For Quick Alerts
ALLOW NOTIFICATIONS  
For Daily Alerts

Shravana Putrada Ekadashi ಆಗಸ್ಟ್ 18ಕ್ಕೆ ಶ್ರಾವಣ ಪುತ್ರದ ಏಕಾದಶಿ: ಸಂತಾನಭಾಗ್ಯ, ಮಕ್ಕಳ ಒಳಿತಿಗಾಗಿ ವ್ರತಾಚರಣೆ ಹೇಗಿರಬೇಕು?

|

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಏಕಾದಶಿಯನ್ನು ಪವಿತ್ರ ಏಕಾದಶಿ, ಶ್ರಾವಣ ಪುತ್ರದ ಏಕಾದಶಿ ಎಂದೂ ಕರೆಯುತ್ತಾರೆ. ಈ ದಿನ ಉಪವಾಸ ಮಾಡುವುದರಿಂದ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ಮಕ್ಕಳಿರುವವರಿಗೆ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ವರ್ಷ ಶ್ರಾವಣ ಪುತ್ರದ ಏಕಾದಶಿ ಯಾವಾಗ ಬಂದಿದೆ? ಅದರ ಮಹತ್ವವೇನು? ಆಚರಣೆ ಹೇಗೆ? ಇದೆಲ್ಲವನ್ನೂ ಈ ಲೇಖನದಲ್ಲಿ ನೀಡಲಾಗಿದೆ.

ಶ್ರಾವಣ ಪುತ್ರದ ಏಕಾದಶಿ ದಿನಾಂಕ:

ಶ್ರಾವಣ ಪುತ್ರದ ಏಕಾದಶಿ ದಿನಾಂಕ:

ಪುತ್ರದ ಏಕಾದಶಿ ವರ್ಷದಲ್ಲಿ ಎರಡು ಬಾರಿ ಬರುತ್ತದೆ, ಒಂದು ಪುಷ್ಯ ತಿಂಗಳಲ್ಲಿ ಮತ್ತು ಇನ್ನೊಂದು ಶ್ರಾವಣ ಮಾಸದಲ್ಲಿ. ತಂದೆ-ತಾಯಿ ತಮ್ಮ ಮಕ್ಕಳ ಆರೋಗ್ಯ, ಸಂತೋಷಕ್ಕಾಗಿ ಈ ಏಕಾದಶಿ ಆಚರಣೆ ಮಾಡುತ್ತಾರೆ. ಶ್ರಾವಣ ಮಾಸದ ಈ ಏಕಾದಶಿ ಬಹಳ ಪ್ರಾಮುಖ್ಯತೆ ಪಡೆದಿದ್ದು, ಈ ವರ್ಷ ನಾಳೆ ಅಂದರೆ, 18 ನೇ ಆಗಸ್ಟ್ 2021ರ ಬುಧವಾರದಂದು ಪುತ್ರದ ಏಕಾದಶಿ ಬಂದಿದೆ.

ಶ್ರಾವಣ ಪುತ್ರದ ಏಕಾದಶಿ ಶುಭ ಮುಹೂರ್ತ:

ಶ್ರಾವಣ ಪುತ್ರದ ಏಕಾದಶಿ ಶುಭ ಮುಹೂರ್ತ:

ಏಕಾದಶಿ ದಿನಾಂಕ ಆರಂಭ - 18 ಆಗಸ್ಟ್ 2021 ರಂದು 03:20 AM

ಏಕಾದಶಿ ದಿನಾಂಕ ಅಂತ್ಯ - 19 ಆಗಸ್ಟ್ 2021 ರಂದು 01:05 AM

ಶ್ರಾವಣ ಪುತ್ರದ ಏಕಾದಶಿ ಪೂಜಾವಿಧಿ:

ಶ್ರಾವಣ ಪುತ್ರದ ಏಕಾದಶಿ ಪೂಜಾವಿಧಿ:

ಬೆಳಿಗ್ಗೆ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಶ್ರೀ ಹರಿ ವಿಷ್ಣುವಿಗೆ ನಮಸ್ಕರಿಸುವ ಮೂಲಕ ದೀಪ ಬೆಳಗಿಸಿ. ಧೂಪ-ದೀಪದಿಂದ ಶ್ರೀ ಹರಿಯ ಆರತಿಯನ್ನು ಮಾಡಿದ ನಂತರ ಕುಂಕುಮ, ಹಳದಿ ಶ್ರೀಗಂಧ, ಅಕ್ಷತೆ, ಹಳದಿ ಹೂವುಗಳು, ಕಾಲೋಚಿತ ಹಣ್ಣುಗಳು, ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಿ. ಈ ದಿನ, 'ಓಂ ನಮೋ ಭಗವತೇ ವಾಸುದೇವಾಯ' ಎಂದು ಪಠಿಸುವುದು, ವಿಷ್ಣು ಸಹಸ್ರನಾಮವನ್ನು ಪಠಿಸುವುದು, ಪುತ್ರದ ಏಕಾದಶಿ ಕಥೆ ಓದುವುದು ಬಹಳ ಫಲಪ್ರದವಾಗಿದೆ.

ಮಕ್ಕಳಿಗೆ ಶುಭವಾಗಲು ಶ್ರೀಕೃಷ್ಣನ ಮಗುವಿನ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಯೋಗ್ಯವಾದ ಮಕ್ಕಳನ್ನು ಪಡೆಯಲು ಬಯಸುವ ದಂಪತಿಗಳು, ಬೆಳಿಗ್ಗೆ ಸ್ನಾನ ಮಾಡಿದ ನಂತರ, ಹಳದಿ ಬಟ್ಟೆಗಳನ್ನು ಧರಿಸಿ, ಶ್ರೀಕೃಷ್ಣನನ್ನು ಪೂಜಿಸಬೇಕು. ಇದರ ನಂತರ ಸಂತಾನ ಗೋಪಾಲ ಮಂತ್ರವನ್ನು ಪಠಿಸಬೇಕು.

