For Quick Alerts
ALLOW NOTIFICATIONS  
For Daily Alerts

ನೀವು ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಎಂತಹುದು ಎಂಬುದನ್ನು ತಿಳಿಯಿರಿ

|

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ಜನ್ಮದಿನಾಂಕ ಎಷ್ಟು ಮುಖ್ಯವೋ, ಅಷ್ಟೇ ನಮ್ಮ ಜನ್ಮವಾರವೂ ಮುಖ್ಯವಾಗಿರುತ್ತದೆ. ನಾವು ಹುಟ್ಟಿದ ವಾರವೂ ಸಹಿತ ನಮ್ಮ ವ್ಯಕ್ತಿತ್ವ, ನಡೆ-ನುಡಿ, ಜೀವನ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಅದಕ್ಕಾಗಿ ನಾವಿಂದು ಯಾವ ವಾರದ ಹುಟ್ಟಿದ ಜನರ ವ್ಯಕ್ತಿತ್ವ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಹೇಳಲಿದ್ದೇವೆ. ಈ ಮೂಲಕ ನಿಮ್ಮ ಪ್ರೀತಿಪಾತ್ರರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬಹುದು.

ಹುಟ್ಟಿದ ವಾರದ ಪ್ರಕಾರ ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಭಾನುವಾರ :

ಭಾನುವಾರ :

ಸೂರ್ಯನು ಭಾನುವಾರ ಜನಿಸಿದ ಜನರನ್ನು ಆಳುವವನಾಗಿದ್ದು, ಈ ಜನರು ಅತ್ಯಂತ ಪ್ರತಿಭಾವಂತರಾಗಿರುತ್ತಾರೆ. ಇವರು ಸೃಜನಶೀಲ ಗುಣವನ್ನು ಹೊಂದಿದ್ದು, ಪ್ರಪಂಚದಲ್ಲಿ ತಮ್ಮದೇ ಛಾಪನ್ನು ಮೂಡಿಸಲು ಬಯಸುತ್ತಾರೆ. ಸಾಹಸ ಮತ್ತು ಪ್ರಾಮಾಣಿಕತೆಯನ್ನು ಪ್ರೀತಿಸುವವರಾಗಿದ್ದು, ದಯೆ ಮತ್ತು ಉದಾರತೆಯನ್ನು ಹೊಂದಿರುತ್ತಾರೆ.

ಈ ದಿನ ಜನಿಸಿದ ಜನರು ಜೀವನವನ್ನು ಪೂರ್ಣವಾಗಿ ಆನಂದಿಸಲು ಬಯಸುತ್ತಾರೆ. ಇವರು ಉತ್ಸಾಹಭರಿತರಾಗಿದ್ದು, ಇದು ಕೆಲವೊಮ್ಮೆ ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ಬೇಗನೇ ಎಲ್ಲರ ಗಮನ ಸೆಳೆಯುವ ಶಕ್ತಿ ಹೊಂದಿದ್ದು, ಯಾರನ್ನು ಬೇಕಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ.

ಅದೃಷ್ಟವನ್ನು ಹೆಚ್ಚಿಸಲು ಸಲಹೆ: ನಿಮ್ಮ ಅದೃಷ್ಟಕ್ಕೆ ಹೊಸ ಚೈತನ್ಯವನ್ನು ನೀಡಲು ಜನ್ಮದಿನದಂದು ಏನನ್ನಾದರೂ ಉಡುಗೊರೆಯಾಗಿ ನೀಡಿ

ಸೋಮವಾರ :

ಸೋಮವಾರ :

