For Quick Alerts
ALLOW NOTIFICATIONS  
For Daily Alerts

ಸೂರ್ಯಗ್ರಹಣದಂದು ವಟ ಸಾವಿತ್ರಿ ವ್ರತ: ವಿವಾಹಿತ ಮಹಿಳೆಯರು ಮಾಡಬೇಕಾದ ಹಾಗೂ ಮಾಡಬಾರದು ವಿಚಾರಗಳಿವು

|

ಈ ವರ್ಷದ ಮೊದಲ ಸೂರ್ಯಗ್ರಹಣ ಇದೇ ಗುರುವಾರ ಅಂದರೆ ಜೂನ್ 10ರಂದು ಸಂಭವಿಸಲಿದೆ. ಖಗೋಳದಲ್ಲಿ ಕೌತುಕ ಉಂಟಾಗುವ ಇದೇ ದಿನ ಮಹಿಳೆಯರ ವಟ ಸಾವಿತ್ರಿ ವ್ರತವೂ ನಡೆಯಲಿದೆ. ವಟ ಸಾವಿತ್ರಿ ವ್ರತ ಉತ್ತರ ಭಾರತದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಹಳ ಉತ್ಸಾಹದಿಂದ ಆಚರಣೆ ಮಾಡುತ್ತಾರೆ. ಇವೆರಡು ಒಂದೇ ದಿನ ಬಂದಿರುವುದರಿಂದ ಮಹಿಳೆಯರು ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಇಲ್ಲಿ ಹೇಳಿದ್ದೇವೆ.

ವಟ ಸಾವಿತ್ರಿ ವ್ರತ:

ವಟ ಸಾವಿತ್ರಿ ವ್ರತ:

ವಟ ಸಾವಿತ್ರಿ ವ್ರತವು ಮಹಿಳೆಯರು ತಮ್ಮ ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುವ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ, ವಿವಾಹಿತ ಮಹಿಳೆಯರು ಆಲದ ಮರದ ಸುತ್ತಲೂ ಪ್ರದಕ್ಷಿಣೆ ಹಾಕಿ, ರಕ್ಷಣೆಯ ಎಳೆಯನ್ನು ಕಟ್ಟಿ ಗಂಡನ ದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸುತ್ತಾರೆ.

ಸೂರ್ಯಗ್ರಹಣದ ಸೂತಕ ಕಾಲ:

ಸೂರ್ಯಗ್ರಹಣದ ಸೂತಕ ಕಾಲ:

ಜೂನ್ 10 ರ ಗ್ರಹಣವು ಸೂರ್ಯನನ್ನು ಆವರಿಸುವ ಚಂದ್ರನ ಸುತ್ತ ಬೆಂಕಿಯ ಉಂಗುರವನ್ನು ರೂಪಿಸುವ ಸೂರ್ಯಗ್ರಹಣವಾಗಿದೆ. ಇದು ಮಧ್ಯಾಹ್ನ 1:42 ಕ್ಕೆ ಪ್ರಾರಂಭವಾಗಿ, ಸಂಜೆ 6.41ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣ ಆರಂಭವಾಗುವ 12 ಗಂಟೆಗಳ ಮೊದಲು ಆರಂಭವಾಗುವ ಈ ಸೂತಕ ಕಾಲ, ಗ್ರಹಣ ಮೋಕ್ಷವಾದ ಮೇಲೆ ಕೊನೆಗುಳ್ಳುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಈ ಸೂತಕ ಅವಧಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ, ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

ವಟ ಸಾವಿತ್ರಿ ವ್ರತವನ್ನು ಹೇಗೆ ಮತ್ತು ಯಾವಾಗ ಮಾಡಬೇಕು?:

ವಟ ಸಾವಿತ್ರಿ ವ್ರತವನ್ನು ಹೇಗೆ ಮತ್ತು ಯಾವಾಗ ಮಾಡಬೇಕು?:

ಸೂರ್ಯ ಗ್ರಹಣ ವಟ ಸಾವಿತ್ರಿ ವ್ರತದೊಂದಿಗೆ ಬರುತ್ತಿದ್ದಂತೆ, ಈ ಬಗ್ಗೆ ಅನೇಕ ಮಹಿಳೆಯರ ಮನಸ್ಸಿನಲ್ಲಿ ಒಂದು ಮಾಡುತ್ತಿದೆ. ಅದೇ ವ್ರತದ ಪೂಜೆ ಮತ್ತು ಉಪವಾಸದ ಸಮಯ. ಇದಕ್ಕೆ ನೀವು ಏನು ಮಾಡಬಹುದೆಂದರೆ, ರಷ್ಯಾ, ಗ್ರೀನ್‌ಲ್ಯಾಂಡ್ ಮತ್ತು ಉತ್ತರ ಕೆನಡಾದ ಕೆಲವು ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ. ಉತ್ತರ ಏಷ್ಯಾ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ ನ ಜನರು ಭಾಗಶಃ ಗ್ರಹಣವನ್ನು ನೋಡುತ್ತಾರೆ. ಭಾರತದಲ್ಲೂ ಈ ಗ್ರಹಣ ಗೋಚರವಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಅರುಣಾಚಲ ಪ್ರದೇಶದಂತಹ ದೂರದ ಪೂರ್ವದ ಆಯ್ದ ಕೆಲವು ರಾಜ್ಯಗಳಿಗೆ ಮಾತ್ರ. ಈ ಕಾರಣದಿಂದಾಗಿ, ಉಳಿದ ರಾಜ್ಯದ ವಿವಾಹಿತ ಮಹಿಳೆಯರು ವಟ ಸಾವಿತ್ರಿಯನ್ನು ಪೂಜಿಸುವುದರಲ್ಲಿ ಮತ್ತು ದೇವರನ್ನು ಪೂಜಿಸುವುದರಿಂದ ಯಾವುದೇ ಹಾನಿ ಆಗುವುದಿಲ್ಲ.

