For Quick Alerts
ALLOW NOTIFICATIONS  
For Daily Alerts

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜೀವನಕ್ಕೆ ಅದೃಷ್ಟ ತರುವ ಮೊಬೈಲ್ ವಾಲ್ಪೇಪರ್ ಯಾವುದು?

|

ನಾವು ಸಾಮಾನ್ಯವಾಗಿ ನಮಗಿಷ್ಟವಾದ ವಾಲ್ಪೇಪರ್ನ್ನು ನಮ್ಮ ಮೊಬೈಲ್ ಡಿಸ್ಪ್ಲೇಗೆ ಹಾಕಿಕೊಂಡಿರುತ್ತೇವೆ. ಆ ಡಿಸ್ಪ್ಲೇ ನೋಡಿಕೊಂಡೇ, ನಮ್ಮ ದಿನ ಶುರುವಾಗುವುದು, ದಿನ ಮುಗಿಯುವುದೂ ಕೂಡ. ಆದರೆ ನಿಮ್ಮ ಫೋನ್ಗಳ ಡಿಸ್ಪ್ಲೇ ಚಿತ್ರವು ಕಣ್ಣಿಗೆ ಆಹ್ಲಾದಕತೆಯನ್ನು ನೀಡುವುದರ ಜೊತೆಗೆ ನಮ್ಮ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂಬುದು ತಿಳಿದಿದೆಯೇ?

ಹೌದು, ನೀವು ಮೊಬೈಲ್ಗೆ ಹಾಕಿಕೊಂಡ ವಾಲ್ಪೇಪರ್ಗೂ, ಅದೃಷ್ಟಕ್ಕೂ ಸಂಬಂಧವಿದೆ ಎನ್ನುತ್ತದೆ ಸಂಖ್ಯಾಶಾಸ್ತ್ರ. ಈ ವಾಲ್ಪೇಪರ್ ನಮ್ಮ ಫೋನ್ಗಳಲ್ಲಿ ಸುಂದರವಾಗಿ ಕಾಣುವುದಕ್ಕಿಂತ ದೊಡ್ಡ ಪ್ರಮಾಣದಲ್ಲಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ, ಸಂಖ್ಯಾಶಾಸ್ತ್ರದ ಪ್ರಕಾರ, ಉತ್ತಮ ಜೀವನ ಹಾಗೂ ಅದೃಷ್ಟಕ್ಕಾಗಿ ಯಾವ ರೀತಿಯ ವಾಲ್ಪೇಪರ್ ಹಾಕಿಕೊಳ್ಳುವುದು ಸೂಕ್ತ ಎಂಬುದನ್ನು ಇಲ್ಲಿ ನೋಡೋಣ.

ಸಂಖ್ಯಾಶಾಸ್ತ್ರದ ಪ್ರಕಾರ, ಜೀವನ ಪಥ ಸಂಖ್ಯೆಯನ್ನು ಆಧರಿಸಿ ನಿಮ್ಮ ಮೊಬೈಲ್ ವಾಲ್ಪೇಪರ್ ಅನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಂಖ್ಯಾಶಾಸ್ತ್ರದ ಪ್ರಕಾರ, ಜೀವನ ಪಥ ಸಂಖ್ಯೆಯನ್ನು ಆಧರಿಸಿ ನಿಮ್ಮ ಮೊಬೈಲ್ ವಾಲ್ಪೇಪರ್ ಅನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸರಳವಾಗಿ ಹೇಳುವುದಾದರೆ, ವಾಲ್ಪೇಪರ್ ನಿಮ್ಮ ಮೆದುಳಿನ ಪ್ರಜ್ಞಾಹೀನ ಭಾಗಗಳನ್ನು ಒತ್ತುವ ಕೀಲಿಯಾಗಿದ್ದು, ನಮ್ಮ ಫೋನ್ಗಳನ್ನು ಬಳಸುವಾಗ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುತ್ತದೆ. ಆದ್ದರಿಂದ, ವಾಲ್ಪೇಪರ್ ಒಬ್ಬ ವ್ಯಕ್ತಿ ಯ ಆದ್ಯತೆಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡುತ್ತದೆ. ವಾಲ್ಪೇಪರ್ಗಳಲ್ಲಿ ನಮ್ಮ ಕುಟುಂಬ, ನಾವು ಮೆಚ್ಚುವ ವ್ಯಕ್ತಿ, ದೇವರು, ಪ್ರಕೃತಿ ಇತ್ಯಾದಿಗಳ ಚಿತ್ರವಿರಬಹುದು. ಈ ವಾಲ್ಪೇಪರ್ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಎರಡೂ ರೀತಿಯಲ್ಲಿ ಪರಿಣಾಮ ಬೀರಬಹುದು. ಅದಕ್ಕಾಗಿಯೇ ವಾಲ್ಪೇಪರ್ ಅನ್ನು ನಮ್ಮ ಜೀವನಪಥ ಸಂಖ್ಯೆಯಂತೆ ಇಡುವುದು ಅವಶ್ಯಕ.

