For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷ 2021: ಪೂರ್ವಜರ ಆತ್ಮಶಾಂತಿಗಾಗಿ ಪಿತೃಪಕ್ಷದಂದು ಈ ಏಳು ವಸ್ತುಗಳನ್ನು ದಾನ ಮಾಡಿ

|

ಪಿತೃಪಕ್ಷವು ಸೆಪ್ಟೆಂಬರ್ 20ರಂದು ಆರಂಭವಾಗಲಿದೆ. ಹದಿನಾರು ದಿನಗಳ ಈ ಪಿತೃ ಪಕ್ಷದ ಅವಧಿಯಲ್ಲಿ ನಮ್ಮನ್ನಗಲಿದ ಹಿರಿಯರ ಅಥವಾ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳಲು ತರ್ಪಣ ನೀಡುವುದು ಪದ್ದತಿಯಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಪೂರ್ವಜರ ಆತ್ಮಗಳ ಶಾಂತಿಗಾಗಿ ಶ್ರಾದ್ಧದಂದು ಏಳು ವಸ್ತುಗಳನ್ನು ದಾನ ಮಾಡಬೇಕು. ಹಾಗಾದರೆ, ಆತ್ಮಗಳ ತೃಪ್ತಿಗಾಗಿ ಶ್ರಾದ್ಧಾ ಅಥವಾ ತರ್ಪಣ ನೀಡುವ ದಿನದಂದು ದಾನ ಮಾಡಬೇಕಾದ ಏಳು ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಪಿತೃಪಕ್ಷದ ತರ್ಪಣದಂದು ಪೂರ್ವಜರ ಶಾಂತಿಗಾಗಿ ದಾನ ಮಾಡಬೇಕಾದ ವಸ್ತುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಕಪ್ಪು ಎಳ್ಳು:

1. ಕಪ್ಪು ಎಳ್ಳು:

ಶ್ರಾದ್ಧದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು. ಇದರ ಫಲವನ್ನು ಪೂರ್ವಜರು ಹಾಗೂ ದಾನಿಗಳಿಬ್ಬರೂ ಪಡೆಯುತ್ತಾರೆ. ಪೂರ್ವಜರಿಗೆ ತರ್ಪಣ ನೀಡಿದ ದಾನ ಮಾಡುವಾಗ ಕೈಯಲ್ಲಿ ಕಪ್ಪು ಎಳ್ಳನ್ನು ಹಿಡಿದುಕೊಂಡಿರಬೇಕು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ನಿಮಗೆ ಇತರ ವಸ್ತುಗಳನ್ನು ದಾನ ಮಾಡಲು ಸಾಧ್ಯವಾಗದಿದ್ದರೂ, ಕಪ್ಪು ಎಳ್ಳನ್ನು ದಾನ ಮಾಡಬೇಕು. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ತೊಂದರೆಗಳು ಮತ್ತು ವಿಪತ್ತುಗಳಿಂದ ಪಾರಾಗಬಹುದು ಎಂಬ ನಂಬಿಕೆ ಜನರಲ್ಲಿದೆ. ವಿಷ್ಣುವಿಗೆ ಕಪ್ಪುಎಳ್ಳು ಪ್ರಿಯ ಜತೆಗೆ ಶನಿಯ ಸಂಕೇತವೂ ಹೌದು.

2.ಬೆಳ್ಳಿ:

2.ಬೆಳ್ಳಿ:

ಬೆಳ್ಳಿ ಲೋಹದಿಂದ ಮಾಡಿದ ಯಾವುದೇ ವಸ್ತುವನ್ನು ಶ್ರಾದ್ಧ ಸಮಯದಲ್ಲಿ ದಾನ ಮಾಡಬೇಕು. ಇದನ್ನು ಮಾಡುವುದರಿಂದ, ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುವುದರ ಜೊತೆಗೆ ಅವರ ಆಶೀರ್ವಾದವು ಸಿಗುತ್ತದೆ. ಇದರಿಂದಾಗಿ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಬೆಳ್ಳಿ ಚಂದ್ರನಿಗೆ ಸಂಬಂಧಿಸಿದೆ. ಅದಕ್ಕಾಗಿಯೇ ಶ್ರಾದ್ಧದಲ್ಲಿ ಬೆಳ್ಳಿ, ಅಕ್ಕಿ ಮತ್ತು ಹಾಲನ್ನ ನೀಡಿ, ಪೂರ್ವಜರನ್ನು ಸಂತೋಷಗೊಳಿಸುವುದು.

