For Quick Alerts
ALLOW NOTIFICATIONS  
For Daily Alerts

ರಕ್ಷಾಬಂಧನವನ್ನು ಏಕೆ ಆಚರಿಸಲಾಗುತ್ತದೆ? ಎಷ್ಟು ದಿನಗಳ ಕಾಲ ರಾಖಿ ಸಹೋದರನ ಕೈಯಲ್ಲಿರಬೇಕು?

|

ಇನ್ನೇನು ಕೆಲವೇ ದಿನಗಳಲ್ಲಿ ರಕ್ಷಾಬಂಧನ ನಡೆಯಲಿದೆ. ಸಹೋದರ-ಸಹೋದರಿಯರ ನಡುವಿನ ಭಾಂದವ್ಯದ ಸಂಕೇತವೇ ಈ ರಕ್ಷಾ ಬಂಧನ. ತನ್ನನ್ನು ಸದಾ ರಕ್ಷಿಸಲೆಂದು ಸಹೋದರಿಯರು ತನ್ನ ಸಹೋದರನ ಮಣಿಗಂಟಿಗೆ ಕಟ್ಟುವ ಪವಿತ್ರದಾರವೇ ರಾಖಿ. ಶ್ರಾವಣ ಮಾಸದ ಹುಣ್ಣಿಮೆಯ ದಿನದ ಆಚರಿಸಲಾಗುವ ಈ ರಕ್ಷಾ ಬಂಧನವನ್ನು ಏಕೆ ಕಟ್ಟಲಾಗುತ್ತದೆ? ಅದನ್ನು ಸಹೋದರರು ಎಷ್ಟು ದಿನಗಳ ಕಾಲ ಇಟ್ಟುಕೊಳ್ಳಬೇಕು ಎಂಬುದರ ಕೆಲವರಿಗೆ ಗೊಂದಲವಿರುತ್ತದೆ. ಈ ಲೇಖನ ಓದಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯುವುದು.

ರಕ್ಷಾ ಬಂಧನವನ್ನು ಏಕೆ ಆಚರಿಸಲಾಗುತ್ತದೆ?:

ರಕ್ಷಾ ಬಂಧನವನ್ನು ಏಕೆ ಆಚರಿಸಲಾಗುತ್ತದೆ?:

ರಕ್ಷಾ ಬಂಧನವು ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ. ಆದ್ದರಿಂದ, ಸಹೋದರಿಯರು ಪವಿತ್ರವಾದ ದಾರವನ್ನು ತಮ್ಮ ಸಹೋದರನ ಬಲಗೈ ಮಣಿಕಟ್ಟಿನ ಮೇಲೆ ರಕ್ಷಣೆ ಮತ್ತು ಭದ್ರತೆಯ ಸಂಕೇತವಾಗಿ ಕಟ್ಟುತ್ತಾರೆ. ಇದನ್ನು ರಾಖಿ ಎಂದು ಸಾಮಾನ್ಯವಾಗಿ ಕರೆಯುತ್ತಿದ್ದು, ಕೇವಲ ಒಡಹುಟ್ಟಿದ ಅಣ್ಣ-ತಮ್ಮಂದಿರಿಗಷ್ಟೇ ಅಲ್ಲ, ಅಣ್ಣನಂತೆ ಕಾಪಾಡುವ, ತಮ್ಮನಂತೆ ಪ್ರೋತ್ಸಾಹ ನೀಡುವ ಬೇರೆ ತಾಯಿಯಿ ಗಂಡುಮಕ್ಕಳಿಗೂ ಈ ರಾಖಿ ಕಟ್ಟಿ ಅವರಿಗೆ ಅಣ್ಣ-ತಮ್ಮನ ಸ್ಥಾನ ಕೊಡುವವರಿದ್ದಾರೆ. ಒಟ್ಟಿನಲ್ಲಿ ಸಹೋದರಿಯನ್ನು ಕವಚದಂತೆ ಕಾಪಾಡುವ ಸಹೋದರನ ಜೀವನ ಸುಖ, ಶಾಂತಿ, ಸಮೃದ್ಧತೆಯಿಂದ ತುಂಬಿರಲಿ ಎಂದು ಬೇಡಿಕೊಂಡು, ಪವಿತ್ರದಾರ ಕಟ್ಟುವ ದಿನವಾಗಿದೆ.

