Just In
- 6 min ago
ಮಳೆಗಾಲದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಅಪಾಯಕಾರಿ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ
- 1 hr ago
ಒಟ್ಟಿಗೆ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಇತಿಹಾಸ ಬರೆದ ಅಪ್ಪ-ಮಗಳು
- 2 hrs ago
ಮಾನ್ಸೂನ್ನಲ್ಲಿ ಕಾಡುವ ಈ ತ್ವಚೆಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
- 5 hrs ago
ಕಾಂಟಾಕ್ಟ್ ಲೆನ್ಸ್ ಹಾಕಿಯೇ ಮಲಗೋದ್ರಿಂದ ಏನಾಗುತ್ತೆ ಗೊತ್ತಾ..? ಈ ತಪ್ಪು ಮಾಡಲೇಬೇಡಿ..!
Don't Miss
- News
ಸ್ವಂತವಾಗಿ ಬೆಳೆದ ಪ್ರತಿಭೆ; ಫೋರ್ಬ್ಸ್ ಪಟ್ಟಿಯಲ್ಲಿ ಜಯಶ್ರೀ ಉಳ್ಳಾಲ
- Finance
ಸೆನ್ಸೆಕ್ಸ್, ನಿಫ್ಟಿ ಏರಿಕೆ: ಬಜಾಜ್ ಫಿನಾನ್ಸ್ ಸ್ಟಾಕ್ ಹೆಚ್ಚಳ
- Sports
ಜಸ್ಪ್ರೀತ್ ಬುಮ್ರಾ ಬೌಲಿಂಗ್ಗೂ, ಟಾಮ್ & ಜೆರ್ರಿಗೂ ಏನು ಸಂಬಂಧ?
- Education
DC Office Tumakuru Recruitment 2022 : 7 ಲೋಡರ್ಸ್ ಮತ್ತು ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಫಸ್ಟ್ ಡ್ರೈವ್ ರಿವ್ಯೂ: ಹೊಸ ತಂತ್ರಜ್ಞಾನ ಸೌಲಭ್ಯದೊಂದಿಗೆ ಮಿಂಚುತ್ತಿರುವ 2022ರ ಮಾರುತಿ ಸುಜುಕಿ ಬ್ರೆಝಾ
- Movies
ಹಾಸಿಗೆಯಿಂದ ಎದ್ದು ಓಡಿದ ಆರ್ಯನ ಹೊಸ ಪ್ಲ್ಯಾನ್ ಏನು?
- Technology
ಅಮೆಜಾನ್ ಪ್ರೈಮ್ ಡೇ ಸೇಲ್ 2022 ಡೇಟ್ ಫಿಕ್ಸ್! ಡಿಸ್ಕೌಂಟ್ ಏನಿದೆ?
- Travel
ಪರಿಪೂರ್ಣದೃಶ್ಯಗಳನ್ನು ಹೊಂದಿರುವ ತಾಣ - ಶಿರ್ಸಿ
ಚಪ್ಪಲಿ, ಶೂಗಳನ್ನು ಮನೆಬಾಗಿಲಿನ ಮುಂದೆ ಈ ರೀತಿ ಇಟ್ಟರೆ, ನಕಾರಾತ್ಮಕ ಶಕ್ತಿಗೆ ಆಹ್ವಾನಕೊಟ್ಟಂತೆ!
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಎಲ್ಲಾ ವಸ್ತುಗಳನ್ನು ನಿರ್ದಿಷ್ಟ ಮತ್ತು ಸರಿಯಾದ ದಿಕ್ಕಿನಲ್ಲಿ ಇಡುವುದು ಮಂಗಳಕರವಾಗಿದೆ. ಅದೇ ರೀತಿ, ಪ್ರತಿಯೊಬ್ಬರೂ ಬಳಸುವ ಪಾದರಕ್ಷೆ, ಚಪ್ಪಲಿಗೂ ಸಹ ವಾಸ್ತು ಶಾಸ್ತ್ರದಲ್ಲಿ ನಿರ್ದೇಶನವಿದೆ. ಸಾಮಾನ್ಯವಾಗಿ ಜನರು ಹೊಸ್ತಿಲಲ್ಲಿಯೇ ಶೂ ಮತ್ತು ಚಪ್ಪಲಿಗಳನ್ನು ತೆಗೆಯುತ್ತಾರೆ, ಜೊತೆಗೆ ಕೆಲವರು ಶೂ ಮತ್ತು ಚಪ್ಪಲಿಗಳನ್ನು ಮನೆಯೊಳಗೆ ತರುತ್ತಾರೆ. ವಾಸ್ತು ಶಾಸ್ತ್ರದ ದೃಷ್ಟಿಯಿಂದ ಈ ಎರಡೂ ಸನ್ನಿವೇಶಗಳು ತಪ್ಪು. ಹಾಗಾದರೆ, ಪಾದರಕ್ಷೆಗೆ ಸಂಬಂಧಿಸಿದಂತೆ ಇರುವ ವಾಸ್ತು ಶಾಸ್ತ್ರಗಳಾವುವು ನೋಡೋಣ.
