For Quick Alerts
ALLOW NOTIFICATIONS  
For Daily Alerts

ರಂಜಾನ್ ತಿಂಗಳು: ಪವಿತ್ರ ಮಾಸದಲ್ಲಿ ಮಾಡಬೇಕಾದ ಹಾಗೂ ಮಾಡಲೇಬಾರದ ಕಾರ್ಯಗಳಿವು

|

ಮುಸ್ಲಿಂ ಭಾಂದವರ ಪವಿತ್ರ ತಿಂಗಳೆಂದರೆ ಅದು ರಂಜಾನ್ ಅಥವಾ ರಮಧಾನ್. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಇದು ಒಂಬತ್ತನೆಯ ತಿಂಗಳಾಗಿದ್ದು, ಈ ಸಮಯದಲ್ಲಿ ಮುಸ್ಲಿಂ ಅನುಯಾಯಿಗಳು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಿ, ಆಲ್ಲಾಹುವಿನ ಕೃಪೆಗೆ ಪಾತ್ರರಾಗುತ್ತಾರೆ. ಇದರ ಜೊತೆಗೆ ಮುಸ್ಲಿಮರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಹಾಗಾದರೆ, ಪವಿತ್ರ ತಿಂಗಳಲ್ಲಿ ಮುಸ್ಲಿಂ ಭಾಂದವರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

ರಂಜಾನ್ ಪವಿತ್ರ ತಿಂಗಳಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳನ್ನ ಈ ಕೆಳಗೆ ನೀಡಲಾಗಿದೆ:

ಕುರಾನ್ ಪಠಿಸಿ:

ಕುರಾನ್ ಪಠಿಸಿ:

ರಂಜಾನ್ ತಿಂಗಳಲ್ಲಿ ಮುಸ್ಲಿಮರು ಪವಿತ್ರ ಕುರಾನ್ ಓದಬೇಕು. ಅಲ್ಲಾರ ಬೋಧನೆಗಳು ಕುರಾನ್ ರೂಪದಲ್ಲಿ ಸ್ವರ್ಗದಿಂದ ಭೂಮಿಗೆ ಬಂದಿದ್ದು, ಈ ತಿಂಗಳಲ್ಲಿ ಪ್ರವಾದಿ ಮಹಮ್ಮದ್ ಅದನ್ನು ಬಹಿರಂಗ ಪಡಿಸಿದರು ಎಂಬ ನಂಬಿಕೆಯಿದೆ. ಆದ್ದರಿಂದ ಈ ತಿಂಗಳಲ್ಲಿ ಇದನ್ನು ಓದುವುದರಿಂದ ಅಲ್ಲಾಹುವಿನೊಂದಿಗೆ ಹತ್ತಿರವಾಗಬಹುದು ಎಂಬ ಭಾವನೆ ಮಸ್ಲಿಂ ಭಾಂದವರಲ್ಲಿದೆ.

ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಿ:

ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಿ:

ಪ್ರಾರ್ಥನೆಗಳನ್ನು ದಿನಕ್ಕೆ ಐದು ಬಾರಿ ಸಲ್ಲಿಸಬೇಕು. ರಂಜಾನ್ ಸಮಯದಲ್ಲಿ, ಒಂದು ದಿನವು ಫಜ್ರ್ ಬೆಳಗ್ಗಿನ ಸಮಯದಲ್ಲಿ), ಝುಹ್ರ್ (ಮಧ್ಯಾಹ್ನ), ಅಸ್ರ್(ಮಧ್ಯಾಹ್ನ), ಮಗ್ರಿಬ್(ಸಂಜೆ) ಮತ್ತು ಇಶಾ (ರಾತ್ರಿ) ಯೊಂದಿಗೆ ಮುಕ್ತಾಯವಾಗುತ್ತದೆ.

ಉಪವಾಸವನ್ನು ಆಚರಿಸಿ :

ಉಪವಾಸವನ್ನು ಆಚರಿಸಿ :

ಮೇಲೆ ಹೇಳಿದಂತೆ, ಉಪವಾಸವು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಆದ್ದರಿಂದ, ಈ ತಿಂಗಳಲ್ಲಿ ಮುಸ್ಲಿಮರು ಉಪವಾಸ ಮಾಡಬೇಕು. ರಂಜಾನ್ ತಿಂಗಳಿನಲ್ಲಿನ ಉಪವಾಸದಿಂದ ಆಧ್ಯಾತ್ಮಿಕ ಪ್ರತಿಫಲಗಳು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಅಗತ್ಯವಿರುವವರಿಗೆ ದಾನ ಮಾಡಿ:

ಅಗತ್ಯವಿರುವವರಿಗೆ ದಾನ ಮಾಡಿ:

ರಂಜಾನ್ ಸಹಾನುಭೂತಿ ಮತ್ತು ಸಹೋದರತ್ವವನ್ನು ಪ್ರೋತ್ಸಾಹಿಸುವುದರಿಂದ ಅಗತ್ಯವಿರುವವರಿಗೆ ದಾನ ಮಾಡಿ. ದತ್ತಿ ಕಾರ್ಯಗಳಿಗೆ ಝಕಾತ್ (ನಿಮ್ಮ ಸಂಪತ್ತಿನ ಶೇಕಡಾವಾರು) ನೀಡಿ. ಇಸ್ಲಾಮಿನ ಐದು ಸ್ತಂಭಗಳಲ್ಲಿ ಇದೂ ಕೂಡ ಒಂದು.

ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡಿ:

ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡಿ:

ಈ ತಿಂಗಳು ಸಹಾನುಭೂತಿಯ ಬಗ್ಗೆ ಸಾರುವುದರಿಂದ, ಮುಸ್ಲಿಮರು ಶಾಂತವಾಗಿರಲು ಮತ್ತು ಸ್ವಯಂ-ಶಿಸ್ತು ಮತ್ತು ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡಬೇಕು. ಯಾವುದೇ ಕೆಟ್ಟ ಕಾರ್ಯಗಳಲ್ಲೂ, ಕೆಟ್ಟ ಆಲೋಚನೆಗಳಲ್ಲೂ ತಮ್ಮ ಮನಸ್ಸನ್ನು ತೊಡಗಿಸಿಕೊಳ್ಳಬಾರದು.

 ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಿ:

ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಿ:

ರಂಜಾನ್ ತಿಂಗಳಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಸಮಯವನ್ನು ಪ್ರಾರ್ಥನೆಗಳಿಗೆ ಮೀಸಲಿಡಿ.

ರಂಜಾನ್ ತಿಂಗಳಲ್ಲಿ ಮಾಡಬಾರದ ಕೆಲಸಗಳು ಹೀಗಿವೆ:

ರಂಜಾನ್ ತಿಂಗಳಲ್ಲಿ ಮಾಡಬಾರದ ಕೆಲಸಗಳು ಹೀಗಿವೆ:

ಉಪವಾಸದ ಸಮಯದಲ್ಲಿ ಆಹಾರ ಅಥವಾ ನೀರನ್ನು ಸೇವಿಸಬೇಡಿ:

ರಂಜಾನ್ ಸಮಯದಲ್ಲಿ ಉಪವಾಸವು ಅತ್ಯಂತ ಮಹತ್ವದ ಕರ್ತವ್ಯವಾಗಿರುವುದರಿಂದ, ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಆಹಾರ ಮತ್ತು ನೀರನ್ನು ಕುಡಿಯುವುದನ್ನು ತ್ಯಜಿಸಿ. ಅನಾರೋಗ್ಯದಿಂದ ಬಳಲುತ್ತಿರುವವರು, ವೃದ್ಧರು ಮತ್ತು ಗರ್ಭಿಣಿ/ಸ್ತನ್ಯಪಾನ ಮಾಡುವ/ಮುಟ್ಟಿನ ಮಹಿಳೆಯರನ್ನು ಹೊರತುಪಡಿಸಿ, ಎಲ್ಲರೂ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಆದಾಗ್ಯೂ, ಅನಾರೋಗ್ಯ ಅಥವಾ ಗರ್ಭಿಣಿಯರು ನಂತರದ ದಿನಗಳಲ್ಲಿ ಉಪವಾಸ ಮಾಡುವ ಮೂಲಕ ಪರಿಹಾರವನ್ನು ನೀಡುತ್ತಾರೆ.

ಸಂಗೀತ/ಹಾಡುಗಳನ್ನು ಕೇಳಬೇಡಿ:

ಸಂಗೀತ/ಹಾಡುಗಳನ್ನು ಕೇಳಬೇಡಿ:

ಪ್ರಾರ್ಥನೆಗೆ ಸಮಯವನ್ನು ವಿನಿಯೋಗಿಸಿ ಮತ್ತು ಅಲ್ಲಾಹುನನ್ನು ಸ್ಮರಿಸಿ. ಸಂಗೀತ ಅಥವಾ ಹಾಡುಗಳನ್ನು ಕೇಳಬೇಡಿ.

ಸಮಯ ವ್ಯರ್ಥ ಮಾಡಬೇಡಿ:

ಟಿವಿ ನೋಡುವುದು, ಅತಿಯಾಗಿ ಮಲಗುವುದು ಅಥವಾ ಶಾಪಿಂಗ್ ಮಾಡುವ ಬದಲು, ಸಮಯವನ್ನು ರಚನಾತ್ಮಕವಾಗಿ ಬಳಸಿಕೊಳ್ಳಿ. ನೆನಪಿಡಿ, ರಂಜಾನ್ ಶಿಸ್ತನ್ನು ಪೋಷಿಸುವ ಸಮಯ.

ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ:

ಗಾಸಿಪ್ ಮತ್ತು ಸುಳ್ಳು ಮಾತುಕತೆಗಳಿಂದ ತುಂಬಿರುವ ಸಂಭಾಷಣೆಗೆ ಹೋಗಬೇಡಿ. ಜೊತೆಗೆ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಲು ಹೋಗಬಾರದು.

English summary

Ramadan Rules: Do's and Don'ts during the Muslim Holy Month in Kannada

Here we talking about Ramadan Rules: Do's and Don'ts during the Muslim holy month in kannada, read on
X
Desktop Bottom Promotion