For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸ: ಇಷ್ಟಾರ್ಥ ಸಿದ್ಧಿಗಾಗಿ ಶಿವನಿಗೆ ಯಾವ ಹೂವನ್ನು ಅರ್ಪಿಸಬೇಕು?

|

ಶ್ರಾವಣ ಮಾಸ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈ ಶ್ರಾವಣ ತಿಂಗಳು ಶಿವನಿಗೆ ಅತ್ಯಂತ ಪ್ರಿಯ. ಈ ದಿನಗಳಲ್ಲಿ ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ. ಈ ತಿಂಗಳಲ್ಲಿ, ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶಿವನನ್ನು ಪೂಜಿಸಿದರೆ, ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಕೆಯಾಗುವುದು. ಹಾಗಾದರೆ ಈ ಪೂಜೆಗೆ ಯಾವ ಹೂವುಗಳನ್ನು ಬಳಸಬೇಕು, ಶಿವನಿಗೆ ಯಾವ ಹೂವಿನಿಂದ ಪೂಜೆ ಸಲ್ಲಿಸದರೆ ಉತ್ತಮ ಎಂಬ ವಿಚಾರವನ್ನು ಈ ಲೇಖನದಲ್ಲಿ ವಿವರಿಸುತ್ತೇವೆ.

ಶಿವನ ಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದಂದು ಯಾವ ಹೂವುಗಳಿಂದ ಪೂಜೆ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಮಲ, ಬಿಲ್ಬಪತ್ರೆ ಮತ್ತು ಶಂಖಪುಷ್ಪ:

ಕಮಲ, ಬಿಲ್ಬಪತ್ರೆ ಮತ್ತು ಶಂಖಪುಷ್ಪ:

ಲಕ್ಷ್ಮಿ ಅಂದರೆ ಸಂಪತ್ತನ್ನು ಪಡೆಯಲು ಬಯಸುವ ಶಿವಭಕ್ತನು ದೇವರನ್ನು ಕಮಲ, ಬಿಲ್ವಪತ್ರೆ ಮತ್ತು ಶಂಖಪುಷ್ಪ ಹೂವುಗಳಿಂದ ಪೂಜಿಸಬೇಕು. ಒಂದು ಲಕ್ಷ ಹೂವುಗಳನ್ನು ಬಳಸಿ ಶಿವನ ಆರಾಧನೆ ಮಾಡಿದರೆ, ನಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.

ಗರಿಕೆ ಮತ್ತು ಪಾರಿಜಾತ:

ಗರಿಕೆ ಮತ್ತು ಪಾರಿಜಾತ:

ಕದಿಕೆ ಮತ್ತು ಪಾರಿಜಾತ ಹೂವಿನಿಂದ ಶಿವನನ್ನು ಪೂಜಿಸುವುದು ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ. ಶಿವನಿಗೆ ಕದಿಕೆ ಅರ್ಪಿಸುವುದರಿಂದ ವ್ಯಕ್ತಿಯು ಆರೋಗ್ಯವಾಗಿರುತ್ತಾನೆ. ದೀರ್ಘಾಯುಷ್ಯವನ್ನು ಬಯಸುವ ವ್ಯಕ್ತಿಯು ಶಿವನನ್ನು ಒಂದು ಲಕ್ಷ ಕದಿಕೆಗಳಿಂದ ಪೂಜಿಸಬೇಕು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ.

ಚೇಪುಲು ಮತ್ತ ಕಣಗಿಲೆ ಹೂವು:

ಚೇಪುಲು ಮತ್ತ ಕಣಗಿಲೆ ಹೂವು:

ಈ ಹೂವುಗಳಿಂದ ಶಿವನನ್ನು ಪೂಜಿಸುವುದರಿಂದ ವ್ಯಕ್ತಿಯು ಆಭರಣಗಳನ್ನು ಪಡೆಯುತ್ತಾನೆ. ಅಂತೆಯೇ, ಕಣಗಿಲೆ ಹೂವುಗಳಿಂದ ಪೂಜಿಸುವ ಮೂಲಕ ಒಬ್ಬ ವ್ಯಕ್ತಿಯು ಅತ್ಯುತ್ತಮವಾದ ಬಟ್ಟೆಗಳನ್ನು ಪಡೆಯುತ್ತಾನೆ.