ಜೀವನ ಪಥ ಸಂಖ್ಯೆ ಎಂದರೇನು ಮತ್ತು ನಿಮ್ಮ ಜೀವನಪಥ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುವುದು?

ಜೀವನಪಥ ಸಂಖ್ಯೆಯು ನಮ್ಮ ಜನ್ಮ ದಿನಾಂಕದಲ್ಲಿನ ಎಲ್ಲಾ ಸಂಖ್ಯೆಗಳನ್ನು ಒಂದೊಂದಾಗಿ ಕೂಡಿಸುವುದರ ಮೂಲಕ ಪಡೆಯುವ ಅಂತಿಮ ಒಂದಂಕಿಯ ಸಂಖ್ಯೆಯಾಗಿದೆ.

ಉದಾಹರಣೆಗೆ: ನಿಮ್ಮ ಜನ್ಮ ದಿನಾಂಕವು 14/09/1990 ಆಗಿದ್ದರೆ, ಅದು 1+4+0+9+1+9+9+0 = 33,3+3= 6

ಇಲ್ಲಿ 6 ಜೀವನ ಪಥ ಸಂಖ್ಯೆ ಆಗಿರುತ್ತದೆ.

ಹೀಗೆ ವಿವಿಧ ಜೀವನ ಪಥ ಸಂಖ್ಯೆಗೆ ಯಾವ ವಾಲ್ಪೇಪರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ:

ಜೀವನ ಪಥ ಸಂಖ್ಯೆ 1 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 1 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ ಒಂದನ್ನು ಹೊಂದಿರುವ ಜನರು ಉದಯಿಸುತ್ತಿರುವ ಸೂರ್ಯನ ವಾಲ್ಪೇಪರ್ ಅಥವಾ ಅವರ ತಂದೆಯೊಂದಿಗಿರುವ ಚಿತ್ರವನ್ನು ಆಯ್ಕೆ ಮಾಡಲು ಆದ್ಯತೆ ನೀಡಬೇಕು. ಪರ್ಯಾಯವಾಗಿ, ಇವರು ಗುಲಾಬಿ ಅಥವಾ ಹಳದಿ ಬಣ್ಣದ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು.

ಜೀವನ ಪಥ ಸಂಖ್ಯೆ 2 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 2 ಗಾಗಿ ವಾಲ್ಪೇಪರ್:

ಡೆಸ್ಟಿನಿ ಸಂಖ್ಯೆ 2 ಹೊಂದಿರುವ ಜನರು ಹುಣ್ಣಿಮೆಯ ವಾಲ್ಪೇಪರ್ ಚಿತ್ರಕ್ಕೆ ಆದ್ಯತೆ ನೀಡಬೇಕು ಅಥವಾ ಅವರ ತಾಯಿಯೊಂದಿಗಿನ ಚಿತ್ರ. ಪರ್ಯಾಯವಾಗಿ, ಇವರು ಬಿಳಿ ಅಥವಾ ಬೆಳ್ಳಿಯ ಬಣ್ಣದ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಈ ಜನರು ಕಣ್ಣುಗಳಿಗೆ ಹಿತವಾದ ವಾಲ್ಪೇಪರ್ಗೆ ಆದ್ಯತೆ ನೀಡಬೇಕು.