ಈ ವರ್ಷದ ರಕ್ಷಾ ಬಂಧನ ದಿನಾಂಕ:

ಈ ವರ್ಷದ ರಕ್ಷಾ ಬಂಧನ ದಿನಾಂಕ:

ರಕ್ಷಾ ಬಂಧನವನ್ನು ಪೂರ್ಣಿಮಾ ತಿಥಿಯಂದು ಆಚರಿಸಲಾಗುತ್ತದೆ, ಅಂದರೆ ಶ್ರಾವಣ ಮಾಸದ ಹುಣ್ಣಿಮೆಯ ದಿನ. ಈ ವರ್ಷ, ರಕ್ಷಾ ಬಂಧನವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತದೆ.

ರಕ್ಷಾ ಬಂಧನದ ಇತಿಹಾಸ ಏನು?

ರಕ್ಷಾ ಬಂಧನದ ಇತಿಹಾಸ ಏನು?

ರಕ್ಷಾ ಬಂಧನಕ್ಕೆ ಸಂಬಂಧಿಸಿದಂತೆ ಹಲವಾರು ದಂತಕಥೆಗಳಿವೆ, ಇವುಗಳು ಪವಿತ್ರ ದಾರವನ್ನು ಕಟ್ಟುವ ಅಭ್ಯಾಸವು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ವಿವರಿಸುತ್ತದೆ. ಅದರಲ್ಲಿ ದ್ರೌಪದಿ ಮತ್ತು ಶ್ರೀ ಕೃಷ್ಣನ ಕಥೆಯು ಒಂದು.

ರಾಜಸೂಯ ಯಾಗವನ್ನು ಮಾಡಿ, ಯುಧಿಷ್ಠಿರನು ರಾಜಧಾನಿಯಾಗಿ ಇಂದ್ರಪ್ರಸ್ಥವನ್ನು ಸ್ಥಾಪಿಸಿದ ನಂತರ, ಪಾಂಡವರು ಶ್ರೀಕೃಷ್ಣನನ್ನು ಕೃತಜ್ಞತೆ ಸಲ್ಲಿಸಲು ಆಹ್ವಾನಿಸಿದರು. ಎಲ್ಲಾ ರಾಜರು ಮತ್ತು ನೆರೆಹೊರೆಯ ಅತಿಥಿಗಳಲ್ಲಿ ಶ್ರೀ ಕೃಷ್ಣನ ಸೋದರಸಂಬಂಧಿ ಶಿಶುಪಾಲನೂ ಇದ್ದನು. ಈತ ಕೃಷ್ಣನನ್ನು ಖಂಡಿಸಿ ಯುಧಿಷ್ಠಿರನ ಆಸ್ಥಾನದಲ್ಲಿ ಅವಮಾನ ಮಾಡಿದನು. ಜೊತೆಗೆ ಪಾಪದ ಎಲ್ಲ ಮಿತಿಯನ್ನು ದಾಟಿದ್ದನು. ದ್ದರಿಂದ, ಅವನನ್ನು ಶಿಕ್ಷಿಸಲು, ಕೃಷ್ಣನು ತನ್ನ ಸುದರ್ಶನ ಚಕ್ರವನ್ನು ಅವನಿಗೆ ಬಟ್ಟನು. ಆದಾಗ್ಯೂ, ಚಕ್ರವು ಶ್ರೀ ಕೃಷ್ಣನ ಕೈಗೆ ಮರಳುವಾಗ ಅವನ ಬೆರಳಿನಲ್ಲಿ ಆಳವಾದ ಗಾಐಮಾಡಿತು. ಈ ರಕ್ತಸ್ರಾವವನ್ನು ನೋಡಿದ ದ್ರೌಪದಿ ಗಾಯಕ್ಕೆ ಚಿಕಿತ್ಸೆ ನೀಡಲು ತನ್ನ ಬಟ್ಟೆಯ ತುಂಡನ್ನು ಹರಿದು, ಕೈಗೆ ಕಟ್ಟಿದಳೂ. ಇದೇ ಮುಂದೆ ರಾಖಿಯಾಯಿತು. ಇದರಿಂದ ಶ್ರೀಕೃಷ್ಣನ ಆಶೀರ್ವಾದವನ್ನು ದ್ರೌಪದಿ ಗಳಿಸಿದಳು. ಕೊನೆಗೆ ಪಾಂಡವರಿಗೆ ಸಾಧ್ಯವಾಗದಿದ್ದಾಗ ದ್ರೌಪದಿಯ ಗೌರವವನ್ನು ರಕ್ಷಿಸಲು ಮತ್ತು ಸಾರ್ವಜನಿಕವಾಗಿ ಆಗುತ್ತಿದ್ದ ಅವಮಾನವನ್ನು ತಡೆದವನು ಅದೇ ಶ್ರೀಕೃಷ್ಣ.

