For Quick Alerts
ALLOW NOTIFICATIONS  
For Daily Alerts

ಜ. 2ರಂದು ಪೌಷ ಅಮವಾಸ್ಯೆ: ಈ ದಿನದ ವಿಶೇಷತೆಯೇನು?

|

ಹೊಸ ವರ್ಷದ ಮೊದಲ ಅಮವಾಸ್ಯೆ ಜನವರಿ 2ರಂದು ಬಂದಿದೆ. ಇದನ್ನು ಪೌಷ ಅಮವಾಸ್ಯೆ ಅಥವಾ ದರ್ಶ ಅಮವಾಸ್ಯೆಯೆಮದು ಕರೆಯಲಾಗುವುದು. ಈ ದಿನ ಯಾತ್ರ ಸ್ಥಳಗಳಿಗೆ ಬೇಟಿ ನೀಡಿದರೆ, ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ದಾನ ಮಾಡಿದರೆ ಒಳ್ಳೆಯದು. ಅಲ್ಲದೆ ಪಿತೃ ತರ್ಪಣ ಕಾರ್ಯ ಕೂಡ ಮಾಡಲಾಗುವುದು.

Paush Amavasya 2022

ಪೌಷ ಅಮವಾಸ್ಯೆ ಜನವರಿ 2 ಮುಂಜಾನೆ 03:42ರಿಂದ ಪ್ರಾರಂಭವಾಗಿದೆ, ಇಂದು ರಾತ್ರಿ 12:02ಕ್ಕೆ ಮುಕ್ತಾಯವಾಗುವುದು.

ಪೌಷ ಅಮವಾಸ್ಯೆಯ ಮಹತ್ವ
* ಪೌಷ ಅಮವಾಸ್ಯೆಯಂದು ಪೂರ್ವಜರಿಗೆ ತರ್ಪಣವನ್ನು ಅರ್ಪಿಸುವುದರ ವಿಶೇಷ ಮಹತ್ವವಿದೆ. ಆದ್ದರಿಂದ, ಈ ದಿನ, ಪವಿತ್ರ ನದಿ ಅಥವಾ ಕೊಳ ಇತ್ಯಾದಿಗಳಲ್ಲಿ ಸ್ನಾನ ಮಾಡಿ ತರ್ಪಣ ಅರ್ಪಿಸಲಾಗುವುದು.
* ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುವುದು, ಜಾತಕದಲ್ಲಿ ಪಿತೃ ದೋಷವಿದ್ದರೆ ಅದು ನಿವಾರಣೆಯಾಗುವುದು.
* ಸಂತಾನ ಭಾಗ್ಯ ಉಂಟಾಗುವುದು
* ಈ ಅಮವಾಸ್ಯೆಯಂದು ವ್ರತ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು.

ಪೌಷ ಅಮವಾಸ್ಯೆಯ ಧಾರ್ಮಿಕ ಮಹತ್ವ
ಜ್ಯೋತಿಷ್ಯದ ಪ್ರಕಾರ, ಪೌಷ ಮಾಸದ ಅಮವಾಸ್ಯೆಯು ತುಂಬಾ ಪುಣ್ಯಕಾರಿ ಮತ್ತು ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗೆ ಈ ತಿಂಗಳು ಉತ್ತಮವಾಗಿದೆ. ಪೌಷ ಅಮವಾಸ್ಯೆಯಂದು ಪೂರ್ವಜರ ಶಾಂತಿಗಾಗಿ ಉಪವಾಸ ಮಾಡುವುದರಿಂದ ಪೂರ್ವಜರಿಗೆ ಸಂತೋಷವಾಗುವುದಲ್ಲದೆ, ಬ್ರಹ್ಮ, ಇಂದ್ರ, ಸೂರ್ಯ, ಅಗ್ನಿ, ವಾಯು, ಋಷಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಮತ್ತು ಪ್ರೇತಗಳು ಸಹ ಸಂತೃಪ್ತರಾಗುತ್ತಾರೆ. ಪೌಷ್ ತಿಂಗಳ ಹವಾಮಾನ ಬದಲಾವಣೆಯ ಆಧಾರದ ಮೇಲೆ, ಮುಂಬರುವ ವರ್ಷದಲ್ಲಿ ಮಳೆಯನ್ನು ಊಹಿಸಬಹುದು.

English summary

Paush Amavasya 2022:Date And Significance, Importance

Paush Amavasya 2022:Date And Significance, Importance, Read on...
Story first published: Sunday, January 2, 2022, 19:47 [IST]
X
Desktop Bottom Promotion