For Quick Alerts
ALLOW NOTIFICATIONS  
For Daily Alerts

ಬಾಳ ಪಯಣ ಮುಗಿಸಿದ ಯುವರತ್ನ: ಪುನೀತ್‌ ರಾಜ್‌ಕುಮಾರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರದ ಸಂಗತಿಗಳಿವು

|

ಅಕ್ಟೋಬರ್‌ 29 ಕನ್ನಡ ಸಿನಿ ಜಗತ್ತಿಗೆ ಕರಳಾ ದಿನ. ಬಾಳಿ ಮಿನುಗಬೇಕಾಗಿದ್ದ ತಾರೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿ ತುಂಬಲಾರದ ನಷ್ಟ ಉಂಟಾಗಿದೆ. ಪುನೀತ್‌ ರಾಜುಕುಮಾರ್ ಎಂಬ ಬಹುಮುಖ ಪ್ರತಿಭೆ ಇಷ್ಟು ಬೇಗ ಬಾರದ ಲೋಕಕ್ಕೆ ಪ್ರಯಾಣಿಸುತ್ತಾರೆ ಎಂಬುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ರಾಜ್‌ಕುಮಾರ್‌ ಕುಟುಂಬದಲ್ಲಿ ಜನಿಸಿದ ಕಿರಿಯ ಹುಡುಗ ಪುನೀತ್‌ ತುಂಬಾ ತಮ್ಮ 46ನೇ ವಯಸ್ಸಿನಲ್ಲಿ ಈ ಜಗತ್ತಿನ ಪಯಣ ಮುಗಿಸಿ ಹೊರಟು ಎಲ್ಲರ ಹೃದಯ ಭಾರವಾಗಿಸಿದ್ದಾರೆ.

ಅಪ್ಪು ಎಂದ ಕರೆಯಲ್ಪಡುವ ಪುನೀತ್‌ ಕಂಡ್ರೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾ ವ್ಯಕ್ತಿಗಳಿಗೂ ಅಚ್ಚಮೆಚ್ಚು. ಅಂಥ ವ್ಯಕ್ತಿತ್ವ ಅಪ್ಪು ಅವರದ್ದು. ಅಷ್ಟು ದೊಡ್ಡ ಮನೆತನದಲ್ಲಿ ಜನಿಸಿ, ಸ್ಟಾರ್‌ ನಟನಾಗಿದ್ದರೂ ಯಾರನ್ನೇ ಆಗಲಿ ಒಂದಷ್ಟೂ ಹಮ್ಮು-ಬಿಮ್ಮು ತೋರದೆ ಮಾತನಾಡಿಸುತ್ತಿದ್ದರು.

ಅವರಿದ್ದ ಕಡೆ ಒಂದು ರೀತಿಯ ಉತ್ಸಾಹ ಪುಟಿದೇಳುತ್ತಿತ್ತು. ಸ್ಯಾಂಡಲ್‌ವುಡ್‌ನ ನಟರಲ್ಲಿ ಅತ್ಯುತ್ತಮ ಡ್ಯಾನ್ಸರ್ ಎಂದು ಗುರುತಿಸಿಕೊಂಡವರು. ಇವರು ಬರೀ ನಟರಾಗಿಷ್ಟೇ ಅಲ್ಲ ನಿರೂಪಕರಾಗಿ, ಹಾಡುಗಾರರಾಗಿ, ಒಳ್ಳೆಯ ಡ್ಯಾನ್ಸರ್ ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರು.

1975, ಮೇ 17ರಂದು ಜನಿಸಿದ ಪುನೀತ್‌ ರಾಜ್‌ ರಾಜ್‌ ಕುಟುಂಬದ ಕಿರಿಯ ಸದಸ್ಯನಾಗಿದ್ದ ಕಾರಣಕ್ಕೆ ಮನೆಯವರಿಗೆ ಅವರೆಂದರೆ ತುಸು ಪ್ರೀತಿ ಅಧಿಕ. ಅಕ್ಕಅಣ್ಣಂದಿರ ಮುದ್ದಿನ ತಮ್ಮನಾಗಿದ್ದ ಪುನೀತ್‌ ರಾಜ್‌ಕುಮಾರ್‌ ಬಾಲ ನಟನಾಗಿ ಚಿತ್ರರಂಗಕ್ಕೆ ಪರಿಚಯವಾದ ಬಳಿಕ ಕರ್ನಾಟಕದ ಮನೆ ಮಗನಾದರು. ಅವರ ನಟನೆಗೆ ಕರ್ನಾಟಕ ಮರಳಾಗಿತ್ತು.

ನಂತರ ಅಪ್ಪು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ 'ಅಪ್ಪು' 49 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪ್ರತಿಯೊಂದು ಚಿತ್ರವೂ ಹಿಟ್ ಲಿಸ್ಟ್‌ಗೆ ಸೇರಿದೆ. ಇದೀಗ ಅವರಿಲ್ಲ ಎಂಬ ಸುದ್ದಿ ಕೇಳಿ ಚಂದನವನ ಸ್ತಬ್ಧವಾಗಿದೆ. ಕರ್ನಾಟಕ ಒಬ್ಬ ಪ್ರತಿಭಾವಂತ ಯುವ ನಟನ ಕಳೆದುಕೊಂಡಿದೆ.

