For Quick Alerts
ALLOW NOTIFICATIONS  
For Daily Alerts

ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ದಿನಾಚರಣೆ: ಪ್ರೇರಣಾತ್ಮಕ ನುಡಿಗಳು

|

ಸುಭಾಷ್ ಚಂದ್ರ ಬೋಸ್ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿದ ಅಗ್ರಗಣ್ಯ ಹೋರಾಟಗಾರರಲ್ಲಿ ಸುಭಾಷ್‌ ಚಂದ್ರ ಬೋಸ್‌ ಸಹ ಒಬ್ಬರು. ಒರಿಸ್ಸಾದ ಕಟಕ್‌ನಲ್ಲಿ ಬಂಗಾಳಿ ಕುಟುಂಬದಲ್ಲಿ 1897ರ ಜನವರಿ 23ರಂದು ಜನಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಶ್ರೀಮಂತ ಕುಟುಂಬದಿಂದ ಬಂದವರು. ಆದರೆ ಅವರು ತಮ್ಮ ದೇಶವನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಅರ್ಪಿಸಿದ್ದರು.

ಇದೇ ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ದೇಶದ ಜನತೆಗೆ ಸುಭಾಷ್ ಚಂದ್ರ ಬೋಸ್ ಅವರು ನೀಡಿದ್ದ ಪ್ರೇರಣಾತ್ಮಕ ಸಂದೇಶಗಳನ್ನು ಮುಂದೆ ನೋಡೋಣ:

1. ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ನಮ್ಮ ದೊಡ್ಡ ಅಪರಾಧ ಎಂಬುದು ನೆನಪಿಡಿ.

- ಸುಭಾಷ್‌ ಚಂದ್ರ ಬೋಸ್‌

2. ತಾಯಿಯ ಪ್ರೀತಿ ಅತ್ಯಂತ ಆಳವಾದದ್ದು ಏಕೆಂದರೆ ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಮತ್ತು ನಾವು ಅದನ್ನು ಎಂದಿಗೂ ಹೋಲಿಸಲಾಗುವುದಿಲ್ಲ.

3. ಸ್ವೀಕರಿಸಬೇಕಾದ ಸವಾಲುಗಳು ಇಲ್ಲದೇ ಇದ್ದರೆ, ಹೋರಾಟಗಳು ಇಲ್ಲದೇ ಹೋದರೆ ಜೀವನ ಅರ್ಧದಷ್ಟು ಆಸಕ್ತಿಯನ್ನು ಕಳೆದುಕೊಳ್ಳುತ್ತದೆ.

4. ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.

5. ಇತಿಹಾಸದಲ್ಲಿ ಯಾವುದೇ ನಿಜವಾದ ಬದಲಾವಣೆ ಆಗಬೇಕಾದರೆ ಅದು ಕೇವಲ ಚರ್ಚೆಗಳಿಂದ ಸಾಧಿಸಲಾಗುವುದಿಲ್ಲ.

 6. ಒಬ್ಬ ವ್ಯಕ್ತಿಯು ಒಂದು ಉತ್ತಮ ಕಲ್ಪನೆಗಾಗಿ ಸಾಯಬಹುದು, ಆದರೆ ಆ ಕಲ್ಪನೆಯು ಅವನ ಮರಣದ ನಂತರ ಸಾವಿರ ಜನರಲ್ಲಿ ಅವತರಿಸುತ್ತದೆ.

7. ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು.

 8. ಉತ್ಸಾಹವಿಲ್ಲದೆ ಯಾವ ಮಹತ್ತರವಾದ ಕೆಲಸವೂ ನಡೆದಿಲ್ಲ.

9. ಜನ, ಹಣ ಮತ್ತು ವಸ್ತುಗಳು ಸ್ವತಃ ಜಯ ಅಥವಾ ಸ್ವಾತಂತ್ರ್ಯವನ್ನು ತರಲು ಸಾಧ್ಯವಿಲ್ಲ. ಧೈರ್ಯಶಾಲಿ ಕೆಲಸಗಳು ಮತ್ತು ಉಜ್ವಲ ಸಾಧನೆ ಮಾಡಬೇಕಾದರೆ ನಮ್ಮಲ್ಲಿ ನಾವು ಪ್ರೇರಕ ಶಕ್ತಿಯನ್ನು ಹೊಂದಿರಬೇಕು.

10. ಅನ್ಯಾಯ ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ದೊಡ್ಡ ಅಪರಾಧ ಎಂಬುದನ್ನು ಮರೆಯಬೇಡಿ. ನೀವು ಪಡೆಯಲು ಬಯಸಿದರೆ, ನೀವು ನೀಡಬೇಕು ಎಂಬ ಶಾಶ್ವತ ಕಾನೂನನ್ನೂ ನೆನಪಿಡಿ.

English summary

Subhash Chandra Bose Birth Anniversary : Inspirational quotes by Netaji in Kannada

Here we are discussing about Subhash Chandra Bose Birth Anniversary : Inspirational quotes by Netaji in Kannada. Read more.
X
Desktop Bottom Promotion