For Quick Alerts
ALLOW NOTIFICATIONS  
For Daily Alerts

ನವರಾತ್ರಿ ಕನ್ಯಾಪೂಜೆ 2021: ದಿನಾಂಕ, ಪೂಜಾವಿಧಿ ಹಾಗೂ ಮಹತ್ವ

|

ನವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಕನ್ಯಾ ಪೂಜೆಯೂ ಒಂದು. ನವರಾತ್ರಿಯ ಒಂಬತ್ತು ದಿನಗಳ ಉಪವಾಸ ಮಾಡಿದವರು ಕನ್ಯಾ ಪೂಜೆಯನ್ನು ಮಾಡುತ್ತಾರೆ. ಇದನ್ನು ಮುಖ್ಯವಾಗಿ ನವರಾತ್ರಿಯ ಎಂಟನೇ ಅಥವಾ ಒಂಬತ್ತನೇ ದಿನದಂದು ಮಾಡಲಾಗುತ್ತದೆ, ಅಲ್ಲಿ ಒಂಬತ್ತು ಹುಡುಗಿಯರನ್ನು ದುರ್ಗಾದೇವಿಯ ಒಂಬತ್ತು ರೂಪಗಳಾಗಿ ಪೂಜಿಸಲಾಗುತ್ತದೆ. ಏಕೆಂದರೆ ಅವರಲ್ಲಿ ದುರ್ಗಾ ದೇವಿಯು ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ.

ದಂತಕಥೆಗಳ ಪ್ರಕಾರ, ಕಲಾಸುರ ರಾಕ್ಷಸನನ್ನು ಸೋಲಿಸಲು ದುರ್ಗಾ ದೇವಿಯು ಚಿಕ್ಕ ಹುಡುಗಿಯಾಗಿ ಅವತರಿಸಿದಳು. ಆದ್ದರಿಂದ, ಚಿಕ್ಕ ಹುಡುಗಿಯರನ್ನು ಸಾರ್ವತ್ರಿಕ ಸೃಜನಶೀಲ ಶಕ್ತಿಗಳೆಂದು ಪೂಜಿಸಲಾಗುತ್ತದೆ. ಈ ವರ್ಷ ಕನ್ಯಾ ಪೂಜೆ, ಯಾವಾಗ ಬಂದಿದೆ, ಪೂಜಾವಿಧಾನ ಹೇಗೆ ಎಲ್ಲವನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ.

ಕನ್ಯಾಪೂಜೆಯ ದಿನಾಂಕ:

ಕನ್ಯಾಪೂಜೆಯ ದಿನಾಂಕ:

2021 ರ ಕನ್ಯಾಪೂಜೆಯನ್ನು 13 ಅಕ್ಟೋಬರ್ ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ, ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂಬತ್ತು ಯುವತಿಯರನ್ನು ದುರ್ಗಾದೇವಿಯೆಂದು ಪರಿಗಣಿಸಿ, ಅವರನ್ನು ಪೂಜಿಸಲಾಗುತ್ತದೆ.

ಕನ್ಯಾ ಪೂಜೆ ಮಾಡುವ ವಿಧಾನ:

ಕನ್ಯಾ ಪೂಜೆ ಮಾಡುವ ವಿಧಾನ:

  • ನವರಾತ್ರಿಯಂದು ಉಪವಾಸ ಕುಳಿತ ಭಕ್ತರು ತಮ್ಮ ಮನೆಗಳಿಗೆ ಚಿಕ್ಕ ಹುಡುಗಿಯರನ್ನು ಆಹ್ವಾನಿಸಿ, ಅವರ ಪಾದಗಳನ್ನು ತೊಳೆದ ನಂತರ ಪೀಠದ ಮೇಲೆ ಕುಳ್ಳಿರಿಸಬೇಕು.
  • ಇದರ ನಂತರ, ಪವಿತ್ರ ದಾರವನ್ನು ಅವರ ಮಣಿಕಟ್ಟಿಗೆ ಕಟ್ಟಬೇಕು.
  • ತದನಂತರ ಅವರ ಹಣೆಯ ಮೇಲೆ ಕುಂಕುಮವನ್ನು ಇಟ್ಟು, ಅವರಿಗೆ ಪೂರಿ, ಕಡಲೆಕಾಯಿ, ತೆಂಗಿನಕಾಯಿ ಮತ್ತು ಹಲ್ವಾಗಳನ್ನು ಒಳಗೊಂಡ ವಿಶೇಷ ಭೋಜನವನ್ನು ನೀಡಬೇಕು.
  • ಭೋಜನದ ನಂತರ ಭಕ್ತರು ಕೆಂಪು ದುಪಟ್ಟಾ, ಹೊಸ ಬಟ್ಟೆ, ಬಳೆಗಳು ಮತ್ತು ಹಣ ಇತ್ಯಾದಿಗಳನ್ನು ಉಡುಗೊರೆ ರೂಪವಾಗಿ ನೀಡಬೇಕು.
  • ಕೊನೆಯದಾಗಿ ಆ ಹುಡುಗಿಯರ ಪಾದಗಳನ್ನು ಸ್ಪರ್ಶಿಸಿ, ಅವರ ಆಶೀರ್ವಾದವನ್ನು ಪಡೆದರೆ, ಕನ್ಯಾ ಪೂಜೆ ಸಮಾಪ್ತಿಯಾಗುವುದು.
  • ಕನ್ಯಾ ಪೂಜೆಯ ಮಹತ್ವ:

