For Quick Alerts
ALLOW NOTIFICATIONS  
For Daily Alerts

ರಂಜಾನ್ 2021: ಉಪವಾಸ ಮಾಡುವುದರಿಂದ ಸಿಗುವ ಪ್ರಯೋಜನಗಳಿವು

|

ಮುಸ್ಲಿಂ ಭಾಂಧವರಿಗೆ ರಂಜಾನ್ ತಿಂಗಳು ಈಗಾಗಲೇ ಆರಂಭವಾಗಿದೆ. ಎಪ್ರಿಲ್ 13ರಿಂದ ಆರಂಭವಾಗಿ ಸುಮಾರು ಒಂದು ತಿಂಗಳುಗಳ ಕಾಲ ಮುಸ್ಲಿಂರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಈ ಉಪವಾಸದ ಹಿಂದೆ ಧಾರ್ಮಿಕ ಅಂಶಗಳ ಜೊತೆಗೆ ದೇಹ ಮತ್ತು ಮನಸ್ಸಿನ ಶುದ್ಧೀಕರಣವು ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾದರೆ ಈ ಉಪವಾಸ ಮಾಡುವುದರಿಂದ ಏನು ಲಾಭವಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಉಪವಾಸದಿಂದ ಸಿಗುವ ಪ್ರಯೋಜನಗಳನ್ನು ಈ ಕೆಳಗೆ ವಿವರಿಸಲಾಗಿದೆ:

ತೂಕ ಇಳಿಕೆ:

ತೂಕ ಇಳಿಕೆ:

ರಂಜಾನ್ ನಲ್ಲಿ ನೀವು ನಿರ್ದಿಷ್ಟ ಮಾದರಿಯ ಉಪವಾಸವನ್ನು ಅನುಸರಿಸುವುದರಿಂದ ಇದು ಸರಿಯಾದ ತೂಕನಷ್ಟಕ್ಕೆ ಕಾರಣವಾಗುತ್ತದೆ. ಸೂರ್ಯಾಸ್ತದ ಮೊದಲು ಮತ್ತು ನಂತರ ತಿನ್ನುವ ಮೂಲಕ, ನಿಮ್ಮ ದೇಹಕ್ಕೆ ಆಹಾರ ಸೇವಿಸುವ ನಿರ್ದಿಷ್ಟ ಸಮಯವನ್ನು ನಿಗದಿ ಮಾಡುತ್ತೀರಿ. ಇದರಿಂದ ನಿಮ್ಮ ದೇಹಕ್ಕೆ ತರಬೇತಿ ದೊರೆತಂತಾಗುತ್ತದೆ.ಈ ಉಪವಾಸವು ಸೇವಿಸುವ ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:

ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಉಪವಾಸವು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ರಕ್ತವನ್ನು ನಿಯಂತ್ರಿಸಲು ಇದು ಅತ್ಯಂತ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ, ಮತ್ತು ಅನೇಕರು ಈ ಸಮಸ್ಯೆಗೆ ಸಹಾಯ ಮಾಡಲು ರಂಜಾನ್ ಹೊರತೂ ಉಪವಾಸವನ್ನು ಮಾಡುತ್ತಾರೆ.

ಮಧುಮೇಹವನ್ನು ನಿಯಂತ್ರಿಸುತ್ತದೆ:

ಮಧುಮೇಹವನ್ನು ನಿಯಂತ್ರಿಸುತ್ತದೆ:

ಮಧುಮೇಹವನ್ನು ನಿರ್ವಹಿಸಲು ಬಯಸುವ ಜನರಿಗೆ ಉಪವಾಸವು ಪ್ರಯೋಜನಕಾರಿಯಾಗಬಹುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಒಬ್ಬ ವ್ಯಕ್ತಿಯು ಉಪವಾಸ ಮಾಡುವಾಗ, ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ನಿಯಂತ್ರಿಸುತ್ತದೆ, ಇದು ನೀವು ಮಧುಮೇಹದಿಂದ ಬಳಲುತ್ತಿದ್ದರೆ ಕೆಲವು ಉತ್ತಮ ಪ್ರಯೋಜನಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಕೊಬ್ಬನ್ನು ಕಡಿಮೆ ಮಾಡುತ್ತದೆ:

ಕೊಬ್ಬನ್ನು ಕಡಿಮೆ ಮಾಡುತ್ತದೆ:

ನಿಯಮಿತ ಉಪವಾಸವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹವು ಸಕ್ಕರೆಯನ್ನು ಚಯಾಪಚಯಗೊಳಿಸಲು ಉಪವಾಸವು ಸಹಾಯ ಮಾಡುತ್ತದೆ. ಇದು ನಿಮ್ಮ ತೂಕವನ್ನು ಹೆಚ್ಚಿಸುವ ಮತ್ತು ಮಧುಮೇಹವನ್ನು ಬೆಳೆಸುವ ಅಪಾಯವನ್ನು ಕಡಿಮೆ ಮಾಡುತ್ತದೆ, ಇದು ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳಾಗಿವೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ:

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ:

ಹೌದು ಈ ಉಪವಾಸವು ನಿಮ್ಮ ಜೀರ್ಣಕ್ರಿಯೆಯನ್ನ ಉತ್ತಮಗೊಳಿಸುತ್ತದೆ. ಉಪವಾಸ ಮಾಡುವುದರಿಂದ ನೀವು ಉತ್ತಮ ಪೋಷಕಾಂಶವುಳ್ಳ ಆಹಾರವನ್ನು ನಂತರದಲ್ಲಿ ಸೇವನೆ ಮಾಡುತ್ತೀರಿ. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಜೊತೆಗೆ ಜೀರ್ಣಕಾರಿ ವ್ಯವಸ್ಥೆಯನ್ನು ಸುಧಾರಿಸುತ್ತದೆ.

English summary

Ramadan 2021: What Are The Benefits Of Fasting in Kannada

Here we told about Ramadan 2021: What are the benefits of fasting in kannada, read on
X
Desktop Bottom Promotion