ಚಂದ್ರನು ಸೋಮವಾರ ಜನಿಸಿದ ಜನರನ್ನು ಆಳುತ್ತಾನೆ ಆದ್ದರಿಂದ ಚಂದ್ರನಂತೆಯೇ ಇವರು ಶಾಂತವಾಗಿರುತ್ತಾರೆ ಮತ್ತು ಅವರ ಕೌಟುಂಬಿಕ ಜೀವನದಲ್ಲಿ ಭದ್ರಕೋಟೆಯನ್ನು ಹೊಂದಿರುತ್ತಾರೆ. ದಯೆ, ಉದಾರತೆ, ಹೊಂದಾಣಿಕೆಗೆ ಇವರು ಎತ್ತಿದ ಕೈ. ಇವರು ತಮ್ಮ ತಾಯಂದಿರು ಮತ್ತು ಮಹಿಳೆಯರಿಗೆ ಹೆಚ್ಚು ಅಂಟಿಕೊಳ್ಳುತ್ತಾರೆ, ಅದಕ್ಕಾಗಿಯೇ ಇವರು ಬಹಳ ಕಾಳಜಿಯುಳ್ಳ ಸ್ವಭಾವವನ್ನು ಹೊಂದಿರುವುದು. ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕಾಗಿ, ಈ ದಿನ ಜನಿಸಿದ ಜನರು ಸೋಮವಾರ ಶಿವ ಮತ್ತು ಗಣೇಶನನ್ನು ಪೂಜಿಸುವುದು ಒಳ್ಳೆಯದು.

ಅದೃಷ್ಟವನ್ನು ಹೆಚ್ಚಿಸಲು ಸಲಹೆ: ನಿಮ್ಮ ಅದೃಷ್ಟಕ್ಕೆ ಹೊಸ ಹುಮ್ಮಸ್ಸು ನೀಡಲು ಪ್ರತಿ ಜನ್ಮದಿನದಂದು ನಿಮ್ಮ ತಾಯಿಗೆ ಬೆಳ್ಳಿಯಿಂದ ಮಾಡಿದ ಏನನ್ನಾದರೂ ಉಡುಗೊರೆಯಾಗಿ ನೀಡಿ.

ಮಂಗಳವಾರ :

ಮಂಗಳವಾರ :

ಮಂಗಳವಾರ ಜನಿಸಿದ ಜನರು ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ ಅಂದರೆ ಅವರು ಬಲವಾದ ಇಚ್ಛಾಶಕ್ತಿ ಹೊಂದಿರುವ ಜನರಾಗಿದ್ದು, ಕಠಿಣ ಸಂದರ್ಭಗಳಲ್ಲಿ ಹೋರಾಟಕ್ಕೆ ತಯಾರಿರುವವರು, ಎಂದಿಗೂ ಬಿಟ್ಟುಕೊಡುವುದಿಲ್ಲ, ಸಮಸ್ಯೆಗೆ ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಉತ್ಸಾಹಭರಿತ ಜೀವನ ವಿಧಾನ ಹೊಂದಿರುವ ಇವರು ತಮ್ಮ ಸುತ್ತಲಿನ ಜನರನ್ನು ಯಾವತ್ತಿಗೂ ಬೋರ್ ಮಾಡುವುದದಿಲ್ಲ. ಅದಕ್ಕಾಗಿ ಇವರು ಹೆಚ್ಚಾಗಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಅದೃಷ್ಟವನ್ನು ಹೆಚ್ಚಿಸಲು ಸಲಹೆಗ: ನಿಮ್ಮ ಜನ್ಮದಿನದಂದು ನಿಮ್ಮ ಅಣ್ಣನಿಗೆ ಏನಾದರೂ ಉಡುಗೊರೆ ನೀಡಿ ನಿಮ್ಮ ಅದೃಷ್ಟಕ್ಕೆ ಹೊಸ ಹುಮ್ಮಸ್ಸು ನೀಡಿ.

