಿದೆ ಎಂದು ನಿಮಗೆ ಅನಿಸಿದಾಗ ನೀವು ಈ ಕಾರ್ಯವನ್ನು ನಿರ್ವಹಿಸಬಹುದು.

12. ಸ್ನೇಹಿತರನ್ನು ಭೇಟಿ ಮಾಡಿ

12. ಸ್ನೇಹಿತರನ್ನು ಭೇಟಿ ಮಾಡಿ

ಮಾನವರು ಸಾಮಾಜಿಕ ಜೀವಿಗಳು, ಮತ್ತು ಆಪ್ತ ಸ್ನೇಹಿತರನ್ನು ಹೊಂದಿರುವುದು ನಮಗೆ ಸಂತೋಷವನ್ನು ನೀಡುತ್ತದೆ. ನೀವು ಹಿಂದಿನ ಸ್ನೇಹಿತರನ್ನೇಕೆ ನೆನೆಸಿಕೊಳ್ಳಬಾರದು? ಅವರನ್ನು ತಲುಪಲು ಯತ್ನಿಸಿ. ನೇರ ಭೇಟಿಯಾಗದಿದ್ದರೂ ಸರಿ, ಕರೆ ಮಾಡಿ ಮಾತನಾಡಿ ಸಾಧ್ಯವಾದರೆ ಒಟ್ಟಿಗೆ ಸೇರಲು ದಿನಾಂಕವನ್ನುನಿಗದಿಪಡಿಸಿ.

ಪ್ರೌಢಾವಸ್ಥೆಯಲ್ಲಿ ಹೊಸ ಸ್ನೇಹಿತರನ್ನು ಮಾಡಲು ಅಸಾಧ್ಯವೆಂದು ಭಾವಿಸಬಹುದು. ಆದರೆ ನೀವು ಎಷ್ಟು ಸ್ನೇಹಿತರನ್ನು ಹೊಂದಿದ್ದೀರಿ ಎಂಬುದರ ಬಗ್ಗೆ ಅಲ್ಲ. ಇದು ಅರ್ಥಪೂರ್ಣ ಸಂಬಂಧಗಳನ್ನು ಹೊಂದುವ ಬಗ್ಗೆ - ಅದು ಕೇವಲ ಒಂದು ಅಥವಾ ಸಹ ಇಬ್ಬರು ವ್ಯಕ್ತಿಗಳು. ಸ್ಥಳೀಯ ಸ್ವಯಂಸೇವಕ ಗುಂಪಿನಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ ಅಥವಾ ತರಗತಿ ತೆಗೆದುಕೊಳ್ಳಲು ಪ್ರಯತ್ನಿಸಿ.

ನಿಮ್ಮ ಪ್ರದೇಶದ ಸಮಾನ ಮನಸ್ಕ ಜನರೊಂದಿಗೆ ನಿಮ್ಮನ್ನು ಸಂಪರ್ಕಿಸಲು ಎರಡೂ ಸಹಾಯ ಮಾಡಬಹುದು. ಮತ್ತು ಅವರೇ ನಿಮ್ಮಂತಹ ಸ್ನೇಹಿತರನ್ನು ಹುಡುಕುವ ಸಾಧ್ಯತೆಗಳಿವೆ. ಸಹಭಾಗಿತ್ವವು ಇತರ ಮಾನವರಿಗೆ ಸೀಮಿತವಾಗಿರಬೇಕಾಗಿಲ್ಲ. ಸಾಕುಪ್ರಾಣಿಗಳೂ ಅನೇಕ ಅಧ್ಯಯನಗಳ ಪ್ರಕಾರ ಇದೇ ರೀತಿಯ ಪ್ರಯೋಜನಗಳನ್ನು ನೀಡಬಹುದು. ಪ್ರಾಣಿಗಳನ್ನು ಪ್ರೀತಿಸಿ ಆದರೆ ಸಾಕುಪ್ರಾಣಿಯನ್ನು ಹೊಂದಲು ಸಾಧ್ಯವಿಲ್ಲವೇ? ಕೆಲವು ಹೊಸ ಸಾಕುಪ್ರಾಣಿಯನ್ನು ಸಂಪಾದಿಸಲು ಸ್ಥಳೀಯ ಪ್ರಾಣಿಗಳ ಆಶ್ರಯದಲ್ಲಿ ಸ್ವಯಂ ಸೇವೆಯನ್ನು ಪರಿಗಣಿಸಿ ಅಥವಾ ನಿಮ್ಮ ನೆರವು ಅಗತ್ಯವಿರುವವರಿಗೆ ನೆರವು ನೀಡಿಯೂ ಸ್ನೇಹ ಸಂಪಾದಿಸಬಹುದು.