ಎಷ್ಟು ದಿನ ರಾಖಿ ಧರಿಸಿರಬೇಕು?:

ಎಷ್ಟು ದಿನ ರಾಖಿ ಧರಿಸಿರಬೇಕು?:

ರಕ್ಷಾ ಬಂಧನವನ್ನು ತೆಗೆಯಲು ಸೂಕ್ತ ಸಮಯವನ್ನು ಯಾವುದೇ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖ ಮಾಡಿಲ್ಲ. ಆದ್ದರಿಂದ, ಸಹೋದರನು ಹಬ್ಬದ ನಂತರ ದಿನದಲ್ಲಿ ತನಗೆ ಯಾವಾಗ ಬೇಕೋ ಅವಾಗ ರಾಖಿಯನ್ನು ತೆಗೆಯಬಹುದು.

ರಾಖಿ ಕಟ್ಟುವಾಗ ಸಹೋದರ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು?

ರಾಖಿ ಕಟ್ಟುವಾಗ ಸಹೋದರ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು?

ಸಹೋದರ ರಾಖಿ ಕಟ್ಟುವಾಗ ಪಶ್ಚಿಮಕ್ಕೆ ಅಭಿಮುಖವಾಗಿ ಕುಳಿತುಕೊಳ್ಳಬೇಕು.

2021ರಲ್ಲಿ ರಾಖಿ ಕಟ್ಟಲು ಶುಭ ಮುಹೂರ್ತ:

ರಾಖಿಯನ್ನು ಬೆಳಗ್ಗೆ 6:15 ರಿಂದ ಸಂಜೆ 5:31 ರವರೆಗೆ ಯಾವಾಗ ಬೇಕಾದರೂ ಕಟ್ಟಬಹುದು. ಆದಾಗ್ಯೂ, ಪವಿತ್ರ ದಾರವನ್ನು ಕಟ್ಟಲು ಉತ್ತಮ ಸಮಯವೆಂದರೆ ಮಧ್ಯಾಹ್ನ 1:42 PM ರಿಂದ 4:18 PM ನಡುವೆ.

ರಾಖಿಯನ್ನು ಈ ಸಮಯದಲ್ಲಿ ಕಟ್ಟಬೇಡಿ:

ರಾಖಿಯನ್ನು ಈ ಸಮಯದಲ್ಲಿ ಕಟ್ಟಬೇಡಿ:

ರಾಖಿ ಕಟ್ಟುವಾಗ ಭದ್ರಾ ಮುಹೂರ್ತ ಅಥವಾ ಸಮಯವನ್ನು ಜನರು ತಪ್ಪಿಸಬೇಕು, ಇದು ಸಾಮಾನ್ಯವಾಗಿ ಹುಣ್ಣಿಮೆಯ ದಿನ ಮೊದಲಾರ್ಧದಲ್ಲಿ ಬರುತ್ತದೆ.

ಭದ್ರಾ ಪಂಚ - 2:19 AM ರಿಂದ 3:27 AM

ಭದ್ರಾ ಮುಖ: 3:27 AM ರಿಂದ 5:19 AM

ಭದ್ರಾ ಬೆಳಗ್ಗೆ 6:15 ಕ್ಕೆ ಕೊನೆಗೊಳ್ಳುತ್ತದೆ. ತದನಂತರ ಮೇಲೆ ಹೇಳಿದ ಮುಹೂರ್ತದಲ್ಲಿ ರಾಖಿ ಕಟ್ಟಬಹುದು.

English summary

Raksha Bandhan 2021: Why is Rakhi Celebrated, How Long One Must wear the Sacred Thread

Raksha Bandhan is one of the biggest festivals celebrated in India, and it honours the bond between a brother and sister. Popularly known as Rakhi. Here we talking about Raksha Bandhan 2021: Why is Rakhi celebrated, how long one must wear the sacred thread, read on
X
Desktop Bottom Promotion