ಬುಧವಾರ :

ಬುಧವಾರ :

ಬುಧವಾರ ಜನಿಸಿದ ಜನರು ಬುಧನಿಂದ ಆಳಲ್ಪಡುತ್ತಾರೆ ಆದ್ದರಿಂದ ಇವರು ತುಂಬಾ ಜಿಜ್ಞಾಸೆ ಮತ್ತು ತಮ್ಮ ಸುತ್ತಲಿನ ಎಲ್ಲವನ್ನು ಪ್ರಶ್ನಿಸುತ್ತಾರೆ. ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದ್ದು, ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಇವರು ಸ್ವತಂತ್ರ ಮನೋಭಾವದವರಾಗಿದ್ದು, ಅಜಾಗರೂಕರಾಗಿರುವುದಕ್ಕೆ ಕೆಲವೊಮ್ಮೆ ಕಷ್ಟಪಡುತ್ತಾರೆ. ಬುಧವಾರ ಹುಟ್ಟಿದವರು ತೀಕ್ಷ್ಣ ಕಲಿಯುವವರಾಗಿದ್ದು, ಜೀವನದಲ್ಲಿ ಹೊಸ ವಿಚಾರಗಳನ್ನು ಯಾವಾಗಲೂ ಕಲಿಯಲು ಬಯಸುತ್ತಾರೆ. ಇವರ ಬುದ್ಧಿವಂತಿಕೆಯಿಂದ ತೊಂದರೆಗಳಿಲ್ಲದೆ ಸವಾಲುಗಳನ್ನು ನಿಭಾಯಿಸಬಹುದು. ಅವರ ಅದೃಷ್ಟ ಸಂಖ್ಯೆ ಐದು ಮತ್ತು ಅವರ ಹುಟ್ಟಿದ ದಿನದ ಪ್ರಕಾರ, ಅವರು ಸಂತೋಷದ ಮತ್ತು ಸಮೃದ್ಧ ಜೀವನಕ್ಕಾಗಿ ಬುಧವಾರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಬೇಕು.

ಅದೃಷ್ಟವನ್ನು ಹೆಚ್ಚಿಸಲು ಸಲಹೆ: ನಿಮ್ಮ ಅದೃಷ್ಟಕ್ಕೆ ನಿಮ್ಮ ಸಹೋದರಿಗೆ ಪ್ರತಿ ಜನ್ಮದಿನದಂದು ಏನನ್ನಾದರೂ ಉಡುಗೊರೆಯಾಗಿ ನೀಡಿ.

ಗುರುವಾರ :

ಗುರುವಾರ :

ಗುರುವಾರ ಜನಿಸಿದ ಜನರು ಗುರುಗ್ರಹದಿಂದ ಆಳಲ್ಪಡುತ್ತಾರೆ ಇದು ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹವಾಗಿದೆ. ಇವರು ಬಲವಾದ ದೃಢನಿರ್ಧಾರವನ್ನು ಹೊಂದಿದ್ದು, ಜೀವನದಲ್ಲಿ ಬೆಳವಣಿಗೆ, ಸಮೃದ್ಧಿಯ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಅವರು ಆಶಾವಾದಿ ಧೋರಣೆಯನ್ನು ಹೊಂದಿದ್ದು, ಇತರರ ಕಡೆಗೆ ಉದಾರ ಮತ್ತು ದಯೆ ಹೊಂದಿರುತ್ತಾರೆ. ಅವರು ಜನ್ಮತಃ ಶಿಕ್ಷಕರು ಮತ್ತು ಮುಕ್ತ ಮನೋಭಾವದ ವಿದ್ಯಾರ್ಥಿಗಳಾಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಅದೃಷ್ಟವನ್ನು ಹೆಚ್ಚಿಸಲು ಸಲಹೆ: ಅದೃಷ್ಟಕ್ಕಾಗಿ ಪ್ರತಿ ಜನ್ಮದಿನದಂದು ಯಾವುದೇ ಧಾರ್ಮಿಕ ಸ್ಥಳಕ್ಕೆ ಹಳದಿ ಬಣ್ಣವನ್ನು ದಾನ ಮಾಡಿ.