 13. ನಿಮ್ಮ ವಾರವನ್ನು ಸೂಕ್ತವಾಗಿ ಆಯೋಜಿಸಿ

13. ನಿಮ್ಮ ವಾರವನ್ನು ಸೂಕ್ತವಾಗಿ ಆಯೋಜಿಸಿ

ಏಕತಾನತೆ ಸಂತೋಷವನ್ನು ನೀಡುತ್ತಿಲ್ಲವೇ? ಪ್ರತಿ ವಾರದ ಕೊನೆಯಲ್ಲಿ ಕುಳಿತು ಮುಂದಿನ ವಾರದ ಮೂಲ ಪಟ್ಟಿಯನ್ನು ತಯಾರಿಸಲು ಪ್ರಯತ್ನಿಸಿ.

ನೀವು ಯೋಜನೆಗೆ ಸಂಬಂಧಿಸಿಲ್ಲದ ಚಿಕ್ಕ ವಿಷಯಗಳನ್ನೂ ಪಟ್ಟಿ ಮಾಡಿ. ಉದಾಹರಣೆಗೆ ಮನೆ ಸಾಮಾಗ್ರಿ ತರುವುದು, ಲಾಂಡ್ರಿಗೆ ಬಟ್ಟೆ ನೀಡುವುದು, ತರುವುದು ಇತ್ಯಾದಿಗಳು.

ಈ ಕೆಲಸಗಳು ಚಿಲ್ಲರೆ ಎಂದು ಅನ್ನಿಸಬಹುದು, ಆದರೆ ಇವುಗಳನ್ನು ಮಾಡದೇ ಹೋದಾಗ ಎದುರಾಗುವ ತೊಂದರೆಯನ್ನು ಪರಿಗಣಿಸಿದಾಗ ಇವು ಎಷ್ಟು ಅಗತ್ಯ ಎಂಬುದು ಅರ್ಥವಾಗುತ್ತದೆ. ಈ ಯೋಜನೆಗೆ ನೀವು ಅಂಟಿಕೊಳ್ಳದೇ ಇದ್ದರೂ ಸರಿ, ಈ ಕಾರ್ಯಗಳನ್ನು ತಪ್ಪದೇ ನಿರ್ವಹಿಸಿ, ಇದಕ್ಕಾಗಿ ಸಮಯ ವ್ಯಯಿಸಿ. ಈ ಕಾರ್ಯಗಳು ಪೂರ್ಣಗೊಂಡ ಬಳಿಕ ಪಡೆಯುವ ಸಂತೋಷವನ್ನು ಕಡೆಗಣಿಸಲು ಸಾಧ್ಯವಿಲ್ಲ. ಈ ಕೆಲಸಗಳನ್ನು ಸಾಮಾನ್ಯವಾಗಿ ಮರೆಯುವ ಸಂಭವ ಇರುವ ಕಾರಣ ಮರೆಯದಂತೆ ನೆನಪಿಸುವ ಚಿಕ್ಕ ಕಾಗದದ ತುಂಡಿನಲ್ಲಿ ಬರೆದು ಕಣ್ಣಿಗೆ ಕಾಣುವಂತೆ ಬರೆದಿಡಿ.

14. ನಿಮ್ಮ ಫೋನ್ ಅನ್ನು ಬಳಸಬೇಡಿ

14. ನಿಮ್ಮ ಫೋನ್ ಅನ್ನು ಬಳಸಬೇಡಿ

ಎಲ್ಲಾ ಎಲೆಕ್ಟ್ರಾನಿಕ್ಸ್ ಅನ್ನು ಆಫ್ ಮಾಡಿ ಮತ್ತು ಆ ಕಿವಿಯ ಸ್ಪೀಕರುಗಳನ್ನು ವಾರಕ್ಕೊಮ್ಮೆಯಾದರೂ ದೂರವಿಡಿ. ಈ ಎಲ್ಲವೂ ನಿಮಗಾಗಿಯೇ ಇರುತ್ತವೆ. ಅಂದರೆ ಈ ಯಾವುದೇ ಮಾಧ್ಯಮಗಳಿಗೆ ನಾವು ಗುಲಾಮರಾಗಿಲ್ಲ, ಅವು ನಮ್ಮ ಗುಲಾಮರಾಗಿರಬೇಕು ಎಂದು ನಿಮ್ಮ ಮನಸ್ಸಿಗೆ ನಾಟಬೇಕು, ಇದೇ ಈ ಕ್ರಮದ ಮುಖ್ಯ ಉದ್ದೇಶ. ಒಂದು ವೇಳೆ ಈ ಉಪಕರಣಗಳಿಲ್ಲದೇ ಕೊಂಚ ಹೊತ್ತು ಹೋದ ಬಳಿಕ ಚಡಪಡಿಕೆ ಎದುರಾದರೆ ನೀವು ಈ ಉಪಕರಣಗಳಿಗೆ ವ್ಯಸನಿಯಾಗಿರುವುದನ್ನು ಇದು ತೋರಿಸುತ್ತದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ! ನೀವು ಈಗ ಕ್ರಮ ಕೈಗೊಳ್ಳಲೇ ಬೇಕು.