ದುಂಡು ಮಲ್ಲಿಗೆ ಮತ್ತು ಮಲ್ಲಿಗೆ:

ದುಂಡು ಮಲ್ಲಿಗೆ ಮತ್ತು ಮಲ್ಲಿಗೆ:

ದುಂಡು ಮಲ್ಲಿಗೆಯಿಂದ ಶಿವನನ್ನು ಪೂಜಿಸುವವರು ತಾವು ಬಯಸಿದ ವ್ಯಕ್ತಿಯೊಂದಿಗೆ ಅಥವಾ ಅಪೇಕ್ಷಿತ ವಧು-ವರರ ಜೊತೆ ವಿವಾಹವಾಗಲು ಸಾದ್ಯವಾಗುವುದು. ಜೊತೆಗೆ ಪರಿಮಳಯುಕ್ತ ಮಲ್ಲಿಗೆಯಿಂದ ಶಿವನನ್ನು ಪೂಜಿಸಿದರೆ, ವಾಹನಗಳನ್ನು ಒದಗಿಸುತ್ತಾನೆ.

ಶಮಿ ಮತ್ತು ಸಣ್ಣ ಮಲ್ಲಿಗೆ:

ಶಮಿ ಮತ್ತು ಸಣ್ಣ ಮಲ್ಲಿಗೆ:

ಶಿವನನ್ನು ಶಮಿಪತ್ರೆಯಿಂದ ಪೂಜಿಸುವುದರಿಂದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ. ಶಮಿಯು ವಿಷ್ಣುವಿಗೆ ಪ್ರಿಯವಾದ ವಸ್ತುವಾಗಿದೆ. ಈ ಮರದ ಹೂವುಗಳನ್ನು ಶಿವನಿಗೆ ಅರ್ಪಿಸಿದರೆ, ಆ ವ್ಯಕ್ತಿ ಮೋಕ್ಷವನ್ನು ಪಡೆಯುತ್ತಾನೆ. ಶಿವನನ್ನು ಸಣ್ಣ ಮಲ್ಲಿಗೆಯಿಂದ ಪೂಜಿಸಿದರೆ, ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಉಂಟಾಗುವುದಿಲ್ಲ.

ಎಕ್ಕದ ಹೂವು ಹಾಗೂ ಉಮ್ಮತ್ತಿ ಹೂವು:

ಎಕ್ಕದ ಹೂವು ಹಾಗೂ ಉಮ್ಮತ್ತಿ ಹೂವು:

ಶಿವನಿಗೆ ಎಕ್ಕದ ಹೂವುಗಳನ್ನು ಅರ್ಪಿಸುವುದರಿಂದ ವ್ಯಕ್ತಿಯ ಕಣ್ಣು ಮತ್ತು ಹೃದಯ ಆರೋಗ್ಯಕರವಾಗಿರುತ್ತದೆ. ಜೊತೆಗೆ ಉಮ್ಮತ್ತಿ ಹೂವಿನಿಂದ ಪೂಜಿಸುವುದರಿಂದ ವಿಷಕಾರಿ ಜೀವಿಗಳಿಂದ ಯಾವುದೇ ಅಪಾಯ ಆಗುವುದಿಲ್ಲ.

English summary

Shravana Masa : Offer These Divine Flowers To Worship Lord Shiva

Here we talking about Shravana Masa : Offer These Divine Flowers To Worship Lord Shiva, read on
Story first published: Wednesday, July 28, 2021, 17:53 [IST]
X
Desktop Bottom Promotion