For Quick Alerts
ALLOW NOTIFICATIONS  
For Daily Alerts

ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು

|

ಎಪ್ರಿಲ್ 21ರಂದು ಶ್ರೀ ರಾಮನವಮಿ. ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಇದು ಕೂಡ ಒಂದು. ಈ ದಿನದಂದು ಭಗವಾನ್ ಶ್ರೀರಾಮ ಹುಟ್ಟಿದನೆಂಬ ನಂಬಿಕೆಯಿದೆ. ದಶರಥ ರಾಜ ಮತ್ತು ಅಯೋಧ್ಯೆಯ ರಾಣಿ ಕೌಶಲ್ಯನ ಮಗನಾಗಿ ಹುಟ್ಟಿದ ರಾಮನನ್ನು ಈ ದಿನದಂದು ಪೂಜಿಸಿದರೆ ಕಷ್ಟ-ಕಾರ್ಪಣ್ಯಗಳು ದೂರವಾಗಿ ಸುಖ-ಶಾಂತಿ ನೆಲೆಯಾಗುತ್ತದೆ ಎಂಬ ನಂಬಿಕೆಯಿದೆ. ಈ ಲೇಖನದಲ್ಲಿ ರಾಮನ ಕುರಿತಾದ ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದೇವೆ.

ಶ್ರೀರಾಮನ ಬಗ್ಗೆ ಅಪರಿಚಿತ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

1. ವಿಷ್ಣುವಿನ ಏಳನೇ ಅವತಾರ:

1. ವಿಷ್ಣುವಿನ ಏಳನೇ ಅವತಾರ:

ವಿಷ್ಣುವಿನ 10 ಅವತಾರಗಳಲ್ಲಿ ಭಗವಾನ್ ರಾಮನನ್ನು 7 ನೇ ಅವತಾರವೆಂದು ಪರಿಗಣಿಸಲಾಗಿದೆ. ರಾಮನ ಮೊದಲು, ವಿಷ್ಣುವು ಮತ್ಸ್ಯ (ಮೀನು), ಕುರ್ಮಾ (ಆಮೆ), ವರಾಹ (ಹಂದಿ), ನರಸಿಂಹ (ಮನುಷ್ಯ ಮತ್ತು ಸಿಂಹ), ವಾಮನ (ಕುಬ್ಜ) ಮತ್ತು ಪರಶುರಾಮ ಅವತಾರ ಎತ್ತದ್ದ. ನಂತರ ಕೃಷ್ಣ, ಬುದ್ಧ ಮತ್ತು ಕಲ್ಕಿ ಅವತಾರ ತಾಳಿದ್ದನು.

2. ಅತ್ಯಂತ ಹಳೆಯ ಮಾನವ ದೇವತೆ:

2. ಅತ್ಯಂತ ಹಳೆಯ ಮಾನವ ದೇವತೆ:

ಭಗವಾನ್ ರಾಮನು ತ್ರೇತಾಯುಗದಲ್ಲಿ ಜನಿಸಿದನು ಮತ್ತು ರಾಮನು ಮಾನವ ರೂಪದಲ್ಲಿ ಪೂಜಿಸಲ್ಪಟ್ಟ ಅತ್ಯಂತ ಹಳೆಯ ದೇವತೆ ಎಂದು ತಿಳಿದುಬಂದಿದೆ. ತ್ರೇತಾಯುಗವು 1,296,000 ವರ್ಷಗಳ ಹಿಂದೆ ಕೊನೆಗೊಂಡಿದ್ದು, ತ್ರೇತಾ ಯುಗದಲ್ಲಿ ರಾಮನಲ್ಲದೆ, ವಿಷ್ಣು ವಾಮನ ಮತ್ತು ಪರಶುರಾಮನಾಗಿ ಅವತರಿಸಿದನು.