ನಿಮ್ಮ ಮನಸ್ಸು ಬದಲಾವಣೆಗೆ ಮುಕ್ತವಾಗಿ ಅಲೆದಾಡಲಿ. ಓದಿ. ಧ್ಯಾನ ಮಾಡಿ. ನಡೆಯಿರಿ ಮತ್ತು ನಿಮ್ಮ ಸುತ್ತಮುತ್ತಲಿನ ಕಡೆಗೆ ಗಮನ ಕೊಡಿ. ಬೆರೆಯುವವರಾಗಿರಿ. ಅಥವಾ ಏಕಾಂಗಿಯಾಗಿರಿ. ಸುಮ್ಮನೇ ಏನೂ ಯೋಚಿಸದೇ (ಮನಸ್ಸನ್ನು ಖಾಲಿ ಮಾಡಿಕೊಂಡು) ಕಾಲ ಕಳೆಯಿರಿ. ಒಟ್ಟಾರೆ, ಈ ಉಪಕರಣಗಳಿಗೆ ಗುಲಾಮನಾಗದಂತೆ ನೋಡಿಕೊಳ್ಳಿ. ನಿಮ್ಮ ಮನಸ್ಸು ಇವನ್ನು ಆಳಬೇಕೇ ವಿನಃ ಇವು ನಿಮ್ಮ ಮನಸ್ಸನ್ನಲ್ಲ! ಆಗಲೇ ಈ ಉಪಕರಣಗಳ ಮೂಲಕ ಪಡೆಯುವ ಯಾವುದೇ ಮಾಹಿತಿ ನಿಮಗೆ ಸಂತೋಷ ನೀಡುತ್ತದೆ.

15. ಪ್ರಕೃತಿಯಲ್ಲಿ ವಿಹರಿಸಿ

15. ಪ್ರಕೃತಿಯಲ್ಲಿ ವಿಹರಿಸಿ

ಹಸಿರು ಸ್ಥಳಗಳಲ್ಲಿ ವಾರಕ್ಕೆ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಕಳೆಯುವುದು ರಕ್ತದೊತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು 2016 ರ ಅಧ್ಯಯನ ಟ್ರಸ್ಟೆಡ್ ಸೋರ್ಸ್ ತಿಳಿಸಿದೆ. ನಿಮ್ಮ ಹಸಿರು ಸ್ಥಳವು ನಿಮ್ಮ ನೆರೆಹೊರೆಯ ಉದ್ಯಾನವನ, ನಿಮ್ಮ ಸ್ವಂತ ಹಿತ್ತಲಿನಲ್ಲಿದ್ದರೆ ಅಥವಾ ಮೇಲುಛಾವಣಿಯ ಉದ್ಯಾನ ಒಟ್ಟಾರೆ ಇಂತಹ ಏನೂ ಆಗಿರಬಹುದು - ಎಲ್ಲಿಯಾದರೂ ನೀವು ಕೆಲವು ಪ್ರಕೃತಿ ಮತ್ತು ತಾಜಾ ಗಾಳಿಯನ್ನು ಪ್ರಶಂಸಿಸಬಹುದು.

ಇನ್ನೂ ಉತ್ತಮ, ಸ್ವಲ್ಪ ಹೊರಾಂಗಣ ಸೇರಿಸಿ ಹೆಚ್ಚುವರಿ ಲಾಭಕ್ಕಾಗಿ ಹಸಿರು ಪ್ರಕೃತಿಯಲ್ಲಿಯೇ ನಿಮ್ಮ ವ್ಯಾಯಾಮವನ್ನೂ ನಿರ್ವಹಿಸಿ.