ಜೀವನ ಪಥ ಸಂಖ್ಯೆ 3 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 3 ಗಾಗಿ ವಾಲ್ಪೇಪರ್:

ಜೀವನ ಪಥ ಸಂಜ್ಯೆ 3 ಇರುವವರು ಧಾರ್ಮಿಕ ಸ್ಥಳ ಅಥವಾ ಗ್ರಂಥಾಲಯದ ವಾಲ್ಪೇಪರ್ ಅನ್ನು ಆಯ್ಕೆ ಮಾಡಲು ಆದ್ಯತೆ ನೀಡಬೇಕು ಅಥವಾ ಕುಟುಂಬದ ಹಿರಿಯರೊಂದಿಗಿನ ತಮ್ಮ ಚಿತ್ರ. ಪರ್ಯಾಯವಾಗಿ, ಇವರು ಹಳದಿ ಅಥವಾ ಗೋಲ್ಡನ್ ಬಣ್ಣದ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು. ಈ ಬಣ್ಣದ ಹೂವುಗಳಿರುವ ಚಿತ್ರವಾದರೂ ಉತ್ತಮ.

ಜೀವನ ಪಥ ಸಂಖ್ಯೆ 4 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 4 ಗಾಗಿ ವಾಲ್ಪೇಪರ್:

ನಿಮ್ಮ ಜೀವನ ಪಥ ಸಂಖ್ಯೆ 4 ಆಗಿದ್ದರೆ, ಪರ್ವತಗಳ ವಾಲ್ಪೇಪರ್ (ಹಿಮವಿಲ್ಲದ), ಹಸಿರು ಕಾಡು ಅಥವಾ ಅಜ್ಜ/ಅಜ್ಜಿಯೊಂದಿಗಿನ ಚಿತ್ರಗಳನ್ನು ಆಯ್ಕೆ ಮಾಡಬೇಕು. ಪರ್ಯಾಯವಾಗಿ, ಇವರು ತಿಳಿ ನೀಲಿ ಅಥವಾ ಬೂದು ಬಣ್ಣದ ಘನ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು.

ಜೀವನ ಪಥ ಸಂಖ್ಯೆ 5 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 5 ಗಾಗಿ ವಾಲ್ಪೇಪರ್:

5 ನೇ ಸಂಖ್ಯೆಯನ್ನು ಹೊಂದಿರುವ ಜನರು ಹಸಿರು ಕಾಡಿನ ವಾಲ್ಪೇಪರ್ ಅಥವಾ ಸಹೋದರಿ ಇರುವ ಚಿತ್ರವನ್ನು ಆಯ್ಕೆ ಮಾಡಲು ಆದ್ಯತೆ ನೀಡಬೇಕು. ಜೊತೆಗೆ ತಿಳಿ ಹಸಿರು ಅಥವಾ ನೀಲಿ ಬಣ್ಣದ ಘನ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು. ಐದನೇ ಸಂಖ್ಯೆಗೆ, ಸ್ಕ್ರೀನ್ ಸೇವರ್ ಆಗಿ ಇರಿಸಿಕೊಳ್ಳಲು ಬಿದಿರು ಅತ್ಯುತ್ತಮ ಆಯ್ಕೆಯಾಗಿದೆ.

ಜೀವನ ಪಥ ಸಂಖ್ಯೆ 6 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 6 ಗಾಗಿ ವಾಲ್ಪೇಪರ್:

ಸಂಗಾತಿ, ಕುಟುಂಬ, ಕರೆನ್ಸಿ ಅಥವಾ ವಜ್ರದೊಂದಿಗಿನ ಚಿತ್ರದ ವಾಲ್ಪೇಪರ್ನ ಆಯ್ಕೆಗೆ ಜೀವನ ಪಥ ಸಂಖ್ಯೆ 6 ಇರುವ ಜನರು ಆದ್ಯತೆ ನೀಡಬೇಕು. ಬದಲಾಗಿ, ನೀಲಿ ಬಣ್ಣದ ಘನ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು.