3. ಬಟ್ಟೆ:

3. ಬಟ್ಟೆ:

ತರ್ಪಣ ಆಚರಣೆಗಳ ಸಮಯದಲ್ಲಿ ಬಟ್ಟೆಗಳನ್ನು ದಾನ ಮಾಡಬೇಕು. ಶ್ರಾದ್ಧದಂದು ಧೋತಿ ಮತ್ತು ದುಪಟ್ಟವನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಗರುಡ ಪುರಾಣದ ಪ್ರಕಾರ, ನಮ್ಮಂತೆಯೇ, ನಮ್ಮ ಪೂರ್ವಜರ ಆತ್ಮವು ಋತುಗಳ ಬದಲಾವಣೆಯಿಂದ ಪ್ರಭಾವಿತವಾಗಿರುತ್ತದೆ. ಅವರು ಸಹ ಶೀತ ಮತ್ತು ಶಾಖವನ್ನು ಅನುಭವಿಸುತ್ತಾರೆ. ಆದ್ದರಿಂದ ಇವರು ತಮ್ಮ ವಂಶಸ್ಥರಿಂದ ಬಟ್ಟೆ ಇತ್ಯಾದಿಗಳನ್ನು ಬಯಸುತ್ತಾರೆ. ಆದ್ದರಿಂಬ ಬಟ್ಟೆ ದಾನ ಮಾಡಬೇಕು.

4. ಬೆಲ್ಲ ಮತ್ತು ಉಪ್ಪು:

4. ಬೆಲ್ಲ ಮತ್ತು ಉಪ್ಪು:

ಶ್ರಾದ್ಧದ ಸಮಯದಲ್ಲಿ ಬೆಲ್ಲ ಮತ್ತು ಉಪ್ಪನ್ನು ದಾನ ಮಾಡಬೇಕು. ಈ ಕಾರಣದಿಂದಾಗಿ, ಪೂರ್ವಜರ ಆತ್ಮಗಳು ಶಾಂತಿಯನ್ನು ಪಡೆಯುತ್ತವೆ ಮತ್ತು ಅವರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಧರ್ಮಗ್ರಂಥಗಳ ಪ್ರಕಾರ, ಉಪ್ಪನ್ನು ದಾನ ಮಾಡುವುದರಿಂದ ಯಮನ ಅಂದರೆ ಸಾವಿನ ಭಯ ಕೂಡ ದೂರವಾಗುತ್ತದೆ. ಮನೆ-ಸಂಕಷ್ಟವನ್ನು ಹೋಗಲಾಡಿಸಲು ಶ್ರಾದ್ಧದ ಸಮಯದಲ್ಲಿ ಈ ವಸ್ತುಗಳನ್ನು ದಾನ ಮಾಡಿ.

5. ಶೂ ಮತ್ತು ಚಪ್ಪಲಿ:

5. ಶೂ ಮತ್ತು ಚಪ್ಪಲಿ:

ಪೂರ್ವಜರ ಆತ್ಮದ ಶಾಂತಿಗಾಗಿ, ಶೂಗಳು ಮತ್ತು ಚಪ್ಪಲಿಗಳನ್ನು ದಾನ ಮಾಡಬೇಕು. ಇದನ್ನು ಧರಿಸುವುದರಿಂದ ಪೂರ್ವಜರು ಸಂತೋಷವಾಗಿರುತ್ತಾರೆ. ನಂಬಿಕೆಗಳ ಪ್ರಕಾರ, ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಮತ್ತು ಪೂರ್ವಜರ ಆತ್ಮಗಳು ಶಾಂತಿಯನ್ನು ಪಡೆಯುತ್ತವೆ.

6. ಛತ್ರಿ

6. ಛತ್ರಿ

ನಂಬಿಕೆಯ ಪ್ರಕಾರ, ಶ್ರಾದ್ಧದ ಸಮಯದಲ್ಲಿ ಛತ್ರವನ್ನು ದಾನ ಮಾಡುವುದು ಮಂಗಳಕರ. ಇದನ್ನು ಮಾಡುವುದರಿಂದ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಬರುತ್ತದೆ ಮತ್ತು ಪೂರ್ವಜರ ಆತ್ಮಗಳು ಶಾಂತಿಯನ್ನು ಪಡೆಯುತ್ತವೆ.

7.ಭೂಮಿ:

7.ಭೂಮಿ:

ಇಂದಿನ ಕಾಲದಲ್ಲಿ ಭೂಮಿಯನ್ನು ದಾನ ಮಾಡಲು ಸಾಧ್ಯವಿಲ್ಲ. ಆದರೆ ಶ್ರಾದ್ಧದ ಸಮಯದಲ್ಲಿ ಪೂರ್ವಜರ ಆತ್ಮಗಳ ಶಾಂತಿಗಾಗಿ ಭೂಮಿಯನ್ನು ದಾನ ಮಾಡಬೇಕು ಎಂದು ಹೇಳಲಾಗಿದೆ. ಗ್ರಂಥಗಳಲ್ಲಿ ಭೂದಾನವನ್ನು ಅತ್ಯುತ್ತಮ ದಾನವೆಂದು ಪರಿಗಣಿಸಲಾಗಿದೆ.

English summary

Pitru Paksha: Donate these Things During Pitru Paksha to Please Ancestors

Here we talking about Pitru Paksha 2021: Donate these things during pitru paksha to please ancestors, read on
Story first published: Wednesday, September 15, 2021, 18:00 [IST]
X