ಉಪವಾಸ ಮಾಡುವಾಗ ನೆನಪಿಡುವ ಮಾಡಬೇಕಾದ ಮತ್ತು ಮಾಡಬಾರದ ವಿಚಾರಗಳು ಇಲ್ಲಿವೆ:

ಉಪವಾಸ ಮಾಡುವಾಗ ನೆನಪಿಡುವ ಮಾಡಬೇಕಾದ ಮತ್ತು ಮಾಡಬಾರದ ವಿಚಾರಗಳು ಇಲ್ಲಿವೆ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಉಪವಾಸವನ್ನು ನಿಜವಾದ ಭಕ್ತಿಯಿಂದ ಆಚರಿಸುವ ಹೆಂಡತಿ, ಸದ್ಗುಣವನ್ನು ಪಡೆಯುವುದಲ್ಲದೆ, ಗಂಡನಿಗೆ ಆಗುವ ಎಲ್ಲಾ ತೊಂದರೆಗಳನ್ನು ದೂರ ಮಾಡುತ್ತಾಳೆ.

  • ಮಹಿಳೆಯರು ಒಳ್ಳೆಯ ಸೀರೆ ಮತ್ತು ಆಭರಣಗಳನ್ನು ಧರಿಸಿ, ದೇವರಿಗೆ ಯಾವುದೇ ಐದು ಬಗೆಯ ಹಣ್ಣುಗಳು ಮತ್ತು ತೆಂಗಿನಕಾಯಿಯನ್ನು ಅರ್ಪಿಸಬೇಕು.
  • ಈ ದಿನ, ವಿವಾಹಿತ ಮಹಿಳೆಯರು ಮತ್ತು ಯುವತಿಯರು ಹಳದಿ ಬಟ್ಟೆ ಧರಿಸಿ.
  • ಪ್ರತಿಯೊಬ್ಬ ಮಹಿಳೆ ತಮ್ಮ ಗಂಡಂದಿರ ಆಯಸ್ಸಿಗಾಗಿ ಆಲದ ಮರಕ್ಕೆ ಏಳು ಸುತ್ತು ಪ್ರದಕ್ಷಿಣೆ ಹಾಕಿ ಬಿಳಿ ದಾರವನ್ನು ಕಟ್ಟಿ, ಇಡೀ ದಿನ ಉಪವಾಸ ಮಾಡುತ್ತಾರೆ.
  • ಹಿರಿಯರು ಮತ್ತು ಪೂಜಾರಿಗಳ ಆಶೀರ್ವಾದವನ್ನು ತೆಗೆದುಕೊಳ್ಳಿ.
  • ಈ ದಿನ, ಯಾವುದೇ ಪ್ರಾಣಿಗಳಿಗೆ ಹಾನಿ ಮಾಡಬೇಡಿ.
  • ವಟ ಸಾವಿತ್ರಿಯ ಕಥೆಯನ್ನು ಕೇಳಲು ಮರೆಯಬೇಡಿ. ಸಾವಿತ್ರಿ ಅವರ ಕೆಚ್ಚೆದೆಯ ಕಥೆಯನ್ನು ಕೇಳದೆ ನಿಮ್ಮ ವ್ರತ ಸಂಪೂರ್ಣವಾಗದು.
  • ಸಾಂಕ್ರಾಮಿಕದ ಮಧ್ಯೆ, ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡುವುದು ಕಷ್ಟ. ನಿಮ್ಮ ಮನೆಯಲ್ಲಿ ನೀವು ಸಿಂಧೂರ ಮತ್ತು ಅರಿಶಿನದೊಂದಿಗೆ ವಿಗ್ರಹಗಳನ್ನು ರಚಿಸಬಹುದು ಮತ್ತು ಪೂಜೆಯನ್ನು ಮಾಡಬಹುದು.
English summary

Solar Eclipse 2021 on Vat Purnima: Dos and Don’ts for Married Women In Kannada

Here we talking about Solar Eclipse 2021 on Vat Purnima: Dos and Don’ts for married women in kannada, read on
X
Desktop Bottom Promotion