ಜೀವನ ಪಥ ಸಂಖ್ಯೆ 7 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 7 ಗಾಗಿ ವಾಲ್ಪೇಪರ್:

ಹಿಮವಿರುವ ಪರ್ವತದ ತುದಿ, ಯಾವುದೇ ಧಾರ್ಮಿಕ ದೇವಾಲಯದ ಮೇಲ್ಭಾಗ, ಧ್ವಜ ಅಥವಾ ಅಜ್ಜ/ಅಜ್ಜಿಯೊಂದಿಗಿನ ಚಿತ್ರಗಳು ಜೀವನ ಪಥ ಸಂಖ್ಯೆ 7 ರ ಜನರಿಗೆ ಅತ್ಯುತ್ತಮ ಆಯ್ಕೆಗಳಾಗಿವೆ. ಜೊತೆಗೆ ತಿಳಿ ಹಸಿರು ಅಥವಾ ಬಿಳಿ ಬಣ್ಣದ ಘನ ವಾಲ್ಪೇಪರ್ ಅನ್ನು ಸಹ ಆರಿಸಿಕೊಳ್ಳಬಹುದು. ಸಂಖ್ಯೆ 7 ಜನರು ಹೆಚ್ಚು ಆಧ್ಯಾತ್ಮಿಕವಾಗಿರುವುದರಿಂದ, ಅವರು ಅಂತಹ ಆಧ್ಯಾತ್ಮಿಕ ವಾಲ್ಪೇಪರ್ಗಳನ್ನು ಇಟ್ಟುಕೊಳ್ಳಬಹುದು.

ಜೀವನ ಪಥ ಸಂಖ್ಯೆ 8 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 8 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 8 ಅನ್ನು ಹೊಂದಿರುವ ಜನರು ತಮ್ಮ ಅಥವಾ ಅವರನ್ನು ಹೆಚ್ಚು ಪ್ರೇರೇಪಿಸುವ ಯಾವುದೇ ವ್ಯಕ್ತಿಯ ದೈಹಿಕ ವ್ಯಾಯಾಮದ ವಾಲ್ಪೇಪರ್ ಅನ್ನು ಆರಿಸಿಕೊಳ್ಳಬೇಕು ಅಥವಾ ಬೂದು ಅಥವಾ ನೇರಳೆ ಬಣ್ಣದ ಘನ ವಾಲ್ಪೇಪರ್ ಅನ್ನು ಸಹ ಆಯ್ಕೆ ಮಾಡಬಹುದು.

ಜೀವನ ಪಥ ಸಂಖ್ಯೆ 9 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 9 ಗಾಗಿ ವಾಲ್ಪೇಪರ್:

ಜೀವನ ಪಥ ಸಂಖ್ಯೆ 9 ಇರುವ ಜನರು ತಮ್ಮ ಫೋನ್ ಪರದೆಯಲ್ಲಿ ಕೆಂಪು ಜಾಸ್ಪರ್ ಅಥವಾ ಕೆಂಪು ಎಲೆಗಳನ್ನು ಹೊಂದಿರುವ ಕಾಡಿನ ವಾಲ್ಪೇಪರ್ ಅಥವಾ ಕೆಂಪು ಗುಲಾಬಿಯ ಚಿತ್ರವನ್ನು ಹಾಕಿಕೊಳ್ಳಬೇಕು. ಜೊತೆಗೆ ಗುಲಾಬಿ ಬಣ್ಣ, ಕೆಂಪು ಬಣ್ಣದ ಘನ ವಾಲ್ಪೇಪರ್ ಅನ್ನು ಸಹ ಆರಿಸಿಕೊಳ್ಳಬಹುದು.

ಮೇಲಿನ ಸಲಹೆಗಳು ವ್ಯಕ್ತಿಯ ಜೀವನ ಪಥ ಸಂಖ್ಯೆಯನ್ನು ಆಧರಿಸಿವೆ. ಇದನ್ನು ಅನುಸರಿಸುವ ಮೂಲಕ, ಜೀವನದಲ್ಲಿ ಸಮೃದ್ಧಿ ಮತ್ತು ಸಮೃದ್ದಿ ಬರುವುದು.

English summary

Numerology: How Your Phone Wallpaper Can Bring Luck, Love, And Money in Your Life in Kannada

Here we talking about Numerology: How Your Phone Wallpaper Can Bring Luck, Love, And Money in Your Life in Kannada, read on
X
Desktop Bottom Promotion