ಪಾದರಕ್ಷೆಗಳಿಗೆ ಸಂಬಂಧಿಸಿದ ವಾಸ್ತು ಸಲಹೆಗಳು:

ಅಸ್ತವ್ಯಸ್ತವಾಗಿಟ್ಟರೆ, ಶನಿಯ ಕೋಪಕ್ಕೆ ಗುರಿ:
ವಾಸ್ತು ಶಾಸ್ತ್ರದ ಪ್ರಕಾರ, ಪಾದರಕ್ಷೆ, ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಯಲ್ಲಿ ಶನಿಯ ಅಶುಭ ಪ್ರಭಾವವಿದೆ. ವಾಸ್ತವವಾಗಿ, ಶನಿಗೂ ಪಾದಗಳಿಗೂ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪಾದಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಅಸ್ತವ್ಯಸ್ತವಾಗಿ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯ ಹೊರಗೆ ಇಡುವುದರಿಂದ ನಕಾರಾತ್ಮಕ ಶಕ್ತಿಯು ಸಕ್ರಿಯಗೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಯಾವಾಗಲೂ ವ್ಯವಸ್ಥಿತವಾಗಿ ಯಾವುದಾದರೂ ಮೂಲೆಯಲ್ಲಿ ಇಡಬೇಕು.

ಪಾದರಕ್ಷೆಗಳನ್ನು ಯಾವ ದಿಕ್ಕಿನಲ್ಲಿಡಬೇಕು?:
ಪದೇ ಪದೇ ಬಳಸುವ ಶೂ ಮತ್ತು ಚಪ್ಪಲಿಗಳನ್ನು ಪಶ್ಚಿಮ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಇಡಬೇಕು. ಮನೆಯಲ್ಲಿ ಹಳೆಯ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಹುಟ್ಟಿಕೊಳ್ಳುತ್ತದೆ. ಇದರ ಹೊರತಾಗಿ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳು ಮನೆಯಿಂದ ಹೊರಹೋಗುವುದೇ ಇಲ್ಲ. ಸದಾ ಕಾಲ ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಶೂ ರ್ಯಾಕ್ ಈ ದಿಕ್ಕಿನಲ್ಲಿಡಬೇಡಿ:
ಶೂ ರ್ಯಾಕ್ ಅನ್ನು ಎಂದಿಗೂ ಪೂಜೆ ಕೋಣೆಯ ಗೋಡೆ ಅಥವಾ ಅಡುಗೆಮನೆಯ ಪಕ್ಕದಲ್ಲಿ ಇಡಬಾರದು. ಇದರೊಂದಿಗೆ, ಶೂ ರ್ಯಾಕ್ ಅಥವಾ ಕಪಾಟುಗಳನ್ನು ಮನೆಯ ಪೂರ್ವ ದಿಕ್ಕು, ಉತ್ತರ ದಿಕ್ಕು ಅಥವಾ ಅಗ್ನಿಕೋನ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಇದಕ್ಕಾಗಿ ವಾಯುವ್ಯ ಅಥವಾ ನೈಋತ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ಹಾಸಿಗೆಯ ಕೆಳಗಿಡುವುದು ಒಳ್ಳೆಯದಲ್ಲ:
ಬೂಟುಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ಅಲ್ಲಲ್ಲಿ ಬಿದ್ದಿದ್ದರೆ, ಮನೆಯ ಸದಸ್ಯರ ನಡುವಿನ ಸಂಬಂಧವು ಹದಗೆಡಲು ಪ್ರಾರಂಭಿಸುತ್ತದೆ, ಅಷ್ಟೇ ಅಲ್ಲ, ಹಾಸಿಗೆಯ ಕೆಳಗೆ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹಾಳಾದ ಚಪ್ಪಲಿ, ಶೂಗಳನ್ನು ಹಾಸಿಗೆಯ ಕೆಳಗೆ ಇಡುವ ಅಭ್ಯಾಸವನ್ನು ಬಿಟ್ಟುಬಿಡಿ.