16. ಧ್ಯಾನ ಮಾಡಿ

16. ಧ್ಯಾನ ಮಾಡಿ

ಅನ್ವೇಷಿಸಲು ಧ್ಯಾನದ ಹಲವು ವಿಧಾನಗಳಿವೆ. ಇವುಗಳಲ್ಲಿ ಚಲನೆ, ಗಮನ, ಆಧ್ಯಾತ್ಮಿಕತೆ ಅಥವಾ ಈ ಮೂರರ ಸಂಯೋಜನೆಯನ್ನು ಒಳಗೊಂಡಿರಬಹುದು.

ಧ್ಯಾನವು ಸಂಕೀರ್ಣವಾಗಬೇಕಾಗಿಲ್ಲ. 5 ನಿಮಿಷಗಳ ಕಾಲ ನಿಮ್ಮ ಸ್ವಂತ ಆಲೋಚನೆಗಳೊಂದಿಗೆ ಸದ್ದಿಲ್ಲದೆ ಕುಳಿತುಕೊಳ್ಳುವಷ್ಟು ಸರಳವಾಗಬಹುದು. ಮೊದಲೇ ಹೇಳಿದ ಆಳವಾದ ಉಸಿರಾಟದ ವ್ಯಾಯಾಮವೂ ಧ್ಯಾನದ ಒಂದು ರೂಪವಾಗಿ ಕಾರ್ಯನಿರ್ವಹಿಸುತ್ತದೆ.

17. ಹಿಂದಿನದನ್ನು ಪರಿಗಣಿಸಿ

17. ಹಿಂದಿನದನ್ನು ಪರಿಗಣಿಸಿ

ಅಡೆತಡೆಗಳನ್ನು ಹೇಗೆ ನಿಭಾಯಿಸಬೇಕು ಎಂದು ನಾವು ತಿಳಿದುಕೊಂಡಾಗ ನಾವು ಖಂಡಿತವಾಗಿಯೂ ಸಂತೋಷವಾಗಿರುತ್ತೇವೆ. ನೀವು ಸಮಸ್ಯೆಯನ್ನು ಎದುರಿಸುತ್ತಿರುವಾಗ, ಈ ಹಿಂದೆ ಇದೇ ರೀತಿಯ ಮೂಲಕ ನಿಮಗೆ ಏನಾಯಿತು ಎಂಬುದರ ಕುರಿತು ಯೋಚಿಸಿ. ಇದು ಇಲ್ಲಿ ಕೆಲಸ ಮಾಡಬಹುದೇ? ನೀವು ಇನ್ನೇನು ಪ್ರಯತ್ನಿಸಬಹುದು?

ನಿಮ್ಮ ಪ್ರಯತ್ನಗಳು ಬಂಡೆಗೆ ತಲೆ ಚಚ್ಚಿಕೊಂಡಂತೆ ಅನ್ನಿಸುತ್ತಿದ್ದರೆ, ವಾರಕ್ಕೊಮ್ಮೆ ಚಿಕಿತ್ಸಕರೊಂದಿಗೆ ಮಾತನಾಡುವುದನ್ನು ಪರಿಗಣಿಸಿ. ಸಾಮಾನ್ಯವಾಗಿ ಮಾನಸಿಕ ಚಿಕಿತ್ಸಕರನ್ನು ಸಂದರ್ಶಿಸುವ ಮುನ್ನ ಹೆಚ್ಚಿನವರು 'ನಮಗೇನು ಹುಚ್ಚೇ?' ಎಂದು ಪ್ರತಿಯಾಗಿ ಪ್ರಶ್ನಿಸಬಹುದು. ವಾಸ್ತವದಲ್ಲಿ ಹುಚ್ಚರಾದ ಬಳಿಕ ವೈದ್ಯರ ಬಳಿ ಹೋಗುವ ಬದಲು ಹುಚ್ಚರಾಗದೇ ಇರಲು ಹೋಗುವುದೇ ಒಳ್ಳೆಯದು.