ಶುಕ್ರವಾರ :

ಶುಕ್ರವಾರ :

ಶುಕ್ರನು ಶುಕ್ರವಾರ ಜನಿಸಿದವರನ್ನು ಆಳುತ್ತಾನೆ ಅಂದರೆ ಅಂತಹ ವ್ಯಕ್ತಿಗಳು ಪ್ರೀತಿ ಮತ್ತು ವಾತ್ಸಲ್ಯಕ್ಕೆ ಹೆಸರಾಗಿದ್ದಾರೆ. ಇವರು ಕಲಾತ್ಮಕ ವ್ಯಕ್ತಿಗಳಾಗಿದ್ದು, ಅವರ ಬಂಧಗಳನ್ನು, ವಿಶೇಷವಾಗಿ ಪ್ರಣಯವನ್ನು ಮೆಚ್ಚುತ್ತಾರೆ. ಜೊತೆಗೆ ಆಕರ್ಷಕ ವ್ಯಕ್ತಿತ್ವಗಳನ್ನು ಹೊಂದಿದ್ದು, ಬಹುತೇಕ ಎಲ್ಲರನ್ನೂ ಆಕರ್ಷಿಸಬಹುದು. ಇವರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ ಜೊತೆಗೆ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪಾಲುದಾರಿಕೆಯನ್ನು ಗೌರವಿಸುತ್ತಾರೆ.

ಅದೃಷ್ಟವನ್ನು ಹೆಚ್ಚಿಸಲು ಸಲಹೆ: ಅದೃಷ್ಟಕ್ಕಾಗಿ ನಿಮ್ಮ ಸಂಗಾತಿಗೆ ಪ್ರತಿ ಜನ್ಮದಿನದಂದು ಏನನ್ನಾದರೂ ಉಡುಗೊರೆಯಾಗಿ ನೀಡಿ.

ಶನಿವಾರ :

ಶನಿವಾರ :

ಶನಿವಾರ ಜನಿಸಿದ ಜನರು ಶನಿ ಗ್ರಹದ ಪ್ರಭಾವದಿಂದ ಜನಿಸುತ್ತಾರೆ. ಇವರ ಹೋರಾಟಗಳು ನಿರಂತರವಾಗಿರುತ್ತವೆ, ಅದು ಅವರನ್ನು ಬಲಶಾಲಿಯನ್ನಾಗಿ ಮಾಡುತ್ತದೆ. ಇವರು ಬುದ್ಧಿವಂತರು ಮತ್ತು ಪ್ರಾಯೋಗಿಕ ವ್ಯಕ್ತಿತ್ವ ಹೊಂದಿದವರು, ಜೊತೆಗೆ ಜೀವನದಲ್ಲಿ ಕಟ್ಟುನಿಟ್ಟಾದ ಗಡಿಗಳನ್ನು ಹೊಂದಿದ್ದಾರೆ ಮತ್ತು ಹೆಚ್ಚು ಶಿಸ್ತಿನವರು. ಅಹಂಕಾರವುಳ್ಳರವರಂತೆ ಹೊರಗೆ ಕಾಣಬಹುದು ಆದರೆ ಉತ್ತಮ ಸ್ನೇಹಿತರು. ಅವರು ಜೀವನದಲ್ಲಿ ದಾನಗಳನ್ನು ಮಾಡಬೇಕು ಆದ್ದರಿಂದ ಅವರು ಜೀವನದಲ್ಲಿ ಕಡಿಮೆ ಹೋರಾಟಗಳನ್ನು ಎದುರಿಸುತ್ತಾರೆ.

ಅದೃಷ್ಟವನ್ನು ಹೆಚ್ಚಿಸಲು ಸಲಹೆ: ಅದೃಷ್ಟಕ್ಕಾಗಿ ಪ್ರತಿ ಹುಟ್ಟುಹಬ್ಬದಂದು ವೃದ್ಧರಿಗೆ ಏನಾದರೂ ದಾನ ಮಾಡಿ.

English summary

Numerology: How to Decode Someone’s Personality by Date of Birth in Kannada

Here we talking about Numerology: How to Decode Someone’s Personality by Date of Birth in Kannada, read on
Story first published: Tuesday, September 21, 2021, 17:39 [IST]
X
Desktop Bottom Promotion