ಪುನೀತ್‌ ಅವರ ಕುರಿತು ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ:

ಅಪ್ಪು:

ಅಪ್ಪು:

ಕನ್ನಡ ಚಿತ್ರರಂಗದಲ್ಲಿ ಅಪ್ಪು ಎಮದೇ ಕರೆಯಲ್ಪಡುವ ಪುನೀತ್‌ ಅವರಿಗೆ ಆ ಬಿರುದು ಕೊಟ್ಟಿರುವುದು ಅವರ ಅಭಿಮಾನಿಗಳು. 'ಅಪ್ಪು ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ 2002ರಲ್ಲಿ ನಾಯಕನಟನಾಗಿ ಬರುತ್ತಾರೆ. ಆ ಸಿನಿಮಾ ಸೂಪರ್‌ ಹಿಟ್‌ ಆಗುತ್ತೆ. ಅಲ್ಲಿಂದ ಪುನೀತ್‌ ರಾಜ್‌ಕುಮಾರ್‌ ಅನ್ನು ಎಲ್ಲರ ಪ್ರೀತಿಯ ಅಪ್ಪು ಆಗಿದೆ.

ಲೋಹಿತ್‌:

ಲೋಹಿತ್‌:

ಪುನೀತ್‌ ರಾಜ್‌ಕುಮಾರ್‌ ಚೆನ್ನೈನಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು ಲೋಹಿತ್‌.

ಮಗುವಾಗಿದ್ದಾಗಲೇ ಸಿನಿಮಾದಲ್ಲಿ ಕಾಣಿಸಿದ್ದ ಪುನೀತ್

ಮಗುವಾಗಿದ್ದಾಗಲೇ ಸಿನಿಮಾದಲ್ಲಿ ಕಾಣಿಸಿದ್ದ ಪುನೀತ್

ಎಲ್ಲರಿಗೆ ಪುನೀತ್‌ ಬಾಲ ನಟನಾಗಿದ್ದರು ಎಂಬುವುದು ಗೊತ್ತು. ಆದರೆ ಅವರು 6 ತಿಂಗಳ ಮಗುವಾಗಿದ್ದಾಗಲೇ ಸ್ಕ್ರೀನ್ ಮೇಲೆ ಕಾಣಿಸಿದರು ಎಂಬುವುದು ಹೆಚ್ಚಿನವರಿಗೆ ಗೊತ್ತಿಲ್ಲ. 1976ರಲ್ಲಿ ಬಿಡುಗಡೆಯಾದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಮಗುವಾಗಿದ್ದ ಪುನೀತ್‌ ಅವರನ್ನು ತೋರಿಸಲಾಗಿದೆ. ಅದರಲ್ಲಿ ಅವರ ತಂದೆ ವರನಟ ರಾಜ್‌ಕುಮಾರ್‌ ನಾಯಕ ಪಾತ್ರದಲ್ಲಿದ್ದರು. ಆ ಚಿತ್ರ ಬ್ಲಾಕ್‌ಬಸ್ಟರ್ ಆಗಿತ್ತು.

6ರ ಪ್ರಾಯದಲ್ಲಿಯೇ ಹಾಡು ಹಾಡಿದ್ದರು

6ರ ಪ್ರಾಯದಲ್ಲಿಯೇ ಹಾಡು ಹಾಡಿದ್ದರು

ಬೊಂಬೆ ಹೇಳತೈತೆ... ನಿನ್ನಿಂದಲೇ ಮುಂತಾದ ಹಾಡುಗಳಲ್ಲಿ ಪುನೀತ್‌ ರಾಜ್‌ಕುಮಾರ್ ಅವರ ಮಧುರ ಧ್ವನಿ ಕೇಳಿದ್ದೇವೆ. ಆದರೆ ಅವರು 6 ವರ್ಷ ಇರುವಾಗಲೇ ಹಾಡು ಹಾಡಿದ್ದಾರೆ. ಅವರ ಮೊದಲ ಹಾಡು ಬಾನ ಧರೆಯಲ್ಲಿ ಸೂರ್ಯ ಹಾಡನ್ನು ಹಾಡಿದ್ದಾರೆ. ಭಾಗ್ಯವಂತ ಚಿತ್ರದಲ್ಲಿ ಈ ಹಾಡು ಇದೆ, ಈ ಚಿತ್ರ 1982ರಲ್ಲಿ ಬಿಡುಗಡೆಯಾಗಿತ್ತು.

ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದ ಮೊದಲಿಗ

ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದ ಮೊದಲಿಗ

ಕನ್ನಡ ಚಿತ್ರರಂಗ ಇತಿಹಾಸದಲ್ಲಿಯೇ ಮೊದಲ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದವರು ಪುನೀತ್‌ ರಾಜ್‌ಕುಮಾರ್. 1982-83ರಲ್ಲಿ ಬಿಡುಗಡೆಯಾದ ಚಲಿಸುವ ಮೋಡಗಳು ಚಿತ್ರದಲ್ಲಿ ಇವರ ಅಭಿನಯಕ್ಕೆ ಆ ಪ್ರಶಸ್ತಿ ಲಭಿಸಿತು.

English summary

Puneeth Rajkumar Death; Interesting Facts about Kannada Actor in Kannada

Puneeth Rajkumar Death; Interesting Facts about Kannada Actor in Kannada,
Story first published: Friday, October 29, 2021, 16:03 [IST]
X
Desktop Bottom Promotion