    ಕನ್ಯಾ ಪೂಜೆಯ ಮಹತ್ವ:

    ದುರ್ಗಾದೇವಿಯ ಅತ್ಯಂತ ಮಂಗಳಕರವಾದ ರೂಪವೆಂದರೆ ಅವಿವಾಹಿತ ಅಥವಾ ದುರ್ಗೆಯ 'ಕನ್ಯೆ'ಯ ರೂಪ, ಏಕೆಂದರೆ ಈ ವಿಶ್ವದಲ್ಲಿನ ಎಲ್ಲಾ ಸೃಷ್ಟಿಗಳ ಆಧಾರವಾಗಿ ಇದನ್ನು ಪರಿಗಣಿಸಲಾಗಿದೆ. ಕನ್ಯಾ ಪೂಜೆಯು ದುರ್ಗಾದೇವಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ಆಕೆಯ ಆಶೀರ್ವಾದ ಪಡೆಯಲು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ ಏಕೆಂದರೆ ಹೆಣ್ಣನ್ನು ಗೌರವಿಸಿದಾಗ ದೇವಿ ಅತ್ಯಂತ ಸಂತೋಷವನ್ನು ಅನುಭವಿಸುತ್ತಾಳೆ ಎಂದು ಹೇಳಲಾಗುತ್ತದೆ.

    ದೇವಿ ಭಾಗವತ ಪುರಾಣದ ಪ್ರಕಾರ, ನವರಾತ್ರಿಯ ಒಂಬತ್ತನೇ ದಿನದಂದು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ತಮ್ಮ ಪ್ರಾರ್ಥನೆ ಈಡೇರಿಕೆಯಾಗುತ್ತದೆ ಎಂದು ನಂಬಲಾಗಿದೆ. ಒಂಬತ್ತು ದಿನಗಳ ಉಪವಾಸ ಮಾಡುವವರು ವಿಶೇಷವಾಗಿ ನವರಾತ್ರಿಯ ಕೊನೆಯ ದಿನ ಹೆಣ್ಣು ಮಗುವನ್ನು ಪೂಜಿಸಬೇಕು.

    ಒಂದು ಹೆಣ್ಣು ಮಗುವನ್ನು ಪೂಜಿಸುವುದು ಅದೃಷ್ಟ ದೊರೆತರೆ, ಎರಡು ಹುಡುಗಿಯರು ಗ್ರಹಿಕೆ ಮತ್ತು ಮೋಕ್ಷವನ್ನು ಆಶೀರ್ವದಿಸುತ್ತಾರೆ, ಮೂವರು ಹುಡುಗಿಯರು ಅರ್ಹತೆಯನ್ನು ನೀಡುತ್ತಾರೆ, 4 ಮತ್ತು 5 ಹೆಣ್ಣುಮಕ್ಕಳನ್ನು ಪೂಜಿಸುವುದು ಕ್ರಮವಾಗಿ ಅಧಿಕಾರ ಮತ್ತು ಜ್ಞಾನವನ್ನು ದೇವಿ ಅನುಗ್ರಹಿಸುತ್ತಾಳೆ, ಆದರೆ ಒಂಬತ್ತು ಕನ್ಯೆಯರ ಪೂಜೆಯು ಶ್ರೇಷ್ಠತೆಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ.

English summary

Navratri Kanya Puja on Maha Ashtami 2021 date, shubh muhurat, Puja Vidhi, Samagri and Importance in kannada

Here we talking about Navratri Kanya Puja on Maha Ashtami 2021 date, shubh muhurat, Puja Vidhi, Samagri and Importance in kannada
Story first published: Tuesday, October 12, 2021, 17:58 [IST]
X
Desktop Bottom Promotion