3. ಸೂರ್ಯನ ವಂಶಸ್ಥ ರಾಮ:

3. ಸೂರ್ಯನ ವಂಶಸ್ಥ ರಾಮ:

ರಾಮನು "ಇಕ್ಷ್ವಕು" ರಾಜವಂಶದಲ್ಲಿ ಜನಿಸಿದನು. ಇದನ್ನು ಸೂರ್ಯ ರಾಜನ ಮಗ "ರಾಜ ಇಕ್ಷ್ವಕು" ಸ್ಥಾಪಿಸಿದನು. ಅದಕ್ಕಾಗಿಯೇ ಭಗವಾನ್ ರಾಮನನ್ನು "ಸೂರ್ಯವಂಶಿ" ಎಂದೂ ಕರೆಯುತ್ತಾರೆ.

4. ವಿಷ್ಣುವಿನ 394 ನೇ ಹೆಸರು

4. ವಿಷ್ಣುವಿನ 394 ನೇ ಹೆಸರು "ರಾಮ":

ವಿಷ್ಣು ಸಹಸ್ರನಾಮ ಪುಸ್ತಕದಲ್ಲಿ ವಿಷ್ಣುವಿನ ಸಾವಿರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಇದರ ಪ್ರಕಾರ, "ರಾಮ" ಎಂಬುದು ವಿಷ್ಣುವಿನ 394 ನೇ ಹೆಸರಾಗಿದೆ.

5. ರಾಮನಿಗೆ ಹೆಸರಿಟ್ಟವರು:

5. ರಾಮನಿಗೆ ಹೆಸರಿಟ್ಟವರು:

ರಾಮನನ್ನು ರಘುವಂಷಿಯ ಗುರುಗಳಾದ ಮಹರ್ಷಿ ವಶಿಷ್ಠರು ನಾಮಕರಣ ಮಾಡಿದರು. ವಸಿಷ್ಠರ ಪ್ರಕಾರ, "ರಾಮ" ಎಂಬ ಪದವು ಎರಡು ಬೀಜಕ್ಷರಗಳಿಂದ ಅಂದರೆ "ಅಗ್ನಿ ಬೀಜ" ಮತ್ತು "ಅಮೃತ ಬೀಜ" ನಿಂದ ಕೂಡಿದೆ. ಈ ಅಕ್ಷರಗಳು ಮನಸ್ಸು, ದೇಹ ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತವೆ.

6. ರಾಮ ಎಂಬ ಹೆಸರಿನ ಮೂರು ಬಾರಿ ಉಚ್ಚಾರಣೆಯು ಸಾವಿರಾರು ದೇವರುಗಳನ್ನು ನೆನಪಿಸಿಕೊಳ್ಳುವಂತಿದೆ:

6. ರಾಮ ಎಂಬ ಹೆಸರಿನ ಮೂರು ಬಾರಿ ಉಚ್ಚಾರಣೆಯು ಸಾವಿರಾರು ದೇವರುಗಳನ್ನು ನೆನಪಿಸಿಕೊಳ್ಳುವಂತಿದೆ:

ಮಹಾಭಾರತದ ಪ್ರಕಾರ, ಒಮ್ಮೆ ಶಿವನು ರಾಮನ ಹೆಸರನ್ನು ಮೂರು ಬಾರಿ ಪಠಿಸುವುದರಿಂದ ಸಾವಿರ ದೇವತೆಗಳ ಹೆಸರನ್ನು ಉಚ್ಚರಿಸಿದ ಅನುಗ್ರಹಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿದ್ದನಂತೆ.

7. ಯುದ್ಧದಲ್ಲಿ ರಾಮನನ್ನು ಸೋಲಿಸಿದವನು:

7. ಯುದ್ಧದಲ್ಲಿ ರಾಮನನ್ನು ಸೋಲಿಸಿದವನು:

ಕಾಶಿ ರಾಜನಾದ "ಯಯಾತಿ" ಯನ್ನು ರಕ್ಷಿಸಲು ಹನುಮಂತ ರಾಮನೊಂದಿಗೆ ಹೋರಾಡಿದನು. ರಿಷಿ ವಿಕ್ರಮಾದಿತ್ಯನ ಆದೇಶದ ಮೇರೆಗೆ ರಾಮನು ಕಾಶಿ ರಾಜನನ್ನು ಕೊಲ್ಲಲು ಬಂದಿದ್ದನು. ಯುದ್ಧದಲ್ಲಿ ಕಾಶಿ ರಾಜನಿಗೆ ಸಹಾಯ ಮಾಡಲು, ಹನುಮಂತ ರಾಮನನ್ನು ಪಠಿಸಲು ಪ್ರಾರಂಭಿಸಿದನು. ಈ ಕಾರಣದಿಂದಾಗಿ, ರಾಮನ ಬಾಣಗಳು ಹನುಮನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ರಾಮನು ತನ್ನ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

8. ರಾಮ ಸೇತು ನಿರ್ಮಾಣ ಮತ್ತು ಉದ್ದ:

8. ರಾಮ ಸೇತು ನಿರ್ಮಾಣ ಮತ್ತು ಉದ್ದ:

ರಾಮ ಸೇತುವೆಯನ್ನು ತಮಿಳುನಾಡಿನ ರಾಮೇಶ್ವರದಿಂದ ಹಿಡಿದು ಶ್ರೀಲಂಕಾದ ಮನ್ನಾರ್ ವರೆಗೆ ವಾನರ ಸೇನೆಯು ನಿರ್ಮಿಸಿದೆ. ಈ ಸೇತುವೆಯ ಮುಖ್ಯ ಕುಶಲಕರ್ಮಿಗಳು "ನಲ" ಮತ್ತು "ನೀಲ". ಈ ಸೇತುವೆಯ ಉದ್ದ ಸುಮಾರು 30 ಕಿ.ಮೀ ಆಗಿದ್ದು, ಇದನ್ನು 6 ದಿನಗಳಲ್ಲಿ ನಿರ್ಮಿಸಲಾಗಿದೆ.

9. ಭಗವಾನ್ ರಾಮನ ಅಪಹರಣ:

9. ಭಗವಾನ್ ರಾಮನ ಅಪಹರಣ:

ರಾವಣನ ಸಹೋದರ ಅಹಿರಾವಣ, ರಾಮ ಮತ್ತು ಲಕ್ಷ್ಮಣರನ್ನು ಅಪಹರಿಸಿ ಮಹಾಮಾಯ ದೇವಿಗೆ ಬಲಿ ನೀಡಲು ಕರೆದೊಯ್ದನು. ಆದರೆ ಹನುಮಂತ ರಾಮ ಮತ್ತು ಲಕ್ಷ್ಮಣರನ್ನು ಅಹಿರಾಣನನ್ನು ಕೊಲ್ಲುವ ಮೂಲಕ ಬಿಡುಗಡೆ ಮಾಡಿದನು.

10. ರಾಮನ ಆಳ್ವಿಕೆ:

ರಾಮನು ಹನ್ನೊಂದು ಸಾವಿರ ವರ್ಷಗಳ ಕಾಲ ಅಯೋಧ್ಯೆ ರಾಜ್ಯವನ್ನು ಆಳಿದನು. ಈ ಸುವರ್ಣ ಅವಧಿಯನ್ನು "ರಾಮ ರಾಜ್ಯ" ಎಂದು ಕರೆಯಲಾಗುತ್ತದೆ.

11. ರಾಮನ ಭೂಮಿ ತ್ಯಜನೆ:

ಸೀತೆ ತನ್ನ ದೇಹವನ್ನು ತ್ಯಜಿಸಿದಾಗ, ರಾಮನು ಸರಯು ನದಿಯಲ್ಲಿ ಜಲ ಸಮಾಧಿ ಆಗಿ ಭೂಮಿಯನ್ನು ತ್ಯಜಿಸಿದನು ಎಂದು ನಂಬಲಾಗಿದೆ.

English summary

Ram Navami 2021: Interesting Facts about Lord Rama in Kannada

Here we told about Ram Navami 2021: Interesting Facts about Lord Rama in Kannada, read on
X
Desktop Bottom Promotion