ಈ ದಿನ, ಭಕ್ತರು ದೇವದೂಷಣೆ, ವಂಚನೆ, ದುರಾಸೆ, ದುರುದ್ದೇಶದಿಂದ ದೂರವಿರಬೇಕು. ಶ್ರೀ ನಾರಾಯಣನನ್ನು ಮನಸ್ಸಿನಲ್ಲಿಟ್ಟುಕೊಂಡು ಭಕ್ತಿಯಿಂದ ಪೂಜಿಸಬೇಕು. ಈ ಉಪವಾಸದ ಪಾರಣವನ್ನು ಮರುದಿನ ಅಂದರೆ ದ್ವಾದಶಿ ತಿಥಿಯಂದು ಮಾಡಲಾಗುತ್ತದೆ. ದ್ವಾದಶಿಯ ದಿನ, ಬ್ರಾಹ್ಮಣರಿಗೆ ಆಹಾರವನ್ನು ನೀಡಿದ ನಂತರ, ನಿಮ್ಮ ಸ್ವಂತ ಆಹಾರವನ್ನು ಸೇವಿಸಿ.

ಶ್ರಾವಣ ಪುತ್ರದ ಏಕಾದಶಿಯ ಮಹತ್ವ:

ಶ್ರಾವಣ ಪುತ್ರದ ಏಕಾದಶಿಯ ಮಹತ್ವ:

ಈ ಏಕಾದಶಿಯು ಸಂತಾನ ಭಾಗ್ಯಕ್ಕಾಗಿ, ಅದರಲ್ಲೂ ಪುತ್ರಸಂತಾನ ಪಡೆಯಲು ಹೆಚ್ಚು ಪ್ರಸಿದ್ಧಿಯಾಗಿದೆ. ಈ ಉಪವಾಸವನ್ನು ಆಚರಿಸುವ ಭಕ್ತರು ಆರೋಗ್ಯಕರ ಮತ್ತು ದೀರ್ಘಾಯುಷ್ಯದ ಮಕ್ಕಳನ್ನು ಪಡೆಯುವುದಲ್ಲದೆ, ಅವರ ಎಲ್ಲಾ ತೊಂದರೆಗಳನ್ನು ಸಹ ದೂರವಾಗುತ್ತವೆ. ಈ ಏಕಾದಶಿಯ ಉಪವಾಸದ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ಆ ವ್ಯಕ್ತಿಯ ಎಲ್ಲಾ ಆಸೆಗಳನ್ನು ಈಡೇರಿಕೆಯಾಗುತ್ತದೆ. ಜೊತೆಗೆ ಪವಿತ್ರ ಏಕಾದಶಿಯ ಕಥೆಯನ್ನು ಕೇಳುವ ಮತ್ತು ಪಠಿಸುವುದರಿಂದ, ನಿಮ್ಮ ಎಲ್ಲಾ ಪಾಪಗಳು ಕಳೆದುಹೋಗುತ್ತವೆ, ಭೂಮಿಯಲ್ಲಿ ಎಲ್ಲಾ ಸುಖವನ್ನು ಅನುಭವಿಸಿದ ನಂತರ, ಪರಲೋಕದಲ್ಲಿ ಸ್ವರ್ಗವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ಪವಿತ್ರ ಏಕಾದಶಿಯ ಕಥೆ:

ದಂತಕಥೆಯ ಪ್ರಕಾರ, ಇದು ದ್ವಾಪರ ಯುಗದ ಆರಂಭದ ಸಮಯ. ಮಹಿಷ್ಮತಿಪುರದಲ್ಲಿ, ರಾಜ ಮಹಿಜಿತ ರಾಜ್ಯವಾಳುತ್ತಿದ್ದನು. ರಾಜನು ಮಕ್ಕಳಿಲ್ಲದ ಕಾರಣದಿಂದ ತುಂಬಾ ದುಃಖಿತನಾಗಿದ್ದನು. ಇದಕ್ಕೆ ಪರಿಹಾರ ಕೇಳಲು ಲೋಮಾಶ ಋಷಿಯ ಬಳಿ ಹೋದಾಗ, ಆತನು ಹಿಂದೆ ಮಾಡಿದ ಪಾಪದಿಂದಾಗಿ ಮಕ್ಕಳ ಭಾಗ್ಯ ಇಲ್ಲದಂತಾಗಿದೆ ಎಂಬುದು ತಿಳಿಯಿತು. ರಾಜನಿಗೆ ಮಗು ಬೇಕೆಂದು ಬಯಸಿದರೆ, ಶ್ರಾವಣ ಶುಕ್ಲ ಏಕಾದಶಿಯ ಉಪವಾಸವನ್ನು ಮಾಡಿ, ದ್ವಾದಶಿಯ ದಿನ ದಾನ ಮಾಡಿ ಎಂದು ಋಷಿ ಪರಿಹಾರ ನೀಡಿದರು. ಅವರ ಸೂಚನೆಯಂತ ಉಪವಾಸ, ದಾನ ಮಾಡಿದುರಿಂದ ರಾಜನಿಗೆ ಸುಂದರ ಮತ್ತು ಆರೋಗ್ಯವಂತ ಮಗ ಹುಟ್ಟಿದನು.

English summary

Shravana Putrada Ekadashi 2021 Date, Shubh Muhurta, Puja Vihdi and Importance in Kannada

Here we talking about Shravana Putrada Ekadashi 2021 Date, Shubh Muhurta, Puja Vihdi and Importance in Kannada, read on
X
Desktop Bottom Promotion