ಸಾಮಾನ್ಯವಾಗಿ ನಿಮಗೆ ಕಾಣದೇ ಇರುವ ಸೂಕ್ಷ್ಮ ಸಂಗತಿಗಳು ತಜ್ಞರಿಗೆ ಕಾಣುತ್ತವೆ ಮತ್ತು ಇದನ್ನು ಸರಿಪಡಿಸಲು ಅವರು ಸಲಹೆ ನೀಡಬಹುದು. ನಿಮಗಿಂತಲೂ ಹೆಚ್ಚು ಕ್ಲಿಷ್ಟಕರ ಮಾನಸಿಕ ತೊಂದರೆ ಇರುವ ವ್ಯಕ್ತಿಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ಪಡೆಯಲು ಮಾನಸಿಕ ಚಿಕಿತ್ಸಕರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ, ನೀವು ಪ್ರಾರಂಭಿಸಿದ ನಂತರ ಮುಂದುವರಿಯುವ ಯಾವುದೇ ಬಾಧ್ಯತೆಯಿಲ್ಲ. ಕೆಲವೇ ಭೇಟಿಗಳಲ್ಲಿ ನಿಮ್ಮ ಅಸಂತುಷ್ಟತೆಗೆ ಕಾರಣವಾದ ಸಂಗತಿಗಳು ಚಿಕಿತ್ಸಕರಿಗೆ ಕಂಡುಬರುತ್ತದೆ. ಕೆಲವೇ ಭೇಟಿಗಳು ಸಹಾ ನಿಮಗೆ ಸಹಾಯ ಮಾಡುತ್ತವೆ.

18. ಸ್ವ-ಆರೈಕೆಯ ವಿಧಾನಗಳನ್ನು ಅರಸಿ

18. ಸ್ವ-ಆರೈಕೆಯ ವಿಧಾನಗಳನ್ನು ಅರಸಿ

ಈ ಜಗತ್ತಿನಲ್ಲಿ ಪ್ರತಿ ಜೀವಿಯೂ ಇನ್ನೊಂದಕ್ಕಾಗಿ ಬದುಕಿದೆ ಎಂಬುದೊಂದು ಸುಭಾಷಿತವಾಗಿದೆ. ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನವು ಸ್ವಾಮಿಕಾರ್ಯಕ್ಕೆ ಮೀಸಲಾಗಿರುತ್ತದೆಯೇ ಹೊರತು ಸ್ವಕಾರ್ಯಕ್ಕೆ ಹೆಚ್ಚು ಸಮಯ ಸಿಗುವುದಿಲ್ಲ. ಸಮಯ ಸಿಕ್ಕಾಗ ಏನು ಮಾಡಿದರೆ ನಿಮಗೆ ಸಂತೋಷ ಸಿಗುತ್ತದೆ ಎಂದು ಭಾವಿಸಿತ್ತೀರೋ ಇದನ್ನು ಸಮಯ ಸಿಕ್ಕಾಗ ಅನುಸರಿಸುವುದೇ ಸ್ವ-ಆರೈಕೆ.

ಹಿತವಾದ ಬಿಸಿನೀರಿನ ಸ್ನಾನ, ಸೌಂದರ್ಯ ಸೇವೆ ಪಡೆದುಕೊಳ್ಳುವುದು, ಗಡದ್ದಾದ ಊಟ ಮಾಡುವುದು, ನಿಮಗೆ ಇಷ್ಟವಾದ ಆಹಾರ ಸಿಗುವ ಸ್ಥಳಕ್ಕೆ ಹೋಗಿ ಆಹಾರವನ್ನು ಸವಿಯುವುದು, ನಿಮ್ಮ ನೆಚ್ಚಿನ ನಾಯಕನ ಚಿತ್ರವನ್ನು ಬೇರೇನೂ ಮಾಡದೇ ಪ್ರಾರಂಭದಿಂದ ಕೊನೆಯವರೆಗೂ ನೋಡುವುದು ಇತ್ಯಾದಿ, ಒಟ್ಟಾರೆ ಈ ಸಮಯ ನೀವು ನಿಮಗಾಗಿಯೇ ನೀಡಿಕೊಳ್ಳುವಂತದ್ದಾಗಿರಬೇಕು. ಇವುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮನಸ್ಸನ್ನು ಸಂತೋಷಪಡಿಸಬಹುದು. ಅದು ಏನೇ ಇರಲಿ, ಅದಕ್ಕಾಗಿ ಸಮಯವನ್ನು ನಿಗದಿಪಡಿಸಿ. ನೀವು ಮಾಡಬೇಕೆಂದೇ ಅದನ್ನು ನಿಮ್ಮ ಯೋಜನೆಯಲ್ಲಿ ಅಳವಡಿಸಿ, ಆದರೆ ಅದನ್ನು ಖಂಡಿತವಾಗಿಯೂ ಮಾಡಿ.

English summary

These 25 Habits Will Make You Feel Happy Forever

Here we are discussing about These 25 Habits Will Make You Feel Happy Forever. Habits matter. If you’ve ever tried breaking a bad habit, you know all too well how engrained they are. Read more.
Story first published: Wednesday, June 24, 2020, 18:00 [IST]
X